ಮಹೇಂದ್ರ ಸಿಂಗ್ ಧೋನಿ (MS Dhoni) ತಾನೊಬ್ಬ ಗ್ರೇಟ್ ಫಿನಿಶರ್ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಸತತ ವೈಫಲ್ಯ ಅನುಭವಿಸುತ್ತಿದ್ದ ಧೋನಿ ಭಾನುವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ (DC vs CSK) ವಿರುದ್ಧದ ಐಪಿಎಲ್ 2021 ಮೊದಲ ಕ್ವಾಲಿಫೈಯರ್ (IPL 2021, Qualifier 1) ಪಂದ್ಯದಲ್ಲಿ ಮ್ಯಾಚ್ ಅನ್ನು ಫಿನಿಶ್ ಮಾಡುವ ಜವಾಬ್ದಾರಿ ಹೊತ್ತು ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ (Chenni Super Kings) ಐಪಿಎಲ್ ಇತಿಹಾಸದಲ್ಲಿ ದಾಖಲೆಯ 9ನೇ ಬಾರಿಗೆ ಫೈನಲ್ ಪ್ರವೇಶಿಸಿತು. ಸಿಎಸ್‌ಕೆ ಗೆಲ್ಲುತ್ತಿದ್ದಂತೆ, ಅದರಲ್ಲೂ ಧೋನಿ ತಮ್ಮದೇ ಶೈಲಿಯಲ್ಲಿ ಮ್ಯಾಚ್ ಅನ್ನು ಫಿನಿಶ್ ಮಾಡಿದ್ದನ್ನು ಕಂಡು ಅಭಿಮಾನಿಗಳು ಖಷಿಯಲ್ಲಿ ತೇಲಾಡಿದರು. ಅದರಲ್ಲೂ ಸ್ಟೇಡಿಯಂನಲ್ಲಿದ್ದ ಅಭಿಮಾನಿಗಳು ಸಂತಸದಲ್ಲಿ ಕಣ್ಣೀರು ಹಾಕಿದ ಘಟನೆಯೂ ನಡೆಯಿತು.
ಹೌದು, ಚೆನ್ನೈ 4 ವಿಕೆಟ್ಗಳ ಗೆಲುವು ಸಾಧಿಸಿ ಐಪಿಎಲ್ 2021 ಫೈನಲ್ಗೆ ತಲುಪುತ್ತಿದ್ದಂತೆ ಸ್ಟೇಡಿಯಂನಲ್ಲಿದ್ದ ಇಬ್ಬರು ಪುಟ್ಟ ಮಕ್ಕಳು ಖುಷಿಯಲ್ಲಿ ಕಣ್ಣಿರು ಸುರಿಸಿದರು. ಇದನ್ನು ಗಮನಿಸಿದ ನಾಯಕ ಎಂ ಎಸ್ ಧೋನಿ ಪಂದ್ಯ ಮುಗಿದ ಬಳಿಕ ಸಿಎಸ್‌ಕೆ ಕಟ್ಟಾ ಅಭಿಮಾನಿಗಳಿಗೆ ವಿಶೇಷ ಉಡುಗೊಡೆಯೊಂದನ್ನು ನೀಡಿದ್ದಾರೆ. ಬಾಲ್ನಲ್ಲಿ ತನ್ನ ಆಟೋಗ್ರಾಫ್ ಬರೆದು ಸ್ಟೇಡಿಯಂನಲ್ಲಿದ್ದ ಮಕ್ಕಳಿಗೆ ಚೆಂಡನ್ನು ನೀಡಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
Being a fan of MSD is an imotion! ♥#Dhoni @msdhoni pic.twitter.com/EZyYjLjRwS
— A n j u (@Anjuvj3) October 10, 2021
ಇನ್ನೂ ಧೋನಿಯ ಮನಮೋಹಕ ಆಟ ಕಂಡು ವಿರಾಟ್ ಕೊಹ್ಲಿ ಕೂಡ ಟ್ವೀಟ್ ಮಾಡಿದ್ದು, ‘ಕಿಂಗ್ ಈಸ್ ಬ್ಯಾಕ್. ಗ್ರೆಟೆಸ್ಟ್ ಫಿನಿಶರ್ ಆಟಕ್ಕೆ ಮರಳಿದ್ದಾನೆ. ಸೀಟಿನ ತುದಿಯಲ್ಲಿ ಕುಳಿತು ಆಟ ನೊಡುವ ಅವಕಾಶ ಸಿಕ್ಕಿತು. ಈ ರಾತ್ರಿ ನಾನು ಮತ್ತೊಮ್ಮೆ ಕುಳಿತಲ್ಲಿಂದ ಎದ್ದು ಜಿಗಿಯುವಂತಾಯಿತು’ ಎಂದು ಬರೆದು ಧೋನಿ ಅವರನ್ನು ಟ್ಯಾಗ್ ಮಾಡಿದ್ದಾರೆ.
Dhoni’s gift to his littles big hearted Fans pic.twitter.com/zbxcPvb9aW
— Ashok Rana (@AshokRa72671545) October 10, 2021
ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ, ಪೃಥ್ವಿ ಷಾ (60 ರನ್, 34 ಎಸೆತ, 7 ಬೌಂಡರಿ, 3 ಸಿಕ್ಸರ್) ಹಾಗೂ ನಾಯಕ ರಿಷಭ್ ಪಂತ್ (51*ರನ್, 35 ಎಸೆತ, 3 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಫಲವಾಗಿ 5 ವಿಕೆಟ್‌ಗೆ 172 ರನ್‌ಗಳಿಸಿತು. ಪ್ರತಿಯಾಗಿ ಸಿಎಸ್‌ಕೆ 19.4 ಓವರ್‌ಗಳಲ್ಲಿ 6 ವಿಕೆಟ್‌ಗೆ 173 ರನ್‌ಗಳಿಸಿ ಜಯದ ನಗೆ ಬೀರಿತು.
ಚೆನ್ನೈ ಪರ ರಾಬಿನ್ ಉತ್ತಪ್ಪ (63 ರನ್, 44ಎಸೆತ, 7 ಬೌಂಡರಿ, 2 ಸಿಕ್ಸರ್) ಹಾಗೂ ಆರಂಭಿಕ ರುತುರಾಜ್ ಗಾಯಕ್ವಾಡ್ (70 ರನ್, 50 ಎಸೆತ, 5 ಬೌಂಡರಿ, 2 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಗೆಲುವನ್ನು ಹತ್ತಿರ ಮಾಡಿದರು. ನಂತರ ಎಂ ಎಸ್ ಧೋನಿ ಬಂದು ಪಂದ್ಯವನ್ನು ಫಿನಿಶ್ ಮಾಡಿದರು. ತಮ್ಮ ನೈಜ ಆಟ ಪ್ರದರ್ಶಿಸಿದ ಧೋನಿ ಕೇವಲ 6 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 18 ರನ್ ಗಳಿಸಿ ಔಟಾಗದೆ ಉಳಿದರು.
(MS Dhoni gifted the autographed ball to teary eyed CSK Fans on IPL 2021 DC vs CSK Qualifier 1 Match)