ಆಟಗಾರರು ಗೆಲ್ಲಲು ಏನು ಬೇಕಾದ್ರೂ ಮಾಡುತ್ತಾರೆ ಎಂಬ ಮಾತಿದೆ. ಗೆಲುವಿಗಾಗಿ ಆಟಗಾರರು ಹಲವು ಬಾರಿ ಮಿತಿಗಳನ್ನು ದಾಟಿರುವುದನ್ನು ಕೂಡ ನೀವು ನೋಡಿರುತ್ತೀರಿ. ಆದರೆ ನೇಪಾಳದ ವಿಕೆಟ್‌ಕೀಪರ್ ಮಾತ್ರ ಅತ್ಯುತ್ತಮ ಅವಕಾಶವನ್ನು ಕೈ ಬಿಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಫೆಬ್ರವರಿ 14 ರಂದು ನೇಪಾಳ ಮತ್ತು ಐರ್ಲೆಂಡ್ ನಡುವಿನ ಪಂದ್ಯದಲ್ಲಿ ನೇಪಾಳದ ವಿಕೆಟ್ ಕೀಪರ್ ಆಸಿಫ್ ಶೇಖ್ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ರನೌಟ್ ಮಾಡದೇ ಅಚ್ಚರಿ ಮೂಡಿಸಿದ್ದರು. ಬ್ಯಾಟ್ಸ್‌ಮನ್ ಕ್ರೀಸ್‌ನಿಂದ ದೂರದಲ್ಲಿದ್ದರೂ ವಿಕೆಟ್ ಕೀಪರ್ ಔಟ್ ಮಾಡಲಿಲ್ಲ. ಅಂದರೆ ಆಸಿಫ್ ಶೇಖ್ ಬ್ಯಾಟ್ಸ್‌ಮನ್‌ನನ್ನು ಉದ್ದೇಶಪೂರ್ವಕವಾಗಿ ಔಟ್ ಮಾಡಿರಲಿಲ್ಲ. ಇದಕ್ಕೆ ಕಾರಣ ಕೂಡ ಇದೆ.
ಐರ್ಲೆಂಡ್ ಬ್ಯಾಟ್ಸ್‌ಮನ್ ಆಂಡಿ ಮೆಕ್‌ಬ್ರೈನ್ ರನ್ ತೆಗೆದುಕೊಳ್ಳುವಾಗ ನೇಪಾಳದ ಬೌಲರ್ ಕಮಲ್ ಸಿಂಗ್‌ಗೆ ಡಿಕ್ಕಿ ಹೊಡೆದರು. ಆ ಬಳಿಕ ಕಮಲ್ ಸಿಂಗ್ ಅವರು ತಕ್ಷಣವೇ ಚೆಂಡನ್ನು ಎತ್ತಿಕೊಂಡು ವಿಕೆಟ್ ಕೀಪರ್ ಆಸಿಫ್ ಶೇಖ್ ಅವರತ್ತ ಎಸೆದರು. ಆದರೆ ಮೆಕ್‌ಬ್ರೈನ್ ಅವರನ್ನು ಔಟ್ ಮಾಡುವ ಅವಕಾಶ ಹೊಂದಿದ್ದರೂ ವಿಕೆಟ್ ಕೀಪರ್ ರನೌಟ್ ಮಾಡಲಿಲ್ಲ. ಏಕೆಂದರೆ ಬೌಲರ್ ಡಿಕ್ಕಿಯಾದರಿಂದ ಮೆಕ್‌ಬ್ರೈನ್ ಬಿದ್ದು, ಆ ಬಳಿಕ ಎದ್ದು ರನ್ ಪೂರೈಸಲು ಮುಂದಾಗಿದ್ದರು. ಇದನ್ನು ಗಮನಿಸಿದ ನೇಪಾಳದ ವಿಕೆಟ್ ಕೀಪರ್ ಆಸಿಫ್ ಶೇಖ್ ಔಟ್ ಮಾಡದೇ ಕ್ರೀಡಾ ಸ್ಪೂರ್ತಿ ಮೆರೆದರು. ಇದೀಗ ಆಸಿಫ್ ಶೇಖ್ ಅವರ ಈ ನಡೆಯ ಬಗ್ಗೆ ಕ್ರಿಕೆಟ್ ಪ್ರೇಮಿಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
1/9) ?️It’s been so inspiring to see this moment go that viral around the world. There’s a few things I might not have got across in the moment on commentary that I wanted to explain as to what made it so special & why Nepali cricket should be so proud
A #SpiritofCricket thread pic.twitter.com/CoqSt8uw3x
— Andrew Leonard (@CricketBadge) February 15, 2022
ಒಮಾನ್‌ನಲ್ಲಿ ನಡೆಯುತ್ತಿರುವ ನಾಲ್ಕು ರಾಷ್ಟ್ರಗಳ ಟಿ20 ಸರಣಿಯ ಆರನೇ ಪಂದ್ಯದಲ್ಲಿ ಈ ಘಟನೆ ನಡೆದಿದ್ದು, ಈ ಪಂದ್ಯದಲ್ಲಿ ಐರ್ಲೆಂಡ್ ವಿರುದ್ದ ಸೋಲನುಭವಿಸಿತು. ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ 20 ಓವರ್ ಗಳಲ್ಲಿ 127 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ನೇಪಾಳ ತಂಡ 20 ಓವರ್‌ಗಳಲ್ಲಿ 111 ರನ್ ಗಳಿಸಲಷ್ಟೇ ಶಕ್ತವಾಯಿತು. ಇದಾಗ್ಯೂ ವಿಕೆಟ್ ಕೀಪರ್ ಆಸಿಫ್ ಶೇಖ್ ನಡೆಯಿಂದಾಗಿ ಇದೀಗ ಇಡೀ ಪಂದ್ಯವು ವಿಶ್ವದ ಗಮನ ಸೆಳೆದಿದೆ.
ಇದನ್ನೂ ಓದಿ: IPL 2022 ನಲ್ಲಿ ಕೋಟಿ ಸಿಗುತ್ತಿದ್ದಂತೆ ಪಾಕಿಸ್ತಾನ ಸೂಪರ್ ಲೀಗ್ ತೊರೆದ ಸ್ಟಾರ್ ಆಟಗಾರ
ಇದನ್ನೂ ಓದಿ: IPL 2022: RCB ತಂಡ ಕಟ್ಟಿದೆ…ಆದರೆ ಆರಂಭಿಕ ಯಾರು ಎಂಬುದೇ ಈಗ ಪ್ರಶ್ನೆ..?
ಇದನ್ನೂ ಓದಿ: IPL 2022: RCB ತಂಡದಲ್ಲಿ ಇಬ್ಬರು ಕನ್ನಡಿಗರು..!
(Nepal wicket keeper Aasif Sheikh refused to run out ireland batsmen Andy McBrine watch video)