ಕೊಹ್ಲಿ ಜೊತೆ ಜಗಳವಾಡಿದ್ದ 24 ವರ್ಷದ ನವೀನ್ ಉಲ್ ಹಖ್ ಏಕದಿನ ಕ್ರಿಕೆಟ್​ಗೆ ದಿಢೀರ್ ನಿವೃತ್ತಿ

|

Updated on: Sep 28, 2023 | 9:25 AM

Naveen-ul-Haq shocking retirement: ಇತ್ತೀಚೆಗಷ್ಟೆ ಮೊಣಕಾಲಿನ ಗಾಯದಿಂದಾಗಿ ನವೀನ್ ಅವರು ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಯನ್ನು ಕಳೆದುಕೊಂಡಿದ್ದರು. ಸದ್ಯ ವೈದ್ಯರ ಸಲಹೆಯ ಮೇರೆಗೆ ಏಕದಿನ ಕ್ರಿಕೆಟ್​ನಿಂದ ದೂರ ಉಳಿಯಲು ತೀರ್ಮಾನಿಸಿದ್ದೇನೆ ಎಂದು ತಮ್ಮ ಅಧಿಕೃತ ಇನ್​ಸ್ಟಾಗ್ರಾಮನ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಕೊಹ್ಲಿ ಜೊತೆ ಜಗಳವಾಡಿದ್ದ 24 ವರ್ಷದ ನವೀನ್ ಉಲ್ ಹಖ್ ಏಕದಿನ ಕ್ರಿಕೆಟ್​ಗೆ ದಿಢೀರ್ ನಿವೃತ್ತಿ
Naveen-ul-Haq retirement
Follow us on

ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟರ್ ವಿರಾಟ್ ಕೊಹ್ಲಿ ಜೊತೆ ಜಗಳವಾಡಿದ್ದ ಲಖನೌ ಸೂಪರ್ ಜೇಂಟ್ಸ್ ತಂಡದ, ಅಫ್ಘಾನಿಸ್ತಾನ ಸ್ಟಾರ್ ವೇಗಿ ನವೀನ್-ಉಲ್-ಹಕ್ (Naveen-ul-Haq) ಆಘಾತಕಾರಿ ಘೋಷಣೆ ಮಾಡಿದ್ದು, ಮುಂಬರುವ ಏಕದಿನ ವಿಶ್ವಕಪ್ 2023 ರ ಬಳಿಕ ತಾನು 50-ಓವರ್ ಮಾದರಿಯ ಕ್ರಿಕೆಟ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ತನ್ನ 23ನೇ ವರ್ಷಕ್ಕೆ ಏಕದಿನ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಆದಾಗ್ಯೂ, ನವೀನ್ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ತಮ್ಮ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವುದಾಗಿ ಹೇಳಿದ್ದಾರೆ.

ಇತ್ತೀಚೆಗಷ್ಟೆ ಮೊಣಕಾಲಿನ ಗಾಯದಿಂದಾಗಿ ನವೀನ್ ಅವರು ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಯನ್ನು ಕಳೆದುಕೊಂಡಿದ್ದರು. ಮೊಣಕಾಲು ಶಸ್ತ್ರಚಿಕಿತ್ಸೆಗಾಗಿ ಇಂಗ್ಲೆಂಡ್‌ಗೆ ತೆರಳಿದ್ದರು. ಸದ್ಯ ವೈದ್ಯರ ಸಲಹೆಯ ಮೇರೆಗೆ ಏಕದಿನ ಕ್ರಿಕೆಟ್​ನಿಂದ ದೂರ ಉಳಿಯಲು ತೀರ್ಮಾನಿಸಿದ್ದೇನೆ ಎಂದು ತಮ್ಮ ಅಧಿಕೃತ ಇನ್​ಸ್ಟಾಗ್ರಾಮನ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ
ಪೋಸ್ಟ್ ಮ್ಯಾಚ್​ನಲ್ಲಿ ಟ್ರೋಫಿ ಪಡೆದುಕೊಳ್ಳಲು ನಿರಾಕರಿಸಿದ ರೋಹಿತ್ ಶರ್ಮಾ
ಮೂರನೇ ಏಕದಿನ ಪಂದ್ಯ ಮುಗಿದ ಬಳಿಕ ರೋಹಿತ್ ಶರ್ಮಾ ಆಡಿದ ಮಾತುಗಳೇನು ಕೇಳಿ
ಸಿಕ್ಸ್​ ಸಿಡಿಸಿಯೇ ವಿಶ್ವ ದಾಖಲೆ ನಿರ್ಮಿಸಿದ ಹಿಟ್​ಮ್ಯಾನ್
IND vs AUS: ಮೂರನೇ ಪಂದ್ಯ ಸೋತರೂ ಸರಣಿ ಗೆದ್ದ ಟೀಮ್ ಇಂಡಿಯಾ

ವಿರಾಟ್ ಕೊಹ್ಲಿಯ ಆರ್ಭಟಕ್ಕೆ ಪಂಟರ್ ಪಾಂಟಿಂಗ್ ದಾಖಲೆ ಬ್ರೇಕ್

“ನನ್ನ ದೇಶವನ್ನು ಪ್ರತಿನಿಧಿಸುವುದು ಒಂದು ಗೌರವದ ವಿಷಯವಾಗಿದೆ. ಈ ವಿಶ್ವಕಪ್‌ನ ಕೊನೆಯಲ್ಲಿ ನಾನು ಏಕದಿನ ಸ್ವರೂಪದಿಂದ ನಿವೃತ್ತಿ ಘೋಷಿಸುತ್ತಿದ್ದೇನೆ. ಆದರೆ, ನನ್ನ ದೇಶಕ್ಕಾಗಿ ಟಿ20 ಕ್ರಿಕೆಟ್‌ನಲ್ಲಿ ಈ ನೀಲಿ ಜೆರ್ಸಿಯನ್ನು ಧರಿಸುವುದನ್ನು ಮುಂದುವರಿಸುತ್ತೇನೆ. ಇದು ಸುಲಭದ ನಿರ್ಧಾರವಲ್ಲ. ಆದರೆ ನನ್ನ ಆಟದ ವೃತ್ತಿಜೀವನವನ್ನು ಮುಂದುವರಿಸಲು ಈ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿತ್ತು. ನನ್ನ ಎಲ್ಲಾ ಅಭಿಮಾನಿಗಳು ಅವರ ಬೆಂಬಲ ಮತ್ತು ಅಚಲವಾದ ಪ್ರೀತಿಗಾಗಿ ಧನ್ಯವಾದ ಹೇಳಲು ಬಯಸುತ್ತೇನೆ,” ಎಂದು ನವೀನ್-ಉಲ್-ಹಕ್ ಬರೆದುಕೊಂಡಿದ್ದಾರೆ.

ನವೀನ್ ಉಲ್ ಹಖ್ ನಿವೃತ್ತಿ ಕುರಿತು ಮಾಡಿರುವ ಪೋಸ್ಟ್:

 

ಐಪಿಎಲ್ 2023 ರ ಆರ್​ಸಿಬಿ ಮತ್ತು ಎಲ್​ಎಸ್​ಜಿ ನಡುವಣ 2023 ಪಂದ್ಯದ ನಂತರ ನವೀನ್-ಉಲ್-ಹಕ್, ವಿರಾಟ್ ಕೊಹ್ಲಿಯೊಂದಿಗೆ ಜಗಳವಾಡಿದ್ದರು. ಆ ಬಳಿಕ ನವೀನ್ ಹೆಸರು ಕ್ರಿಕೆಟ್ ಲೋಕದಲ್ಲಿ ಸದ್ದು ಮಾಡ ತೊಡಗಿತು. ಕಳೆದ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಲಖನೌ ಸೂಪರ್ ಜೈಂಟ್ಸ್‌ ಪರ ಇವರು 8 ಪಂದ್ಯಗಳಿಂದ 11 ವಿಕೆಟ್‌ಗಳನ್ನು ಪಡೆದುಕೊಂಡಿದ್ದರು.

ನವೀನ್ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ, ಏಳು ಏಕದಿನ ಪಂದ್ಯಗಳನ್ನು ಆಡಿದ್ದಾರೆ. 25.42 ಸರಾಸರಿಯಲ್ಲಿ 14 ವಿಕೆಟ್​ಗಳನ್ನು ಪಡೆದಿದ್ದಾರೆ. ಜನವರಿ 2021 ರಲ್ಲಿ ಅಬುಧಾಬಿಯಲ್ಲಿ ಐರ್ಲೆಂಡ್ ವಿರುದ್ಧ ಇವರು ಅಫ್ಘಾನ್ ಪರ ಕೊನೆಯದಾಗಿ ಏಕದಿನ ಪಂದ್ಯ ಆಡಿದ್ದರು. ಸೆಪ್ಟೆಂಬರ್ 2016 ರಲ್ಲಿ ಬಾಂಗ್ಲಾದೇಶದ ವಿರುದ್ಧ ಏಕದಿನ ಕ್ರಿಕೆಟ್​ಗೆ ಕಾಲಿಟ್ಟರು.

ಅಫ್ಘಾನಿಸ್ತಾನ ವಿಶ್ವಕಪ್ ತಂಡ: ಹಶ್ಮತುಲ್ಲಾ ಶಾಹಿದಿ, ಇಬ್ರಾಹಿಂ ಝದ್ರಾನ್, ರಹಮಾನುಲ್ಲಾ ಗುರ್ಬಾಜ್, ರಹಮತ್ ಶಾ, ರಿಯಾಜ್ ಹಸನ್, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್, ಅಜ್ಮತುಲ್ಲಾ ಒಮರ್ಝೈ, ರಶೀದ್ ಖಾನ್, ಅಬ್ದುಲ್ ರಹಮಾನ್, ನೂರ್ ರಹಮಾನ್, ಎಫ್ ಉರ್ಕ್ಮಾನ್, ನವೀನ್ ಉಲ್-ಹಕ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ