IPL 2024: ಒಂದೇ ಕೈಯಲ್ಲಿ ಸಿಕ್ಸರ್, ಹೆಲಿಕಾಪ್ಟರ್ ಶಾಟ್: ಸಿಎಸ್​ಕೆ ಪ್ರ್ಯಾಕ್ಟೀಸ್ ಸೆಷನ್​ನಲ್ಲಿ ಧೋನಿ ಸ್ಫೋಟಕ

MS Dhoni Practice CSK: ಎಂಎಸ್ ಧೋನಿ ನೇತೃತ್ವದ ಸಿಎಸ್‌ಕೆ ಐಪಿಎಲ್ 2024 ರ ಮೊದಲ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆಡಲಿದೆ. ಕಳೆದ ಋತುವಿನಲ್ಲಿ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಐದನೇ ಐಪಿಎಲ್ ಪ್ರಶಸ್ತಿಗೆ ಮುನ್ನಡೆಸಿದರು ಮತ್ತು ನಂತರ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಧೋನಿ ಭರ್ಜರಿ ಅಭ್ಯಾಸ ಮೂಲಕ ಹೊಸ ಸೀಸನ್​ಗೆ ಸಜ್ಜಾಗುತ್ತಿದ್ದಾರೆ.

IPL 2024: ಒಂದೇ ಕೈಯಲ್ಲಿ ಸಿಕ್ಸರ್, ಹೆಲಿಕಾಪ್ಟರ್ ಶಾಟ್: ಸಿಎಸ್​ಕೆ ಪ್ರ್ಯಾಕ್ಟೀಸ್ ಸೆಷನ್​ನಲ್ಲಿ ಧೋನಿ ಸ್ಫೋಟಕ
MS Dhoni Practice

Updated on: Mar 17, 2024 | 8:47 AM

ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ (MS Dhoni) ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್‌ಗೆ ಪರಿಪೂರ್ಣವಾಗಿ ಸಜ್ಜಾಗುತ್ತಿದ್ದಾರೆ. ಇವರ ನೆಟ್ ಸೆಷನ್‌ಗಳನ್ನು ನೋಡಿದರೆ 42ನೇ ವಯಸ್ಸಿನಲ್ಲೂ ಎಷ್ಟು ಫಿಟ್ ಆಗಿದ್ದಾರೆ ಎಂಬುದು ಗೋಚರಿಸುತ್ತದೆ. ಅಭಿಮಾನಿಗಂತು ಇವರ ಬ್ಯಾಟಿಂಗ್ ನೋಡಲು ಕಾದು ಕುಳಿತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಇದೇ ಮಾರ್ಚ್ 22 ರಂದು ಚೆಪಾಕ್ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ 2024 ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.

ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಎಂಎಸ್ ಧೋನಿ ಅಭ್ಯಾಸ ನಡೆಸುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಸಿಎಸ್‌ಕೆ ನೆಟ್ ಸೆಷನ್‌ಗಳ ಸಮಯದಲ್ಲಿ ಧೋನಿ ಉತ್ತಮ ಪ್ರದರ್ಶನವನ್ನು ತೋರುತ್ತಿದ್ದಾರೆ. ಕಠಿಣವಾದ ಬೌಲಿಂಗ್​ನಲ್ಲಿ ಸಲೀಸಾಗಿ ಬ್ಯಾಟ್ ಮಾಡುತ್ತಿದ್ದಾರೆ. ಇದರಲ್ಲಿ ಎಲ್ಲರ ಗಮನ ಸೆಳೆದಿದ್ದು, ಧೋನಿ ಹೆಲಿಕಾಫ್ಟರ್ ಶಾಟ್ ಮತ್ತು ಒನ್-ಹ್ಯಾಂಡ್ ಸಿಕ್ಸರ್. ಧೋನಿ ತಮ್ಮ ಟ್ರೇಡ್‌ಮಾರ್ಕ್ ಹೆಲಿಕಾಪ್ಟರ್ ಶಾಟ್ ಅನ್ನು ಹೊಡೆದಾಗ ಸಿಎಸ್​ಕೆ ಕ್ಯಾಂಪ್ ಅಚ್ಚರಿಗೊಂಡಿತು. ಧೋನಿಯ ಈ ಬ್ಯಾಟಿಂಗ್ ಪ್ರದರ್ಶನವು CSK ಅಭಿಮಾನಿಗಳಲ್ಲಿ ಉತ್ಸಾಹವನ್ನು ಹೆಚ್ಚಿಸಿದೆ.

ಕಿಂಗ್ ಕೊಹ್ಲಿ ದಾಖಲೆ ಮೇಲೆ ಕೂಲ್ ಕ್ಯಾಪ್ಟನ್ ಕಣ್ಣು: ವಿರಾಟ್ ರೆಕಾರ್ಡ್ ಮುರಿತಾರ ಧೋನಿ?

“ಧೋನಿ ಉತ್ತಮ ಫಾರ್ಮ್​ನಲ್ಲಿರುವಂತೆ ಕಾಣುತ್ತಿದೆ” ಎಂದು ಸಿಎಸ್‌ಕೆ ಸಿಇಒ ಕಾಸಿ ವಿಶ್ವನಾಥನ್ ವಿಶೇಷ ಚಾಟ್‌ನಲ್ಲಿ ಸ್ಪೋರ್ಟ್ಸ್ ನೌಗೆ ತಿಳಿಸಿದ್ದಾರೆ. ಕಳೆದ ವರ್ಷ, ಧೋನಿಗೆ ಮುಂಬೈನಲ್ಲಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಮಾಡಲಾಗಿತ್ತು.

ಧೋನಿಯ ಅಭ್ಯಾಸದ ವಿಡಿಯೋ ಇಲ್ಲಿದೆ ನೋಡಿ:

 

ಬೇಕು ಒಂದು ಅರ್ಧಶತಕ: ಐಪಿಎಲ್​ನಲ್ಲಿ ಇತಿಹಾಸದ ಪುಟ ಸೇರಲಿದ್ದಾರೆ ವಿರಾಟ್ ಕೊಹ್ಲಿ

ಚೆನ್ನೈ ಸೂಪರ್ ಕಿಂಗ್ಸ್ ತಂಡ​​: ಎಂಎಸ್ ಧೋನಿ (ನಾಯಕ), ಮೊಯೀನ್ ಅಲಿ, ದೀಪಕ್ ಚಹರ್, ಡೆವೊನ್ ಕಾನ್ವೇ, ತುಷಾರ್ ದೇಶಪಾಂಡೆ, ಶಿವಂ ದುಬೆ, ರುತುರಾಜ್ ಗಾಯಕ್ವಾಡ್, ರಾಜವರ್ಧನ್ ಹಂಗರ್ಗೇಕರ್, ರವೀಂದ್ರ ಜಡೇಜಾ, ಅಜಯ್ ಮಂಡಲ್, ಮುಖೇಶ್ ಚೌಧರಿ, ಮಥೀಶ ಪತಿರಾನಾ, ಅಜಿಂಕ್ಯ ರಹಾನೆ, ಶೇಕ್ ಸಿಂಘೆಲ್ ರಷೀದ್, ಎಂ. , ನಿಶಾಂತ್ ಸಿಂಧು, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ, ರಚಿನ್ ರವೀಂದ್ರ, ಶಾರ್ದೂಲ್ ಠಾಕೂರ್, ಡೇರಿಲ್ ಮಿಚೆಲ್, ಸಮೀರ್ ರಿಜ್ವಿ, ಮುಸ್ತಾಫಿಜುರ್ ರೆಹಮಾನ್, ಅವನೀಶ್ ರಾವ್, ರಚಿನ್ ರವೀಂದ್ರ, ಶಾರ್ದೂಲ್ ಠಾಕೂರ್, ಡೇರಿಲ್ ಮಿಚೆಲ್, ಸಮೀರ್ ರಿಜ್ವಿ, ಅವನೀಶ್ ರಾವ್ ಅರವೆಲ್ಲಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:46 am, Sun, 17 March 24