AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jofra archer: ಐಪಿಎಲ್​ಗೆ ಡೌಟ್, ಜೋಫ್ರಾ ಆರ್ಚರ್ ಕಂಬ್ಯಾಕ್ ಯಾವಾಗ?

Mumbai Indians: ಮುಂಬೈ ಇಂಡಿಯನ್ಸ್ ಭವಿಷ್ಯದ ದೃಷ್ಟಿಕೋನದಿಂದ ಆರ್ಚರ್ ಅನ್ನು ಖರೀದಿಸಿದೆ. ಮುಂದಿನ ಸೀಸನ್​ನಲ್ಲಿ ಆರ್ಚರ್ ಮತ್ತು ಬುಮ್ರಾ ಜೋಡಿಯು ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ದೊಡ್ಡ ಸವಾಲಾಗುವುದರಲ್ಲಿ ಅನುಮಾನವೇ ಇಲ್ಲ.

Jofra archer: ಐಪಿಎಲ್​ಗೆ ಡೌಟ್, ಜೋಫ್ರಾ ಆರ್ಚರ್ ಕಂಬ್ಯಾಕ್ ಯಾವಾಗ?
Jofra archer
TV9 Web
| Updated By: ಝಾಹಿರ್ ಯೂಸುಫ್|

Updated on: Feb 15, 2022 | 8:19 PM

Share

ಐಪಿಎಲ್ 2022 ಹರಾಜಿನಲ್ಲಿ ಅನೇಕ ಆಟಗಾರರು ದೊಡ್ಡ ಮೊತ್ತವನ್ನು ಪಡೆದರು. ಈ ಪಟ್ಟಿಯಲ್ಲಿ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಕೂಡ ಇದ್ದಾರೆ. ಬಲಗೈ ವೇಗದ ಬೌಲರ್‌ನನ್ನು ಮುಂಬೈ ಇಂಡಿಯನ್ಸ್ 8 ಕೋಟಿ ಬೆಲೆಗೆ ಖರೀದಿಸಿದೆ. ಆದರೆ ಆರ್ಚರ್ ಗಾಯದ ಕಾರಣ ಐಪಿಎಲ್ 2022 ರಲ್ಲಿ ಆಡುವುದಿಲ್ಲ. ಇದಾಗ್ಯೂ ಮುಂದಿನ ಸೀಸನ್​ಗಾಗಿ ಮುಂಬೈ ಇಂಡಿಯನ್ಸ್​ 8 ಕೋಟಿ ಪಾವತಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿತು . ಆದರೆ, 8 ಕೋಟಿ ಬಿಡ್ ಆದ ನಂತರ ಆರ್ಚರ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಹೊರಬಿದ್ದಿದೆ. ಜೋಫ್ರಾ ಆರ್ಚರ್ ಕಂಬ್ಯಾಕ್ ಮಾಡುವ ಸುದ್ದಿಗಳು ಕೇಳಿ ಬಂದಿವೆ.

ಡೈಲಿ ಟೆಲಿಗ್ರಾಫ್ ವರದಿಯ ಪ್ರಕಾರ, ಜೋಫ್ರಾ ಆರ್ಚರ್ ಇಂಗ್ಲೆಂಡ್​ನ ದಿ ಹಂಡ್ರೆಡ್ ಲೀಗ್ ಮೂಲಕ ಹಿಂತಿರುಗಲಿದ್ದಾರೆ ಎಂದು ಹೇಳಲಾಗಿದೆ. ದಿ ಹಂಡ್ರೆಡ್‌ನಲ್ಲಿ ಸದರ್ನ್ ಬ್ರೇವ್ ತಂಡದಲ್ಲಿರುವ ಆರ್ಚರ್, ಈ ಲೀಗ್‌ನ ಕೊನೆಯ ಸೀಸನ್‌ನಲ್ಲಿಯೂ ಆಡಿರಲಿಲ್ಲ. ವರದಿಯ ಪ್ರಕಾರ, ಜೋಫ್ರಾ ಆರ್ಚರ್ ಜುಲೈನಲ್ಲಿ ಮರಳಬಹುದು. ಇಂಗ್ಲೆಂಡ್ ವೇಗದ ಬೌಲರ್ ಭಾರತ ವಿರುದ್ಧದ ಟಿ20 ಸರಣಿಯಲ್ಲಿ ಭಾಗವಹಿಸುವ ಸಾಧ್ಯತೆ ಹೆಚ್ಚಿದೆ. ಆರ್ಚರ್ ಟಿ20 ಸರಣಿಯಲ್ಲಿ ಆಡಿದರೆ, ಅವರು ಇಡೀ ಹಂಡ್ರೇಡ್ ಲೀಗ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆರ್ಚರ್ ಗಾಯದ ಕಾರಣ ಕಳೆದ ಒಂದು ವರ್ಷದಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಿದ್ದಾರೆ. ಇದಾಗ್ಯೂ ಈ ಬಾರಿ ಮೆಗಾ ಹರಾಜಿನಲ್ಲಿ ಹೆಸರು ನೀಡಿದ್ದರು. ಅಚ್ಚರಿ ಎಂಬಂತೆ ಮುಂಬೈ ಇಂಡಿಯನ್ಸ್ ಮುಂದಿನ ಸೀಸನ್​ಗಾಗಿ ಆರ್ಚರ್​ ಅವರನ್ನು 8 ಕೋಟಿ ನೀಡಿ ಖರೀದಿಸಿತು.

ಆರ್ಚರ್ ಈ ವರ್ಷ ಟೆಸ್ಟ್ ಪಂದ್ಯವನ್ನು ಆಡುವುದಿಲ್ಲ: ಜೋಫ್ರಾ ಆರ್ಚರ್ ಗಾಯಗೊಂಡಿರುವ ಕಾರಣ, ಅವರು ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಆಯ್ಕೆಯಾಗುವುದಿಲ್ಲ. ಹೀಗಾಗಿ ಜೂನ್​-ಜುಲೈ ವೇಳೆ ನಡೆಯಲಿರುವ ಟಿ20 ಮತ್ತು ODI ಮಾದರಿಗಳಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಮೊಣಕೈ ಶಸ್ತ್ರಚಿಕಿತ್ಸೆಯ ನಂತರ, ಆರ್ಚರ್ ಕೌಂಟಿ ಚಾಂಪಿಯನ್‌ಶಿಪ್ ಪಂದ್ಯವನ್ನು ಆಡಲು ಸಸೆಕ್ಸ್‌ಗೆ ಬಂದಿದ್ದರು, ಆದರೆ ಅದೇ ಪಂದ್ಯದಲ್ಲಿ ಅವರ ನೋವು ಮರಳಿತು. ಹೀಗಾಗಿ ಅವರಿಗೆ ಸಂಪೂರ್ಣ ವಿಶ್ರಾಂತಿಯನ್ನು ಸೂಚಿಸಲಾಗಿದೆ.

ಇನ್ನು ಆರ್ಚರ್ ಐಪಿಎಲ್ 2022 ರಲ್ಲಿ ಆಡುವ ಯಾವುದೇ ಭರವಸೆ ಇಲ್ಲ. ಈ ವರ್ಷ T20 ವಿಶ್ವಕಪ್ ಕೂಡ ಇದೆ. ಆದ್ದರಿಂದ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ಅವರು ಸಂಪೂರ್ಣವಾಗಿ ಫಿಟ್ ಆದ ನಂತರವೇ ಮರಳಲು ಬಯಸುತ್ತಾರೆ. ಮುಂಬೈ ಇಂಡಿಯನ್ಸ್ ಭವಿಷ್ಯದ ದೃಷ್ಟಿಕೋನದಿಂದ ಆರ್ಚರ್ ಅನ್ನು ಖರೀದಿಸಿದೆ. ಮುಂದಿನ ಸೀಸನ್​ನಲ್ಲಿ ಆರ್ಚರ್ ಮತ್ತು ಬುಮ್ರಾ ಜೋಡಿಯು ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ದೊಡ್ಡ ಸವಾಲಾಗುವುದರಲ್ಲಿ ಅನುಮಾನವೇ ಇಲ್ಲ.

ಇದನ್ನೂ ಓದಿ: IPL 2022 ನಲ್ಲಿ ಕೋಟಿ ಸಿಗುತ್ತಿದ್ದಂತೆ ಪಾಕಿಸ್ತಾನ ಸೂಪರ್ ಲೀಗ್ ತೊರೆದ ಸ್ಟಾರ್ ಆಟಗಾರ

ಇದನ್ನೂ ಓದಿ: IPL 2022: RCB ತಂಡ ಕಟ್ಟಿದೆ…ಆದರೆ ಆರಂಭಿಕ ಯಾರು ಎಂಬುದೇ ಈಗ ಪ್ರಶ್ನೆ..?

ಇದನ್ನೂ ಓದಿ: IPL 2022: RCB ತಂಡದಲ್ಲಿ ಇಬ್ಬರು ಕನ್ನಡಿಗರು..! 

(Jofra archer comeback ipl 2022 auction the hundred india vs england t20 series)