Murali Vijay: ಬರೋಬ್ಬರಿ 12 ಸಿಕ್ಸ್​: ಸಿಡಿಲಬ್ಬರದ ಶತಕ ಸಿಡಿಸಿದ ಮುರಳಿ ವಿಜಯ್

| Updated By: Digi Tech Desk

Updated on: Jul 16, 2022 | 12:38 PM

TNPL 2022: ಇನಿಂಗ್ಸ್ ಆರಂಭಿಸಿದ ರಾಯಲ್ ಕಿಂಗ್ಸ್​ ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 29 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಕಣಕ್ಕಿಳಿದ ಬಾಬಾ ಅಪರಜಿತ್ ಹಾಗೂ ಸಂಜಯ್ ಯಾದವ್ ಇಡೀ ಪಂದ್ಯದ ಚಿತ್ರಣ ಬದಲಿಸಿಬಿಟ್ಟರು.

Murali Vijay: ಬರೋಬ್ಬರಿ 12 ಸಿಕ್ಸ್​: ಸಿಡಿಲಬ್ಬರದ ಶತಕ ಸಿಡಿಸಿದ ಮುರಳಿ ವಿಜಯ್
Murali Vijay
Follow us on

ಐಪಿಎಲ್​ ಮೂಲಕ ದಿನೇಶ್ ಕಾರ್ತಿಕ್ ಟೀಮ್ ಇಂಡಿಯಾಗೆ (Team India) ಕಂಬ್ಯಾಕ್ ಮಾಡಿದ ಬೆನ್ನಲ್ಲೇ ಅತ್ತ ಮತ್ತೋರ್ವ ತಮಿಳುನಾಡು ಆಟಗಾರ ಮುರಳಿ ವಿಜಯ್ (Murali Vijay) ಟಿ20 ಲೀಗ್​ಗೆ ಮರಳಿದ್ದರು. ಹೌದು, 38 ವರ್ಷದ ಮುರಳಿ ವಿಜಯ್ ಪ್ರಸ್ತುತ ನಡೆಯುತ್ತಿರುವ ತಮಿಳುನಾಡು ಪ್ರೀಮಿಯರ್ ಲೀಗ್ (TNPL)​ ಮೂಲಕ ಮತ್ತೆ ಬ್ಯಾಟ್ ಬೀಸಲಾರಂಭಿಸಿದ್ದಾರೆ. ಆದರೆ ಆರಂಭಿಕ ಪಂದ್ಯಗಳಲ್ಲಿ ವಿಫಲರಾಗಿದ್ದ ವಿಜಯ್ ಇದೀಗ ತಮ್ಮ ಬ್ಯಾಟಿಂಗ್ ಖದರ್ ತೋರಿಸಿದ್ದಾರೆ. ಈ ಮೂಲಕ ಕಳೆದ ಕೆಲ ದಿನಗಳಿಂದ ಕೇಳಿ ಬಂದಿದ್ದ ಎಲ್ಲಾ ಟೀಕೆಗಳಿಗೂ ಬ್ಯಾಟ್ ಮೂಲಕವೇ ಉತ್ತರಿಸಿದ್ದಾರೆ. ಟಿಎನ್​ಪಿಎಲ್​ನಲ್ಲಿ ನಡೆದ 19ನೇ ಪಂದ್ಯದಲ್ಲಿ ನೆಲ್ಲೈ ರಾಯಲ್ ಕಿಂಗ್ಸ್ ಹಾಗೂ ರುಬಿ ತಿರುಚ್ಚಿ ವಾರಿಯರ್ಸ್ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ತಿರುಚ್ಚಿ ವಾರಿಯರ್ಸ್ ಬೌಲಿಂಗ್ ಆಯ್ದುಕೊಂಡಿತು.

ಅದರಂತೆ ಇನಿಂಗ್ಸ್ ಆರಂಭಿಸಿದ ರಾಯಲ್ ಕಿಂಗ್ಸ್​ ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 29 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಕಣಕ್ಕಿಳಿದ ಬಾಬಾ ಅಪರಜಿತ್ ಹಾಗೂ ಸಂಜಯ್ ಯಾದವ್ ಇಡೀ ಪಂದ್ಯದ ಚಿತ್ರಣ ಬದಲಿಸಿಬಿಟ್ಟರು. ಆರಂಭದಲ್ಲೇ ಮೇಲುಗೈ ಹೊಂದಿದ್ದ ತಿರುಚ್ಚಿ ವಾರಿಯರ್ಸ್ ವಿರುದ್ದ ಅಪರಜಿತ್ ಹಾಗೂ ಸಂಜಯ್ ಯಾದವ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಕೇವಲ 48 ಎಸೆತಗಳಲ್ಲಿ ಅಪರಜಿತ್ 8 ಸಿಕ್ಸ್ ಹಾಗೂ 5 ಫೋರ್​ನೊಂದಿಗೆ ಅಜೇಯ 92 ರನ್​ ಬಾರಿಸಿದರೆ, ಸಂಜಯ್ ಯಾದವ್ 55 ಎಸೆತಗಳಲ್ಲಿ 9 ಸಿಕ್ಸ್ ಹಾಗೂ 6 ಫೋರ್​ನೊಂದಿಗೆ ಅಜೇಯ ಶತಕ (103) ಸಿಡಿಸಿದರು. ಅಲ್ಲದೆ ಸಿಕ್ಸ್​-ಫೋರ್​ಗಳ ಸುರಿಮಳೆಗೈದ ಈ ಜೋಡಿಯು 3ನೇ ವಿಕೆಟ್​ಗೆ 207 ರನ್​ಗಳ ಜೊತೆಯಾಟವಾಡಿದರು. ಪರಿಣಾಮ ರಾಯಲ್ ಕಿಂಗ್ಸ್ ಕೇವಲ 2 ವಿಕೆಟ್ ನಷ್ಟಕ್ಕೆ 236 ರನ್​ ಕಲೆಹಾಕಿತು.

237 ರನ್​ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ತಿರುಚ್ಚಿ ವಾರಿಯರ್ಸ್ ಪರ ಆರಂಭಿಕ ಆಟಗಾರ ಮುರುಳಿ ವಿಜಯ್ ಅಕ್ಷರಶಃ ಅಬ್ಬರಿಸಿದ್ದರು. ರಾಯಲ್ ಕಿಂಗ್ಸ್ ಬೌಲರ್​ಗಳ ಬೆಂಡೆತ್ತಿದ ವಿಜಯ್ ಬರೋಬ್ಬರಿ 12 ಸಿಕ್ಸ್ ಹಾಗೂ 7 ಫೋರ್​ಗಳನ್ನು ಬಾರಿಸಿದ್ದರು. ಒಂದೆಡೆ ಮುರಳಿ ವಿಜಯ್ ಅಬ್ಬರಿಸುತ್ತಿದ್ದರೆ ಮತ್ತೊಂದೆಡೆಯಿಂದ ಉತ್ತಮ ಸಾಥ್ ಸಿಕ್ಕಿರಲಿಲ್ಲ. ಪರಿಣಾಮ ತಿರುಚ್ಚಿ ತಂಡವು 108 ರನ್​ಗಳಿಸುವಷ್ಟರಲ್ಲಿ ಪ್ರಮುಖ 5 ವಿಕೆಟ್​ಗಳನ್ನು ಕಳೆದುಕೊಂಡಿತು.

ಇದನ್ನೂ ಓದಿ
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್
Steve Smith: ಬರೋಬ್ಬರಿ 30 ಕೋಟಿ ಲಾಭ ಪಡೆದ ಸ್ಟೀವ್ ಸ್ಮಿತ್..!
Cricket Records: ಕ್ರಿಕೆಟ್ ಇತಿಹಾಸದ ಈ ಅದ್ಭುತ ದಾಖಲೆಗಳನ್ನು ಎಂದಿಗೂ ಮುರಿಯಲಾಗುವುದಿಲ್ಲ!
Team India: 1 ವರ್ಷದೊಳಗೆ 8 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ..!

ಇದಾಗ್ಯೂ ಏಕಾಂಗಿ ಹೋರಾಟ ಮುಂದುವರೆಸಿದ ಮುರಳಿ ವಿಜಯ್ ಅಂತಿಮವಾಗಿ 66 ಎಸೆತಗಳಲ್ಲಿ 121 ರನ್ ಬಾರಿಸಿ ವಿಕೆಟ್​ ಒಪ್ಪಿಸಿದರು. ಈ ಭರ್ಜರಿ  ಶತಕದ ಹೊರತಾಗಿಯೂ ತಂಡಕ್ಕೆ ಗೆಲುವು ತಂದುಕೊಡಲಾಗಲಿಲ್ಲ. ಅಂತಿಮವಾಗಿ ತಿರುಚ್ಚಿ ವಾರಿಯರ್ಸ್ ತಂಡವು 7 ವಿಕೆಟ್ ನಷ್ಟಕ್ಕೆ 170 ರನ್​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ನೆಲ್ಲೈ ರಾಯಲ್ ಕಿಂಗ್ಸ್ ತಂಡವು 66 ರನ್​ಗಳಿಂದ ಜಯ ಸಾಧಿಸಿತು. ವಿಶೇಷ ಎಂದರೆ ತಿರುಚ್ಚಿ ವಾರಿಯರ್ಸ್ ಕಲೆಹಾಕಿದ 170 ರನ್​ಗಳಲ್ಲಿ ಏಕಾಂಗಿಯಾಗಿ 121 ರನ್ ಬಾರಿಸಿ ಮುರಳಿ ವಿಜಯ್ ಗಮನ ಸೆಳೆದರು. ಅಲ್ಲದೆ ತಮ್ಮ ಹಳೆಯ ಸ್ಪೋಟಕ ಬ್ಯಾಟಿಂಗ್ ಖದರ್ ಪ್ರದರ್ಶಿಸಿ ಟೀಕಾಗಾರರಿಗೆ ಬ್ಯಾಟ್ ಮೂಲಕವೇ ಉತ್ತರ ನೀಡಿದರು.

 

 

Published On - 11:32 am, Sat, 16 July 22