MS Dhoni: ಎಂಎಸ್ ಧೋನಿ ಕ್ರಿಕೆಟ್​ನಲ್ಲಿ ಪ್ರಚಂಡ; ಬ್ಯುಸಿನೆಸ್​ನಲ್ಲಿ ಬುದ್ಧಿಶಾಲಿ; ರಾಜಕೀಯದಲ್ಲಿ..? ರೋಮಾಂಚನಗೊಳಿಸುತ್ತೆ ಉದ್ಯಮಿ ಆನಂದ್ ಮಹೀಂದ್ರ ಹೇಳಿಕೆ

|

Updated on: May 30, 2023 | 6:18 PM

Potential In Politics: ಎಂಎಸ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 5ನೇ ಬಾರಿ ಐಪಿಎಲ್ ಚಾಂಪಿಯನ್ ಎನಿಸಿದ ಬೆನ್ನಲ್ಲೇ ಮಹೀಂದ್ರ ಗ್ರೂಪ್ ಛೇರ್ಮನ್ ಆನಂದ್ ಮಹೀಂದ್ರ ಅವರು ಎಂಎಸ್ ಧೋನಿ ಕಾರ್ಯಕ್ಷೇತ್ರ ರಾಜಕೀಯವಾಗಬೇಕು ಎಂದಿದ್ದಾರೆ.

MS Dhoni: ಎಂಎಸ್ ಧೋನಿ ಕ್ರಿಕೆಟ್​ನಲ್ಲಿ ಪ್ರಚಂಡ; ಬ್ಯುಸಿನೆಸ್​ನಲ್ಲಿ ಬುದ್ಧಿಶಾಲಿ; ರಾಜಕೀಯದಲ್ಲಿ..? ರೋಮಾಂಚನಗೊಳಿಸುತ್ತೆ ಉದ್ಯಮಿ ಆನಂದ್ ಮಹೀಂದ್ರ ಹೇಳಿಕೆ
ಎಂಎಸ್ ಧೋನಿ
Follow us on

ಮಹೇಂದ್ರ ಸಿಂಗ್ ಧೋನಿ ಬಗ್ಗೆ ಕ್ರಿಕೆಟಿಗರು ಮತ್ತು ಕ್ರಿಕೆಟ್ ಪ್ರೇಮಿಗಳು ಆಡುವ ಮಾತು ಕೇಳಿರುತ್ತೇವೆ. ಧೋನಿ ಎಂಥ ಅದ್ಭುತ ಕ್ಯಾಪ್ಟನ್, ಅದ್ಭುತ ವಿಕೆಟ್ ಕೀಪರ್, ಅದ್ಭುತ ಬ್ಯಾಟರ್, ಅದ್ಭುತ ಫಿನಿಶರ್, ಹೀಗೆ ಅದ್ಭುತಗಳೇ ಅವರ ಹೆಸರಿನೊಂದಿಗೆ ತಳುಕುಹಾಕಿಕೊಳ್ಳುತ್ತವೆ. ಎಂಎಸ್ ಧೋನಿ ಕ್ರಿಕೆಟ್ ಆಡೋದನ್ನು ನಿಲ್ಲಿಸಿ ರಾಜಕೀಯಕ್ಕೆ ಹೋಗಬೇಕು. ಅವರೊಬ್ಬ ಭವಿಷ್ಯದ ನಾಯಕ ಎಂದು ಉದ್ಯಮಿ ಆನಂದ್ ಮಹೀಂದ್ರ (Anand Mahindra) ಅಭಿಪ್ರಾಯಪಟ್ಟಿದ್ದಾರೆ. ಎಂಎಸ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 5ನೇ ಬಾರಿ ಐಪಿಎಲ್ ಚಾಂಪಿಯನ್ ಎನಿಸಿದ ಬೆನ್ನಲ್ಲೇ ಮಹೀಂದ್ರ ಗ್ರೂಪ್ ಛೇರ್ಮನ್ ಆನಂದ್ ಮಹೀಂದ್ರ ಅವರು ಎಂಎಸ್ ಧೋನಿ ಕಾರ್ಯಕ್ಷೇತ್ರ ರಾಜಕೀಯವಾಗಬೇಕು ಎಂದಿದ್ದಾರೆ.

ಧೋನಿ ಬೌದ್ಧಿಕವಾಗಿ ಚುರುಕು ವ್ಯಕ್ತಿ; ಭವಿಷ್ಯದ ನಾಯಕನೆಂಬುದು ಸ್ಪಷ್ಟ ಎಂದ ಆನಂದ್

‘ಎಂಎಸ್ ಧೋನಿ ಮತ್ತೊಂದು ವರ್ಷ ಐಪಿಎಲ್​ನಲ್ಲಿ ಇರಬಹುದು ಎಂಬುದನ್ನು ಕೇಳಿದಾಗ ಹೆಚ್ಚಿನ ಜನರಂತೆ ನನಗೂ ಖುಷಿಯಾಯಿತು. ಆದರೆ, ಅವರು ಹೆಚ್ಚು ಅವಧಿ ಐಪಿಎಲ್​ನಲ್ಲಿ ಇರಬೇಕೆಂದು ನಾನು ಬಯಸುವುದಿಲ್ಲ. ಯಾಕೆಂದರೆ ಅವರು ರಾಜಕೀಯ ಕ್ಷೇತ್ರವನ್ನು ಪರಿಗಣಿಸುವುದು ಉತ್ತಮ ಎಂಬುದು ನನ್ನ ಭಾವನೆ.

ನಾನು ಎನ್​ಸಿಸಿ ಪರಿಶೀಲನಾ ಸಮಿತಿಯಲ್ಲಿ ಧೋನಿ ಜೊತೆ ಕೆಲಸ ಮಾಡಿದ್ದೇನೆ. ಮೈದಾನದಲ್ಲಿ ಅವರಿಗಿರುವ ಚುರುಕುತನಕ್ಕೂ ಅವರ ಬೌದ್ಧಿಕ ಚುರುಕುತನಕ್ಕೂ ತಾಳೆಯಾಗುತ್ತದೆ ಎಂಬುದನ್ನು ನಾನು ಕಂಡುಕೊಂಡೆ. ಅವರೊಬ್ಬ ಸರಳ ವ್ಯಕ್ತಿ, ಹಾಗೆಯೆ, ಕ್ರಿಯಾಶೀಲ ವಿಚಾರಕ್ಕೆ ಬಂದರೆ ಸ್ಪಷ್ಟ ನಿರ್ಧಾರ ಇರುವ ವ್ಯಕ್ತಿ. ಅವರು ಭವಿಷ್ಯದ ನಾಯಕನೆಂಬುದು ಸ್ಪಷ್ಟ’ ಎಂದು ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿCSK Shares: ಧೋನಿ ಬ್ರ್ಯಾಂಡ್ ಶಕ್ತಿ; ಅನ್​ಲಿಸ್ಟೆಡ್ ಮಾರುಕಟ್ಟೆಯಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ಸ್; ಷೇರುಬೆಲೆ ಭರ್ಜರಿ ಏರಿಕೆ

ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾದಾಗಲೇ ಅವರು ರಾಜಕೀಯಕ್ಕೆ ಸೇರಬಹುದು ಎನ್ನುವಂತಹ ಸುದ್ದಿಗಳಿದ್ದವು. ಆದರೆ, ಧೋನಿ ನಿವೃತ್ತರಾದ ಬಳಿಕ ತಮ್ಮ ಉದ್ಯಮ ವ್ಯವಹಾರಗಳತ್ತ ಹೆಚ್ಚು ಗಮನ ಹರಿಸಿದ್ದಾರೆ. ಕೃಷಿಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ.

ರಾಜಕೀಯಕ್ಕೆ ಹೋಗೋದಿಲ್ಲ ಎಂದು ಅವರು ಎಲ್ಲಿಯೂ ಹೇಳಿಲ್ಲದಿರುವುದು ಅವರು ಭವಿಷ್ಯದಲ್ಲಿ ರಾಜಕೀಯ ಹೆಜ್ಜೆಗಳಿಡುವ ಸಾಧ್ಯತೆಯನ್ನು ತಳ್ಳಿಹಾಕುವುದಿಲ್ಲ.

ಎಂಎಸ್ ಧೋನಿ ನಡೆಸುತ್ತಿರುವ ವ್ಯವಹಾರಗಳು ಮತ್ತು ಹೂಡಿಕೆಗಳು

ಮಹೇಂದ್ರ ಸಿಂಗ್ ಧೋನಿ ಹಲವು ವ್ಯವಹಾರ ಮತ್ತು ಹೂಡಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕ್ರಿಕೆಟ್ ಅಲ್ಲದೇ ಇತರ ಕ್ರೀಡೆಗಳ ಕ್ಷೇತ್ರದಲ್ಲಿ ವ್ಯವಹಾರ ಹೊಂದಿದ್ದಾರೆ. ರೇಸಿಂಗ್ ಸ್ಪೋರ್ಟ್​ನಲ್ಲಿ ಅವರು ಮಹೀ ರೇಸಿಂಗ್ ಟೀಮ್ ಇಂಡಿಯಾ ತಂಡದ ಮಾಲೀಕರಾಗಿದ್ದಾರೆ ಎಂಎಸ್​ಡಿ. ಚೆನ್ನೈಯಿನ್ ಎಫ್​ಸಿ ಎಂಬ ಫುಟ್ಬಾಲ್ ತಂಡ, ರಾಂಚಿ ರೇಸ್ ಎಂಬ ಹಾಕಿ ಟೀಮ್​ಗಳಿಗೆ ಧೋನಿ ಮಾಲೀಕರಾಗಿದ್ದಾರೆ.

ಇದಲ್ಲದೇ ಎಂಎಸ್ ಧೋನಿ ಕ್ರಿಕೆಟ್ ಅಕಾಡೆಮಿಯು ದಬೈನ ಕ್ರಿಕೆಟ್ಸ್ ಸ್ಪೆರೋ ಜೊತೆ ಸಹಭಾಗಿತ್ವದ ಒಪ್ಪಂದ ಮಾಡಿಕೊಂಡು ಕ್ರಿಕೆಟ್ ಕೋಚಿಂಗ್ ಕಾರ್ಯದಲ್ಲಿ ವ್ಯವಹಾರ ನಡೆಸಿದ್ದಾರೆ. ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಕಂಪನಿ ರಿತಿ ಸ್ಪೋರ್ಟ್ಸ್​ನಲ್ಲಿ ಮಹಿ ಹೂಡಿಕೆ ಇದೆ. ದೇಶಾದ್ಯಂತ 200ಕ್ಕೂ ಹೆಚ್ಚು ಜಿಮ್​ಗಳನ್ನು ಹೊಂದಿರುವ ಸ್ಪೋರ್ಟ್ಸ್ ಫಿಟ್ ವರ್ಲ್ಡ್ ಕಂಪನಿಯಲ್ಲೂ ಧೋನಿ ಹೂಡಿಕೆ ಮಾಡಿದ್ದಾರೆ. ಸ್ಪೋರ್ಟ್ಸ್ ವೇರ್ ಬ್ರ್ಯಾಂಡ್ ಎನಿಸಿದ ಸೆವೆನ್ ಎಂಬ ಕಂಪನಿಯೊಂದಿಗೂ ವ್ಯವಹಾರ ಪಾಲುದಾರಿಕೆಯನ್ನು ಧೋನಿ ಹೊಂದಿದ್ದಾರೆ.

ಇದನ್ನೂ ಓದಿIPL 2023: CSK 5ನೇ ಬಾರಿ ಚಾಂಪಿಯನ್ಸ್​…ಗಂಭೀರ್ ಹೇಳಿದ್ದೇನು?

ಕ್ರೀಡೆಯೇತರ ಕ್ಷೇತ್ರದಲ್ಲೂ ಧೋನಿ ವ್ಯವಹಾರಗಳೀವೆ. ಕಳೆದ ವರ್ಷ ಎಂಎಸ್​ಡಿಯವರು ಚಿಕನ್​ನಷ್ಟೇ ಪ್ರೋಟೀನ್ ಕೊಡುವ ಸಸ್ಯ ಆಧಾರಿತ ಆಹಾರ ಉತ್ಪನ್ನಗಳ ತಯಾರಕ ಕಂಪನಿ ಎನಿಸಿದ ಶಾಖ ಹ್ಯಾರಿಯಲ್ಲಿ ಧೋನಿ ಹೂಡಿಕೆ ಮಾಡಿದ್ದಾರೆ.

ಕೃಷಿ ಕ್ಷೇತ್ರದ ಬಗ್ಗೆ ಆಸಕ್ತಿ ಹೊಂದಿರುವ ಧೋನಿ ಅವರು ರಾಂಚಿಯಲ್ಲಿ ದೊಡ್ಡ ಫಾರ್ಮ್​ಹೌಸ್ ಹೊಂದಿದ್ದು, ಅದರಲ್ಲಿ ಸಾರಯವ ಕೃಷಿಗಾರಿಕೆ ಮಾಡಿ, ಆರ್ಗ್ಯಾನಿಕ್ ಕೃಷಿ ಉತ್ಪನ್ನಗಳನ್ನು ರಫ್ತು ಮಾಡುತ್ತಾರೆ.

ಕೃಷಿ ಕ್ಷೇತ್ರಕ್ಕೆ ಅನುಕೂಲವಾಗುವ ಡ್ರೋನ್​ಗಳನ್ನು ತಯಾರಿಸುವ ಚೆನ್ನೈ ಮೂಲದ ಗರುಡ ಏರೋಸ್ಪೇಸ್ ಕಂಪನಿಯಲ್ಲಿ ಧೋನಿ ಹೂಡಿಕೆ ಇದೆ. ಇನ್ನು, ಬೆಂಗಳೂರಿನಲ್ಲಿ ಮುಖ್ಯಕಚೇರಿ ಹೊಂದಿರುವ ಖಾತಾಬುಕ್ ಎಂಬ ಸ್ಟಾರ್ಟಪ್ ಕಂಪನಿಯಲ್ಲೂ ಧೋನಿ ಹಣ ಇದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ