MI vs UPW Highlights: ಕೌರ್ ಪಡೆಗೆ ಸುಲಭ ತುತ್ತಾದ ಯುಪಿ; ಫೈನಲ್‌ಗೆ ಮುಂಬೈ
MI vs UPW, WPL 2023:ಶುಕ್ರವಾರ ಸಂಜೆ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ತಂಡ, ಯುಪಿ ವಾರಿಯರ್ಸ್ ತಂಡವನ್ನು 72 ರನ್‌ಗಳಿಂದ ಏಕಪಕ್ಷೀಯವಾಗಿ ಸೋಲಿಸಿತು.
ಮಹಿಳಾ ಪ್ರೀಮಿಯರ್ ಲೀಗ್‌ನ (ಡಬ್ಲ್ಯುಪಿಎಲ್) ಮೊದಲ ಸೀಸನ್‌ನಲ್ಲಿ ಸತತ ಐದು ಗೆಲುವಿನೊಂದಿಗೆ ಉತ್ತಮ ಆರಂಭ ಪಡೆದುಕೊಂಡಿದ್ದ ಮುಂಬೈ ಇಂಡಿಯನ್ಸ್ ತಂಡ ಅಂತಿಮವಾಗಿ ನಿರೀಕ್ಷಿಸಿದ್ದನ್ನು ಮಾಡಿದೆ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ, ಡಬ್ಲ್ಯುಪಿಎಲ್‌ನ ಮೊದಲ ಸೀಸನ್ನ ಫೈನಲ್‌ಗೆ ಪ್ರವೇಶಿಸಿದೆ. ಶುಕ್ರವಾರ ಸಂಜೆ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ತಂಡ, ಯುಪಿ ವಾರಿಯರ್ಸ್ ತಂಡವನ್ನು 72 ರನ್‌ಗಳಿಂದ ಏಕಪಕ್ಷೀಯವಾಗಿ ಸೋಲಿಸಿತು. ನೇಟ್ ಸಿವರ್-ಬ್ರಂಟ್ ಅವರ ಆಲ್ ರೌಂಡ್ ಪ್ರದರ್ಶನ ಮತ್ತು ಈಸಿ ವಾಂಗ್ ಅವರ ಹ್ಯಾಟ್ರಿಕ್ ವಿಕೆಟ್ ಮುಂಬೈ ಗೆಲುವಿನಲ್ಲಿ ದೊಡ್ಡ ಪಾತ್ರವನ್ನು ವಹಿಸಿತು.
LIVE NEWS & UPDATES
-
ಫೈನಲ್‌ಗೆ ಮುಂಬೈ
ಇಶಾಕ್ ಕೊನೆಯ ವಿಕೆಟ್ ಪಡೆಯುವುದರೊಂದಿಗೆ ಯುಪಿ ವಾರಿಯರ್ಸ್ ತಂಡವನ್ನು 110 ರನ್‌ಗಳಿಗೆ ಆಲೌಟ್ ಮಾಡಿದರು. ಮುಂಬೈ ಇಂಡಿಯನ್ಸ್ ಯುಪಿಯನ್ನು 72 ರನ್‌ಗಳ ದೊಡ್ಡ ಅಂತರದಿಂದ ಸೋಲಿಸುವ ಮೂಲಕ WPL ಫೈನಲ್ ಪ್ರವೇಶಿಸಿತು.
-
ಯುಪಿ ಸ್ಕೋರ್ 104/8
16 ಓವರ್‌ಗಳಲ್ಲಿ ಯುಪಿ ಸ್ಕೋರ್ 104/8. ಯುಪಿ ವಾರಿಯರ್ಸ್ ಗೆಲುವಿಗೆ 24 ಎಸೆತಗಳಲ್ಲಿ 79 ರನ್ ಅಗತ್ಯವಿದೆ.
-
ಸೋಲಿನ ಸುಳಿಯಲ್ಲಿ ಯುಪಿ
15 ಓವರ್‌ಗಳಲ್ಲಿ ಯುಪಿ ಸ್ಕೋರ್ 96/8. ಯುಪಿ ವಾರಿಯರ್ಸ್ ಗೆಲುವಿಗೆ 30 ಎಸೆತಗಳಲ್ಲಿ 87 ರನ್ ಅಗತ್ಯವಿದೆ. ಇಲ್ಲಿಂದ ಯುಪಿ ತಂಡ ಗೆಲ್ಲುವುದು ಕಷ್ಟ.
ಮೊದಲ ಹ್ಯಾಟ್ರಿಕ್
ವಾಂಗ್ ಅವರ ಓವರ್‌ನಲ್ಲಿ ಸತತ ಮೂರು ವಿಕೆಟ್‌ಗಳು ಒಂದರ ಹಿಂದೆ ಒಂದರಂತೆ ಪತನಗೊಂಡವು. ಇದರೊಂದಿಗೆ ಲೀಗ್‌ನ ಮೊದಲ ಹ್ಯಾಟ್ರಿಕ್ ಪಡೆದ ಬೌಲರ್ ಎಂಬ ದಾಖಲೆಯನ್ನು ವಾಂಗ್ ಬರೆದಿದ್ದಾರೆ.
ಆರನೇ ವಿಕೆಟ್ ಪತನ
ಯುಪಿಯ ಆರನೇ ವಿಕೆಟ್ ಪತನವಾಯಿತು, ಈ ಓವರ್‌ನಲ್ಲಿ ವಾಂಗ್ ಸತತ ಎರಡನೇ ವಿಕೆಟ್ ಪಡೆದರು.
ಐದನೇ ವಿಕೆಟ್
ಯುಪಿ ತಂಡದ 5ನೇ ವಿಕೆಟ್ ಪತನವಾಗಿದ್ದು, ಕಿರಣ್ ನವಗೀರ್ 43 ರನ್ ಗಳಿಸಿ ಔಟಾಗಿದ್ದಾರೆ.
12 ಓವರ್‌ಗಳ ನಂತರ 84/4
12 ಓವರ್‌ಗಳ ನಂತರ ಯುಪಿ ಸ್ಕೋರ್ 84/4. ದೀಪ್ತಿ ಶರ್ಮಾ 8 ಹಾಗೂ ನವಗಿರೆ 43 ರನ್‌ಗಳೊಂದಿಗೆ ಮೈದಾನದಲ್ಲಿದ್ದಾರೆ. ಯುಪಿ ವಾರಿಯರ್ಸ್ ಗೆಲುವಿಗೆ 48 ಎಸೆತಗಳಲ್ಲಿ 99 ರನ್ ಅಗತ್ಯವಿದೆ. ಈ ಓವರ್‌ನಲ್ಲಿ ಎರಡು ಸಿಕ್ಸರ್ ಮತ್ತು ಒಂದು ಬೌಂಡರಿ ಬಂತು.
60 ಎಸೆತಗಳಲ್ಲಿ 120 ರನ್ ಅಗತ್ಯ
10 ಓವರ್‌ಗಳ ನಂತರ ಯುಪಿ ಸ್ಕೋರ್ 63/4. ದೀಪ್ತಿ ಶರ್ಮಾ 3 ಹಾಗೂ ನವಗಿರೆ 27 ರನ್‌ಗಳೊಂದಿಗೆ ಮೈದಾನದಲ್ಲಿದ್ದಾರೆ. ಯುಪಿ ವಾರಿಯರ್ಸ್ ಗೆಲುವಿಗೆ 60 ಎಸೆತಗಳಲ್ಲಿ 120 ರನ್ ಅಗತ್ಯವಿದೆ. ಈ ಓವರ್‌ನಲ್ಲಿ ಫೋರ್ ಕೂಡ ಬಂತು.
ಕೇವಲ 1 ರನ್
9 ಓವರ್‌ಗಳ ನಂತರ ಯುಪಿ ಸ್ಕೋರ್ 58/4. ದೀಪ್ತಿ ಶರ್ಮಾ 2 ರನ್ ಮತ್ತು ನವಗಿರೆ 23 ರನ್‌ಗಳೊಂದಿಗೆ ಮೈದಾನದಲ್ಲಿದ್ದಾರೆ. ಯುಪಿ ವಾರಿಯರ್ಸ್ ಗೆಲುವಿಗೆ 66 ಎಸೆತಗಳಲ್ಲಿ 125 ರನ್ ಅಗತ್ಯವಿದೆ. ಎಮಿಲಿಯಾ ಕೆರ್ ಅವರ ಈ ಓವರ್‌ನಲ್ಲಿ ಕೇವಲ 1 ರನ್ ಬಂತು.
8 ಓವರ್‌ಗಳ ನಂತರ 57/4
8 ಓವರ್‌ಗಳ ನಂತರ ಯುಪಿ ಸ್ಕೋರ್ 57/4. ದೀಪ್ತಿ ಶರ್ಮಾ 1 ರನ್ ಮತ್ತು ನವಗಿರೆ 23 ರನ್‌ಗಳೊಂದಿಗೆ ಮೈದಾನದಲ್ಲಿದ್ದಾರೆ. ಈ ಓವರ್‌ನಲ್ಲಿ ಫೋರ್ ಕೂಡ ಬಂತು.
ನಾಲ್ಕನೇ ವಿಕೆಟ್ ಪತನ
ಯುಪಿ ವಾರಿಯರ್ಸ್‌ನ ನಾಲ್ಕನೇ ವಿಕೆಟ್ ಪತನ, ಹ್ಯಾರಿಸ್ 14 ರನ್‌ಗಳಿಗೆ ಕ್ಯಾಚ್ ನೀಡಿ ಔಟಾಗಿದ್ದಾರೆ.
7 ಓವರ್‌ಗಳ ನಂತರ
7 ಓವರ್‌ಗಳ ನಂತರ ಯುಪಿ ವಾರಿಯರ್ಸ್ 3 ವಿಕೆಟ್ಗೆ 51 ರನ್ ಬಾರಿಸಿದೆ . ಹ್ಯಾರಿಸ್ 10 ರನ್ ಮತ್ತು ನವಗಿರೆ 22 ರನ್‌ಗಳೊಂದಿಗೆ ಮೈದಾನದಲ್ಲಿದ್ದಾರೆ. ಎಮಿಲಿಯಾ ಕೆರ್ ಅವರ ಓವರ್‌ನಲ್ಲಿ ಒಂದು ಬೌಂಡರಿ ಬಂತು.
ಸಿಕ್ಸರ್
6 ಓವರ್‌ಗಳ ನಂತರ ಯುಪಿ ಸ್ಕೋರ್ 46/3. ಈ ಓವರ್‌ನಲ್ಲಿ ಬೌಂಡರಿ-ಸಿಕ್ಸರ್‌ಗಳ ಸುರಿಮಳೆಯಾಯಿತು. ಈ ಓವರ್‌ನಲ್ಲಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್‌ಗಳು ಸಿಡಿದವು.
5 ಓವರ್ ಅಂತ್ಯ
5 ಓವರ್‌ಗಳ ನಂತರ ಯುಪಿ ಸ್ಕೋರ್ 26/3. ಈ ಓವರ್‌ನ ಕೊನೆಯ ಎಸೆತದಲ್ಲಿ ನವ್ಗಿರೆ ಫೋರ್ ಹೊಡೆದರು.
ಮೂರನೇ ವಿಕೆಟ್
ತಹ್ಲಿಯಾ ಮೆಕ್‌ಗ್ರಾತ್ ರನ್ ಔಟ್. 6 ಎಸೆತಗಳಲ್ಲಿ 7 ರನ್ ಗಳಿಸಿದ್ದ ಮೆಕ್‌ಗ್ರಾತ್ ರನ್ಔಟ್ಗೆ ಬಲಿಯಾಗಿದ್ದಾರೆ. ಯುಪಿ ಗೆಲುವಿಗೆ 96 ಎಸೆತಗಳಲ್ಲಿ 162 ರನ್ ಅಗತ್ಯವಿದೆ.
4 ಓವರ್‌ಗಳ ನಂತರ 21/2
4 ಓವರ್‌ಗಳ ನಂತರ ಯುಪಿ ಸ್ಕೋರ್ 21/2.ಈ ಓವರ್‌ನ ಕೊನೆಯ ಎಸೆತದಲ್ಲಿ ಫೋರ್ ಬಂತು.
ಎರಡನೇ ವಿಕೆಟ್ ಪತನ
ವಾಂಗ್ ಅವರ ಓವರ್‌ನಲ್ಲಿ ಯುಪಿ ಎರಡನೇ ವಿಕೆಟ್ ಪತನವಾಗಿದೆ. ನಾಯಕಿ ಹೀಲಿ 12 ರನ್‌ಗಳಿಗೆ ಔಟಾಗಿದ್ದಾರೆ.
ಮೊದಲ ವಿಕೆಟ್ ಪತನ
ಎರಡನೇ ಓವರ್‌ನಲ್ಲಿ ಯುಪಿಯ ಮೊದಲ ವಿಕೆಟ್ ಪತನಗೊಂಡಿತು, ಶೆರಾವತ್ 1 ರನ್‌ಗೆ ಔಟಾದರು
1 ಓವರ್‌ನ ನಂತರ
183 ರನ್ ಗುರಿ ಪಡೆದಿರುವ ಯುಪಿ ವಾರಿಯರ್ಸ್ ತಂಡ 1 ಓವರ್‌ನ ನಂತರ 8 ರನ್ ಗಳಿಸಿದೆ.
20 ಓವರ್‌ಗಳ ನಂತರ ಮುಂಬೈ ಸ್ಕೋರ್ 182/4
ಯುಪಿ ವಾರಿಯರ್ಸ್ ಬೌಲರ್ ದೀಪ್ತಿ ಅವರ ಓವರ್‌ನಲ್ಲಿ ಮುಂಬೈ 18 ರನ್ ಗಳಿಸಿತು. ಯುಪಿ ವಾರಿಯರ್ಸ್ ಗೆಲುವಿಗೆ 183 ರನ್ ಗಳ ಗುರಿ ಪಡೆದಿದೆ.ಕೊನೆಯ ಓವರ್‌ನಲ್ಲಿ ಸಿವರ್ ಬ್ರಂಟ್ ಅಬ್ಬರದ ಬ್ಯಾಟಿಂಗ್ ನಡೆಸಿದರು.
ನಾಲ್ಕನೇ ವಿಕೆಟ್ ಪತನ
ಸೋಫಿಯಾ ಓವರ್‌ನಲ್ಲಿ ಮುಂಬೈ ಇಂಡಿಯನ್ಸ್‌ನ ನಾಲ್ಕನೇ ವಿಕೆಟ್ ಪತನವಾಯಿತು. ಕೆರ್ 29 ರನ್‌ಗಳಿಸಿ ಔಟಾದರು.
18 ಓವರ್ ಅಂತ್ಯ
ಯುಪಿ ವಾರಿಯರ್ಸ್ ಬೌಲರ್ ದೀಪ್ತಿ ಅವರ ಓವರ್‌ನಲ್ಲಿ ಮುಂಬೈ 9 ರನ್ ಗಳಿಸಿತು. ಸಿವರ್ ಬ್ರಂಟ್ 64 ರನ್ ಹಾಗೂ ಅನಿಲಿಯಾ ಕೆರ್ 16 ರನ್ ಗಳಿಸಿ ಆಡುತ್ತಿದ್ದಾರೆ.
ಸಿವರ್ ಬ್ರಂಟ್ ಅರ್ಧಶತಕ
ಯುಪಿ ವಾರಿಯರ್ಸ್ ಬೌಲರ್ ಸೋಫಿಯಾ ಅವರ ಓವರ್‌ನಲ್ಲಿ ಮುಂಬೈ 11 ರನ್ ಗಳಿಸಿತು. ಸಿವರ್ ಬ್ರಂಟ್ 51 ರನ್ ಹಾಗೂ ಅನಿಲಿಯಾ ಕೆರ್ 9 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನಲ್ಲೂ 2 ಬೌಂಡರಿಗಳು ಕಂಡುಬಂದವು.ಸಿವರ್ ಬ್ರಂಟ್ ಅರ್ಧಶತಕ ಬಾರಿಸಿದರು.
15 ಓವರ್‌ಗಳ ನಂತರ ಮುಂಬೈ ಸ್ಕೋರ್ 116/3
ಯುಪಿ ವಾರಿಯರ್ಸ್ ಬೌಲರ್ ಹ್ಯಾರಿಸ್ ಓವರ್‌ನಲ್ಲಿ ಮುಂಬೈ 7 ರನ್ ಗಳಿಸಿತು. ಸಿವರ್ ಬ್ರಂಟ್ 45 ರನ್ ಹಾಗೂ ಅನೆಲಿಯಾ ಕೆರ್ 3 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ಕೂಡ ಬಂತು.
13 ಓವರ್‌ಗಳ ನಂತರ
ಯುಪಿ ವಾರಿಯರ್ಸ್ ಬೌಲರ್ ಸೋಫಿಯಾ ಅವರ ಓವರ್‌ನಲ್ಲಿ ಮುಂಬೈ 6 ರನ್ ಗಳಿಸಿತು. ಸಿವರ್ ಬ್ರಂಟ್ 36 ರನ್ ಹಾಗೂ ಕೆರ್ 0 ರನ್ ಗಳಿಸಿ ಆಡುತ್ತಿದ್ದಾರೆ.
ಕೌರ್ ಔಟ್
ಮುಂಬೈ ಇಂಡಿಯನ್ಸ್‌ನ ಮೂರನೇ ವಿಕೆಟ್ ಪತನ, ನಾಯಕಿ ಹರ್ಮತ್‌ಪ್ರೀತ್ ಕೌರ್ 14 ರನ್‌ಗಳಿಸಿ ಔಟಾದರು. ಸೋಫಿಯಾ ಅವರ ಓವರ್‌ನಲ್ಲಿ ಈ ವಿಕೆಟ್ ಪತನವಾಯಿತು.
12 ಓವರ್‌ಗಳ ನಂತರ ಮುಂಬೈ ಸ್ಕೋರ್ 98/2
ಯುಪಿ ವಾರಿಯರ್ಸ್ ಬೌಲರ್ ಪಾರ್ಶ್ವಿ ಅವರ ಓವರ್‌ನಲ್ಲಿ ಮುಂಬೈ 16 ರನ್ ಗಳಿಸಿತು. ಸಿವರ್ ಬ್ರಂಟ್ 35 ರನ್ ಮತ್ತು ಹರ್ಮನ್‌ಪ್ರೀತ್ ಕೌರ್ 9 ರನ್‌ಗಳೊಂದಿಗೆ ಆಡುತ್ತಿದ್ದಾರೆ. ಈ ಓವರ್‌ನಲ್ಲಿ ಒಂದು ಸಿಕ್ಸರ್ ಮತ್ತು ಎರಡು ಬೌಂಡರಿಗಳು ಬಂದವು.
10 ಓವರ್ ಆಟ ಅಂತ್ಯ
ಯುಪಿ ವಾರಿಯರ್ಸ್ ಬೌಲರ್ ಪಾರ್ಶ್ವಿ ಅವರ ಓವರ್‌ನಲ್ಲಿ ಮುಂಬೈ 9 ರನ್ ಗಳಿಸಿತು. ಸಿವರ್ ಬ್ರಂಟ್ 19 ಮತ್ತು ಹರ್ಮನ್‌ಪ್ರೀತ್ 5 ರನ್‌ಗಳೊಂದಿಗೆ ಆಡುತ್ತಿದ್ದಾರೆ. ಈ ಓವರ್‌ನಲ್ಲಿ ಒಂದು ಫೋರ್ ಕೂಡ ಬಂತು.
ಎರಡನೇ ವಿಕೆಟ್ ಪತನ
ಮುಂಬೈ ಇಂಡಿಯನ್ಸ್ ಎರಡನೇ ವಿಕೆಟ್ ಪತನಗೊಂಡಿತು, ಮ್ಯಾಥ್ಯೂಸ್ 26 ರನ್ ಗಳಿಸಿ ಕ್ಯಾಚಿತ್ತು ಔಟಾದರು. ನಾಯಕಿ ಹರ್ಮನ್‌ಪ್ರೀತ್ ಕೌರ್ ಮೈದಾನಕ್ಕೆ ಬಂದಿದ್ದಾರೆ.
9 ಓವರ್‌ಗಳ ನಂತರ ಮುಂಬೈ ಸ್ಕೋರ್ 69/1
ಯುಪಿ ವಾರಿಯರ್ಸ್ ಬೌಲರ್ ದೀಪ್ತಿ ಅವರ ಓವರ್‌ನಲ್ಲಿ ಮುಂಬೈ 8 ರನ್ ಗಳಿಸಿತು. ಸಿವರ್ ಬ್ರಂಟ್ 15 ರನ್ ಹಾಗೂ ಮ್ಯಾಥ್ಯೂಸ್ 26 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನಲ್ಲಿ ಫೋರ್ ಜೊತೆಗೆ, ಮ್ಯಾಥ್ಯೂಸ್ ಜೀವದಾನವನ್ನೂ ಪಡೆದರು.
7 ಓವರ್, ಮುಂಬೈ ಸ್ಕೋರ್ 53/1
ಯುಪಿ ವಾರಿಯರ್ಸ್ ಬೌಲರ್ ಸೋಫಿ ಅವರ ಓವರ್‌ನಲ್ಲಿ ಮುಂಬೈ 7 ರನ್ ಗಳಿಸಿತು. ಸಿವರ್ ಬ್ರಂಟ್ 13 ರನ್ ಹಾಗೂ ಮ್ಯಾಥ್ಯೂಸ್ 17 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನಲ್ಲಿ ಅಮೋಘ ಫೋರ್ ಕೂಡ ಬಂತು.
ಮುಂಬೈ ಸ್ಕೋರ್ 37/1
ಯುಪಿ ವಾರಿಯರ್ಸ್ ಬೌಲರ್ ಅಂಜಲಿ ಓವರ್‌ನಲ್ಲಿ ಮುಂಬೈ 7 ರನ್ ಗಳಿಸಿತು. ಸಿವರ್ ಬ್ರಂಟ್ 5 ರನ್ ಹಾಗೂ ಮ್ಯಾಥ್ಯೂಸ್ 10 ರನ್ ಗಳಿಸಿ ಆಡುತ್ತಿದ್ದಾರೆ. ಸಿವರ್ ಬ್ರಂಟ್ ಕೊನೆಯ ಎಸೆತದಲ್ಲಿ ಅದ್ಭುತ ಬೌಂಡರಿ ಬಾರಿಸಿದರು.
ಮೊದಲ ವಿಕೆಟ್ ಪತನ
ಮುಂಬೈ ಇಂಡಿಯನ್ಸ್ ಮೊದಲ ವಿಕೆಟ್ ಪತನಗೊಂಡಿತು, ಯಾಸ್ತಿಕಾ ಭಾಟಿಯಾ 21 ರನ್ ಗಳಿಸಿ ಕ್ಯಾಚಿತ್ತು ಔಟಾದರು. ಅಂಜಲಿ ಅವರ ಎರಡನೇ ಓವರ್‌ನ ಎರಡನೇ ಪಂದ್ಯದಲ್ಲಿ ಈ ವಿಕೆಟ್ ಪತನವಾಯಿತು.
ಪಂದ್ಯದ ಮೊದಲ ಸಿಕ್ಸರ್
ಯುಪಿ ವಾರಿಯರ್ಸ್ ಬೌಲರ್ ಹ್ಯಾರಿಸ್ ಓವರ್‌ನಲ್ಲಿ ಮುಂಬೈ 13 ರನ್ ಗಳಿಸಿತು. ಯಾಸ್ತಿಕಾ ಭಾಟಿಯಾ 21 ರನ್ ಹಾಗೂ ಮ್ಯಾಥ್ಯೂಸ್ 9 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನ ಕೊನೆಯ ಎಸೆತದಲ್ಲಿ ಅಮೋಘ ಸಿಕ್ಸರ್ ಬಂತು. ಇದು ಪಂದ್ಯದ ಮೊದಲ ಸಿಕ್ಸರ್ ಆಗಿತ್ತು.
2 ಓವರ್‌ಗಳ ನಂತರ ಮುಂಬೈ ಸ್ಕೋರ್ 12/0
ಯುಪಿ ವಾರಿಯರ್ಸ್ ಬೌಲರ್ ಅಂಜಲಿ ಅವರ ಓವರ್‌ನಲ್ಲಿ ಮುಂಬೈ 6 ರನ್ ಗಳಿಸಿತು. ಯಾಸ್ತಿಕಾ ಭಾಟಿಯಾ 10 ರನ್ ಹಾಗೂ ಮ್ಯಾಥ್ಯೂಸ್ 2 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನ ನಾಲ್ಕನೇ ಎಸೆತದಲ್ಲಿ ಯಾಸ್ತಿಕಾ ಅದ್ಭುತ ಬೌಂಡರಿ ಬಾರಿಸಿದರು.
ಮುಂಬೈ ಬ್ಯಾಟಿಂಗ್ ಆರಂಭ
ಟಾಸ್ ಸೋತ ಮುಂಬೈ ಇಂಡಿಯನ್ಸ್ ತಂಡ ಬ್ಯಾಟಿಂಗ್ ಆರಂಭಿಸಿದೆ. ಮುಂಬೈ ಇಂಡಿಯನ್ಸ್ ಪರ ಆರಂಭಿಕರಾಗಿ ಹೇಲಿ ಮ್ಯಾಥ್ಯೂಸ್ ಮತ್ತು ಯಾಸ್ತಿಕಾ ಭಾಟಿಯಾ ಮೈದಾನಕ್ಕಿಳಿದಿದ್ದಾರೆ. ಬೌಂಡರಿಯೊಂದಿಗೆ ಪಂದ್ಯ ಆರಂಭವಾಗಿದೆ.
ಉಭಯ ತಂಡಗಳು
A look at the two teams for the #Eliminator ??
Follow the match ▶️ https://t.co/QnFsPljTL8#TATAWPL | #MIvUPW pic.twitter.com/WcrQHjmz2q
— Women's Premier League (WPL) (@wplt20) March 24, 2023
ಯುಪಿ ವಾರಿಯರ್ಸ್
ಅಲಿಸ್ಸಾ ಹೀಲಿ, ಕಿರಣ್ ಪ್ರಭು ನವಗಿರೆ, ತಹಿಲಾ ಮೆಗ್ರಾತ್, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್, ಸಿಮ್ರಾನ್ ಶೇಖ್, ಶ್ವೇತಾ ಶೆರಾವತ್, ಪಾರ್ಶ್ವಿ ಚೋಪ್ರಾ, ಸೋಫಿ ಎಕ್ಲೆಸ್ಟನ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್
ಮುಂಬೈ ಇಂಡಿಯನ್ಸ್
ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ಕ್ಯಾಪ್ಟನ್), ಅಮೆಲಿಯಾ ಕೆರ್, ಪೂಜಾ ವಸ್ತಕರ್, ಇಸ್ಸಿ ವಾಂಗ್, ಅಮನ್ಜೋತ್ ಕೌರ್, ಹುಮೈರಾ ಕಾಜಿ,ಜಿಂತಿಮಣಿ ಕಲಿತಾ, ಸೈಕಾ ಇಸಾಕ್
ಟಾಸ್ ಗೆದ್ದ ಯುಪಿ ವಾರಿಯರ್ಸ್
ಟಾಸ್ ಗೆದ್ದ ಯುಪಿ ವಾರಿಯರ್ಸ್ ನಾಯಕಿ ಅಲಿಸಾ ಹೀಲಿ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಮುಂಬೈ ತಂಡ ಮೊದಲು ಬ್ಯಾಟಿಂಗ್ ಮಾಡಲಿದೆ.
Published On - Mar 24,2023 6:59 PM