MS Dhoni: ಟೀಂ ಇಂಡಿಯಾ ಬ್ಲೂ ರೆಟ್ರೊ ಜರ್ಸಿಯಲ್ಲಿ ಕಾಣಿಸಿಕೊಂಡ ಧೋನಿ! ಮತ್ತೆ ಕ್ರಿಕೆಟ್ ಅಖಾಡಕ್ಕಿಳಿದ್ರಾ ಕ್ಯಾಪ್ಟನ್ ಕೂಲ್

Edited By:

Updated on: Jul 27, 2021 | 4:32 PM

MS Dhoni: ಧೋನಿ ಅವರ ಜೆರ್ಸಿ ಫೋಟೋಗಳು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅವರು ಮತ್ತೊಮ್ಮೆ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರಾ ಎಂಬ ಪ್ರಶ್ನೆಗಳು ಸೋಷಿಯಲ್ ಮೀಡಿಯಾದಲ್ಲಿ ಹುಟ್ಟಿಕೊಂಡಿದೆ.

1 / 6
ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (ಎಂ.ಎಸ್. ಧೋನಿ) ಯ ಹೊಸ ವೇಷ ಅವರ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸುತ್ತದೆ. ಧೋನಿ ಟೀಮ್ ಇಂಡಿಯಾ ಬ್ಲೂ ರೆಟ್ರೊ ಜರ್ಸಿಯಲ್ಲಿ ಕಾಣಿಸಿಕೊಂಡಿದ್ದಾರೆ. ಟೀಮ್ ಇಂಡಿಯಾ ಇತ್ತೀಚಿನ ದಿನಗಳಲ್ಲಿ ಮೈದಾನದಲ್ಲಿ ಧರಿಸಿರುವ ಜರ್ಸಿ ಇದೇ ಆಗಿದೆ. ಧೋನಿ ಈ ಜರ್ಸಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ.

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (ಎಂ.ಎಸ್. ಧೋನಿ) ಯ ಹೊಸ ವೇಷ ಅವರ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸುತ್ತದೆ. ಧೋನಿ ಟೀಮ್ ಇಂಡಿಯಾ ಬ್ಲೂ ರೆಟ್ರೊ ಜರ್ಸಿಯಲ್ಲಿ ಕಾಣಿಸಿಕೊಂಡಿದ್ದಾರೆ. ಟೀಮ್ ಇಂಡಿಯಾ ಇತ್ತೀಚಿನ ದಿನಗಳಲ್ಲಿ ಮೈದಾನದಲ್ಲಿ ಧರಿಸಿರುವ ಜರ್ಸಿ ಇದೇ ಆಗಿದೆ. ಧೋನಿ ಈ ಜರ್ಸಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ.

2 / 6

ಧೋನಿ ಈಗ ಧರಿಸಿರುವ ಜರ್ಸಿಯನ್ನು ತೊಟ್ಟು ಮೈದಾನದಲ್ಲಿ ಎಂದಿಗೂ ಕಾಣಿಸಿರಲಿಲ್ಲ. ಏಕೆಂದರೆ ಆಗ ಈ ಜರ್ಸಿಯನ್ನು ಟೀಮ್ ಇಂಡಿಯಾ ಜರ್ಸಿಯಾಗಿರಲಿಲ್ಲ. ಈ ಜರ್ಸಿ ಧೋನಿಯ ನಿವೃತ್ತಿಯ ನಂತರ ಬಂದಿದ್ದು, ಧೋನಿ ಈ ಜರ್ಸಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳುತ್ತಿಲ್ಲವಾದರೂ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಸಖತ್ ವೈರಲ್ ಆಗುತ್ತಿದೆ.

3 / 6

ಧೋನಿ ಅವರ ಜೆರ್ಸಿ ಫೋಟೋಗಳು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅವರು ಮತ್ತೊಮ್ಮೆ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರಾ ಎಂಬ ಪ್ರಶ್ನೆಗಳು ಸೋಷಿಯಲ್ ಮೀಡಿಯಾದಲ್ಲಿ ಹುಟ್ಟಿಕೊಂಡಿದೆ. ಆದರೆ ಧೋನಿ ಟೀಮ್ ಇಂಡಿಯಾ ಜೆರ್ಸಿಯಲ್ಲಿ ಕಾಣಿಸಿಕೊಂಡಿರುವುದು ಜಾಹೀರಾತುವೊಂದರ ಚಿತ್ರೀಕರಣಕ್ಕಾಗಿ ಎಂಬುದು ವಿಶೇಷ.

4 / 6

ಫರಾ ಖಾನ್ ಅವರು ಧೋನಿ ಅವರೊಂದಿಗೆ ತೆಗೆದ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ಜಾಹೀರಾತು ಶೂಟ್ ಸಮಯದಲ್ಲಿ ಈ ಫೋಟೋ ತೆಗೆಯಲಾಗಿದೆ. ಇದರಲ್ಲಿ ಧೋನಿ ಟೀಮ್ ಇಂಡಿಯಾದ ರೆಟ್ರೊ ಜರ್ಸಿ ಧರಿಸಿರುವುದು ಕಂಡುಬರುತ್ತದೆ.

5 / 6

ಈ ಫೋಟೋದಲ್ಲಿ ಮಾಹೀ ಹೊಸ ಹೇರ್​ ಸ್ಟೈಲ್, ಬಿಯರ್ಡ್ ಲುಕ್​ನಲ್ಲಿ ಮಿಂಚುತ್ತಿದ್ದಾರೆ. ಹಾಗೆಯೇ ಈ ಜಾಹೀರಾತನ್ನು ಬಾಲಿವುಡ್ ನಿರ್ದೇಶಕಿ ಫರ್ಹಾ ಅಖ್ತರ್ ನಿರ್ದೇಶಿಸಿದ್ದು, ಐಪಿಎಲ್ ಅಥವಾ ಟಿ20 ವಿಶ್ವಕಪ್ ವೇಳೆ ಈ ಜಾಹೀರಾತು ಬಿಡುಗಡೆ ಆಗಲಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಟೀಮ್ ಇಂಡಿಯಾ ಪರ ಧೋನಿಯ ಕಂಬ್ಯಾಕ್​ನ್ನು ನಿರೀಕ್ಷಿಸುತ್ತಿದ್ದ ಅಭಿಮಾನಿಗಳಿಗೆ ನಂಬರ್ 7  ಜೆರ್ಸಿಯಲ್ಲಿ ಕೂಲ್​ ಕ್ಯಾಪ್ಟನ್​ನ್ನು ನೋಡಿ ಖುಷಿಯಾಗಿದ್ದಂತು ಸತ್ಯ.

6 / 6

ಆಗಸ್ಟ್ 15, 2020 ರಂದು ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ತಮ್ಮ ​ನಿವೃತ್ತಿ ಘೋಷಿಸಿದ್ದರು. ಟೀಮ್ ಇಂಡಿಯಾ ಪರ 2019ರ ಐಸಿಸಿ ವಿಶ್ವಕಪ್‌ನ ಸೆಮಿಫೈನಲ್​ನಲ್ಲಿ ಧೋನಿ ಕಡೆಯ ಪಂದ್ಯವನ್ನಾಡಿದ್ದರು. ಭಾರತದ ಪರ 90 ಟೆಸ್ಟ್ ಪಂದ್ಯಗಳಿಂದ ಧೋನಿ 4876 ರನ್ ಗಳಿಸಿದ್ದು, ಇದರಲ್ಲಿ 6 ಶತಕ ಮೂಡಿ ಬಂದಿವೆ. ಹಾಗೆಯೇ 350 ಏಕದಿನ ಪಂದ್ಯಗಳಿಂದ 10 ಶತಕಗಳೊಂದಿಗೆ 10773 ರನ್ ಕಲೆಹಾಕಿದ್ದಾರೆ. ಇನ್ನು 98 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಂದ 2 ಅರ್ಧಶತಕದ ಜೊತೆ 1617 ರನ್ ಬಾರಿಸಿದ್ದಾರೆ.

Published On - 4:31 pm, Tue, 27 July 21

Loading...
Unable to load recommendations.
Follow Us