T20 World Cup: ಧೋನಿ ಟೀಂ ಇಂಡಿಯಾ ಮೆಂಟರ್​ ಆಗಲು ಇಲ್ಲಿದೆ ಅಸಲಿ ಕಾರಣ!

| Updated By: ಪೃಥ್ವಿಶಂಕರ

Updated on: Sep 09, 2021 | 8:47 PM

T20 World Cup: ವಾಸ್ತವವಾಗಿ, ಬಿಸಿಸಿಐ ಟೀಂ ಇಂಡಿಯಾಕ್ಕೆ ಹೊಸ ಕೋಚ್ ಅನ್ನು ಹುಡುಕುತ್ತಿದೆ. ದೊಡ್ಡ ಆಟಗಾರರು ಈ ಸ್ಥಾನಕ್ಕೆ ತಯಾರಾಗುತ್ತಿಲ್ಲ. ಈ ಆಟಗಾರರಲ್ಲಿ ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ಮತ್ತು ವೀರೇಂದ್ರ ಸೆಹ್ವಾಗ್ ಸೇರಿದ್ದಾರೆ.

T20 World Cup: ಧೋನಿ ಟೀಂ ಇಂಡಿಯಾ ಮೆಂಟರ್​ ಆಗಲು ಇಲ್ಲಿದೆ ಅಸಲಿ ಕಾರಣ!
ಧೋನಿ, ಕೊಹ್ಲಿ
Follow us on

ಈ ಸುದ್ದಿ ಬಂದಿದ್ದು ಬುಧವಾರ ರಾತ್ರಿ, ಆದರೆ ಚರ್ಚೆ ಇನ್ನೂ ನಡೆಯುತ್ತಿದೆ. ಅದೆನೆಂದರೆ, ಬಿಸಿಸಿಐ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಟಿ 20 ವಿಶ್ವಕಪ್‌ನಲ್ಲಿ ಭಾರತದ ಮಾರ್ಗದರ್ಶಕರಾಗಲಿದ್ದಾರೆ ಎಂಬುದಾಗಿದೆ. ಅಕ್ಟೋಬರ್ 17 ರಿಂದ ಯುಎಇ ಮತ್ತು ಓಮನ್ ನಲ್ಲಿ ಟಿ 20 ವಿಶ್ವಕಪ್ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ ಭಾರತದ ಮೊದಲ ಪಂದ್ಯವು ಹೈ-ವೋಲ್ಟೇಜ್ ಪಂದ್ಯವಾಗಿದೆ. ಇದರಲ್ಲಿ ಭಾರತ ಪಾಕಿಸ್ತಾನವನ್ನು ಎದುರಿಸಬೇಕಿದೆ. ಅತ್ಯಂತ ನೇರವಾದ ಕಾರಣವೆಂದರೆ, ಧೋನಿಯ ನಾಯಕತ್ವದಲ್ಲಿ, ಭಾರತವು ಎಲ್ಲಾ ಐಸಿಸಿ ಟೂರ್ನಿಗಳಲ್ಲಿ ಪ್ರಶಸ್ತಿಯನ್ನು ಗೆದ್ದಿದೆ. ಇದು 2007 ಟಿ 20 ವಿಶ್ವಕಪ್, 2011 ವಿಶ್ವಕಪ್ ಮತ್ತು 2013 ಚಾಂಪಿಯನ್ಸ್ ಟ್ರೋಫಿಯನ್ನು ಒಳಗೊಂಡಿದೆ. ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿನ ಈ ಯಶಸ್ಸುಗಳು ಧೋನಿಗೆ ದೊಡ್ಡ ಮನ್ನಣೆ. ಇದು ಅವರನ್ನು ಭಾರತದ ಅತ್ಯಂತ ಯಶಸ್ವಿ ನಾಯಕನನ್ನಾಗಿಸಿದೆ.

ಇನ್ನೊಂದು ಬದಿಯಲ್ಲಿ ವಿರಾಟ್ ಕೊಹ್ಲಿ ಇದ್ದಾರೆ. ಅವರ ನಾಯಕತ್ವದಲ್ಲಿ, ಭಾರತವು 2017 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಸೋಲನ್ನು ಎದುರಿಸಬೇಕಾಯಿತು. ಇದರ ನಂತರ, ಭಾರತವು 2019 ರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಸೋತಿದೆ ಮತ್ತು 2021 ರಲ್ಲಿ ಮೊದಲ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಕೂಡ ಸೋಲಿನೊಂದಿಗೆ ಕೊನೆಗೊಂಡಿತು. ನಾಯಕನಾಗಿ ವಿರಾಟ್ ಕೊಹ್ಲಿ ಇದುವರೆಗೆ ಒಂದೇ ಒಂದು ಐಸಿಸಿ ಟ್ರೋಫಿಯನ್ನು ಗೆದ್ದಿಲ್ಲ. ಇದು ಕೇವಲ ವಿರಾಟ್ ಕೊಹ್ಲಿಯ ನೋವು ಮಾತ್ರವಲ್ಲ ಕೋಟಿಗಟ್ಟಲೆ ಕ್ರಿಕೆಟ್ ಅಭಿಮಾನಿಗಳ ನೋವಾಗಿದೆ. ಧೋನಿ ಬುಧವಾರ ರಾತ್ರಿ ತೆಗೆದುಕೊಂಡ ನಿರ್ಧಾರದ ಹಿಂದೆ ಈ ಕಥೆ ಅತ್ಯಂತ ಸರಳ ಮತ್ತು ಅರ್ಥಮಾಡಿಕೊಳ್ಳಲು ಸುಲಭವಾಗಿದೆ.

ಮಂಡಳಿಗೆ ಹೊಸ ಕೋಚ್ ಹುಡುಕಲು ಸಮಯ ಬೇಕು
ಈ ನಿರ್ಧಾರದ ಇನ್ನೊಂದು ಮುಖ ಹೀಗಿದೆ. ವಾಸ್ತವವಾಗಿ, ಬಿಸಿಸಿಐ ಟೀಂ ಇಂಡಿಯಾಕ್ಕೆ ಹೊಸ ಕೋಚ್ ಅನ್ನು ಹುಡುಕುತ್ತಿದೆ. ದೊಡ್ಡ ಆಟಗಾರರು ಈ ಸ್ಥಾನಕ್ಕೆ ತಯಾರಾಗುತ್ತಿಲ್ಲ. ಈ ಆಟಗಾರರಲ್ಲಿ ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ಮತ್ತು ವೀರೇಂದ್ರ ಸೆಹ್ವಾಗ್ ಸೇರಿದ್ದಾರೆ. ಈ ಜವಾಬ್ದಾರಿಯನ್ನು ತೆಗೆದುಕೊಳ್ಳದಿರುವುದರ ಹಿಂದಿನ ಕಾರಣಗಳನ್ನು ಅವರು ಸ್ಪಷ್ಟಪಡಿಸಿದ್ದಾರೆ. ಇದರ ಹೊರತಾಗಿ, ಮಾಜಿ ಕೋಚ್ ಮತ್ತು ಬಲಿಷ್ಠ ಕ್ರಿಕೆಟಿಗ ಅನಿಲ್ ಕುಂಬ್ಳೆಗೆ ಏನಾಯಿತು ಎಂಬುದನ್ನು ಎಲ್ಲರೂ ನೆನಪಿಸಿಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಕುಂಬ್ಳೆ ಕೂಡ ಈ ಸ್ಥಾನಕ್ಕೆ ಮತ್ತೆ ತಯಾರಾಗುವುದಿಲ್ಲ. ಕಿರಿಯ ಆಟಗಾರನಿಗೆ ಭಾರತೀಯ ತಂಡದ ತರಬೇತುದಾರನ ಜವಾಬ್ದಾರಿಯನ್ನು ವಹಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಒಬ್ಬ ಆಟಗಾರನನ್ನು ಮಾರ್ಗದರ್ಶಕನನ್ನಾಗಿ ಮಾಡಿ ಕೋಚ್ ಮೇಲಿನ ಭಾರ ಇಳಿಸುವುದೇ ಈ ನಿರ್ಧಾರದ ಹಿಂದಿನ ಯೋಚನೆಯಾಗಿದೆ.

ಬಿಸಿಸಿಐ ಕೋಚ್ ಜವಾಬ್ದಾರಿಯನ್ನು ಯಾವುದೇ ವಿದೇಶಿ ಆಟಗಾರನಿಗೆ ಒಪ್ಪಿಸುವ ಪರವಾಗಿಲ್ಲ. ಇದಲ್ಲದೇ, ಧೋನಿಗೆ ಮಾರ್ಗದರ್ಶಕರ ಜವಾಬ್ದಾರಿಯನ್ನು ನೀಡುವುದರಿಂದ ರವಿಶಾಸ್ತ್ರಿಯ ಹೊರೆಯೂ ಕಡಿಮೆಯಾಗುತ್ತದೆ. ಹಾಗಾಗಿ ಅವರು ಕೂಡ ಈ ನಿರ್ಧಾರವನ್ನು ಒಪ್ಪುತ್ತಾರೆ. ಧೋನಿ ಐಪಿಎಲ್ ಕಾರಣ ಆ ಸಮಯದಲ್ಲಿ ಯುಎಇಯಲ್ಲಿದ್ದಾರೆ. ಐಪಿಎಲ್‌ನಲ್ಲಿ ಕೂಡ ಅವರು ಇತಿಹಾಸದಲ್ಲಿ ಎರಡನೇ ಅತ್ಯಂತ ಯಶಸ್ವಿ ನಾಯಕ ಎಂಬುದನ್ನು ಮರೆಯಬಾರದು. ನಿಸ್ಸಂಶಯವಾಗಿ ಅವರ ಉಪಸ್ಥಿತಿಯು ವಿರಾಟ್ ಜೊತೆಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆಗಳನ್ನು ಹೆಚ್ಚಿಸುತ್ತದೆ.

ವಿರಾಟ್, ಧೋನಿಯನ್ನು ಒಪ್ಪಿದ್ಯಾಕೆ?
ಈ ಪ್ರಶ್ನೆಗೆ ಉತ್ತರ ತುಂಬಾ ಸರಳವಾಗಿದೆ. ಇತ್ತೀಚಿನ ದಿನಗಳಲ್ಲಿ ವಿರಾಟ್ ನಾಯಕತ್ವದಲ್ಲಿ ಗೆದ್ದ ದೊಡ್ಡ ವಿಜಯಗಳಲ್ಲಿ, ಅವರ ಬ್ಯಾಟ್‌ನ ಪಾತ್ರ ಕಡಿಮೆ. ಇದರ ಹೊರತಾಗಿ, ಆಡುವ 11 ಬಗ್ಗೆ ಅವರ ನಿರ್ಧಾರದ ಮೇಲೆ ಪ್ರಶ್ನೆಗಳನ್ನು ಎತ್ತಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಧೋನಿಯ ಮನಸ್ಸು ವಿರಾಟ್ ಕೊಹ್ಲಿಯ ಒತ್ತಡವನ್ನು ಕಡಿಮೆ ಮಾಡುತ್ತದೆ. ಟಿ 20 ವಿಶ್ವಕಪ್‌ನಲ್ಲಿ ಮಹೇಂದ್ರ ಸಿಂಗ್ ಧೋನಿಯನ್ನು ತಂಡದ ಮಾರ್ಗದರ್ಶಕರನ್ನಾಗಿ ಮಾಡುವ ಕಥೆಯೂ ಇದೆ. ಇದರಲ್ಲಿ ವಿರಾಟ್ ಕೊಹ್ಲಿಯ ಒಪ್ಪಿಗೆಯನ್ನು ಸೇರಿಸಲಾಗಿದೆ. ಇದಕ್ಕಾಗಿ ನಾಲ್ಕು ದೊಡ್ಡ ಕಾರಣಗಳಿವೆ – ಮೊದಲನೆಯದಾಗಿ ವಿರಾಟ್ ಕೊಹ್ಲಿ ಕಾಲಕಾಲಕ್ಕೆ ಧೋನಿಯ ಕ್ರಿಕೆಟ್ ಮೆದುಳನ್ನು ಬಹಿರಂಗವಾಗಿ ಹೊಗಳುತ್ತಿದ್ದಾರೆ. ಎರಡನೆಯದು- ಮಹೇಂದ್ರ ಸಿಂಗ್ ಧೋನಿ ವಿರಾಟ್ ನಾಯಕತ್ವದಲ್ಲಿ ಆಡಿದ್ದಾರೆ. ಮೂರನೆಯದು- ಆ ಸಮಯದಲ್ಲಿ ಧೋನಿಯ ಯೋಚನೆಗಳು ವಿರಾಟ್ ಕೊಹ್ಲಿಗೆ ಬಹಳ ಉಪಯೋಗವಾಗಿತ್ತು. ನಾಲ್ಕನೇಯದು- ಎಲ್ಲಾ ಕ್ರಿಕೆಟ್ ಅಭಿಮಾನಿಗಳು ಧೋನಿ ಈ ಹಿಂದೆ ನಾಯಕನಾಗಿದ್ದಾಗ ಅವರ ಸಾಮಥ್ಯ್ರವನ್ನು ನೋಡಿದ್ದರು.