IPL 2022: ಸಿಎಸ್ಕೆ ಸೇರಿದಂತೆ 7 ಐಪಿಎಲ್ ತಂಡಗಳಿಗೆ ಶುಭ ಸುದ್ದಿ ನೀಡಿದ ಕಿವೀಸ್ ಕ್ರಿಕೆಟ್ ಮಂಡಳಿ; ಏನದು?
IPL 2022: ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿ ನ್ಯೂಜಿಲೆಂಡ್‌ನ ಎಲ್ಲಾ ಆಟಗಾರರು ಭಾಗವಹಿಸಲಿದ್ದಾರೆ ಎಂದು ಗ್ಯಾರಿ ಸ್ಟೆಡ್ ಮಾಹಿತಿ ನೀಡಿದ್ದಾರೆ. ನ್ಯೂಜಿಲೆಂಡ್ ಮಂಡಳಿಯ ಈ ನಿರ್ಧಾರದಿಂದ 10 ಐಪಿಎಲ್ ತಂಡಗಳಲ್ಲಿ 7 ತಂಡಗಳು ಭರ್ಜರಿ ಸುದ್ದಿ ಪಡೆದಿವೆ.
ಇಂಡಿಯನ್ ಪ್ರೀಮಿಯರ್ ಲೀಗ್ 2022 (IPL 2022) ಮಾರ್ಚ್ 26 ರಿಂದ ಪ್ರಾರಂಭವಾಗುತ್ತಿದೆ. ಲೀಗ್ ಪ್ರಾರಂಭವಾಗುವ ಮೊದಲು, ಲೀಗ್‌ನ 7 ಫ್ರಾಂಚೈಸಿಗಳಿಗೆ ಬಿಗ್ ರಿಲೀಫ್ ಸಿಕ್ಕಿದೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ, ನ್ಯೂಜಿಲೆಂಡ್‌ನ ಮುಖ್ಯ ಕೋಚ್ ಗ್ಯಾರಿ ಸ್ಟೆಡ್, ತಂಡದ ಎಲ್ಲಾ ಪ್ರಮುಖ ಆಟಗಾರರು ನೆದರ್‌ಲ್ಯಾಂಡ್ಸ್ ವಿರುದ್ಧದ ಟಿ 20 ಮತ್ತು ಏಕದಿನ ಸರಣಿಯನ್ನು (Netherlands tour of New Zealand, 2022) ಆಡುತ್ತಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಈ ಸರಣಿಯು ಮಾರ್ಚ್-ಏಪ್ರಿಲ್‌ನಲ್ಲಿ ನಡೆಯಲಿದ್ದು, ಈ ಸಮಯದಲ್ಲಿ ಐಪಿಎಲ್ ಕೂಡ ಆಯೋಜಿಸಲಾಗುತ್ತದೆ. ನೆದರ್ಲೆಂಡ್ಸ್ ತಂಡ ಮಾರ್ಚ್ ಅಂತ್ಯದಲ್ಲಿ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಇದರರ್ಥ ನ್ಯೂಜಿಲೆಂಡ್‌ನ ಬಿ ತಂಡ (Netherlands vs New Zealand) ನೆದರ್‌ಲ್ಯಾಂಡ್ಸ್ ವಿರುದ್ಧ ಕಣಕ್ಕಿಳಿಯಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿ ನ್ಯೂಜಿಲೆಂಡ್‌ನ ಎಲ್ಲಾ ಆಟಗಾರರು ಭಾಗವಹಿಸಲಿದ್ದಾರೆ ಎಂದು ಗ್ಯಾರಿ ಸ್ಟೆಡ್ ಮಾಹಿತಿ ನೀಡಿದ್ದಾರೆ. ನ್ಯೂಜಿಲೆಂಡ್ ಮಂಡಳಿಯ ಈ ನಿರ್ಧಾರದಿಂದ 10 ಐಪಿಎಲ್ ತಂಡಗಳಲ್ಲಿ 7 ತಂಡಗಳು ಭರ್ಜರಿ ಸುದ್ದಿ ಪಡೆದಿವೆ. ಐಪಿಎಲ್‌ನ 3 ತಂಡಗಳು ಮಾತ್ರ ಯಾವುದೇ ಕಿವೀ ಆಟಗಾರನ ಮೇಲೆ ಬೆಟ್ಟಿಂಗ್ ಮಾಡಿಲ್ಲ. ರಾಜಸ್ಥಾನ್ ರಾಯಲ್ಸ್ ಗರಿಷ್ಠ ಮೂವರು ಕಿವೀಸ್ ಆಟಗಾರರನ್ನು ಖರೀದಿಸಿದೆ. ಟ್ರೆಂಟ್ ಬೌಲ್ಟ್, ಜೇಮ್ಸ್ ನೀಶಮ್ ಮತ್ತು ಡ್ಯಾರೆಲ್ ಮಿಚೆಲ್ ಅವರಲ್ಲಿ ಪ್ರಮುಖರು. ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್ ಮೂಲದವರು. ಹೈದರಾಬಾದ್ ಅತ್ಯಂತ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು ಗ್ಲೆನ್ ಫಿಲಿಪ್ಸ್ ಎಲ್ಲಾ ಪಂದ್ಯಗಳಿಗೆ ಲಭ್ಯರಿರಲಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ಗೆ ಬಿಗ್ ರಿಲೀಫ್ ಡೆವೊನ್ ಕಾನ್ವೇ, ಆಡಮ್ ಮಿಲ್ನೆ ಮತ್ತು ಮಿಚೆಲ್ ಸ್ಯಾಂಟ್ನರ್ ಸೇರಿದಂತೆ ಮೂವರು ಕಿವೀಸ್ ಆಟಗಾರರನ್ನು ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿದೆ. ಗುಜರಾತ್ ಟೈಟಾನ್ಸ್ ಲೋಕಿ ಫರ್ಗುಸನ್ ಅವರನ್ನು 10 ಕೋಟಿಯಷ್ಟು ದುಬಾರಿ ಬೆಲೆಗೆ ಖರೀದಿಸಿದೆ. ಟಿಮ್ ಸೀಫರ್ಟ್ ಅವರನ್ನು ಕೆಕೆಆರ್ ಹಾಗೂ ಟಿಮ್ ಸೌಥಿ ಅವರನ್ನು ದೆಹಲಿ ತಂಡ ಖರೀದಿಸಿದೆ. ಆರ್‌ಸಿಬಿ ತಂಡಕ್ಕೆ ಫಿನ್ ಅಲೆನ್‌ರನ್ನು ಸೇರಿಸಿಕೊಂಡಿದೆ. ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್‌ಜೈಂಟ್ ಮಾತ್ರ ಕಿವೀಸ್ ಆಟಗಾರರನ್ನು ಹೊಂದಿರದ ತಂಡಗಳಾಗಿವೆ.
ನ್ಯೂಜಿಲೆಂಡ್-ನೆದರ್ಲ್ಯಾಂಡ್ಸ್ ಸರಣಿ ನ್ಯೂಜಿಲೆಂಡ್ ಮತ್ತು ನೆದರ್ಲೆಂಡ್ಸ್ ನಡುವೆ ಟಿ20 ಪಂದ್ಯ ಹಾಗೂ 3 ಏಕದಿನ ಸರಣಿ ನಡೆಯಲಿದೆ. ಮಾರ್ಚ್ 25 ರಂದು ನೇಪಿಯರ್‌ನಲ್ಲಿ ಏಕೈಕ ಟಿ20 ಪಂದ್ಯ ನಡೆಯಲಿದೆ. ಮಾರ್ಚ್ 29ರಿಂದ ಏಕದಿನ ಸರಣಿ ಆರಂಭವಾಗಲಿದ್ದು, ಬೇ ಓವಲ್ ಮೈದಾನದಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ. ಏಪ್ರಿಲ್ 2 ಮತ್ತು ಏಪ್ರಿಲ್ 4 ರಂದು ಹ್ಯಾಮಿಲ್ಟನ್‌ನಲ್ಲಿ ಏಕದಿನ ಸರಣಿಯ ಎರಡು ಮತ್ತು ಮೂರನೇ ಪಂದ್ಯಗಳು ನಡೆಯಲಿವೆ. ಐಪಿಎಲ್ ನೆಪದಲ್ಲಿ ನ್ಯೂಜಿಲೆಂಡ್ ಯುವ ಆಟಗಾರರು ಅಂತಾರಾಷ್ಟ್ರೀಯ ಪಂದ್ಯಗಳ ಅನುಭವ ಪಡೆಯಲಿದ್ದಾರೆ.
ಇದನ್ನೂ ಓದಿ:IPL 2022: 12 ಡಬಲ್ ಹೆಡರ್ ಪಂದ್ಯಗಳು, RTPCR ಟೆಸ್ಟ್ ಕಡ್ಡಾಯ! ಇವಿಷ್ಟು ಐಪಿಎಲ್ ನಿಯಮಗಳು
Published On - 5:01 pm, Mon, 7 March 22