IND vs AUS: ಕೊಹ್ಲಿ ಮಾತನ್ನು ಕಡೆಗಣಿಸಿದ್ರಾ ಪಾಂಡ್ಯ? ಸಖತ್ ವೈರಲ್ ಆಗುತ್ತಿದೆ ಈ ವಿಡಿಯೋ

IND vs AUS: ಈ ವೈರಲ್ ವೀಡಿಯೊದಲ್ಲಿ ವಿರಾಟ್, ಹಾರ್ದಿಕ್‌ಗೆ ಸನ್ನೆ ಮಾಡಿ ಕೆಲವು ಸಲಹೆಗಳನ್ನು ನೀಡುತ್ತಿದ್ದಾರೆ. ಆದರೆ ಹಾರ್ದಿಕ್, ಕೊಹ್ಲಿಯ ಸಲಹೆಗಳನ್ನು ಕೇಳದೆ, ಅವರ ಕಡೆ ನೋಡಲು ಇಲ್ಲ.

IND vs AUS: ಕೊಹ್ಲಿ ಮಾತನ್ನು ಕಡೆಗಣಿಸಿದ್ರಾ ಪಾಂಡ್ಯ? ಸಖತ್ ವೈರಲ್ ಆಗುತ್ತಿದೆ ಈ ವಿಡಿಯೋ
ಹಾರ್ದಿಕ್, ಕೊಹ್ಲಿ ವಿಡಿಯೋ
Follow us
ಪೃಥ್ವಿಶಂಕರ
|

Updated on:Mar 18, 2023 | 1:46 PM

ಟೆಸ್ಟ್ ಸರಣಿಯ ಬಳಿಕ ಭಾರತ ತಂಡ, ಆಸ್ಟ್ರೇಲಿಯಾ (India Vs Australia) ವಿರುದ್ಧದ ಏಕದಿನ ಸರಣಿಯಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ವಾಂಖೆಡೆ ಸ್ಟೇಡಿಯಂನಲ್ಲಿ (Wankhede Stadium) ನಡೆದ ಈ ಪಂದ್ಯದಲ್ಲಿ ಬೌಲರ್​ಗಳ ಆರ್ಭಟದ ನಡುವೆ ಗೆಲುವಿನ ಇನ್ನಿಂಗ್ಸ್ ಆಡಿದ ಕನ್ನಡಿಗ ಕೆಎಲ್ ರಾಹುಲ್ ಹಾಗೂ ಸಾಥ್ ನೀಡಿದ ಜಡೇಜಾ (KL Rahul and Ravindra Jadeja) ಭಾರತವನ್ನು ಗೆಲುವಿನ ದಡ ಸೇರಿಸಿದರು. ಆಸ್ಟ್ರೇಲಿಯವನ್ನು ಕೇವಲ 188 ರನ್‌ಗಳಿಗೆ ಆಲೌಟ್ ಮಾಡಿದ ಟೀಂ ಇಂಡಿಯಾ, ರಾಹುಲ್ ಮತ್ತು ರವೀಂದ್ರ ಜಡೇಜಾ ಅವರ ಅತ್ಯುತ್ತಮ ಜೊತೆಯಾಟದ ನೆರವಿನಿಂದ 5 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು. ಆದರೆ ಈ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಹಾಗೂ ವಿರಾಟ್ ಕೊಹ್ಲಿ (Hardik Pandya and Virat Kohli) ನಡುವೆ ವಿವಾದ ನಡೆದಿದೆ ಎನ್ನಲಾಗಿದೆ. ವಿರಾಟ್ ಕೊಹ್ಲಿ ಸಲಹೆಯನ್ನು ಹಾರ್ದಿಕ್ ಕಡೆಗಣಿಸಿರುವುದು ಕೂಡ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಪಾಂಡ್ಯ ಮೇಲೆ ಕೊಹ್ಲಿ ಫ್ಯಾನ್ಸ್ ಕಿಡಿಕಾರಿದ್ದಾರೆ.

ಕೊಹ್ಲಿ ಮಾತನ್ನು ಕಡೆಗಣಿಸಿದ್ರಾ ಪಾಂಡ್ಯ?

ಇದೆಲ್ಲ ನಡೆದಿದ್ದು ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ವೇಳೆ. ಆಸ್ಟ್ರೇಲಿಯಾ 3 ವಿಕೆಟ್​ ಕಳೆದುಕೊಂಡು 129 ರನ್ ಗಳಿಸಿ ಆಡುತ್ತಿತ್ತು. ಈ ವೇಳೆ ಕುಲ್ದೀಪ್ ಯಾದವ್ ಬೌಲಿಂಗ್​ಗೆ ಬಂದರು. ಆಗ ಕುಲ್ದೀಪ್ ಬಳಿಕ ಬಂದ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಕೆಲವು ಟಿಪ್ಸ್ ನೀಡಲಾರಂಭಿಸಿದರು. ಬಳಿಕ ವಿರಾಟ್, ಹಾರ್ದಿಕ್‌ಗೆ ಸನ್ನೆ ಮಾಡಿ ಕೆಲವು ಸಲಹೆಗಳನ್ನು ನೀಡಲು ಮುಂದಾದರು. ಆದರೆ ಹಾರ್ದಿಕ್, ಕೊಹ್ಲಿಯ ಸಲಹೆಗಳನ್ನು ಕೇಳದೆ, ಅವರ ಕಡೆ ನೋಡಲು ಇಲ್ಲ. ಇದನ್ನ ನೋಡಿದ ಕೊಹ್ಲಿ ಕೂಡ ಹಾರ್ದಿಕ್​ಗೆ ಜೋರಾಗಿ ಏನ್ನನ್ನೋ ಹೇಳುತ್ತಾ ಫೀಲ್ಡಂಗ್ ಮಾಡಲು ತೆರಳಿದರು. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಹಾರ್ದಿಕ್ ಮತ್ತು ವಿರಾಟ್ ನಡುವೆ ಜಗಳವಾಗಿದೆ ಎಂಬ ಚರ್ಚೆಯೂ ನಡೆಯುತ್ತಿದೆ.

ಪಂದ್ಯದ ವಿವರ ಹೀಗಿದೆ

ಈ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಆಸ್ಟ್ರೇಲಿಯಾವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆಸ್ಟ್ರೇಲಿಯಾಕ್ಕೆ ಮಿಚೆಲ್ ಮಾರ್ಷ್​ ಸ್ಫೋಟಕ ಇನ್ನಿಂಗ್ಸ್ ಆಡುವ ಮೂಲಕ ನೆರವಾದರು. ಮಿಚೆಲ್ ಮಾರ್ಷ್, ನಾಯಕ ಸ್ಟೀವನ್ ಸ್ಮಿತ್ ಜೊತೆ ಸೇರಿ ಎರಡನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ನಡೆಸಿದರು. ಇವರಿಬ್ಬರು ಎರಡನೇ ವಿಕೆಟ್‌ಗೆ 72 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡಿತು. ಈ ಜೋಡಿ ಟೀಂ ಇಂಡಿಯಾಗೆ ತಲೆನೋವಾಗಿ ಪರಿಣಮಿಸಿತ್ತು. ಆದರೆ ಸ್ಮಿತ್​ರನ್ನು ಬಲಿ ಪಡೆಯುವುದರೊಂದಿಗೆ ಪಾಂಡ್ಯ ತಂಡಕ್ಕೆ ಎರಡನೇ ಯಶಸ್ಸು ತಂದುಕೊಟ್ಟರು.

IND vs AUS: 16 ವರ್ಷಗಳ ನಂತರ ಮೊದಲ ಬಾರಿಗೆ; ಮುಂಬೈನಲ್ಲಿ ಇತಿಹಾಸ ಸೃಷ್ಟಿಸಿದ ಟೀಂ ಇಂಡಿಯಾ

ಮಾರ್ಷ್​ ಅರ್ಧಶತಕ

ಸ್ಮಿತ್ ನಂತರ ಬಂದ ಮಾರ್ನಸ್ ಲಬುಶೇನ್, ಮಿಚೆಲ್ ಮಾರ್ಷ್ ಅವರೊಂದಿಗೆ ಮೂರನೇ ವಿಕೆಟ್‌ಗೆ 52 ರನ್ ಜೊತೆಯಾಟ ನಡೆಸಿದರು. ಮಿಚೆಲ್ ಮಾರ್ಷ್ ಶತಕದ ಹಾದಿಯಲ್ಲಿದ್ದರು. ಆದರೆ ಮಿಚೆಲ್ ಜಡೇಜಾ ಬೌಲಿಂಗ್ ನಲ್ಲಿ ಮೊಹಮ್ಮದ್ ಸಿರಾಜ್​ಗೆ ಕ್ಯಾಚಿತ್ತು ಔಟಾದರು. ಮಾರ್ಷ್ 65 ಎಸೆತಗಳಲ್ಲಿ 10 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ 81 ರನ್ ಗಳಿಸಿದರು. ಮಿಚೆಲ್ ಔಟಾಗುವುದರೊಂದಿಗೆ ಆಸ್ಟ್ರೇಲಿಯಾ 4 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿತು.

ಆ ನಂತರ ಭಾರತದ ವೇಗಿಗಳ ದಾಳಿಗೆ ನಲುಗಿದ ಕಾಂಗರೂಗಳು ಕೇವಲ 188 ರನ್​ಗಳಿಗೆ ಆಲೌಟ್ ಆದರು. ತಂಡದ ಪರ ಮಾರ್ಷ್​ ಅತ್ಯಧಿಕ 81 ರನ್​ಗಳಿಸಿದರೆ, ನಾಯಕ ಸ್ಮಿತ್ 21 ಹಾಗೂ ಜೋಶ್ ಇಂಗ್ಲಿಸ್ 26 ರನ್ ಗಳಿಸಿದರು. ಈ ಮೂವರನ್ನು ಹೊರತುಪಡಿಸಿ ಆಸೀಸ್ ತಂಡದ ಮತ್ತ್ಯಾವ ಆಟಗಾರನು ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲುವ ಸಾಹಸ ಮಾಡಲಿಲ್ಲ. ಭಾರತದ ಪರ ಶಮಿ ಹಾಗೂ ಸಿರಾಜ್ ತಲಾ 3 ವಿಕೆಟ್ ಪಡೆದರೆ, ಜಡೇಜಾ 2 ವಿಕೆಟ್, ನಾಯಕ ಪಾಂಡ್ಯ ಹಾಗೂ ಕುಲ್ದೀಪ್ ತಲಾ ಒಂದೊಂದು ವಿಕೆಟ್ ಪಡೆದರು.

ರಾಹುಲ್- ಜಡೇಜಾ ಶತಕದ ಜೊತೆಯಾಟ

ಇನ್ನು ಈ ಗುರಿ ಬೆನ್ನಟ್ಟಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದಿದ್ದ ಕಿಶನ್ ಕೇವಲ 3 ರನ್​ಗಳಿಗೆ ಸುಸ್ತಾದರು. ಆ ನಂತರ ಬಂದ ಕೊಹ್ಲಿ ಹಾಗೂ ಸೂರ್ಯ ಕೂಡ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಆ ಬಳಿಕ ಜೊತೆಯಾದ ರಾಹುಲ್ ಹಾಗೂ ಹಾರ್ದಿಕ್ ಟೀಂ ಇಂಡಿಯಾ ಇನ್ನಿಂಗ್ಸ್​ ಸುದಾರಿಸುವಂತೆ ಮಾಡಿದರು. ಆದರೆ ಈ ನಡುವೆ ಪಾಂಡ್ಯ ವಿಕೆಟ್ ಪತನವಾಯಿತು. ಅಂತಿಮವಾಗಿ 5ನೇ ವಿಕೆಟ್​ಗೆ ಜೊತೆಯಾದ ರಾಹುಲ್ ಹಾಗೂ ಜಡೇಜಾ ಶತಕದ ಜೊತೆಯಾಟ ಆಡುವುದರೊಂದಿಗೆ ಭಾರತಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು. ಇದರಲ್ಲಿ ರಾಹುಲ್ ಅರ್ಧಶತಕ ಬಾರಿಸಿ ಅಜೇಯರಾಗಿ ಉಳಿದರೆ, ಜಡೇಜಾ ಕೂಡ 45 ರನ್​ಗಳ ಅಜೇಯ ಇನ್ನಿಂಗ್ಸ್ ಆಡಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:43 pm, Sat, 18 March 23

ನಾವು ಅಧಿಕೃತವಾಗಿ ಸಭೆ ನಡೆಬೇಕೆಂದುಕೊಂಡಿದ್ದೆವು, ಮುಚ್ಚುಮರೆ ಇಲ್ಲ: ಖರ್ಗೆ
ನಾವು ಅಧಿಕೃತವಾಗಿ ಸಭೆ ನಡೆಬೇಕೆಂದುಕೊಂಡಿದ್ದೆವು, ಮುಚ್ಚುಮರೆ ಇಲ್ಲ: ಖರ್ಗೆ
ಪೊಲೀಸರು ಬಂಧಿಸಿರುವ ದುಷ್ಟವ್ಯಕ್ತಿ ಮಾನಸಿಕ ಅಸ್ವಸ್ಥನಲ್ಲ: ಕರ್ಣ
ಪೊಲೀಸರು ಬಂಧಿಸಿರುವ ದುಷ್ಟವ್ಯಕ್ತಿ ಮಾನಸಿಕ ಅಸ್ವಸ್ಥನಲ್ಲ: ಕರ್ಣ
ಕಾಶ್ಮೀರದಲ್ಲಿಂದು ಝಡ್​-ಮೋಡ್​ ಸುರಂಗ ಮಾರ್ಗ​ ಉದ್ಘಾಟಿಸಲಿದ್ದಾರೆ ಮೋದಿ
ಕಾಶ್ಮೀರದಲ್ಲಿಂದು ಝಡ್​-ಮೋಡ್​ ಸುರಂಗ ಮಾರ್ಗ​ ಉದ್ಘಾಟಿಸಲಿದ್ದಾರೆ ಮೋದಿ
ಚನ್ನಪಟ್ಟಣದದಲ್ಲಿ ನಿಖಿಲ್ ಸೋಲಿನಿಂದ ವಿಚಲಿತರಾಗಿರುವ ಜೆಡಿಎಸ್ ನಾಯಕರು
ಚನ್ನಪಟ್ಟಣದದಲ್ಲಿ ನಿಖಿಲ್ ಸೋಲಿನಿಂದ ವಿಚಲಿತರಾಗಿರುವ ಜೆಡಿಎಸ್ ನಾಯಕರು
ಕಿರುತೆರೆಯಲ್ಲಿ ಹಲವಾರು ಧಾರಾವಹಿಗಳನ್ನು ನಿರ್ದೇಶಿಸಿರುವ ಸರಿಗಮವಿಜಿ
ಕಿರುತೆರೆಯಲ್ಲಿ ಹಲವಾರು ಧಾರಾವಹಿಗಳನ್ನು ನಿರ್ದೇಶಿಸಿರುವ ಸರಿಗಮವಿಜಿ
ಬೆಂಗಳೂರು: ಸಿಲಿಂಡರ್ ಸ್ಫೋಟಗೊಂಡು 7 ಮಂದಿಗೆ ಗಂಭೀರ ಗಾಯ
ಬೆಂಗಳೂರು: ಸಿಲಿಂಡರ್ ಸ್ಫೋಟಗೊಂಡು 7 ಮಂದಿಗೆ ಗಂಭೀರ ಗಾಯ
ಮಿಡ್ ವೀಕ್ ಬಗ್ಗೆ ಘೋಷಣೆ ಮಾಡಿದ ಬಿಗ್ ಬಾಸ್; ರಜತ್​ಗೆ ಸ್ಕೆಚ್ ಇಟ್ಟ ಭವ್ಯಾ
ಮಿಡ್ ವೀಕ್ ಬಗ್ಗೆ ಘೋಷಣೆ ಮಾಡಿದ ಬಿಗ್ ಬಾಸ್; ರಜತ್​ಗೆ ಸ್ಕೆಚ್ ಇಟ್ಟ ಭವ್ಯಾ
ಬಸ್​ನಲ್ಲಿ ನಿವೃತ್ತ ಐಎಎಸ್ ಅಧಿಕಾರಿಯನ್ನು ಥಳಿಸಿದ ಬಸ್ ಕಂಡಕ್ಟರ್​
ಬಸ್​ನಲ್ಲಿ ನಿವೃತ್ತ ಐಎಎಸ್ ಅಧಿಕಾರಿಯನ್ನು ಥಳಿಸಿದ ಬಸ್ ಕಂಡಕ್ಟರ್​
ಬಿಗ್ ಶೋ ಬಿಗ್ಗೆಸ್ಟ್ ಸಿಕ್ಸ್: ರಾಕೆಟ್ ಸಿಕ್ಸ್ ಸಿಡಿಸಿದ ಮ್ಯಾಕ್ಸ್​ವೆಲ್
ಬಿಗ್ ಶೋ ಬಿಗ್ಗೆಸ್ಟ್ ಸಿಕ್ಸ್: ರಾಕೆಟ್ ಸಿಕ್ಸ್ ಸಿಡಿಸಿದ ಮ್ಯಾಕ್ಸ್​ವೆಲ್
Daily Devotional: ಹಣೆ ಬರಹ ಬದಲಿಸಲು ಸಾಧ್ಯವೆ? ಇಲ್ಲಿದೆ ಉತ್ತರ
Daily Devotional: ಹಣೆ ಬರಹ ಬದಲಿಸಲು ಸಾಧ್ಯವೆ? ಇಲ್ಲಿದೆ ಉತ್ತರ