MI vs UPW Live Score, WPL 2023: ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ನ 15ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಯುಪಿ ವಾರಿಯರ್ಸ್ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಮುಂಬೈ ಇಂಡಿಯನ್ಸ್ ತಂಡದ ಗೆಲುವಿನ ನಾಗಲೋಟಕ್ಕೆ ಬ್ರೇಕ್ ಬಿದ್ದಿದೆ. ಇದಕ್ಕೂ ಮುನ್ನ ಮುಂಬೈ ತಂಡವು ಸತತ 5 ಪಂದ್ಯಗಳಲ್ಲಿ ಜಯ ಸಾಧಿಸಿತ್ತು. ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಪಿ ತಂಡದ ನಾಯಕಿ ಅಲಿಸ್ಸಾ ಹೀಲಿ ಬೌಲಿಂಗ್ ಆಯ್ದುಕೊಂಡಿದ್ದರು. ಅಲ್ಲದೆ ಮೊದಲ ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು ಕೇವಲ 127 ರನ್ಗಳಿಗೆ ಆಲೌಟ್ ಮಾಡಿತು. 128 ರನ್ಗಳ ಸುಲಭ ಗುರಿ ಪಡೆದ ಯುಪಿ ವಾರಿಯರ್ಸ್ಗೆ ಕೊನೆಯ ಓವರ್ನಲ್ಲಿ ಗೆಲ್ಲಲು 5 ರನ್ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಸೋಫಿ ಎಕ್ಲೆಸ್ಟೋನ್ ತಂಡಕ್ಕೆ ಜಯ ತಂದುಕೊಟ್ಟರು.
ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಇಸ್ಸಿ ವಾಂಗ್, ಹುಮೈರಾ ಕಾಜಿ, ಧಾರಾ ಗುಜ್ಜರ್, ಅಮಂಜೋತ್ ಕೌರ್, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್
ಯುಪಿ ವಾರಿಯರ್ಜ್ (ಪ್ಲೇಯಿಂಗ್ XI): ಅಲಿಸ್ಸಾ ಹೀಲಿ(ನಾಯಕಿ), ದೇವಿಕಾ ವೈದ್ಯ, ಕಿರಣ್ ನವಗಿರೆ, ತಹ್ಲಿಯಾ ಮೆಕ್‌ಗ್ರಾತ್, ಗ್ರೇಸ್ ಹ್ಯಾರಿಸ್, ದೀಪ್ತಿ ಶರ್ಮಾ, ಪಾರ್ಶವಿ ಚೋಪ್ರಾ, ಸಿಮ್ರಾನ್ ಶೇಖ್, ಸೋಫಿ ಎಕ್ಲೆಸ್ಟೋನ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್.
ಕೊನೆಯ ಓವರ್ನಲ್ಲಿ ಭರ್ಜರಿ ಸಿಕ್ಸ್ ಸಿಡಿಸಿ ಯುಪಿ ವಾರಿಯರ್ಸ್ಗೆ ಗೆಲುವು ತಂದುಕೊಟ್ಟ ಸೋಫಿ
ಯುಪಿ ವಾರಿಯರ್ಸ್ಗೆ 5 ವಿಕೆಟ್ಗಳ ಜಯ
ಯುಪಿ ವಾರಿಯರ್ಸ್ಗೆ ಕೊನೆಯ ಓವರ್ನಲ್ಲಿ ಗೆಲ್ಲಲು 5 ರನ್ಗಳ ಅವಶ್ಯಕತೆ
ಕ್ರೀಸ್ನಲ್ಲಿ ದೀಪ್ತಿ ಶರ್ಮಾ – ಸೋಫಿ ಬ್ಯಾಟಿಂಗ್
ಹೇಲಿ ಮ್ಯಾಥ್ಯೂಸ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಫೋರ್ ಬಾರಿಸಿದ ದೀಪ್ತಿ ಶರ್ಮಾ
10 ಎಸೆತಗಳಲ್ಲಿ 12 ರನ್ಗಳ ಅವಶ್ಯಕತೆ
ಕ್ರೀಸ್ನಲ್ಲಿ ಸೋಫಿ – ದೀಪ್ತಿ ಶರ್ಮಾ ಬ್ಯಾಟಿಂಗ್
ಯುಪಿ ವಾರಿಯರ್ಸ್ಗೆ ಗೆಲ್ಲಲು 18 ಎಸೆತಗಳಲ್ಲಿ 19 ರನ್ಗಳ ಅವಶ್ಯಕತೆ
ಕ್ರೀಸ್ನಲ್ಲಿ ಸೋಫಿ-ದೀಪ್ತಿ ಶರ್ಮಾ ಬ್ಯಾಟಿಂಗ್
ಅಮೆಲಿಯಾ ಕೆರ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿ ಹೊರನಡೆದ ಗ್ರೇಸ್ ಹ್ಯಾರಿಸ್ (39)
ಯುಪಿಗೆ ಗೆಲ್ಲಲು 26 ಎಸೆತಗಳಲ್ಲಿ 23 ರನ್ಗಳ ಅವಶ್ಯಕತೆ
ಅಮೆಲಿಯಾ ಕೆರ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಗ್ರೇಸ್ ಹ್ಯಾರಿಸ್
ಯುಪಿ ವಾರಿಯರ್ಸ್ಗೆ ಗೆಲ್ಲಲು 30 ಎಸೆತಗಳಲ್ಲಿ 31 ರನ್ಗಳ ಅವಶ್ಯಕತೆ
ಕ್ರೀಸ್ನಲ್ಲಿ ದೀಪ್ರಿ ಶರ್ಮಾ – ಗ್ರೇಸ್ ಹ್ಯಾರಿಸ್ ಬ್ಯಾಟಿಂಗ್
ಅಮನ್ಜೊತ್ ಕೌರ್ ಎಸೆತದಲ್ಲಿ ಫೈನ್ ಲೆಗ್ನತ್ತ ಬೌಂಡರಿ ಬಾರಿಸಿದ ಗ್ರೇಸ್ ಹ್ಯಾರಿಸ್
ಯುಪಿ ಪರ ಕ್ರೀಸ್ನಲ್ಲಿ ಗ್ರೇಸ್ ಹ್ಯಾರಿಸ್ ಹಾಗೂ ದೀಪ್ತಿ ಶರ್ಮಾ ಬ್ಯಾಟಿಂಗ್
ಬ್ರಂಟ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಗ್ರೇಸ್ ಹ್ಯಾರಿಸ್
ಅಮೆಲಿಯಾ ಕೆರ್ ಎಸೆತದಲ್ಲಿ ನೇರವಾಗಿ ಬೌಲರ್ಗೆ ಕ್ಯಾಚ್ ನೀಡಿದ ತಹ್ಲಿಯಾ ಮೆಕ್ಗ್ರಾಥ್ (38)
ಕ್ರೀಸ್ನಲ್ಲಿ ತಹ್ಲಿಯಾ-ಗ್ರೇಸ್ ಹ್ಯಾರಿಸ್ ಬ್ಯಾಟಿಂಗ್
ಯುಪಿ ವಾರಿಯರ್ಸ್ಗೆ ಗೆಲ್ಲಲು 54 ಎಸೆತಗಳಲ್ಲಿ 62 ರನ್ಗಳ ಅವಶ್ಯಕತೆ
ಸೈಕಾ ಇಶಾಕ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ತಹ್ಲಿಯಾ
ಸೈಕಾ ಇಶಾಕ್ ಎಸೆತದಲ್ಲಿ ಆಫ್ ಸೈಡ್ನತ್ತ ಬೌಂಡರಿ ಬಾರಿಸಿದ ತಹ್ಲಿಯಾ ಮೆಕ್ಗ್ರಾಥ್
10 ಓವರ್ಗಳಲ್ಲಿ ಅರ್ಧಶತಕ ಪೂರೈಸಿದ ಯುಪಿ ವಾರಿಯರ್ಸ್
ಕ್ರೀಸ್ನಲ್ಲಿ ತಹ್ಲಿಯಾ ಮೆಕ್ಗ್ರಾಥ್ ಹಾಗೂ ಗ್ರೇಸ್ ಹ್ಯಾರಿಸ್ ಬ್ಯಾಟಿಂಗ್
ಕ್ರೀಸ್ನಲ್ಲಿ ತಹ್ಲಿಯಾ ಮೆಕ್ಗ್ರಾಥ್ ಹಾಗೂ ಗ್ರೇಸ್ ಹ್ಯಾರಿಸ್ ಬ್ಯಾಟಿಂಗ್
ಬ್ರಂಟ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಕಿರಣ್ ನವಗಿರೆ (12)…ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ವಿಕೆಟ್ ಕೀಪರ್ ಯಸ್ತಿಕಾ ಭಾಟಿಯಾ…ಯುಪಿ ವಾರಿಯರ್ಸ್ 3ನೇ ವಿಕೆಟ್ ಪತನ
ಮುಂಬೈ ಇಂಡಿಯನ್ಸ್ ಉತ್ತಮ ಬೌಲಿಂಗ್
ಕ್ರೀಸ್ನಲ್ಲಿ ತಹ್ಲಿಯಾ ಮೆಕ್ಗ್ರಾಥ್ ಹಾಗೂ ಕಿರಣ್ ನವಗಿರೆ ಬ್ಯಾಟಿಂಗ್
ಇಸ್ಸಿ ವೊಂಗ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರನಡೆದ ಅಲಿಸ್ಸಾ ಹೀಲಿ (8)
ಹೇಲಿ ಮ್ಯಾಥ್ಯೂಸ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಭರ್ಜರಿ ಸಿಕ್ಸ್ ಬಾರಿಸಿದ ಕಿರಣ್ ನವಗಿರೆ
ಬ್ರಂಟ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಫೋರ್ ಬಾರಿಸಿದ ಕಿರಣ್ ನವಗಿರೆ
ಹೇಲಿ ಮ್ಯಾಥ್ಯೂಸ್ ಎಸೆತದಲ್ಲಿ ಸ್ಲಿಪ್ನಲ್ಲಿ ಕ್ಯಾಚ್ ನೀಡಿದ ದೇವಿಕಾ ವೈದ್ಯ…ಅತ್ಯದ್ಭುತ ಕ್ಯಾಚ್ ಹಿಡಿದ ಹರ್ಮನ್‌ಪ್ರೀತ್ ಕೌರ್…ದೇವಿಕಾ (1) ಔಟ್
ಮೊದಲ ಓವರ್ನಲ್ಲಿ ಒಂದೇ ಒಂದು ರನ್ ಗಳಿಸಿದ ದೇವಿಕಾ ವೈದ್ಯ
ಮುಂಬೈ ತಂಡಕ್ಕೆ ಉತ್ತಮ ಆರಂಭ ಒದಗಿಸಿದ ಸ್ಕಿವರ್ ಬ್ರಂಟ್
ಮುಂಬೈ ಇಂಡಿಯನ್ಸ್ ತಂಡವನ್ನು ಆಲೌಟ್ ಮಾಡಿದ ಯುಪಿ ವಾರಿಯರ್ಸ್
ಯುಪಿ ವಾರಿಯರ್ಸ್ಗೆ 128 ರನ್ಗಳ ಸುಲಭ ಗುರಿ ನೀಡಿದ ಮುಂಬೈ ಇಂಡಿಯನ್ಸ್
ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದು 19 ಎಸೆತಗಳಲ್ಲಿ 32 ರನ್ ಬಾರಿಸಿದ ವೊಂಗ್
ದೀಪ್ತಿ ಶರ್ಮಾರ ಅತ್ಯುತ್ತಮ ಥ್ರೋಗೆ…ರನೌಟ್ ಆಗಿ ಹೊರನಡೆದ ಇಸ್ಸಿ ವೊಂಗ್ (32)
ದೀಪ್ತಿ ಶರ್ಮಾ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ವೊಂಗ್
ದೀಪ್ತಿ ಶರ್ಮಾ ಎಸೆತದಲ್ಲಿ ಹಿಂಬದಿತ್ತ ಕಾಲಿಟ್ಟು ಲಾಂಗ್ ಆಫ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ವೊಂಗ್
ಕ್ರೀಸ್ನಲ್ಲಿ ಇಸ್ಸಿ ವೊಂಗ್ – ಕಲಿತಾ ಬ್ಯಾಟಿಂಗ್
ದೀಪ್ತಿ ಶರ್ಮಾ ಎಸೆತದಲ್ಲಿ ಧಾರಾ ಗುಜ್ಜರ್ (3) ಕ್ಲೀನ್ ಬೌಲ್ಡ್
ರಾಜೇಶ್ವರಿ ಗಾಯಕ್ವಾಡ್ ಎಸೆತದಲ್ಲಿ ಹುಮೈರಾ ಖಾಜಿ (4) ಕ್ಲೀನ್ ಬೌಲ್ಡ್
ಯುಪಿ ವಾರಿಯರ್ಸ್ಗೆ 7ನೇ ಯಶಸ್ಸು
ಸೋಫಿ ಎಕ್ಲೆಸ್ಟೋನ್ ಎಸೆತದಲ್ಲಿ ಸ್ಟಂಪ್ ಔಟಾಗಿ ನಿರ್ಗಮಿಸಿದ ಅಮನ್ಜೊತ್ ಕೌರ್ (5)
ಯುಪಿ ವಾರಿಯರ್ಸ್ಗೆ 6ನೇ ಯಶಸ್ಸು
ಕ್ರೀಸ್ನಲ್ಲಿ ಅಮನ್ಜೊತ್ ಕೌರ್ – ಇಸ್ಸಿ ವೊಂಗ್ ಬ್ಯಾಟಿಂಗ್
ಪರ್ಶವಿ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಇಸ್ಸಿ ವೊಂಗ್
ದೀಪ್ತಿ ಶರ್ಮಾ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಶಾಟ್ ಬಾರಿಸಿದ ಹರ್ಮನ್‌ಪ್ರೀತ್ ಕೌರ್…ಬೌಂಡರಿ ಲೈನ್ನಲ್ಲಿ ಸಿಮ್ರಾನ್ ಶೇಖ್ ಉತ್ತಮ ಕ್ಯಾಚ್…ಹರ್ಮನ್‌ಪ್ರೀತ್ ಕೌರ್ (25) ಔಟ್
ಯುಪಿ ವಾರಿಯರ್ಸ್ಗೆ 5ನೇ ಯಶಸ್ಸು
ರಾಜೇಶ್ವರಿ ಗಾಯಕ್ವಾಡ್ ಎಸೆತದಲ್ಲಿ ಸ್ವೀಪ್ ಶಾಟ್ಗೆ ಯತ್ನ…ಸುಲಭ ಕ್ಯಾಚ್ ನೀಡಿ ಔಟಾದ ಅಮೆಲಿಯಾ ಕೆರ್ (3)
ಯುಪಿ ವಾರಿಯರ್ಸ್ಗೆ 4ನೇ ಯಶಸ್ಸು
ಪರ್ಶವಿ ಚೋಪ್ರಾ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಫೋರ್ ಬಾರಿಸಿದ ಹರ್ಮನ್‌ಪ್ರೀತ್ ಕೌರ್
ಸೋಫಿ ಎಕ್ಲೆಸ್ಟೋನ್ ಎಸೆತದಲ್ಲಿ ವಿಕೆಟ್ ಕೀಪರ್ ಅಲಿಸ್ಸಾ ಹೀಲಿಗೆ ಕ್ಯಾಚ್ ನೀಡಿ ಹೊರ ನಡೆದ ಹೇಲಿ ಮ್ಯಾಥ್ಯೂಸ್ (35)
ಯುಪಿ ವಾರಿಯರ್ಸ್ ತಂಡಕ್ಕೆ 3ನೇ ಯಶಸ್ಸು
ದೀಪ್ತಿ ಶರ್ಮಾ ಎಸೆತದಲ್ಲಿ ಪುಲ್ ಶಾಟ್ ಮೂಲಕ ಆಕರ್ಷಕ ಸಿಕ್ಸ್ ಬಾರಿಸಿದ ಹೇಲಿ ಮ್ಯಾಥ್ಯೂಸ್
10 ಓವರ್ಗಳಲ್ಲಿ 56 ರನ್ ಕಲೆಹಾಕಿದ ಮುಂಬೈ ಇಂಡಿಯನ್ಸ್
ಕ್ರೀಸ್ನಲ್ಲಿ ಹರ್ಮನ್‌ಪ್ರೀತ್ ಕೌರ್ – ಹೇಲಿ ಮ್ಯಾಥ್ಯೂಸ್ ಬ್ಯಾಟಿಂಗ್
ಸೋಫಿ ಎಕ್ಲೆಸ್ಟೋನ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರನಡೆದ ಸ್ಕಿವರ್ ಬ್ರಂಟ್ (5)
ಯುಪಿ ವಾರಿಯರ್ಸ್ ತಂಡಕ್ಕೆ 2ನೇ ಯಶಸ್ಸು
7 ಓವರ್ಗಳಲ್ಲಿ ಕೇವಲ 38 ರನ್ ನೀಡಿದ ಯುಪಿ ವಾರಿಯರ್ಸ್ ಬೌಲರ್ಗಳು
ಕ್ರೀಸ್ನಲ್ಲಿ ಹೇಲಿ ಮ್ಯಾಥ್ಯೂಸ್ (24) ಹಾಗೂ ಸ್ಕಿವರ್ ಬ್ರಂಟ್ (5) ಬ್ಯಾಟಿಂಗ್
ಕ್ರೀಸ್ನಲ್ಲಿ ಹೇಲಿ ಮ್ಯಾಥ್ಯೂಸ್ – ಸ್ಕಿವರ್ ಬ್ರಂಟ್ ಬ್ಯಾಟಿಂಗ್
ಅಂಜಲಿ ಎಸೆತದಲ್ಲಿ ಬೌಲ್ಡ್ ಆಗಿ ಹೊರನಡೆದ ಯಸ್ತಿಕಾ ಭಾಟಿಯಾ (7)
ಗ್ರೇಸ್ ಹ್ಯಾರಿಸ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಬ್ಯಾಕ್ ಟು ಬ್ಯಾಕ್ ಭರ್ಜರಿ ಸಿಕ್ಸ್ ಬಾರಿಸಿದ ಹೇಲಿ ಮ್ಯಾಥ್ಯೂಸ್
ಕ್ರೀಸ್ನಲ್ಲಿ ಹೇಲಿ ಮ್ಯಾಥ್ಯೂಸ್ – ಯಸ್ತಿಕಾ ಭಾಟಿಯಾ ಬ್ಯಾಟಿಂಗ್
? Team Updates ?
1️⃣ change for @UPWarriorz while @mipaltan remain unchanged.
A look at the Playing XIs of both teams ??
Follow the match ▶️ https://t.co/6bZ3042C4S #TATAWPL | #MIvUPW pic.twitter.com/2iwXBk8Z8U
— Women’s Premier League (WPL) (@wplt20) March 18, 2023
ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಇಸ್ಸಿ ವಾಂಗ್, ಹುಮೈರಾ ಕಾಜಿ, ಧಾರಾ ಗುಜ್ಜರ್, ಅಮಂಜೋತ್ ಕೌರ್, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್
ಯುಪಿ ವಾರಿಯರ್ಜ್ (ಪ್ಲೇಯಿಂಗ್ XI): ಅಲಿಸ್ಸಾ ಹೀಲಿ(ನಾಯಕಿ), ದೇವಿಕಾ ವೈದ್ಯ, ಕಿರಣ್ ನವಗಿರೆ, ತಹ್ಲಿಯಾ ಮೆಕ್‌ಗ್ರಾತ್, ಗ್ರೇಸ್ ಹ್ಯಾರಿಸ್, ದೀಪ್ತಿ ಶರ್ಮಾ, ಪಾರ್ಶವಿ ಚೋಪ್ರಾ, ಸಿಮ್ರಾನ್ ಶೇಖ್, ಸೋಫಿ ಎಕ್ಲೆಸ್ಟೋನ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್.
Published On - 3:35 pm, Sat, 18 March 23