MS Dhoni: ಅಂಪೈರ್ ಬಳಿ ಆಕ್ರೋಶ ವ್ಯಕ್ತಪಡಿಸಿದ ಧೋನಿ: ಮತ್ತೆ ಚರ್ಚೆಗೀಡಾದ ಕೂಲ್ ಕ್ಯಾಪ್ಟನ್ ನಡೆ
IPL: 2019ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದದ ಪಂದ್ಯದ ವೇಳೆ ಅಂಪೈರ್ ನೋಬಾಲ್ ನೀಡಿಲ್ಲವೆಂದು ಬೌಂಡರಿ ಲೈನ್ ದಾಟಿ ಬಂದು ಧೋನಿ ಮೈದಾನಕ್ಕಿಳಿದು ವಾಗ್ವಾದಕ್ಕಿಳಿದಿದ್ದರು.
ಐಪಿಎಲ್ನ ಪ್ಲೇಆಫ್ (IPL 2021 Playoffs) ಪಂದ್ಯಗಳು ರಂಗೇರಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವನ್ನು ಮಣಿಸಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಫೈನಲ್ಗೇರಿದೆ. ಇದಕ್ಕೂ ಮುನ್ನ ಟಾಸ್ ಗೆದ್ದು ಸಿಎಸ್ಕೆ ನಾಯಕ ಧೋನಿ (MS Dhoni) ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ನಿಗದಿತ 20 ಓವರ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 172 ರನ್ ಕಲೆಹಾಕಿತು. ಈ ಇನಿಂಗ್ಸ್ ನಡುವೆ ನಡುವೆ ಸಿಎಸ್ಕೆ ನಾಯಕ ಧೋನಿ ಅಂಪೈರ್ಗಳ ಜೊತೆ ವಾದಕ್ಕಿಳಿದಿದ್ದು ಇದೀಗ ಚರ್ಚೆಗೆ ಕಾರಣವಾಗಿದೆ. ಹೌದು, ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್‌ನ 16 ನೇ ಓವರ್‌ನಲ್ಲಿ, ಶಾರ್ದೂಲ್ ಠಾಕೂರ್ ಆಫ್-ಸ್ಟಂಪ್‌ನ ಹೊರಗೆ ಚೆಂಡೆಸಿದಿದ್ದರು. ಇದನ್ನು ಅಂಪೈರ್ ರಿಚರ್ಡ್ ಇಲ್ಲಿಂಗ್‌ವರ್ತ್ ವೈಡ್ ಎಂದು ತೀರ್ಪು ನೀಡಿದ್ದರು.
ಆದರೆ ಓವರ್ ಮುಕ್ತಾಯದ ಬೆನ್ನಲ್ಲೇ ಅಂಪೈರ್ ಟೈಮ್ ಔಟ್ ನೀಡಿದ್ದರು. ಈ ಸಮಯದಲ್ಲಿ ಧೋನಿ ಅಂಪೈರ್ ಜೊತೆ ವೈಡ್ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ವಾದಿಸಿದ್ದರು. ಈ ಘಟನೆಯ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದೀಗ ಧೋನಿ ಅಂಪೈರ್ ಜೊರೆ ತರ್ಕ ನಡೆಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಷ್ಟೇ ಅಲ್ಲದೆ ಧೋನಿಯ ನಡೆಯ ಬಗ್ಗೆ ಅನೇಕರು ಪ್ರಶ್ನಿಸಿದ್ದಾರೆ.
— Sunaina Gosh (@Sunainagosh7) October 10, 2021
2019ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದದ ಪಂದ್ಯದ ವೇಳೆ ಅಂಪೈರ್ ನೋಬಾಲ್ ನೀಡಿಲ್ಲವೆಂದು ಬೌಂಡರಿ ಲೈನ್ ದಾಟಿ ಬಂದು ಧೋನಿ ಮೈದಾನಕ್ಕಿಳಿದು ವಾಗ್ವಾದಕ್ಕಿಳಿದಿದ್ದರು. ಅಷ್ಟೇ ಅಲ್ಲದೆ 2020ರಲ್ಲೂ ಅಂಪೈರ್ ಜೊತೆ ಧೋನಿ ವಾಗ್ವಾದಕ್ಕೆ ಇಳಿದಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ಔಟ್ ಎಂದು ತೀರ್ಪು ನೀಡಿದ ಬಳಿಕ ಅಂಪೈರ್ 3ನೇ ಅಂಪೈರ್ ಬಳಿ ಪರಿಶೀಲಿಸಿ ಬ್ಯಾಟ್ಸ್ಮನ್ ಅನ್ನು ನಾಟೌಟ್ ಎಂದು ಘೋಷಿಸಿದಕ್ಕೆ ಧೋನಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ವೈಡ್ ನೀಡಿರುವ ಬಗ್ಗೆ ಧೋನಿ ಅಂಪೈರ್ ಬಳಿ ತೆರಳಿ ಚರ್ಚಿಸಿರುವುದು ಕೂಡ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: KL Rahul: ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ 7 ದಾಖಲೆ ಬರೆದ ಕೆಎಲ್ ರಾಹುಲ್
ಇದನ್ನೂ ಓದಿ: IPL 2021: ಐಪಿಎಲ್ನಲ್ಲಿ ಹೊಸ ಇತಿಹಾಸ ನಿರ್ಮಿಸಲಿದ್ದಾರೆ ಹರ್ಷಲ್ ಪಟೇಲ್
ಇದನ್ನೂ ಓದಿ: IPL 2021: ಅಚ್ಚರಿಯಾದರೂ ಇದು ಸತ್ಯ: 1 ವಿಕೆಟ್ಗೆ 1 ಕೋಟಿ ಪಡೆದ ಕ್ರಿಸ್ ಮೋರಿಸ್..!
(IPL 2021 Playoffs: MS Dhoni Involved In An Animated Discussion With Umpires)