AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CSK Shares: ಧೋನಿ ಬ್ರ್ಯಾಂಡ್ ಶಕ್ತಿ; ಅನ್​ಲಿಸ್ಟೆಡ್ ಮಾರುಕಟ್ಟೆಯಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ಸ್; ಷೇರುಬೆಲೆ ಭರ್ಜರಿ ಏರಿಕೆ

Chennai Super Kings' Share Price In Unlisted Market: 2018ರಲ್ಲಿ ಇಂಡಿಯಾ ಸಿಮೆಂಟ್ಸ್​ನಿಂದ ಸಿಎಸ್​ಕೆ ಪ್ರತ್ಯೇಕಗೊಂಡಾಗ ಅನ್​ಲಿಸ್ಟೆಡ್ ಮಾರುಕಟ್ಟೆಯಲ್ಲಿ ಅದರ ಷೇರು ಮೌಲ್ಯ 12ರಿಂದ 15 ರೂ ಇತ್ತು. ಇದೀಗ ಅದರ ಷೇರುಬೆಲೆ ಹತ್ತಿರಹತ್ತಿರ 200 ರೂ ಇದೆ.

CSK Shares: ಧೋನಿ ಬ್ರ್ಯಾಂಡ್ ಶಕ್ತಿ; ಅನ್​ಲಿಸ್ಟೆಡ್ ಮಾರುಕಟ್ಟೆಯಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ಸ್; ಷೇರುಬೆಲೆ ಭರ್ಜರಿ ಏರಿಕೆ
ಚೆನ್ನೈ ಸೂಪರ್ ಕಿಂಗ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 30, 2023 | 4:13 PM

Share

ಮಹೀಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) 5ನೇ ಬಾರಿ ಐಪಿಎಲ್ ಚಾಂಪಿಯನ್ ಎನಿಸಿದೆ. ಮೇ 29ರಂದು ಅಹ್ಮದಾಬಾದ್​ನಲ್ಲಿ ನಡೆದ ಐಪಿಎಲ್ 2023 ಫೈನಲ್​ನಲ್ಲಿ (IPL Final) ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡವನ್ನು ಸಿಎಸ್​ಕೆ 5 ವಿಕೆಟ್​ಗಳಿಂದ ಮಣಿಸಿತು. ಸಾಧಾರಣ ತಂಡವೇ ಇರಲಿ, ಬಲಿಷ್ಠ ಆಟಗಾರರಿರುವ ತಂಡವೇ ಇರಲಿ ಎಂಎಸ್ ಧೋನಿ ಗರಡಿಯಲ್ಲಿ ಸಿಎಸ್​ಕೆ ಐಪಿಎಲ್​ನಲ್ಲಿ ಧಮಾಕ ನಡೆಸುವುದನ್ನು ತಪ್ಪಿಸುವುದಿಲ್ಲ. ಅಂಥ ಮ್ಯಾಜಿಕ್ ಮನುಷ್ಯ ಎಂಎಸ್​ಡಿ. ಸಿಎಸ್​ಕೆ ಒಂದು ಐಪಿಎಲ್ ಫ್ರಾಂಚೈಸಿ ಮಾತ್ರವಲ್ಲ, ಅದೊಂದು ಖಾಸಗಿ ಕಂಪನಿಯಾಗಿದೆ. ಷೇರುಪೇಟೆಯಲ್ಲಿ ಲಿಸ್ಟ್ ಆಗದಿದ್ದರೂ ಅನ್​ಲಿಸ್ಟೆಟ್ ಮಾರುಕಟ್ಟೆಯಲ್ಲಿ (Unlisted Market) ಸಿಎಸ್​ಕೆ ಮಿಂಚು ಹರಿಸುತ್ತಿರುವುದು ಹೌದು.

5 ವರ್ಷದಲ್ಲಿ 15 ಪಟ್ಟು ಹೆಚ್ಚಾಗಿದೆ ಸಿಎಸ್​ಕೆ ಷೇರುಬೆಲೆ

ಸಿಎಸ್​ಕೆಯ ಮೌಲ್ಯ 9,442 ಕೋಟಿ ರೂ ಎಂದು ಅಂದಾಜು ಮಾಡಲಾಗಿದೆ. ಕಳೆದ 5 ವರ್ಷದಲ್ಲಿ ಸಿಎಸ್​ಕೆ ಷೇರುಬೆಲೆ 15 ಪಟ್ಟು ಹೆಚ್ಚಾಗಿದೆ. ಇಂಡಿಯಾ ಸಿಮೆಂಟ್ಸ್ ಒಡೆತನದಲ್ಲಿದ್ದ ಸಿಎಸ್​ಕೆ 2018ರಲ್ಲಿ ಡೀಮರ್ಜ್ ಆಯಿತು. ಅಂದರೆ ಇಂಡಿಯಾ ಸಿಮೆಂಟ್ಸ್​ನಿಂದ ಸಿಎಸ್​ಕೆ ಬೇರ್ಪಟ್ಟಿತು. ಇಂಡಿಯಾ ಸಿಮೆಂಟ್ಸ್​ನ ಷೇರುದಾರರಿಗೆ 1:1 ಅನುಪಾತದಲ್ಲಿ ಸಿಎಸ್​ಕೆ ಷೇರು ಸಿಕ್ಕಿತು. 2018ರಲ್ಲಿ ಸಿಎಸ್​ಕೆ ಪ್ರತ್ಯೇಕಗೊಂಡಾಗ ಅನ್​ಲಿಸ್ಟೆಡ್ ಮಾರುಕಟ್ಟೆಯಲ್ಲಿ ಅದರ ಷೇರು ಮೌಲ್ಯ 12ರಿಂದ 15 ರೂ ಇತ್ತು. ಇದೀಗ ಅದರ ಷೇರುಬೆಲೆ ಹತ್ತಿರಹತ್ತಿರ 200 ರೂ ಇದೆ. ಸಿಎಸ್​ಕೆ 2023ರ ಐಪಿಎಲ್ ಚಾಂಪಿಯನ್ ಆದ ಬೆನ್ನಲ್ಲೇ ಅದರ ಷೇರುಗಳಿಗೆ ಬೇಡಿಕೆ ಹೆಚ್ಚಿದೆ.

ಇದನ್ನೂ ಓದಿMS Dhoni Tears: ಸಿಎಸ್​ಕೆ ಗೆಲ್ಲುತ್ತಿದ್ದಂತೆ ಜಡೇಜಾರನ್ನು ಅಪ್ಪಿ ಮೈದಾನದಲ್ಲೇ ಕಣ್ಣೀರಿಟ್ಟ ಎಂಎಸ್ ಧೋನಿ

ಲಾಭ ಕುಸಿತದಿಂದ ಚೇತರಿಸಿಕೊಳ್ಳಬಲ್ಲುದಾ ಸಿಎಸ್​ಕೆ

2021-22ರ ವರ್ಷದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ನ ಒಟ್ಟು ಆದಾಯ 349.14 ಕೋಟಿ ರೂ ಇತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಆದಾಯದಲ್ಲಿ ಶೇ. 38ರಷ್ಟು ಹೆಚ್ಚಳವಾಗಿದೆ. ಆದರೆ, ಅದರ ನಿವ್ವಳ ಆದಾಯ ಮಾತ್ರ ಶೇ. 22ರಷ್ಟು ಕುಸಿದು 32.13 ಕೋಟಿ ರೂ ಮಾತ್ರ ಗಳಿಕೆ ಕಂಡಿದೆ. ಈ ಸೀಸನ್​ನಲ್ಲಿ ಆಟಗಾರರಿಗೆ ಮಾಡಿರುವ ವೆಚ್ಚವು ಇದಕ್ಕೆ ಕಾರಣವಿದ್ದಿರಬಹುದು. ತಜ್ಞರ ಪ್ರಕಾರ, ಮುಂದಿನ ದಿನಗಳಲ್ಲಿ ಸಿಎಎಸ್​ಕೆ ಆದಾಯ ಹೆಚ್ಚುವ ನಿರೀಕ್ಷೆ ಇದೆ. ಅನ್​ಲಿಸ್ಟೆಡ್ ಮಾರುಕಟ್ಟೆಯಲ್ಲಿ ಅದರ ಷೇರು ಬೆಲೆ 300 ರೂ ದಾಟುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಅನ್​ಲಿಸ್ಟೆಡ್ ಮಾರುಕಟ್ಟೆ ಎಂದರೇನು?

ಷೇರುಪೇಟೆಯಲ್ಲಿ ಲಿಸ್ಟ್ ಆಗದ, ಇನ್ನೂ ಐಪಿಒಗೆ ತೆರೆದುಕೊಳ್ಳದ ಕಂಪನಿಗಳ ಷೇರುಗಳು ಅನ್​ಲಿಸ್ಟೆಡ್ ಮಾರುಕಟ್ಟೆಗಳಲ್ಲಿ ಲಭಿಸುತ್ತವೆ. ಬಿಎಸ್​ಇ, ಎನ್​ಎಸ್​ಇಯಂತೆಯೇ ಇಂತಹ ಖಾಸಗಿ ಮಾರುಕಟ್ಟೆಗಳಲ್ಲೂ ಷೇರುಗಳ ವಹಿವಾಟು ನಡೆಯುತ್ತವೆ. ಖಾಸಗಿ ಕಂಪನಿಯ ಷೇರುಗಳನ್ನು ಆ ಕಂಪನಿಯ ಪ್ರೊಮೋಟರ್​ಗಳ ಮುಖಾಂತರವಾಗಿ ಪಡೆಯಬಹುದು. ವಿವಿಧ ಏಜೆನ್ಸಿಗಳ ಮೂಲಕ ಪಡೆಯಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ