ಮಹೇಂದ್ರ ಸಿಂಗ್ ಧೋನಿ ಮತ್ತೊಮ್ಮೆ ಕ್ರಿಕೆಟ್ ಮೈದಾನ ಪ್ರವೇಶಿಸಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಾರಥ್ಯ ವಹಿಸಿರುವ ಧೊನಿ ಐಪಿಎಲ್ 2021 ರಲ್ಲಿ ಭಾಗವಹಿಸಲಿದ್ದಾರೆ. ಕೊರೊನಾ ವೈರಸ್ ಪ್ರಕರಣಗಳಿಂದ ಪಂದ್ಯಾವಳಿಯನ್ನು ಮಧ್ಯದಲ್ಲಿ ನಿಲ್ಲಿಸಬೇಕಾಯಿತು. ಈಗ ಉಳಿದ ಪಂದ್ಯಗಳು ಯುಎಇಯಲ್ಲಿ ನಡೆಯಲಿದೆ. ಐಪಿಎಲ್ 2021 ರ ದ್ವಿತೀಯಾರ್ಧವು ಸೆಪ್ಟೆಂಬರ್ ತಿಂಗಳಿನಿಂದ ಆರಂಭವಾಗಲಿದೆ. ಆದರೆ ಈ ಮೊದಲು, ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅತ್ಯಂತ ವಿಶಿಷ್ಟವಾದ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಧೋನಿ ಇದುವರೆಗೂ ಈ ಶೈಲಿಯಲ್ಲಿ ಕಾಣಿಸಿಕೊಂಡಿಲ್ಲ. ಇದೀಗ ಅವರ ಹೊಸ ಲುಕ್ನ ಒಂದು ನೋಟ ಮಾತ್ರ ಕಾಣುತ್ತಿದೆ. ಐಪಿಎಲ್ ಬ್ರಾಡ್‌ಕಾಸ್ಟರ್ ಸ್ಟಾರ್ ಸ್ಪೋರ್ಟ್ಸ್ ಧೋನಿಯ ಈ ಹೊಸ ಅವತಾರದ ಒಂದು ನೋಟವನ್ನು ಪ್ರಸ್ತುತಪಡಿಸಿದೆ.
ಸ್ಟಾರ್ ಸ್ಪೋರ್ಟ್ಸ್ ಧೋನಿಯ ಹೊಸ ಫೋಟೋವನ್ನು ಟ್ವೀಟ್ ಮಾಡಿದೆ. ಇದರೊಂದಿಗೆ, ಎಂ ಎಸ್ ಧೋನಿ ವಿವೋ ಐಪಿಎಲ್‌ಗೆ ಮುಂಚಿತವಾಗಿ ಹೊಸದನ್ನು ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ನೈಜ ಚಿತ್ರವನ್ನು ನೋಡಲು ಸಂಪರ್ಕದಲ್ಲಿರಿ. ಮೂಲ ಚಿತ್ರ ಇನ್ನೂ ಬರಬೇಕಿದೆ ಎಂದು ಬರೆದುಕೊಂಡಿದೆ. ಚಿತ್ರದಲ್ಲಿ, ಧೋನಿ ಹಿಪ್ ಹಾಪ್ ತಾರೆಯಂತೆ ಕಾಣುತ್ತಿದ್ದಾರೆ. ಅವರ ಕೂದಲನ್ನು ಸ್ಪೈಕ್ ಶೈಲಿಯಲ್ಲಿರಿಸಿ ಬಣ್ಣ ಹಚ್ಚಲಾಗಿದೆ. ಜೊತೆಗೆ ಧೋನಿ ನೇರಳೆ ಕುರ್ತಾವನ್ನು ಧರಿಸಿದ್ದಾರೆ. ಫೋಟೋದಿಂದ ಸ್ಟಾರ್ ಸ್ಪೋರ್ಟ್ಸ್ ಐಪಿಎಲ್ 2021 ರ ದ್ವಿತೀಯಾರ್ಧದ ಪ್ರೋಮೋವನ್ನು ಸಿದ್ಧಪಡಿಸಿದೆ ಎಂದು ತೋರುತ್ತದೆ. ಮೊದಲಿನಂತೆ ಈ ಬಾರಿಯೂ ಪಂದ್ಯಾವಳಿಯನ್ನು ಧೋನಿ ಮೂಲಕ ಪ್ರಚಾರ ಮಾಡಲಾಗುತ್ತಿದೆ.
#MSDhoni's up to something new before #VIVOIPL! ?
Stay tuned for the Asli Picture!#AsliPictureAbhiBaakiHai pic.twitter.com/4w51ynIrs0
— Star Sports (@StarSportsIndia) August 19, 2021
ಮೊದಲಾರ್ಧದಲ್ಲಿ ಚೆನ್ನೈ ಅದ್ಭುತ ಫಾರ್ಮ್ನಲ್ಲಿತ್ತು
ಐಪಿಎಲ್ 2021 ರ ದ್ವಿತೀಯಾರ್ಧವು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದೊಂದಿಗೆ ಆರಂಭವಾಗಲಿದೆ. ಪಂದ್ಯಾವಳಿಯನ್ನು ನಿಲ್ಲಿಸಿದಾಗ, ಚೆನ್ನೈ ಅಂಕಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿತ್ತು. ಅವರು ಏಳು ಪಂದ್ಯಗಳಲ್ಲಿ ಐದರಲ್ಲಿ ಗೆದ್ದಿದ್ದಾರೆ. ಧೋನಿಯ ತಂಡವು ದ್ವಿತೀಯಾರ್ಧದಲ್ಲಿ ಅದೇ ರೀತಿ ಪ್ರದರ್ಶನ ನೀಡಲು ಮತ್ತು ಪ್ಲೇಆಫ್ ಟಿಕೆಟ್ ಪಡೆಯಲು ಬಯಸುತ್ತದೆ. ಕಳೆದ ವರ್ಷ ಯುಎಇಯಲ್ಲಿ ಐಪಿಎಲ್ ನಡೆದಾಗ, ಸಿಎಸ್‌ಕೆ ಏಳನೇ ಸ್ಥಾನವನ್ನು ಗಳಿಸಿತು ಮತ್ತು ಇತಿಹಾಸದಲ್ಲಿ ಮೊದಲ ಬಾರಿಗೆ ಪ್ಲೇಆಫ್‌ಗೆ ಪ್ರವೇಶಿಸಲು ವಿಫಲವಾಯಿತು. ಈ ವರ್ಷ ಕೂಡ ಐಪಿಎಲ್‌ನಲ್ಲಿ ಧೋನಿಯ ಪ್ರದರ್ಶನ ತುಂಬಾ ಕೆಟ್ಟದಾಗಿದೆ. ಅವರು ಏಳು ಪಂದ್ಯಗಳಲ್ಲಿ ಕೇವಲ 37 ರನ್ ಗಳಿಸಿದ್ದಾರೆ. 18 ರನ್ ಅವರ ಅತ್ಯಧಿಕ ಸ್ಕೋರ್ ಆಗಿದೆ. ಅವರ ಸ್ಟ್ರೈಕ್ ರೇಟ್ ಕೂಡ 123.33.
Published On - 9:06 pm, Thu, 19 August 21