Shane Warne Passes Away: ಶ್ರೇಷ್ಠ ಸ್ಪಿನ್ನರ್‌ಗೆ ಶ್ರದ್ಧಾಂಜಲಿ; ಶೇನ್ ವಾರ್ನ್ ನಿಧನಕ್ಕೆ ಕಂಬನಿ ಮಿಡಿದ ಕ್ರಿಕೆಟ್ ಜಗತ್ತು

Shane Warne Passes Away: ಶ್ರೇಷ್ಠ ಸ್ಪಿನ್ನರ್‌ಗೆ ಶ್ರದ್ಧಾಂಜಲಿ; ಶೇನ್ ವಾರ್ನ್ ನಿಧನಕ್ಕೆ ಕಂಬನಿ ಮಿಡಿದ ಕ್ರಿಕೆಟ್ ಜಗತ್ತು
ಶೇನ್ ವಾರ್ನ್

Shane Warne Passes Away: ಶುಕ್ರವಾರ ಬೆಳಗಿನ ಜಾವದವರೆಗೂ ಟ್ವೀಟರ್​ನಲ್ಲಿ ಆಕ್ಟೀವ್ ಆಗಿದ್ದ ಶೇನ್ ವಾರ್ನ್ ಕುರಿತಾದ ಈ ಸುದ್ದಿಯಿಂದ ಇಡೀ ಕ್ರಿಕೆಟ್ ಜಗತ್ತು ಬೆಚ್ಚಿಬಿದ್ದಿದೆ. ಜೊತೆಗೆ ಅಗಲಿದ ಕ್ರಿಕೆಟ್​ ದಂತಕಥೆಗೆ ಗೌರವ ಸಲ್ಲಿಸುತ್ತಿದೆ.

TV9kannada Web Team

| Edited By: pruthvi Shankar

Mar 04, 2022 | 8:44 PM

ಮಾರ್ಚ್ 4 ರ ಶುಕ್ರವಾರ ಕ್ರಿಕೆಟ್ ಜಗತ್ತಿಗೆ ಆಘಾತಕಾರಿ ಸುದ್ದಿಯೊಂದು ಬರಸಿಡಿಲಿನಂತೆ ಅಪ್ಪಳಿಸಿದೆ. ವಿಶ್ವದ ಶ್ರೇಷ್ಠ ಲೆಗ್ ಸ್ಪಿನ್ನರ್ ಮತ್ತು ಆಸ್ಟ್ರೇಲಿಯಾದ ದಂತಕಥೆ ಶೇನ್ ವಾರ್ನ್ ಹಠಾತ್ ನಿಧನರಾಗಿದ್ದಾರೆ (Shane Warne Passes Away). ಶೇನ್ ವಾರ್ನ್ ಕೇವಲ 52 ನೇ ವಯಸ್ಸಿನಲ್ಲಿ ಇಹಲೋಕದ ವ್ಯವಹಾರವ ಮುಗಿಸಿಬಿಟ್ಟಿದ್ದಾರೆ. ಥೈಲ್ಯಾಂಡ್‌ನ ವಿಲ್ಲಾದಲ್ಲಿ ಸ್ವಲ್ಪ ದಿನಗಳಿಂದ ವಾಸಿಸುತ್ತಿದ್ದ ವಾರ್ನ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ವಾರ್ನ್ ಸಾವು ಇಡೀ ಕ್ರಿಕೆಟ್ ಜಗತ್ತನ್ನು ಬೆಚ್ಚಿಬೀಳಿಸಿದೆ. ಆಸ್ಟ್ರೇಲಿಯ-ಇಂಗ್ಲೆಂಡ್ ನಡುವಿನ ಆ್ಯಶಸ್ ಸರಣಿಯಲ್ಲಿ ಶೇನ್ ವಾರ್ನ್ ಕಾಮೆಂಟರಿ ಮಾಡಿದ್ದರು. ಜೊತೆಗೆ ಶುಕ್ರವಾರ ಬೆಳಗಿನ ಜಾವದವರೆಗೂ ಟ್ವೀಟರ್​ನಲ್ಲಿ ಆಕ್ಟೀವ್ ಆಗಿದ್ದ ಶೇನ್ ವಾರ್ನ್ ಕುರಿತಾದ ಈ ಸುದ್ದಿಯಿಂದ ಇಡೀ ಕ್ರಿಕೆಟ್ ಜಗತ್ತು ಬೆಚ್ಚಿಬಿದ್ದಿದೆ. ಜೊತೆಗೆ ಅಗಲಿದ ಕ್ರಿಕೆಟ್​ ದಂತಕಥೆಗೆ ಗೌರವ ಸಲ್ಲಿಸುತ್ತಿದೆ.

Follow us on

Related Stories

Most Read Stories

Click on your DTH Provider to Add TV9 Kannada