17 ರನ್​ಗೆ 6 ವಿಕೆಟ್ ಪತನ; ಬಾಂಗ್ಲಾ ಎದುರು ರನ್ ಗಳಿಸಲು ಪರದಾಡಿದ ವಿಶ್ವ ವಿಜೇತ ನ್ಯೂಜಿಲೆಂಡ್

60 ರನ್ ಪುರುಷರ ಟಿ 20 ಕ್ರಿಕೆಟ್​ನಲ್ಲಿ ನ್ಯೂಜಿಲೆಂಡ್​ನ ಕನಿಷ್ಠ ಸ್ಕೋರ್ ಆಗಿದೆ. ಇದು ಪುರುಷರ ಟಿ 20 ಕ್ರಿಕೆಟ್​ನಲ್ಲಿ ಒಟ್ಟಾರೆ ಎರಡನೇ ಅತಿ ಕಡಿಮೆ ಸ್ಕೋರ್ ಆಗಿದೆ.

17 ರನ್​ಗೆ 6 ವಿಕೆಟ್ ಪತನ; ಬಾಂಗ್ಲಾ ಎದುರು ರನ್ ಗಳಿಸಲು ಪರದಾಡಿದ ವಿಶ್ವ ವಿಜೇತ ನ್ಯೂಜಿಲೆಂಡ್
ಬಾಂಗ್ಲಾದೇಶ, ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡ
Follow us
TV9 Web
| Updated By: ಪೃಥ್ವಿಶಂಕರ

Updated on: Sep 01, 2021 | 6:15 PM

ಬಾಂಗ್ಲಾದೇಶ ಕ್ರಿಕೆಟ್ ತಂಡ ಪ್ರಸ್ತುತ ಟಿ 20 ಮಾದರಿಯಲ್ಲಿ ಸದ್ದು ಮಾಡುತ್ತಿದೆ. ಟಿ 20 ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ ನಂತರ, ಈಗ ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡವನ್ನು ಎದುರಿಸುದ್ದಾರೆ. ಢಾಕಾದಲ್ಲಿ ನಡೆದ ಐದು ಟಿ 20 ಪಂದ್ಯಗಳ ಮೊದಲ ಪಂದ್ಯದಲ್ಲಿ, ತಮ್ಮ ಅದ್ಭುತ ಬೌಲಿಂಗ್‌ನಿಂದಾಗಿ ಕಿವೀಸ್ ಅನ್ನು 60 ರನ್‌ಗಳಿಗೆ ಆಲೌಟ್ ಮಾಡಿದರು. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ನ ಬ್ಯಾಟ್ಸ್ ಮನ್ಗಳಿಗೆ ಸಂಪೂರ್ಣ 20 ಓವರ್ ಗಳನ್ನು ಕೂಡ ಆಡಲು ಸಾಧ್ಯವಾಗಲಿಲ್ಲ. ಮುಸ್ತಫಿಜುರ್ ರೆಹಮಾನ್ (3), ಶಕೀಬ್ ಅಲ್ ಹಸನ್ ಮತ್ತು ನಸೂಮ್ ಅಹ್ಮದ್ ತಲಾ ಎರಡು ವಿಕೆಟ್ ಪಡೆದರು. ನ್ಯೂಜಿಲೆಂಡ್‌ನಿಂದ ಕೇವಲ ಇಬ್ಬರು ಬ್ಯಾಟ್ಸ್‌ಮನ್‌ಗಳು ಮಾತ್ರ ಎರಡಂಕಿಗಳ ಗಡಿ ದಾಟಲು ಸಾಧ್ಯವಾಯಿತು. ಈ ಸರಣಿಗಾಗಿ, ಕಿವಿ ತಂಡವು ತನ್ನ 10 ಪ್ರಮುಖ ಆಟಗಾರರಿಲ್ಲದೆ ಬಾಂಗ್ಲಾದೇಶ ಪ್ರವಾಸದಲ್ಲಿದೆ.

60 ರನ್ ಪುರುಷರ ಟಿ 20 ಕ್ರಿಕೆಟ್​ನಲ್ಲಿ ನ್ಯೂಜಿಲೆಂಡ್​ನ ಕನಿಷ್ಠ ಸ್ಕೋರ್ ಆಗಿದೆ. ಇದು ಪುರುಷರ ಟಿ 20 ಕ್ರಿಕೆಟ್​ನಲ್ಲಿ ಒಟ್ಟಾರೆ ಎರಡನೇ ಅತಿ ಕಡಿಮೆ ಸ್ಕೋರ್ ಆಗಿದೆ. ನ್ಯೂಜಿಲೆಂಡ್ ತಂಡವು ಎರಡನೇ ಬಾರಿಗೆ ಟಿ 20 ಕ್ರಿಕೆಟ್ ನಲ್ಲಿ 60 ರನ್ ಗಳಿಸಿದೆ. ಈ ಹಿಂದೆ 2014 ರಲ್ಲಿ, ಕಿವಿ ತಂಡವು ಚಟ್ಟೋಗ್ರಾಮ್‌ನಲ್ಲಿ ಶ್ರೀಲಂಕಾ ವಿರುದ್ಧ 60 ರನ್ ಗಳಿಸಿತ್ತು. ತಮಾಷೆಯೆಂದರೆ ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡವು ಟಿ 20 ಮಾದರಿಯಲ್ಲಿ 60 ರನ್ ಗಳ ಕಡಿಮೆ ಸ್ಕೋರ್ ಹೊಂದಿದೆ.

ಪಂದ್ಯದ ಮೂರನೇ ಎಸೆತದಲ್ಲಿ ನ್ಯೂಜಿಲೆಂಡ್ ವಿಕೆಟ್ ಪತನ ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಟಾಮ್ ಲಾಥಮ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಅದು ಅತ್ಯಂತ ಕೆಟ್ಟ ಆರಂಭವನ್ನು ಹೊಂದಿತ್ತು. ಬಾಂಗ್ಲಾದೇಶ ಸ್ಪಿನ್ ಮೂಲಕ ಬೌಲಿಂಗ್ ಮಾಡಲು ಆರಂಭಿಸಿತು ಮತ್ತು ಪಂದ್ಯದ ಮೂರನೇ ಎಸೆತದಲ್ಲಿ ಒಂದು ವಿಕೆಟ್ ಪಡೆದರು. ರಚಿನ್ ರವೀಂದ್ರ ಖಾತೆ ತೆರೆಯದೆ ಔಟಾದರು. ಇದರ ನಂತರ, ಮತ್ತಷ್ಟು ಬ್ಯಾಟ್ಸ್‌ಮನ್‌ಗಳು ಕೂಡ ಒಂದರ ನಂತರ ಒಂದರಂತೆ ಹಿಂತಿರುಗಿದರು. ವಿಲ್ ಯಂಗ್ (5), ಟಾಮ್ ಬ್ಲಂಡೆಲ್ (2), ಕಾಲಿನ್ ಡಿ ಗ್ರಾಂಡ್‌ಹೋಮ್ (1) ಎರಡಂಕಿಯನ್ನು ಮುಟ್ಟಲು ಕೂಡ ಸಾಧ್ಯವಾಗಲಿಲ್ಲ. ಈ ಕಾರಣದಿಂದಾಗಿ, ಕಿವಿ ತಂಡದ ಸ್ಕೋರ್ ಒಂಬತ್ತು ರನ್ ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತು.

ಕೊನೆಯ 6 ವಿಕೆಟ್ಗಳು 17 ರನ್​ಗಳಿಗೆ ಬಿದ್ದವು ನಾಯಕ ಟಾಮ್ ಲಾಥಮ್ (18) ಮತ್ತು ಹೆನ್ರಿ ನಿಕೊಲ್ಸ್ (18) ಐದನೇ ವಿಕೆಟ್ ಗೆ ಜೊತೆಯಾಗಿ ತಂಡವನ್ನು ನಿಭಾಯಿಸಲು ಪ್ರಯತ್ನಿಸಿದರು. ಇಬ್ಬರ ನಡುವೆ 33 ರನ್ ಪಾಲುದಾರಿಕೆ ಇತ್ತು. ಆದರೆ ಮೊಹಮ್ಮದ್ ಸೈಫುದ್ದೀನ್ ಲಾಥಮ್ ಅವರನ್ನು ಔಟ್ ಮಾಡುವ ಮೂಲಕ ನ್ಯೂಜಿಲೆಂಡ್‌ಗೆ ದೊಡ್ಡ ಹೊಡೆತ ನೀಡಿದರು. ಇದರ ನಂತರ, ಉಳಿದ ಕಿವಿ ಬ್ಯಾಟ್ಸ್‌ಮನ್‌ಗಳು ಹೋರಾಡಲು ಸಾಧ್ಯವಾಗಲಿಲ್ಲ. ಕೊನೆಯ ಆರು ವಿಕೆಟ್ಗಳು ಕೇವಲ 17 ರನ್ ಗಳಲ್ಲಿ ಬಿದ್ದವು ಮತ್ತು ತಂಡವನ್ನು 60 ರನ್ ಗಳಿಗೆ ಇಳಿಸಲಾಯಿತು. ನ್ಯೂಜಿಲೆಂಡ್‌ನಿಂದ ಇಡೀ ಇನ್ನಿಂಗ್ಸ್‌ನಲ್ಲಿ ಕೇವಲ ಮೂರು ಬೌಂಡರಿಗಳನ್ನು ಹೊಡೆದರು.

ಮುಸ್ತಫಿಜುರ್ ರೆಹಮಾನ್ ಬಾಂಗ್ಲಾದೇಶದ ಅತ್ಯಂತ ಯಶಸ್ವಿ ಬೌಲರ್. ಅವರು 13 ರನ್ ಗಳಿಗೆ ಮೂರು ವಿಕೆಟ್ ಪಡೆದರು. ನಸೂಮ್ ಅಹ್ಮದ್ ಐದು ರನ್ ಗೆ ಎರಡು ವಿಕೆಟ್ ಮತ್ತು ಶಕೀಬ್ 10 ರನ್ ಗೆ ಎರಡು ವಿಕೆಟ್ ಪಡೆದರು. ಹಾಗೆಯೇ ಮೊಹಮ್ಮದ್ ಸೈಫುದ್ದೀನ್ ಏಳು ರನ್ ಗೆ ಎರಡು ವಿಕೆಟ್ ಪಡೆದರು.

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ