Shane Warne Passes Away: ತನ್ನ ನೆಲದಲ್ಲಿ ಈಡೇರದ ಶೇನ್ ವಾರ್ನ್ ಕನಸ್ಸನ್ನು ಭಾರತದ ಐಪಿಎಲ್ ನನಸು ಮಾಡಿತ್ತು..!

Shane Warne Passes Away: ತನ್ನ ನೆಲದಲ್ಲಿ ಈಡೇರದ ಶೇನ್ ವಾರ್ನ್ ಕನಸ್ಸನ್ನು ಭಾರತದ ಐಪಿಎಲ್ ನನಸು ಮಾಡಿತ್ತು..!
2008 ರ ರಾಜಸ್ಥಾನ ತಂಡ

Shane Warne Passes Away: 1992 ರಲ್ಲಿ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ವಾರ್ನ್, 1999 ರಲ್ಲಿ ಆಸ್ಟ್ರೇಲಿಯಾದ ಉಪನಾಯಕರಾಗಿ ಆಯ್ಕೆಯಾದರು. ಆದರೆ ನಾಯಕತ್ವದ ಅವಕಾಶವನ್ನು ಎಂದಿಗೂ ಪಡೆಯಲಿಲ್ಲ.

TV9kannada Web Team

| Edited By: pruthvi Shankar

Mar 04, 2022 | 8:56 PM

ಮಾರ್ಚ್ 4 ರ ಶುಕ್ರವಾರ ಕ್ರಿಕೆಟ್ ಜಗತ್ತಿಗೆ ಆಘಾತಕಾರಿ ಸುದ್ದಿಯೊಂದು ಬರಸಿಡಿಲಿನಂತೆ ಅಪ್ಪಳಿಸಿದೆ. ವಿಶ್ವದ ಶ್ರೇಷ್ಠ ಲೆಗ್ ಸ್ಪಿನ್ನರ್ ಮತ್ತು ಆಸ್ಟ್ರೇಲಿಯಾದ ದಂತಕಥೆ ಶೇನ್ ವಾರ್ನ್ ಹಠಾತ್ ನಿಧನರಾಗಿದ್ದಾರೆ (Shane Warne Passes Away). ಶೇನ್ ವಾರ್ನ್ ಕೇವಲ 52 ನೇ ವಯಸ್ಸಿನಲ್ಲಿ ಇಹಲೋಕದ ವ್ಯವಹಾರವ ಮುಗಿಸಿಬಿಟ್ಟಿದ್ದಾರೆ. ಥೈಲ್ಯಾಂಡ್‌ನ ವಿಲ್ಲಾದಲ್ಲಿ ಸ್ವಲ್ಪ ದಿನಗಳಿಂದ ವಾಸಿಸುತ್ತಿದ್ದ ವಾರ್ನ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ವಾರ್ನ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳು ಹಾಗೂ ಅವರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ವಾರ್ನ್​ ವೃತ್ತಿ ಬದುಕು ಶೇನ್ ವಾರ್ನ್ ಅವರು 1992 ರಲ್ಲಿ ಭಾರತದ ವಿರುದ್ಧ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದರು. ಮೊದಲ ಟೆಸ್ಟ್‌ನಲ್ಲಿ ಕೇವಲ 2 ವಿಕೆಟ್‌ಗಳನ್ನು ಪಡೆದರು. ಆದರೆ ನಂತರ ಅವರ ಪ್ರತಿಭೆ ಅನಾವರಣಗೊಂಡಿತ್ತು. ಪ್ರತಿಯೊಬ್ಬ ಬ್ಯಾಟ್ಸ್‌ಮನ್‌ಗಳು ಅವರ ಸ್ಪಿನ್‌ ಜಾದೂಗೆ ಬಲಿಯಾಗಿ ಹೋಗಿದ್ದರು. ಸುಮಾರು 16 ವರ್ಷಗಳ ಸುದೀರ್ಘ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ, ವಾರ್ನ್ ಅತಿ ಹೆಚ್ಚು ವಿಕೆಟ್ ಪಡೆದವರಲ್ಲಿ ಒಬ್ಬರಾಗಿದ್ದರು. ತಮ್ಮ 145 ಟೆಸ್ಟ್ ವೃತ್ತಿಜೀವನದಲ್ಲಿ 708 ವಿಕೆಟ್‌ಗಳನ್ನು ಪಡೆದು ಶ್ರೀಲಂಕಾದ ದಂತಕಥೆ ಮುತ್ತಯ್ಯ ಮುರಳೀಧರನ್ (800 ವಿಕೆಟ್) ನಂತರ ಎರಡನೇ ಅತ್ಯಂತ ಯಶಸ್ವಿ ಬೌಲರ್ ಆಗಿದ್ದರು. 194 ಏಕದಿನ ಪಂದ್ಯಗಳಲ್ಲಿ 293 ವಿಕೆಟ್‌ಗಳನ್ನು ಪಡೆದಿದ್ದಾರೆ. ಜೊತೆಗೆ 1999 ರ ವಿಶ್ವಕಪ್ ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ತಂಡಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು. ಹಾಗೆಯೇ ಪಂದ್ಯ ಪುರುಷೋತ್ತಮ ಪ್ರಶಸ್ತಿಗೂ ಭಾಜನರಾಗಿದ್ದರು.

ಕ್ಯಾಪ್ಟನ್ ಆಗುವ ಕನಸು ಭಾರತದಲ್ಲಿ ನನಸು ಶೇನ್ ವಾರ್ನ್ ಅವರು 1992 ರಲ್ಲಿ ಭಾರತದ ವಿರುದ್ಧ ಸಿಡ್ನಿ ಟೆಸ್ಟ್‌ನಲ್ಲಿ ತಮ್ಮ ಅಂತರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು. ಜನವರಿ 2007 ರಲ್ಲಿ ಸಿಡ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ಅವರು ಕೊನೆಯ ಟೆಸ್ಟ್ ಪಂದ್ಯ ಆಡಿದ್ದರು. 1992 ರಲ್ಲಿ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ವಾರ್ನ್, 1999 ರಲ್ಲಿ ಆಸ್ಟ್ರೇಲಿಯಾದ ಉಪನಾಯಕರಾಗಿ ಆಯ್ಕೆಯಾದರು. ಆದರೆ ನಾಯಕತ್ವದ ಅವಕಾಶವನ್ನು ಎಂದಿಗೂ ಪಡೆಯಲಿಲ್ಲ. ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ನಂತರ, ವಾರ್ನ್ ಐಪಿಎಲ್‌ನಲ್ಲಿ ಮೊದಲ ಬಾರಿಗೆ ರಾಜಸ್ಥಾನ್ ರಾಯಲ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸಿದರು. ಜೊತೆಗೆ ಮೊದಲ ಆವೃತ್ತಿಯಲ್ಲೇ ರಾಜಸ್ಥಾನ್ ರಾಯಲ್ಸ್ ತಂಡವನ್ನು ಚಾಂಪಿಯನ್ ಮಾಡಿದ್ದರು.

ಒಂದೇ ದಿನ ಇಬ್ಬರು ದಿಗ್ಗಜರ ಸಾವು ಮಾರ್ಚ್ 4 ಶುಕ್ರವಾರ ಆಸ್ಟ್ರೇಲಿಯಾ ಕ್ರಿಕೆಟ್‌ಗೆ ಒಳ್ಳೆಯ ದಿನವಲ್ಲ ಎಂಬುದು ಮತ್ತೊಮ್ಮೆ ಸಾಭೀತಾಗಿದೆ. ಆಸ್ಟ್ರೇಲಿಯಾ ತನ್ನ ಇಬ್ಬರು ಶ್ರೇಷ್ಠ ದಂತಕಥೆಗಳನ್ನು ಒಂದೇ ದಿನದಲ್ಲಿ ಕಳೆದುಕೊಂಡಿದೆ. ಶುಕ್ರವಾರ ಬೆಳಗ್ಗೆ ಮಾಜಿ ವಿಕೆಟ್ ಕೀಪರ್ ರಾಡ್ನಿ ಮಾರ್ಷ್ ಹೃದಯಾಘಾತದಿಂದ ಜಗತ್ತಿಗೆ ವಿದಾಯ ಹೇಳಿದರು. ನಂತರ ತಡರಾತ್ರಿ ಶೇನ್ ವಾರ್ನ್ ಸಾವಿನ ಸುದ್ದಿ ಆಸ್ಟ್ರೇಲಿಯಾ ಸೇರಿದಂತೆ ಇಡೀ ಕ್ರಿಕೆಟ್ ಜಗತ್ತನ್ನು ಬೆಚ್ಚಿಬೀಳಿಸಿದೆ. ಸ್ವತಃ ಶೇನ್ ವಾರ್ನ್ ಕೂಡ ಬೆಳಗ್ಗೆಯೇ ಮಾರ್ಷ್ ಸಾವಿನ ಕುರಿತು ಟ್ವೀಟ್ ಮಾಡುವ ಮೂಲಕ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದರು. ಆದರೆ ಸಂಜೆಯ ವೇಳೆಗೆ ವಾರ್ನ್ ಅವರ ಸಾವಿನ ಸುದ್ದಿ ಕ್ರಿಕೆಟ್​ ಜಗತ್ತಿಗೆ ಬರ ಸಿಡಿಲಿನಂತೆ ಬಂದೆರಗಿದೆ.

ಇದನ್ನೂ ಓದಿ:PAK vs AUS: 24 ವರ್ಷಗಳ ಬಳಿಕ ಪಾಕ್ ನೆಲಕ್ಕೆ ಕಾಲಿಟ್ಟ ಕಾಂಗರೂಗಳಿಗೆ ಬಾಂಬ್ ದಾಳಿಯ ಸ್ವಾಗತ; ಆಸೀಸ್ ನಿಲುವೇನು?

Follow us on

Related Stories

Most Read Stories

Click on your DTH Provider to Add TV9 Kannada