ಏಕದಿನ ವಿಶ್ವಕಪ್ನ 6ನೇ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ನ್ಯೂಝಿಲೆಂಡ್ ಭರ್ಜರಿ ಜಯ ಸಾಧಿಸಿದೆ. ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 7 ವಿಕೆಟ್ ನಷ್ಟಕ್ಕೆ 322 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ನೆದರ್ಲೆಂಡ್ ತಂಡವು 46.3 ಓವರ್ಗಳಲ್ಲಿ 223 ರನ್ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ನ್ಯೂಝಿಲೆಂಡ್ ತಂಡವು 99 ರನ್ಗಳ ಅಮೋಘ ಗೆಲುವು ದಾಖಲಿಸಿದೆ.
ಏಕದಿನ ಕ್ರಿಕೆಟ್ನಲ್ಲಿ ಉಭಯ ತಂಡಗಳು ಇದುವರೆಗೆ ನಾಲ್ಕು ಬಾರಿ ಮುಖಾಮುಖಿಯಾಗಿವೆ. ಈ 4 ಪಂದ್ಯಗಳಲ್ಲೂ ನ್ಯೂಝಿಲೆಂಡ್ ತಂಡವೇ ಜಯ ಸಾಧಿಸಿದೆ. ಇದಾಗ್ಯೂ ಇಂದಿನ ಪಂದ್ಯದ ಮೂಲಕ ಕಿವೀಸ್ ವಿರುದ್ಧ ಮೊದಲ ಗೆಲುವಿನ ಖಾತೆ ತೆರೆಯುವ ವಿಶ್ವಾಸದಲ್ಲಿದೆ ನೆದರ್ಲೆಂಡ್ಸ್ ತಂಡ.
ನೆದರ್ಲೆಂಡ್ಸ್ (ಪ್ಲೇಯಿಂಗ್ XI): ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಕಾಲಿನ್ ಅಕರ್ಮನ್, ಬಾಸ್ ಡಿ ಲೀಡೆ, ತೇಜ ನಿಡಮನೂರು, ಸ್ಕಾಟ್ ಎಡ್ವರ್ಡ್ಸ್ (ನಾಯಕ), ಸೈಬ್ರಾಂಡ್ ಎಂಗಲ್ಬ್ರೆಕ್ಟ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ರಯಾನ್ ಕ್ಲೈನ್, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್.
ನ್ಯೂಝಿಲೆಂಡ್ (ಪ್ಲೇಯಿಂಗ್ XI): ಡೆವೊನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್.
223 ರನ್ಗಳಿಗೆ ನೆದರ್ಲೆಂಡ್ಸ್ ತಂಡ ಆಲೌಟ್.
ನ್ಯೂಝಿಲೆಂಡ್ ತಂಡಕ್ಕೆ 99 ರನ್ಗಳ ಭರ್ಜರಿ ಜಯ.
ಮ್ಯಾಟ್ ಹೆನ್ರಿ ಎಸೆದ 45ನೇ ಓವರ್ನ ಕೊನೆಯ ಎಸೆದಲ್ಲಿ ಲೆಗ್ ಸೈಡ್ನತ್ತ ಬಾರಿಸಿದ ಸೈ ಬ್ರಾಂಡ್.
ಬೌಂಡರಿ ಲೈನ್ನಲ್ಲಿ ಡೆವೊನ್ ಕಾನ್ವೆ ಅದ್ಭುತ ಡೈವಿಂಗ್ ಕ್ಯಾಚ್. ಸೈ ಬ್ರಾಂಡ್ (29) ಔಟ್.
ಸೋಲಿನ ಸುಳಿಯಲ್ಲಿ ನೆದರ್ಲೆಂಡ್ಸ್ ತಂಡ
44 ಓವರ್ಗಳ ಮುಕ್ತಾಯದ ವೇಳೆಗೆ 212 ರನ್ ಕಲೆಹಾಕಿರುವ ನೆದರ್ಲೆಂಡ್ಸ್.
ಕೊನೆಯ 6 ಓವರ್ ಗಳಲ್ಲಿ ನೆದರ್ಲೆಂಡ್ಸ್ಗೆ ಗೆಲ್ಲಲು 111 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ಸೈ ಬ್ರಾಂಡ್ ಹಾಗೂ ಆರ್ಯನ್ ದತ್ ಬ್ಯಾಟಿಂಗ್.
ಟ್ರೆಂಟ್ ಬೌಲ್ಟ್ ಎಸೆದ 40ನೇ ಓವರ್ನ 2ನೇ ಎಸೆತವನ್ನು ಡೀಪ್ ಮಿಡ್ ವಿಕೆಟ್ನತ್ತ ಬಾರಿಸಿದ ಸೈಬ್ರಾಂಡ್…ಫೋರ್.
40 ಓವರ್ಗಳ ಮುಕ್ತಾಯಕ್ಕೆ 196 ರನ್ ಕಲೆಹಾಕಿದ ನೆದರ್ಲೆಂಡ್ಸ್.
ನೆದರ್ಲೆಂಡ್ಸ್ ತಂಡಕ್ಕೆ ಕೊನೆಯ 60 ಎಸೆತಗಳಲ್ಲಿ 127 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ಸೈಬ್ರಾಂಡ್ ಹಾಗೂ ರಿಯಾನ್ ಕ್ಲೈನ್ ಬ್ಯಾಟಿಂಗ್.
38 ಓವರ್ಗಳ ಮುಕ್ತಾಯದ ವೇಳೆಗೆ 186 ರನ್ ಕಲೆಹಾಕಿದ ನೆದರ್ಲೆಂಡ್ಸ್.
7 ವಿಕೆಟ್ ಕಬಳಿಸಿ ಗೆಲುವಿನತ್ತ ಮುನ್ನಡೆಯುತ್ತಿರುವ ನ್ಯೂಝಿಲೆಂಡ್.
ಕ್ರೀಸ್ ನಲ್ಲಿ ರಿಯಾನ್ ಕ್ಲೈನ್ ಹಾಗೂ ಸೈಬ್ರಾಂಡ್ ಬ್ಯಾಟಿಂಗ್.
ನೆದರ್ಲೆಂಡ್ಸ್ ತಂಡಕ್ಕೆ ಗೆಲ್ಲಲು 72 ಎಸೆತಗಳಲ್ಲಿ 137 ರನ್ಗಳ ಅವಶ್ಯಕತೆ.
ಮಿಚೆಲ್ ಸ್ಯಾಂಟ್ನರ್ ಎಸೆದ 37ನೇ ಓವರ್ನ 3ನೇ ಎಸೆತದಲ್ಲಿ ರಿವರ್ಸ್ ಸ್ವೀಪ್ ಮಾಡಲು ಯತ್ನಿಸಿದ ವಂಡರ್ ಮರ್ವೆ…ನೇರವಾಗಿ ಫೀಲ್ಡರ್ ಕೈಗೆ ಚೆಂಡು…ಕ್ಯಾಚ್.
6 ಎಸೆತಗಳಲ್ಲಿ 1 ರನ್ಗಳಿಸಿ ವಿಕೆಟ್ ಒಪ್ಪಿಸಿದ ರೊಲೋಫ್ ವಂಡರ್ ಮರ್ವೆ.
ಮಿಚೆಲ್ ಸ್ಯಾಂಟ್ನರ್ ಎಸೆದ 35ನೇ ಓವರ್ನ 2ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಸಿಕ್ಸ್ ಸಿಡಿಸಿದ ಸ್ಕಾಟ್ ಎಡ್ವರ್ಡ್ಸ್.
3ನೇ ಎಸೆತದಲ್ಲಿ ಮತ್ತೊಂದು ಫೋರ್ ಬಾರಿಸಿದ ಸ್ಕಾಟ್. ಆದರೆ ಐದನೇ ಎಸೆತದಲ್ಲಿ ಸ್ಯಾಂಟ್ನರ್ಗೆ ಕ್ಯಾಚ್ ನೀಡಿದ ಸ್ಕಾಟ್ ಎಡ್ವರ್ಡ್ಸ್.
27 ಎಸೆತಗಳಲ್ಲಿ 30 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಸ್ಕಾಟ್ ಎಡ್ವರ್ಡ್ಸ್.
ಮಿಚೆಲ್ ಸ್ಯಾಂಟ್ನರ್ ಎಸೆತದಲ್ಲಿ ರಿವರ್ಸ್ ಸ್ವೀಪ್ ಶಾಟ್ಗೆ ಯತ್ನಿಸಿ ಕ್ಯಾಚ್ ನೀಡಿದ ಕಾಲಿನ್ ಅಕರ್ಮನ್.
73 ಎಸೆತಗಳಲ್ಲಿ 69 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಅಕರ್ಮನ್.
ಕ್ರೀಸ್ನಲ್ಲಿ ಸ್ಕಾಟ್ ಎಡ್ವರ್ಡ್ಸ್ ಹಾಗೂ ಸೈಬ್ರಾಂಡ್ ಬ್ಯಾಟಿಂಗ್.
30 ಓವರ್ಗಳ ಮುಕ್ತಾಯದ ವೇಳೆಗೆ 145 ರನ್ ಕಲೆಹಾಕಿದ ನೆದರ್ಲೆಂಡ್ಸ್.
ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ನ್ಯೂಝಿಲೆಂಡ್ ಬೌಲರ್ಗಳು.
20 ಓವರ್ಗಳಲ್ಲಿ ನೆದರ್ಲೆಂಡ್ಸ್ಗೆ ಗೆಲ್ಲಲು 178 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ಸ್ಕಾಟ್ ಎಡ್ವರ್ಡ್ ಹಾಗೂ ಕಾಲಿನ್ ಅಕರ್ಮನ್ ಬ್ಯಾಟಿಂಗ್.
ಮ್ಯಾಟ್ ಹೆನ್ರಿ ಎಸೆದ 28ನೇ ಓವರ್ನ 2ನೇ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಸ್ಕಾಟ್ ಎಡ್ವರ್ಡ್ಸ್.
ಕ್ರೀಸ್ನಲ್ಲಿ ಕಾಲಿನ್ ಅಕರ್ಮನ್ ಹಾಗೂ ಸ್ಕಾಟ್ ಎಡ್ವರ್ಡ್ಸ್ ಬ್ಯಾಟಿಂಗ್.
26ನೇ ಓವರ್ನ ಮೂರನೇ ಎಸೆತವನ್ನು ಬೌಂಡರಿಯತ್ತ ಬಾರಿಸಿದ ಅಕರ್ಮನ್…2ನೇ ರನ್ ಓಡುವ ತವಕದಲ್ಲಿ ತೇಜ ನಿಡಮನೂರು ರನೌಟ್.
26 ಎಸೆತಗಳಲ್ಲಿ 21 ರನ್ ಬಾರಿಸಿ ಹೊರ ನಡೆದ ತೇಜ ನಿಡಮನೂರು.
ನ್ಯೂಝಿಲೆಂಡ್ ತಂಡಕ್ಕ 4ನೇ ಯಶಸ್ಸು.
25 ಓವರ್ಗಳಲ್ಲಿ 114 ರನ್ ಕಲೆಹಾಕಿದ ನೆದರ್ಲೆಂಡ್ಸ್ ತಂಡ.
3 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ನ್ಯೂಝಿಲೆಂಡ್.
ನೆದರ್ಲೆಂಡ್ಸ್ ಗೆಲ್ಲಬೇಕಿದ್ದರೆ ಇನ್ನುಳಿದ 25 ಓವರ್ಗಳಲ್ಲಿ 209 ರನ್ಗಳನ್ನು ಕಲೆಹಾಕಬೇಕಿದೆ.
ಕ್ರೀಸ್ನಲ್ಲಿ ಅಕರ್ಮನ್ ಹಾಗೂ ತೇಜ ನಿಡಮನೂರು ಬ್ಯಾಟಿಂಗ್.
ವಿಕ್ರಮ್ಜಿತ್ ಸಿಂಗ್ (12), ಮ್ಯಾಕ್ಸ್ ಒಡೌಡ್ (16) ಹಾಗೂ ಬಾಸ್ ಲೀಡೆ (18) ಔಟ್.
22 ಓವರ್ಗಳಲ್ಲಿ 100 ರನ್ ಕಲೆಹಾಕಿದ ನೆದರ್ಲೆಂಡ್ಸ್.
ಕ್ರೀಸ್ನಲ್ಲಿ ಅಕರ್ಮನ್ ಹಾಗೂ ತೇಜ ನಿಡಮನೂರು ಬ್ಯಾಟಿಂಗ್.
ನೆದರ್ಲೆಂಡ್ಸ್ಗೆ ಗೆಲ್ಲಲು ಇನ್ನೂ 223 ರನ್ಗಳ ಅವಶ್ಯಕತೆ.
ನೆದರ್ಲೆಂಡ್ಸ್ಗೆ 323 ರನ್ ಗಳ ಗುರಿ ನೀಡಿರುವ ನ್ಯೂಝಿಲೆಂಡ್.
ರಚಿನ್ ರವೀಂದ್ರ ಎಸೆದ 21ನೇ ಓವರ್ನ 2ನೇ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕವಾಗಿ ಬಾರಿಸಿದ ಅಕರ್ಮನ್…ಫೋರ್.
ನಾಲ್ಕನೇ ವಿಕೆಟ್ಗೆ ಅಕರ್ಮನ್ ಹಾಗೂ ತೇಜ ನಿಡಮನೂರು ನಡುವೆ 20 ರನ್ ಗಳ ಜೊತೆಯಾಟ.
ವಿಕ್ರಮ್ಜಿತ್ ಸಿಂಗ್, ಮ್ಯಾಕ್ಸ್ ಒಡೌಡ್ ಹಾಗೂ ಬಾಸ್ ಲೀಡೆ..ಔಟ್.
20 ಓವರ್ಗಳ ಮುಕ್ತಾಯದ ವೇಳೆಗೆ 80 ರನ್ ಕಲೆಹಾಕಿದ ನೆದರ್ಲೆಂಡ್ಸ್ ತಂಡ.
ಇನ್ನು ನೆದರ್ಲೆಂಡ್ಸ್ಗೆ ಗೆಲ್ಲಲು 30 ಓವರ್ಗಳಲ್ಲಿ 243 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ತೇಜ ನಿಡಮನೂರು ಹಾಗೂ ಅಕರ್ಮನ್ ಬ್ಯಾಟಿಂಗ್.
ರಚಿನ್ ರವೀಂದ್ರ ಎಸೆದ 17ನೇ ಓವರ್ನ 3ನೇ ಎಸೆತದಲ್ಲಿ ಭರ್ಜರಿ ಶಾಟ್ ಬಾರಿಸಿದ ಬಾಸ್ ಲೀಡೆ…ಬೌಂಡರಿ ಲೈನ್ನಲ್ಲಿ ಟ್ರೆಂಟ್ ಬೌಲ್ಟ್ ಅತ್ಯುತ್ತಮ ಕ್ಯಾಚ್.
25 ಎಸೆತಗಳಲ್ಲಿ 18 ರನ್ ಬಾರಿಸಿ ನಿರ್ಗಮಿಸಿದ ಬಾಸ್ ಲೀಡೆ.
ಕ್ರೀಸ್ನಲ್ಲಿ ತೇಜ ಹಾಗೂ ಅಕರ್ಮನ್ ಬ್ಯಾಟಿಂಗ್
15 ಓವರ್ಗಳ ಮುಕ್ತಾಯದ ವೇಳೆಗೆ 62 ರನ್ ಕಲೆಹಾಕಿದ ನೆದರ್ಲೆಂಡ್ಸ್.
ಕ್ರೀಸ್ನಲ್ಲಿ ಅಕರ್ಮನ್ ಹಾಗೂ ಬಾಸ್ ಲೀಡೆ ಬ್ಯಾಟಿಂಗ್.
ಇನ್ನು 210 ಎಸೆತಗಳಲ್ಲಿ 261 ರನ್ಗಳ ಗುರಿ.
ನೆದರ್ಲೆಂಡ್ಸ್ಗೆ 323 ರನ್ಗಳ ಟಾರ್ಗೆಟ್ ನೀಡಿರುವ ನ್ಯೂಝಿಲೆಂಡ್.
ಮಿಚೆಲ್ ಸ್ಯಾಂಟ್ನರ್ ಎಸೆದ 10ನೇ ಓವರ್ನ 5ನೇ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆದ ಮ್ಯಾಕ್ಸ್ ಒಡೌಡ್.
31 ಎಸೆತಗಳಲ್ಲಿ 16 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಒಡೌಡ್.
ಕ್ರೀಸ್ನಲ್ಲಿ ಅಕರ್ಮನ್ ಹಾಗೂ ಬಾಸ್ ಡಿ ಲೀಡೆ ಬ್ಯಾಟಿಂಗ್.
ಮ್ಯಾಟ್ ಹೆನ್ರಿ ಎಸೆದ 10ನೇ ಓವರ್ನ ಮೊದಲ ಎಸೆತದಲ್ಲಿ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ಅಕರ್ಮನ್.
10 ಓವರ್ಗಳ ಮುಕ್ತಾಯದ ವೇಳೆಗೆ 1 ವಿಕೆಟ್ ಕಳೆದುಕೊಂಡು 35 ರನ್ ಕಲೆಹಾಕಿದ ನೆದರ್ಲೆಂಡ್ಸ್.
ಕ್ರೀಸ್ ನಲ್ಲಿ ಮ್ಯಾಕ್ಸ್ ಒಡೌಡ್ ಹಾಗೂ ಅಕರ್ಮನ್ ಬ್ಯಾಟಿಂಗ್.
8 ಓವರ್ಗಳ ಮುಕ್ತಾಯದ ವೇಳೆಗೆ 26 ರನ್ ಕಲೆಹಾಕಿದ ನೆದರ್ಲೆಂಡ್ಸ್.
ನೆದರ್ಲೆಂಡ್ಸ್ ಬ್ಯಾಟರ್ಗಳಿಂದ ರಕ್ಷಣಾತ್ಮಕ ಬ್ಯಾಟಿಂಗ್ಗೆ ಒತ್ತು.
8 ಓವರ್ಗಳ ಮುಕ್ತಾಯದ ವೇಳೆಗೆ 26 ರನ್ ಕಲೆಹಾಕಿದ ನೆದರ್ಲೆಂಡ್ಸ್.
ಕ್ರೀಸ್ನಲ್ಲಿ ಮ್ಯಾಕ್ಸ್ ಒಡೌಡ್ ಹಾಗೂ ಅಕರ್ಮನ್ ಬ್ಯಾಟಿಂಗ್.
ಮ್ಯಾಟ್ ಹೆನ್ರಿ ಎಸೆದ 6ನೇ ಓವರ್ನ ಕೊನೆಯ ಎಸೆತದಲ್ಲಿ ವಿಕ್ರಮ್ಜಿತ್ ಸಿಂಗ್ ಕ್ಲೀನ್ ಬೌಲ್ಡ್.
20 ಓವರ್ಗಳಲ್ಲಿ 12 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಎಡಗೈ ದಾಂಡಿಗ ವಿಕ್ರಮ್ಜಿತ್ ಸಿಂಗ್.
ಕ್ರೀಸ್ನಲ್ಲಿ ಮ್ಯಾಕ್ಸ್ ಒಡೌಡ್ ಹಾಗೂ ಅಕರ್ಮನ್ ಬ್ಯಾಟಿಂಗ್.
ಟ್ರೆಂಟ್ ಬೌಲ್ಟ್ ಎಸೆದ 5ನೇ ಓವರ್ನ ಕೊನೆಯ ಎಸೆತವನ್ನು ಥರ್ಡ್ಮ್ಯಾನ್ ಫೀಲ್ಡರ್ನತ್ತ ಬೌಂಡರಿ ಬಾರಿಸಿದ ಮ್ಯಾಕ್ಸ್.
5 ಓವರ್ಗಳ ಮುಕ್ತಾಯದ ವೇಳೆಗೆ 17 ರನ್ ಕಲೆಹಾಕಿದ ನೆದರ್ಲೆಂಡ್ಸ್.
ಕ್ರೀಸ್ನಲ್ಲಿ ಮ್ಯಾಕ್ಸ್ ಒಡೌಡ್ ಹಾಗೂ ವಿಕ್ರಮ್ಜಿತ್ ಸಿಂಗ್ ಬ್ಯಾಟಿಂಗ್.
ಮ್ಯಾಟ್ ಹೆನ್ರಿ ಎಸೆದ 4ನೇ ಓವರ್ನ 4ನೇ ಎಸೆತದಲ್ಲಿ ಸ್ಟ್ರೈಟ್ ಡ್ರೈವ್ ಮೂಲಕ ಫೋರ್ ಬಾರಿಸಿದ ವಿಕ್ರಮ್ಜಿತ್ ಸಿಂಗ್.
ಇದು ನೆದರ್ಲೆಂಡ್ಸ್ ಇನಿಂಗ್ಸ್ನ ಮೊದಲ ಫೋರ್.
ಕ್ರೀಸ್ನಲ್ಲಿ ವಿಕ್ರಮಜಿತ್ ಸಿಂಗ್ ಹಾಗೂ ಮ್ಯಾಕ್ಸ್ ಒಡೌಡ್ ಬ್ಯಾಟಿಂಗ್.
2ನೇ ಓವರ್ನಲ್ಲಿ 4 ರನ್ ಮಾತ್ರ ನೀಡಿದ ಬಲಗೈ ವೇಗಿ ಮ್ಯಾಟ್ ಹೆನ್ರಿ.
ಮೊದಲ ಓವರ್ನಲ್ಲಿ 2 ರನ್ ಬಿಟ್ಟುಕೊಟ್ಟಿದ್ದ ಟ್ರೆಂಟ್ ಬೌಲ್ಟ್.
ಕ್ರೀಸ್ನಲ್ಲಿ ವಿಕ್ರಮ್ಜಿತ್ ಸಿಂಗ್ ಹಾಗೂ ಮ್ಯಾಕ್ಸ್ ಒಡೌಡ್ ಬ್ಯಾಟಿಂಗ್
ಮೊದಲ ಓವರ್ನಲ್ಲಿ ಕೇವಲ 2 ರನ್ ನೀಡಿದ ಟ್ರೆಂಟ್ ಬೌಲ್ಟ್.
ಕ್ರೀಸ್ನಲ್ಲಿ ಮ್ಯಾಕ್ಸ್ ಒಡೌಡ್ ಹಾಗೂ ವಿಕ್ರಮ್ಜಿತ್ ಸಿಂಗ್ ಬ್ಯಾಟಿಂಗ್.
ನೆದರ್ಲೆಂಡ್ಸ್ಗೆ 323 ರನ್ಗಳ ಗುರಿ ನೀಡಿದ ನ್ಯೂಝಿಲೆಂಡ್.
ಲೀಡೆ ಎಸೆದ ಕೊನೆಯ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ 2 ಸಿಕ್ಸ್ ಸಿಡಿಸಿದ ಮಿಚೆಲ್ ಸ್ಯಾಂಟ್ನರ್
50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 322 ರನ್ ಕಲೆಹಾಕಿದ ನ್ಯೂಝಿಲೆಂಡ್.
ನೆದರ್ಲೆಂಡ್ಸ್ ತಂಡಕ್ಕೆ 323 ರನ್ಗಳ ಕಠಿಣ ಗುರಿ ನೀಡಿದ ಕಿವೀಸ್ ಪಡೆ.
ನ್ಯೂಝಿಲೆಂಡ್ ಪರ 70 ರನ್ ಬಾರಿಸಿ ಮಿಂಚಿದ ಆರಂಭಿಕ ಆಟಗಾರ ವಿಲ್ ಯಂಗ್.
ಆರ್ಯನ್ ದತ್ ಎಸೆದ 49ನೇ ಓವರ್ನ 4ನೇ ಎಸೆತದಲ್ಲಿ ಸ್ಟಂಪ್ ಔಟಾದ ಟಾಮ್ ಲಾಥಮ್.
46 ಎಸೆತಗಳಲ್ಲಿ 53 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಲಾಥಮ್.
5ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಮ್ಯಾಟ್ ಹೆನ್ರಿ.
ಈ ಸಿಕ್ಸ್ನೊಂದಿಗೆ 300 ರ ಗಡಿದಾಟಿದ ನ್ಯೂಝಿಲೆಂಡ್ ಸ್ಕೋರ್.
ಮೀಕರೆನ್ ಎಸೆದ 48ನೇ ಓವರ್ನ ಮೊದಲ ಎಸೆತವನ್ನು ಲೆಗ್ ಸೈಡ್ನತ್ತ ಸಿಕ್ಸ್ ಸಿಡಿಸಿದ ಟಾಮ್ ಲಾಥಮ್.
4ನೇ ಎಸೆತದಲ್ಲಿ ಮತ್ತೊಂದು ಬೌಂಡರಿ ಬಾರಿ8ಸಿದ ಲಾಥಮ್.
ಈ ಫೋರ್ನೊಂದಿಗೆ ಅರ್ಧಶತಕ ಪೂರೈಸಿದ ನ್ಯೂಝಿಲೆಂಡ್ ತಂಡದ ಹಂಗಾಮಿ ನಾಯಕ.
ಕ್ರೀಸ್ನಲ್ಲಿ ಲಾಥಮ್ ಹಾಗೂ ಸ್ಯಾಂಟ್ನರ್ ಬ್ಯಾಟಿಂಗ್.
47 ಓವರ್ಗಳಲ್ಲಿ 272 ರನ್ ನೀಡಿದ ನೆದರ್ಲೆಂಡ್ಸ್.
ನ್ಯೂಝಿಲೆಂಡ್ ಇನಿಂಗ್ಸ್ನ ಕೊನೆಯ 3 ಓವರ್ಗಳು ಬಾಕಿ.
ಕ್ರೀಸ್ನಲ್ಲಿ ಟಾಮ್ ಲಾಥಮ್ ಹಾಗೂ ಮಿಚೆಲ್ ಸ್ಯಾಂಟ್ನರ್ ಬ್ಯಾಟಿಂಗ್.
ಆರ್ಯನ್ ದತ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ಮಾರ್ಕ್ ಚಾಪ್ಮನ್…ವಂಡರ್ ಮರ್ವೆಗೆ ಸುಲಭ ಕ್ಯಾಚ್…ಔಟ್.
13 ಎಸೆತಗಳಲ್ಲಿ ಕೇವಲ 5 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಮಾರ್ಕ್ ಚಾಪ್ಮನ್.
45 ಓವರ್ಗಳ ಮುಕ್ತಾಯದ ವೇಳೆಗೆ 262 ರನ್ ಕಲೆಹಾಕಿದ ನ್ಯೂಝಿಲೆಂಡ್.
ಕ್ರೀಸ್ನಲ್ಲಿ ಟಾಮ್ ಲಾಥಮ್ ಹಾಗೂ ಮಿಚೆಲ್ ಸ್ಯಾಂಟ್ನರ್ ಬ್ಯಾಟಿಂಗ್.
44 ಓವರ್ಗಳಲ್ಲಿ 250+ ರನ್ ಕಲೆಹಾಕಿದ ನ್ಯೂಝಿಲೆಂಡ್.
ಕೊನೆಯ 6 ಓವರ್ಗಳು ಮಾತ್ರ ಬಾಕಿ.
ಬೃಹತ್ ಮೊತ್ತದ ನಿರೀಕ್ಷೆಯಲ್ಲಿ ನ್ಯೂಝಿಲೆಂಡ್ ತಂಡ.
ಕ್ರೀಸ್ನಲ್ಲಿ ಟಾಮ್ ಲಾಥಮ್ ಹಾಗೂ ಮಾರ್ಕ್ ಚಾಪ್ಮನ್ ಬ್ಯಾಟಿಂಗ್.
ಬಾಸ್ ಲೀಡೆ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ಹೊರ ನಡೆದ ಗ್ಲೆನ್ ಫಿಲಿಪ್ಸ್.
4 ಎಸೆತಗಳಲ್ಲಿ 4 ರನ್ ಬಾರಿಸಿ ನಿರ್ಗಮಿಸಿದ ಸ್ಪೋಟಕ ದಾಂಡಿಗ.
ಕ್ರೀಸ್ನಲ್ಲಿ ಟಾಮ್ ಲಾಥಮ್ ಹಾಗೂ ಮಾರ್ಕ್ ಚಾಪ್ಮನ್ ಬ್ಯಾಟಿಂಗ್.
ಮೀಕರೆನ್ ಎಸೆದ ಇನ್ ಸ್ವಿಂಗ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಡೇರಿಲ್ ಮಿಚೆಲ್.
47 ಎಸೆತಗಳಲ್ಲಿ 48 ರನ್ ಬಾರಿಸಿ ಅರ್ಧಶತಕ ವಂಚಿತರಾಗಿ ಹೊರ ನಡೆದ ಮಿಚೆಲ್.
ಕ್ರೀಸ್ನಲ್ಲಿ ಟಾಮ್ ಲಾಥಮ್ ಹಾಗೂ ಗ್ಲೆನ್ ಫಿಲಿಪ್ಸ್ ಬ್ಯಾಟಿಂಗ್.
ರಿಯಾನ್ ಕ್ಲೈನ್ ಎಸೆದ 40ನೇ ಓವರ್ನ ಮೊದಲ ಎಸೆತದಲ್ಲೇ ಡೀಪ್ ಕವರ್ ಪಾಯಿಂಟ್ನತ್ತ ಫೋರ್ ಬಾರಿಸಿದ ಮಿಚೆಲ್.
40 ಓವರ್ಗಳ ಮುಕ್ತಾಯದ ವೇಳೆಗೆ 238 ರನ್ ಕಲೆಹಾಕಿದ ನ್ಯೂಝಿಲೆಂಡ್.
ಕ್ರೀಸ್ನಲ್ಲಿ ಡೇರಿಲ್ ಮಿಚೆಲ್ (48) ಹಾಗೂ ಟಾಮ್ ಲಾಥಮ್ (27) ಬ್ಯಾಟಿಂಗ್.
ಮೀಕರೆನ್ ಎಸೆತದ 39ನೇ ಓವರ್ನ ಕೊನೆಯ ಎಸೆತದಲ್ಲಿ ಪುಲ್ ಶಾಟ್ ಮೂಲಕ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ಟಾಮ್ ಲಾಥಮ್.
ಕ್ರೀಸ್ನಲ್ಲಿ ಡೇರಿಲ್ ಮಿಚೆಲ್ ಹಾಗೂ ಟಾಮ್ ಲಾಥಮ್ ಬ್ಯಾಟಿಂಗ್.
ಬಾಸ್ ಲೀಡೆ ಎಸೆದ 36ನೇ ಓವರ್ನ ಕೊನೆಯ ಮೂರು ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಟಾಮ್ ಲಾಥಮ್.
ಈ ಮೂರು ಫೋರ್ಗಳೊಂದಿಗೆ ದ್ವಿಶತಕ ಪೂರೈಸಿದ ನ್ಯೂಝಿಲೆಂಡ್ ತಂಡ.
ಕ್ರೀಸ್ನಲ್ಲಿ ಡೇರಿಲ್ ಮಿಚೆಲ್ ಹಾಗೂ ಟಾಮ್ ಲಾಥಮ್ ಬ್ಯಾಟಿಂಗ್.
35 ಓವರ್ಗಳ ಮುಕ್ತಾಯದ ವೇಳೆಗೆ 198 ರನ್ ಕಲೆಹಾಕಿದ ನ್ಯೂಝಿಲೆಂಡ್.
3 ವಿಕೆಟ್ ಕಬಳಿಸಲಷ್ಟೇ ಶಕ್ತರಾದ ನೆದರ್ಲೆಂಡ್ಸ್ ಬೌಲರ್ಗಳು.
ಕ್ರೀಸ್ನಲ್ಲಿ ಡೇರಿಲ್ ಮಿಚೆಲ್ (29) ಹಾಗೂ ಟಾಮ್ ಲಾಥಮ್ (6) ಬ್ಯಾಟಿಂಗ್.
ಡೆವೊನ್ ಕಾನ್ವೆ (32), ವಿಲ್ ಯಂಗ್ (70) ಹಾಗೂ ರಚಿನ್ ರವೀಂದ್ರ (51) ಔಟ್.
50 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ ಅರ್ಧಶತಕ ಪೂರೈಸಿದ ರಚಿನ್ ರವೀಂದ್ರ.
ಮರು ಎಸೆತದಲ್ಲೇ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ರಚಿನ್ ರವೀಂದ್ರ (51).
ನೆದರ್ಲೆಂಡ್ಸ್ ಪರ 3ನೇ ವಿಕೆಟ್ ಕಬಳಿಸಿದ ರೊಲೋಫ್ ವಂಡರ್ ಮರ್ವೆ.
ರಿಯಾನ್ ಕ್ಲೈನ್ ಎಸೆದ 32ನೇ ಓವರ್ನ 3ನೇ ಎಸೆತದಲ್ಲಿ ಆಕರ್ಷಕ ಕವರ್ ಡ್ರೈವ್ ಫೋರ್ ಬಾರಿಸಿದ ರಚಿನ್ ರವೀಂದ್ರ.
ಕ್ರೀಸ್ನಲ್ಲಿ ಬಲಗೈ ಬ್ಯಾಟರ್ ಡೇರಿಲ್ ಮಿಚೆಲ್ ಹಾಗೂ ರಚಿನ್ ರವೀಂದ್ರ ಬ್ಯಾಟಿಂಗ್.
30 ಓವರ್ಗಳ ಮುಕ್ತಾಯದ ವೇಳೆಗೆ 171 ರನ್ ಕಲೆಹಾಕಿದ ನ್ಯೂಝಿಲೆಂಡ್.
ಕೇವಲ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ ನೆದರ್ಲೆಂಡ್ಸ್ ಬೌಲರ್ಗಳು.
ಕ್ರೀಸ್ನಲ್ಲಿ ರಚಿನ್ ರವೀಂದ್ರ (40) ಹಾಗೂ ಡೇರಿಲ್ ಮಿಚೆಲ್ (19) ಬ್ಯಾಟಿಂಗ್.
ಡೆವೊನ್ ಕಾನ್ವೆ (32) ಹಾಗೂ ವಿಲ್ ಯಂಗ್ (70) ಔಟ್.
ಮೀಕರನ್ ಎಸೆದ 29ನೇ ಓವರ್ನ 4ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಪುಲ್ ಶಾಟ್ ಮೂಲಕ ಸಿಕ್ಸ್ ಸಿಡಿಸಿದ ಮಿಚೆಲ್.
ಕ್ರೀಸ್ನಲ್ಲಿ ರಚಿನ್ ರವೀಂದ್ರ ಹಾಗೂ ಡೇರಿಲ್ ಮಿಚೆಲ್ ಬ್ಯಾಟಿಂಗ್.
ನ್ಯೂಝಿಲೆಂಡ್ ಪರ ಕ್ರೀಸ್ನಲ್ಲಿ ಬ್ಯಾಟಿಂಗ್ ಮಾಡುತ್ತಿರುವ ರಚಿನ್ ರವೀಂದ್ರ (38) ಹಾಗೂ ಡೇರಿಲ್ ಮಿಚೆಲ್ (4).
28 ಓವರ್ಗಳ ಮುಕ್ತಾಯದ ವೇಳೆಗೆ 150 ರನ್ ಕಲೆಹಾಕಿದ ನ್ಯೂಝಿಲೆಂಡ್.
ನ್ಯೂಝಿಲೆಂಡ್ ತಂಡದ ಆರಂಭಿಕ ಆಟಗಾರ ಡೆವೊನ್ ಕಾನ್ವೆ (32) ಹಾಗೂ ವಿಲ್ ಯಂಗ್ (70) ಔಟ್.
ಮೀಕರನ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ವಿಲ್ ಯಂಗ್. ಲಾಂಗ್ ಆನ್ನಲ್ಲಿ ಕ್ಯಾಚ್. ನ್ಯೂಝಿಲೆಂಡ್ ತಂಡದ 2ನೇ ವಿಕೆಟ್ ಪತನ.
80 ಎಸೆತಗಳಲ್ಲಿ 70 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ವಿಲ್ ಯಂಗ್.
ಕ್ರೀಸ್ನಲ್ಲಿ ರಚಿನ್ ರವೀಂದ್ರ ಹಾಗೂ ಡೇರಿಲ್ ಮಿಚೆಲ್ ಬ್ಯಾಟಿಂಗ್.
25 ಓವರ್ಗಳ ಮುಕ್ತಾಯದ ವೇಳೆಗೆ 135 ರನ್ ಕಲೆಹಾಕಿದ ನ್ಯೂಝಿಲೆಂಡ್.
ಕ್ರೀಸ್ ನಲ್ಲಿ ವಿಲ್ ಯಂಗ್ (66) ಹಾಗೂ ರಚಿನ್ ರವೀಂದ್ರ (31) ಬ್ಯಾಟಿಂಗ್.
ನ್ಯೂಝಿಲೆಂಡ್ ಆರಂಭಿಕ ಆಟಗಾರ ಡೆವೊನ್ ಕಾನ್ವೆ (32) ಔಟ್.
ಅಕರ್ಮನ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಎಡಗೈ ದಾಂಡಿಗ ರಚಿನ್ ರವೀಂದ್ರ.
24 ಓವರ್ಗಳ ಮುಕ್ತಾಯದ ವೇಳೆಗೆ 132 ರನ್ ಕಲೆಹಾಕಿದ ನ್ಯೂಝಿಲೆಂಡ್.
ಕ್ರೀಸ್ನಲ್ಲಿ ವಿಲ್ ಯಂಗ್ ಹಾಗೂ ರಚಿನ್ ರವೀಂದ್ರ ಬ್ಯಾಟಿಂಗ್.
ಅಕರ್ಮನ್ ಎಸೆದ ಮೂರನೇ ಓವರ್ನ 2ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ವಿಲ್ ಯಂಗ್.
22 ಓವರ್ಗಳ ಮುಕ್ತಾಯದ ವೇಳೆಗೆ ನ್ಯೂಝಿಲೆಂಡ್ ಸ್ಕೋರ್ 117.
ಕ್ರೀಸ್ನಲ್ಲಿ ವಿಲ್ ಯಂಗ್ ಹಾಗೂ ರಚಿನ್ ರವೀಂದ್ರ ಬ್ಯಾಟಿಂಗ್.
20 ಓವರ್ಗಳಲ್ಲಿ ಶತಕ ಪೂರೈಸಿದ ನ್ಯೂಝಿಲೆಂಡ್ ತಂಡ.
59 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಆರಂಭಿಕ ಆಟಗಾರ ವಿಲ್ ಯಂಗ್.
ಇದು ಏಕದಿನ ಕ್ರಿಕೆಟ್ನಲ್ಲಿ ವಿಲ್ ಯಂಗ್ ಅವರ 6ನೇ ಅರ್ಧಶತಕ.
ಕ್ರೀಸ್ನಲ್ಲಿ ವಿಲ್ ಯಂಗ್ (50) ಹಾಗೂ ರಚಿನ್ ರವೀಂದ್ರ (14) ಬ್ಯಾಟಿಂಗ್.
ಡೆವೊನ್ ಕಾನ್ವೆ (32) ಔಟ್.
ವಂಡರ್ ಮರ್ವೆ ಎಸೆದ 17ನೇ ಓವರ್ನ 2ನೇ ಎಸೆತದಲ್ಲಿ ಸ್ವೀಪ್ ಶಾಟ್ ಫೋರ್ ಬಾರಿಸಿದ ವಿಲ್ ಯಂಗ್.
ಕ್ರೀಸ್ನಲ್ಲಿ ವಿಲ್ ಯಂಗ್ ಹಾಗೂ ರಚಿನ್ ರವೀಂದ್ರ ಬ್ಯಾಟಿಂಗ್.
ವಿಕೆಟ್ಗಾಗಿ ನೆದರ್ಲೆಂಡ್ಸ್ ಬೌಲರ್ಗಳ ಪರದಾಟ.
15 ಓವರ್ಗಳಲ್ಲಿ 81 ರನ್ ಕಲೆಹಾಕಿದ ನ್ಯೂಝಿಲೆಂಡ್ ತಂಡ.
ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ ನೆದರ್ಲೆಂಡ್ಸ್.
ಕ್ರೀಸ್ನಲ್ಲಿ ವಿಲ್ ಯಂಗ್ (40) ಹಾಗೂ ರಚಿನ್ ರವೀಂದ್ರ (4) ಬ್ಯಾಟಿಂಗ್.
ನ್ಯೂಝಿಲೆಂಡ್ ಆರಂಭಿಕ ಆಟಗಾರ ಡೆವೊನ್ ಕಾನ್ವೆ (32) ಔಟ್.
ರೋಲೋಫ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಹೊಡೆತಕ್ಕೆ ಯತ್ನಿಸಿದ ಡೆವೊನ್ ಕಾನ್ವೆ. ಬೌಂಡರಿ ಲೈನ್ನಲ್ಲಿ ಕ್ಯಾಚ್.
40 ಎಸೆತಗಳಲ್ಲಿ 32 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಡೆವೊನ್ ಕಾನ್ವೆ.
ಕ್ರೀಸ್ನಲ್ಲಿ ವಿಲ್ ಯಂಗ್ ಹಾಗೂ ರಚಿನ್ ರವೀಂದ್ರ ಬ್ಯಾಟಿಂಗ್.
ಮೊದಲ 10 ಓವರ್ಗಳಲ್ಲಿ 63 ರನ್ ಕಲೆಹಾಕಿದ ನ್ಯೂಝಿಲೆಂಡ್.
ಕ್ರೀಸ್ನಲ್ಲಿ ಎಡಗೈ ದಾಂಡಿಗ ಡೆವೊನ್ ಕಾನ್ವೆ (29) ಹಾಗೂ ಬಲಗೈ ಬ್ಯಾಟರ್ ವಿಲ್ ಯಂಗ್ (29) ಬ್ಯಾಟಿಂಗ್.
ಮೊದಲ 10 ಓವರ್ಗಳಲ್ಲಿ 10 ಫೋರ್ ಹಾಗೂ 2 ಸಿಕ್ಸ್ಗಳನ್ನು ಬಾರಿಸಿರುವ ನ್ಯೂಝಿಲೆಂಡ್ ಆರಂಭಿಕರು.
ಮರ್ವೆ ಎಸೆದ 9ನೇ ಓವರ್ನ 4ನೇ ಮತ್ತು 5ನೇ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ವಿಲ್ ಯಂಗ್.
ಕ್ರೀಸ್ನಲ್ಲಿ ವಿಲ್ ಯಂಗ್ ಹಾಗೂ ಡೆವೊನ್ ಕಾನ್ವೆ ಉತ್ತಮ ಬ್ಯಾಟಿಂಗ್.
ವ್ಯಾನ್ ಮೀಕೆರೆನ್ ಎಸೆದ 8ನೇ ಓವರ್ನಲ್ಲಿ 2 ಆಕರ್ಷಕ ಬೌಂಡರಿ ಬಾರಿಸಿದ ವಿಲ್ ಯಂಗ್.
ಈ ಫೋರ್ಗಳೊಂದಿಗೆ 8 ಓವರ್ಗಳಲ್ಲಿ ಅರ್ಧಶತಕ ಪೂರೈಸಿದ ನ್ಯೂಝಿಲೆಂಡ್.
ಕ್ರೀಸ್ನಲ್ಲಿ ಡೆವೊನ್ ಕಾನ್ವೆ ಹಾಗೂ ವಿಲ್ ಯಂಗ್ ಬ್ಯಾಟಿಂಗ್.
ರಿಯಾನ್ ಕ್ಲೈನ್ ಎಸೆದ 6ನೇ ಓವರ್ನ ಮೊದಲೆರಡು ಎಸೆತಗಳಲ್ಲಿ ಆಫ್ ಸೈಡ್ನತ್ತ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಡೆವೊನ್ ಕಾನ್ವೆ.
6 ಓವರ್ಗಳ ಮುಕ್ತಾಯದ ವೇಳೆಗೆ 28 ರನ್ ಕಲೆಹಾಕಿದ ನ್ಯೂಝಿಲೆಂಡ್.
ಕ್ರೀಸ್ನಲ್ಲಿ ಕಾನ್ವೆ ಹಾಗೂ ವಿಲ್ ಯಂಗ್ ಬ್ಯಾಟಿಂಗ್.
ಆರ್ಯನ್ ದತ್ ಎಸೆದ 5ನೇ ಓವರ್ನ 3ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ವಿಲ್ ಯಂಗ್.
ಇದು ಈ ಇನಿಂಗ್ಸ್ನ ಮೊದಲ ಸಿಕ್ಸರ್.
ಕ್ರೀಸ್ನಲ್ಲಿ ಡೆವೊನ್ ಕಾನ್ವೆ ಹಾಗೂ ವಿಲ್ ಯಂಗ್ ಬ್ಯಾಟಿಂಗ್.
ಮೊದಲ ಮೂರು ಓವರ್ ಮೇಡನ್ ಮಾಡಿದ್ದ ನೆದರ್ಲೆಂಡ್ಸ್.
ರಿಯಾನ್ ಕ್ಲೈನ್ ಎಸೆದ 4ನೇ ಓವರ್ನಲ್ಲಿ 2 ಫೋರ್ ಬಾರಿಸಿದ ವಿಲ್ ಯಂಗ್.
ಕ್ರೀಸ್ನಲ್ಲಿ ವಿಲ್ ಯಂಗ್ ಹಾಗೂ ಡೆವೊನ್ ಕಾನ್ವೆ ಬ್ಯಾಟಿಂಗ್.
2ನೇ ಓವರ್ ಅನ್ನು ಸಹ ಮೇಡನ್ ಮಾಡಿದ ರಿಯಾನ್.
ಇನ್ನೂ ಕೂಡ ಸ್ಕೋರ್ ಖಾತೆ ತೆರೆಯದ ನ್ಯೂಝಿಲೆಂಡ್.
ಕ್ರೀಸ್ನಲ್ಲಿ ಡೆವೊನ್ ಕಾನ್ವೆ ಹಾಗೂ ವಿಲ್ ಯಂಗ್ ಬ್ಯಾಟಿಂಗ್.
ನೆದರ್ಲೆಂಡ್ಸ್ ತಂಡದ ಉತ್ತಮ ಆರಂಭ.
NZ 0/0 (2)
ಮೊದಲ ಓವರ್ ಅನ್ನು ಮೇಡನ್ ಮಾಡಿದ ಆರ್ಯನ್ ದತ್.
NZ 0/0 (1)
ಕ್ರೀಸ್ನಲ್ಲಿ ಡೆವೊನ್ ಕಾನ್ವೆ ಹಾಗೂ ವಿಲ್ ಯಂಗ್ ಬ್ಯಾಟಿಂಗ್.
ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿರುವ ನೆದರ್ಲೆಂಡ್ಸ್ ತಂಡ.
ನ್ಯೂಝಿಲೆಂಡ್ ಪರ ಕೇನ್ ವಿಲಿಯಮ್ಸನ್ ಅಲಭ್ಯ.
ನೆದರ್ಲೆಂಡ್ಸ್ (ಪ್ಲೇಯಿಂಗ್ XI): ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಕಾಲಿನ್ ಅಕರ್ಮನ್, ಬಾಸ್ ಡಿ ಲೀಡೆ, ತೇಜ ನಿಡಮನೂರು, ಸ್ಕಾಟ್ ಎಡ್ವರ್ಡ್ಸ್ (ನಾಯಕ), ಸೈಬ್ರಾಂಡ್ ಎಂಗಲ್ಬ್ರೆಕ್ಟ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ರಯಾನ್ ಕ್ಲೈನ್, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್.
ನ್ಯೂಝಿಲೆಂಡ್ (ಪ್ಲೇಯಿಂಗ್ XI): ಡೆವೊನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್.
ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ನೆದರ್ಲೆಂಡ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿದೆ.
Published On - 1:33 pm, Mon, 9 October 23