‘ಕುಟುಂಬವೇ ಮುಖ್ಯ’; ಧೋನಿಯನ್ನು ಉದಾಹರಿಸಿ ಬುಮ್ರಾರನ್ನು ಟೀಕಿಸಿದ ನೆಟ್ಟಿಗರು

Asia Cup 2023: ಮಹತ್ವದ ಟೂರ್ನಿಯಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವ ಬುಮ್ರಾ, ದೇಶಕ್ಕಾಗಿ ಆಡುವ ಬದಲು ತಮ್ಮ ವೈಯಕ್ತಿಕ ಕಾರಣಕ್ಕಾಗಿ ಟೂರ್ನಿ ಮಧ್ಯದಲ್ಲೇ ತಂಡವನ್ನು ತೊರೆದಿರುವುದು ಎಷ್ಟು ಸರಿ? ಬುಮ್ರಾಗೆ ದೇಶಕ್ಕಿಂತ ಕುಟುಂಬವೇ ಮುಖ್ಯವಾಯಿತಾ ಎಂದು ನೆಟ್ಟಿಗರು ಪ್ರಶ್ನಿಸಲಾರಂಭಿಸಿದ್ದಾರೆ. ಹಾಗೆಯೇ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ಉದಾಹರಿಸಿ ಬುಮ್ರಾರನ್ನು ಟೀಕೆಗೆ ಗುರಿ ಮಾಡಿದ್ದಾರೆ.

‘ಕುಟುಂಬವೇ ಮುಖ್ಯ’; ಧೋನಿಯನ್ನು ಉದಾಹರಿಸಿ ಬುಮ್ರಾರನ್ನು ಟೀಕಿಸಿದ ನೆಟ್ಟಿಗರು
ಟೀಂ ಇಂಡಿಯಾ
Follow us
ಪೃಥ್ವಿಶಂಕರ
|

Updated on:Sep 04, 2023 | 1:34 PM

ಟೀಂ ಇಂಡಿಯಾದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah) ಟೀಂ ಇಂಡಿಯಾವನ್ನು ಬಿಟ್ಟು ತವರಿಗೆ ಮರಳಿದ್ದಕ್ಕೆ ಕಾರಣ ಕೊನೆಗೂ ಬಯಲಾಗಿದೆ. ವೇಗಿ ಜಸ್ಪ್ರೀತ್ ಬುಮ್ರಾ ಅವರ ಮಡದಿ ಸಂಜನಾ ಗಣೇಶನ್ (Sanjana Ganesan) ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸ್ವತಃ ಬುಮ್ರಾ ಅವರೇ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಪೋಸ್ಟ್‌ನಲ್ಲಿ ಮಗುವಿನ ಹೆಸರನ್ನು ಸಹ ಬಹಿರಂಗಪಡಿಸಿದ್ದಾರೆ. ಆದರೆ ಟೀಂ ಇಂಡಿಯಾ (Team India) ಮಹತ್ವದ ಟೂರ್ನಿ ಆಡುವಾಗ ವೈಯಕ್ತಿಕ ಕಾರಣ ನೀಡಿ ತಂಡವನ್ನು ತೊರೆದ ಜಸ್ಪ್ರೀತ್​ ಬುಮ್ರಾರನ್ನು ಇದೀಗ ನೆಟ್ಟಿಗರು ಟೀಕೆಗೆ ಗುರಿ ಮಾಡಿದ್ದಾರೆ.

ಕಳೆದ ಒಂದು ವರ್ಷದಿಂದ ಇಂಜುರಿಯಿಂದಾಗಿ ಟೀಂ ಇಂಡಿಯಾದಿಂದ ಹೊರಗುಳಿದಿದ್ದ ಟೀಂ ಇಂಡಿಯಾದ ಬೌಲಿಂಗ್ ಜೀವಾಳ ಜಸ್ಪ್ರೀತ್ ಬುಮ್ರಾ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಿಂದ ತಂಡಕ್ಕೆ ವಾಪಸ್ಸಾಗಿದ್ದರು. ಅಲ್ಲದೆ ತಮ್ಮ ನಾಯಕತ್ವದಲ್ಲಿ ತಂಡವನ್ನು ಚಾಂಪಿಯನ್ ಕೂಡ ಮಾಡಿದ್ದರು. ಬೌಲಿಂಗ್​ನಲ್ಲೂ ಗಮನಾರ್ಹ ಪ್ರದರ್ಶನ ನೀಡಿದ್ದ ಬುಮ್ರಾ ಏಷ್ಯಾಕಪ್​ಗೆ ನಾನು ಸಿದ್ಧ ಎಂಬ ಸಿಗ್ನಲ್ ಕೂಡ ನೀಡಿದ್ದರು. ಹೀಗಾಗಿ ಅವರನ್ನು ಏಷ್ಯಾಕಪ್ ತಂಡದಲ್ಲಿ ಆಯ್ಕೆ ಮಾಡಲಾಗಿತ್ತು.

Jasprit Bumrah: ಕ್ರಿಕೆಟಿಗ ಜಸ್ಪ್ರೀತ್ ಬುಮ್ರಾ ದಂಪತಿಗಳಿಗೆ ಗಂಡು ಮಗು ಜನನ; ಮಗುವಿನ ಹೆಸರೇನು ಗೊತ್ತಾ?

ದೇಶಕ್ಕೆ ವಾಪಸ್ಸಾಗಿದ್ದ ಬುಮ್ರಾ

ಬಳಿಕ ತಂಡದೊಂದಿಗೆ ಏಷ್ಯಾಕಪ್ ಸಲುವಾಗಿ ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸಿದ್ದ ಬುಮ್ರಾ ಪಾಕಿಸ್ತಾನ ವಿರುದ್ಧದ ಪಂದ್ಯ ಮುಗಿದ ಒಂದು ದಿನದ ಬಳಿಕ ಮತ್ತೆ ತಂಡವನ್ನು ತೊರೆದು ದೇಶಕ್ಕೆ ವಾಪಸ್ಸಾಗಿದ್ದರು. ಆರಂಭದಲ್ಲಿ ಬುಮ್ರಾಗೆ ಇಂಜುರಿಯಾಗಿರಬಹುದೆಂಬ ಆತಂಕ ಅಭಿಮಾನಿಗಳನ್ನು ಕಾಡಲಾರಂಭಿಸಿತ್ತು. ಆದರೆ ಆ ಬಳಿಕ ಬುಮ್ರಾ ಅವರು ತಮ್ಮ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ಕಾರಣ ದೇಶಕ್ಕೆ ವಾಪಸ್ಸಾಗಿದ್ದಾರೆ ಎಂದು ತಿಳಿದುಬಂದಿತ್ತು. ಅದರಂತೆ ಇಂದು ಮುಂಜಾನೆ ಅವರ ಮಡದಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ವಿಚಾರವನ್ನು ಬುಮ್ರಾ ಅವರೇ ಹಂಚಿಕೊಂಡಿದ್ದರು.

ಬುಮ್ರಾರನ್ನು ಟೀಕೆಗೆ ಗುರಿ ಮಾಡಿದ ನೆಟ್ಟಿಗರು

ಆದರೀಗ ಮಹತ್ವದ ಟೂರ್ನಿಯಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವ ಬುಮ್ರಾ, ದೇಶಕ್ಕಾಗಿ ಆಡುವ ಬದಲು ತಮ್ಮ ವೈಯಕ್ತಿಕ ಕಾರಣಕ್ಕಾಗಿ ಟೂರ್ನಿ ಮಧ್ಯದಲ್ಲೇ ತಂಡವನ್ನು ತೊರೆದಿರುವುದು ಎಷ್ಟು ಸರಿ? ಬುಮ್ರಾಗೆ ದೇಶಕ್ಕಿಂತ ಕುಟುಂಬವೇ ಮುಖ್ಯವಾಯಿತಾ ಎಂದು ನೆಟ್ಟಿಗರು ಪ್ರಶ್ನಿಸಲಾರಂಭಿಸಿದ್ದಾರೆ. ಹಾಗೆಯೇ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ಉದಾಹರಿಸಿ ಬುಮ್ರಾರನ್ನು ಟೀಕೆಗೆ ಗುರಿ ಮಾಡಿದ್ದಾರೆ.

ಧೋನಿಯನ್ನು ಉದಾಹರಿಸಿದ ನೆಟ್ಟಿಗರು

ವಾಸ್ತವವಾಗಿ ಟೀಂ ಇಂಡಿಯಾ 2015 ರ ಏಕದಿನ ವಿಶ್ವಕಪ್ ಆಡುವ ವೇಳೆ ಟೂರ್ನಿಯ ಮಧ್ಯದಲ್ಲಿ ಎಂಎಸ್ ಧೋನಿ ಅವರ ಮಡದಿ ಸಾಕ್ಷಿ ಧೋನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಹತ್ವದ ಟೂರ್ನಿಯನ್ನು ಮಧ್ಯದಲ್ಲೇ ತೊರೆಯುವುದನ್ನು ನಿರಾಕರಿಸಿದ್ದ ಧೋನಿ ಮಡದಿ ಮತ್ತು ಮಗಳನ್ನು ನೋಡಲು ಹೋಗದೆ ತಂಡದಲ್ಲಿ ಆಡುವುದನ್ನು ಮುಂದುವರೆಸಿದ್ದರು. ಇದೀಗ ಆ ಘಟನೆಯನ್ನು ಸ್ಮರಿಸಿರುವ ನೆಟ್ಟಿಗರು, ಬುಮ್ರಾ ಧೋನಿಯನ್ನು ನೋಡಿ ಕಲಿಯಲಿ ಎಂದಿದ್ದಾರೆ.

ಅಲ್ಲದೆ ಅಂದು ಧೋನಿ ಆಡಿದ ಮಾತುಗಳನ್ನು ನೆನೆದಿರುವ ನೆಟ್ಟಿಗರು, “ನಾನೀಗ ರಾಷ್ಟ್ರೀಯ ಕರ್ತವ್ಯದಲ್ಲಿದ್ದೇನೆ. ಹಾಗಾಗಿ ಮನೆಗೆ ಹಿಂತಿರುಗುವುದಿಲ್ಲ. ನನ್ನ ತಂಡವನ್ನು ಮಧ್ಯದಲ್ಲಿ ಬಿಡುವುದಿಲ್ಲ” ಎಂದು ಹೇಳಿದ್ದರು. ಆದರೆ ಇಂದು, ಬುಮ್ರಾ ಏಷ್ಯಾಕಪ್ ಅನ್ನು ಮಧ್ಯದಲ್ಲಿಯೇ ತೊರೆದು ತಕ್ಷಣವೇ ಮಗು ನೋಡಲು ಹೊರಟು ಬಂದಿದ್ದಾರೆ. ಹೀಗಾಗಿ ಬುಮ್ರಾಗೆ ಬದ್ಧತೆಯಿಲ್ಲ ಎಂದು ನೆಟ್ಟಿಗರು ಟೀಕಿಸಿದ್ದಾರೆ.

ಬುಮ್ರಾ ಪರ ನಿಂತ ಹಲವರು

ಇನ್ನು ಕೆಲವು ನೆಟ್ಟಿಗರು ಬುಮ್ರಾ ಮಾಡಿರುವ ಕೆಲಸವನ್ನು ಶ್ಲಾಘಿಸಿದ್ದು, ಬುಮ್ರಾ ತನ್ನ ಕುಟುಂಬಕ್ಕೆ ಮೊದಲ ಸ್ಥಾನ ನೀಡುವುದರಲ್ಲಿ ತಪ್ಪಿಲ್ಲ. ಇದು ಆಯ್ಕೆಯ ವಿಷಯ ಎಂದು ನಾನು ಭಾವಿಸುತ್ತೇನೆ, ಪೋಷಕರಾಗಿರುವುದು ಸಹ ಬಹಳ ಮುಖ್ಯವಾದ ಭಾವನೆಯಾಗಿದೆ. ವಿಶೇಷವಾಗಿ ಅವರು ಮೊದಲ ಬಾರಿಗೆ ಪೋಷಕರಾಗುತ್ತಿರುವುದರಿಂದ ಅದು ಮತ್ತಷ್ಟು ವಿಶೇಷ ಸಂದರ್ಭವಾಗಿದೆ. ಹೀಗಾಗಿ ನಾವು ಅವರನ್ನು ದೋನಿಯೊಂದಿಗೆ ಹೋಲಿಸಬಾರದು ಮತ್ತು ಅವರು ದೇಶಕ್ಕಾಗಿ ಬದ್ಧರಲ್ಲ ಎಂದು ಹೇಳಬಾರದು. ಇಬ್ಬರಿಗೂ ಅವರ ಆದ್ಯತೆಗಳಿವೆ ಮತ್ತು ನಾವು ಅವರ ಆಯ್ಕೆಗಳನ್ನು ಗೌರವಿಸಬೇಕು ಎಂದು ಬರೆದುಕೊಂಡಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:31 pm, Mon, 4 September 23

‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ