ಏಕದಿನ ವಿಶ್ವಕಪ್ ಕುರಿತಾದ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
ICC World Cup 2023: ವಿಶ್ವಕಪ್ನ ಲೀಗ್ ಹಂತದ ಪಂದ್ಯಗಳಿಗೆ ಯಾವುದೇ ಮೀಸಲು ದಿನವನ್ನು ನಿಗದಿಪಡಿಸಲಾಗಿಲ್ಲ. ಅಂದರೆ ಮೊದಲ ಸುತ್ತಿನಲ್ಲಿ ಪಂದ್ಯಗಳು ರದ್ದಾದರೆ ಉಭಯ ತಂಡಗಳು ಒಂದೊಂದು ಅಂಕಗಳನ್ನು ಹಂಚಿಕೊಳ್ಳಲಿದೆ. ಇನ್ನು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಿಗೆ ಮೀಸಲು ದಿನವಿದ್ದು, ಮಳೆ ಅಥವಾ ಇನ್ನಿತರ ಕಾರಣಗಳಿಂದ ಪಂದ್ಯ ಸ್ಥಗಿತಗೊಂಡರೆ, ಮರು ದಿನ ಮ್ಯಾಚ್ ಅನ್ನು ಆಯೋಜಿಸಲಾಗುತ್ತದೆ.
ಏಕದಿನ ವಿಶ್ವಕಪ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಗುರುವಾರ (ಅಕ್ಟೋಬರ್ 5) ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದೊಂದಿಗೆ ಕ್ರಿಕೆಟ್ ಮಹಾಸಮರಕ್ಕೆ ಚಾಲನೆ ದೊರೆಯಲಿದೆ. ಇನ್ನು ಈ ಬಾರಿಯ ವಿಶ್ವಕಪ್ ಕುರಿತಾದ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ…
ಎಷ್ಟು ತಂಡಗಳ ನಡುವಣ ಕದನ?
ಈ ಬಾರಿಯ ವಿಶ್ವಕಪ್ನಲ್ಲಿ ಒಟ್ಟು 10 ತಂಡಗಳು ಕಣಕ್ಕಿಳಿಯಲಿವೆ.
- ಭಾರತ
- ಪಾಕಿಸ್ತಾನ್
- ಆಸ್ಟ್ರೇಲಿಯಾ
- ಸೌತ್ ಆಫ್ರಿಕಾ
- ನ್ಯೂಝಿಲೆಂಡ್
- ಇಂಗ್ಲೆಂಡ್
- ಶ್ರೀಲಂಕಾ
- ಅಫ್ಘಾನಿಸ್ತಾನ್
- ನೆದರ್ಲೆಂಡ್ಸ್
- ಬಾಂಗ್ಲಾದೇಶ್
ಎಷ್ಟು ಗಂಟೆಗೆ ಪಂದ್ಯ ಶುರು?
ಬಹುತೇಕ ಪಂದ್ಯಗಳು ಮಧ್ಯಾಹ್ನ 2 ಗಂಟೆಯಿಂದ ಶುರುವಾಗಲಿದೆ. ಇನ್ನು 2 ಪಂದ್ಯಗಳಿದ್ದಾಗ ಮೊದಲ ಮ್ಯಾಚ್ ಬೆಳಿಗ್ಗೆ 10.30 ಕ್ಕೆ ಆರಂಭವಾಗಲಿದೆ.
ಯಾವ ಮಾದರಿಯಲ್ಲಿ ಪಂದ್ಯ?
ಈ ಬಾರಿಯ ವಿಶ್ವಕಪ್ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದೆ. ಅಂದರೆ ಪ್ರತಿ ತಂಡಗಳು ಉಳಿದ 9 ಟೀಮ್ಗಳ ವಿರುದ್ಧ ಒಂದೊಂದು ಪಂದ್ಯಗಳನ್ನಾಡಲಿದೆ.
ಭಾರತ-ಪಾಕ್ ಮುಖಾಮುಖಿ ಯಾವಾಗ?
ಬಹುನಿರೀಕ್ಷಿತ ಭಾರತ-ಪಾಕಿಸ್ತಾನ್ ನಡುವಣ ಪಂದ್ಯವು ಅಕ್ಟೋಬರ್ 14 ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.
ಸೆಮಿಫೈನಲ್ಗೆ ಅರ್ಹತೆ ಪಡೆಯುವುದೇಗೆ?
ಮೇಲೆ ತಿಳಿಸಿದಂತೆ ಈ ಬಾರಿಯ ವಿಶ್ವಕಪ್ ರೌಂಡ್ ರಾಬಿನ್ ಮಾದರಿಯಲ್ಲಿ ಇರುವುದರಿಂದ 10 ತಂಡಗಳಿಗೂ ಒಂದೇ ಪಾಯಿಂಟ್ಸ್ ಟೇಬಲ್ ಇರಲಿದೆ. ಈ ಅಂಕ ಪಟ್ಟಿಯಲ್ಲಿ ಅಗ್ರ ನಾಲ್ಕು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಸೆಮಿಫೈನಲ್ ಆಡಲಿದೆ.
ಸೆಮಿಫೈನಲ್ಗೇರಲು ಕನಿಷ್ಠ ಎಷ್ಟು ಪಂದ್ಯ ಗೆಲ್ಲಬೇಕು?
ಒಂದು ತಂಡವು ತನ್ನ 9 ಪಂದ್ಯಗಳಲ್ಲಿ 7 ಮ್ಯಾಚ್ಗಳನ್ನು ಗೆದ್ದುಕೊಂಡರೆ ಸೆಮಿಫೈನಲ್ ಹಂತಕ್ಕೇರುವುದನ್ನು ಖಾತ್ರಿಪಡಿಸಿಕೊಳ್ಳಬಹುದು. ಒಂದು ವೇಳೆ ಹೆಚ್ಚಿನ ತಂಡಗಳ ಅಂಕಗಳು ಸಮವಾಗಿದ್ದರೆ ನೆಟ್ ರನ್ ರೇಟ್ ಗಣನೆಗೆ ಬರಲಿದೆ.
ಮೀಸಲು ದಿನದಾಟವಿದೆಯೇ?
ಲೀಗ್ ಹಂತದ ಪಂದ್ಯಗಳಿಗೆ ಯಾವುದೇ ಮೀಸಲು ದಿನವನ್ನು ನಿಗದಿಪಡಿಸಲಾಗಿಲ್ಲ. ಅಂದರೆ ಮೊದಲ ಸುತ್ತಿನಲ್ಲಿ ಪಂದ್ಯಗಳು ರದ್ದಾದರೆ ಉಭಯ ತಂಡಗಳು ಒಂದೊಂದು ಅಂಕಗಳನ್ನು ಹಂಚಿಕೊಳ್ಳಲಿದೆ. ಇನ್ನು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಿಗೆ ಮೀಸಲು ದಿನವಿದ್ದು, ಮಳೆ ಅಥವಾ ಇನ್ನಿತರ ಕಾರಣಗಳಿಂದ ಪಂದ್ಯ ಸ್ಥಗಿತಗೊಂಡರೆ, ಮರು ದಿನ ಮ್ಯಾಚ್ ಅನ್ನು ಆಯೋಜಿಸಲಾಗುತ್ತದೆ.
ಒಟ್ಟು ಎಷ್ಟು ಪಂದ್ಯಗಳು:
45 ದಿನಗಳ ಕಾಲ ನಡೆಯಲಿರುವ ಈ ಬಾರಿಯ ವಿಶ್ವಕಪ್ನಲ್ಲಿ ಸೆಮಿಫೈನಲ್ಸ್ ಹಾಗೂ ಫೈನಲ್ ಸೇರಿ ಒಟ್ಟು 48 ಪಂದ್ಯಗಳನ್ನಾಡಲಾಗುತ್ತದೆ.
ಫೈನಲ್ ಯಾವಾಗ?
ಈ ಬಾರಿಯ ವಿಶ್ವಕಪ್ನ ಫೈನಲ್ ಪಂದ್ಯವು ನವೆಂಬರ್ 19 ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.
ಪ್ರಶಸ್ತಿ ಮೊತ್ತವೆಷ್ಟು?
- ಚಾಂಪಿಯನ್ಸ್ ತಂಡಕ್ಕೆ- 4 ಮಿಲಿಯನ್ ಯುಎಸ್ ಡಾಲರ್ (ಸುಮಾರು 33 ಕೋಟಿ ರೂ.)
- ರನ್ನರ್ ಅಪ್ ತಂಡಕ್ಕೆ- 2 ಮಿಲಿಯನ್ ಯುಎಸ್ ಡಾಲರ್ (ಸುಮಾರು 16 ಕೋಟಿ ರೂ.)
- ಸೋತ ಸೆಮಿಫೈನಲಿಸ್ಟ್‌ಗಳಿಗೆ- ತಲಾ 8 ಲಕ್ಷ ಯುಎಸ್ ಡಾಲರ್ (ಸುಮಾರು 6.5 ಕೋಟಿ ರೂ.)
ಯಾವೆಲ್ಲಾ ಸ್ಟೇಡಿಯಂಗಳಲ್ಲಿ ಪಂದ್ಯ ನಡೆಯಲಿದೆ?
- ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್
- ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು
- ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ
- ಅರುಣ್ ಜೇಟ್ಲಿ ಸ್ಟೇಡಿಯಂ, ದೆಹಲಿ
- ಹೆಚ್ಪಿಸಿಎ ಸ್ಟೇಡಿಯಂ, ಧರ್ಮಶಾಲಾ
- ಈಡನ್ ಗಾರ್ಡನ್ಸ್, ಕೋಲ್ಕತ್ತಾ
- ಏಕನಾ ಕ್ರಿಕೆಟ್ ಸ್ಟೇಡಿಯಂ
- ಲಕ್ನೋ ವಾಂಖೆಡೆ ಸ್ಟೇಡಿಯಂ, ಮುಂಬೈ
- ಎಂಸಿಎ ಸ್ಟೇಡಿಯಂ, ಪುಣೆ
- ರಾಜೀವ್ ಗಾಂಧಿ ಅಂತರಾಷ್ಟ್ರೀಯ ಸ್ಟೇಡಿಯಂ, ಹೈದರಾಬಾದ್
ಯಾವ ಚಾನೆಲ್ಗಳಲ್ಲಿ ನೇರ ಪ್ರಸಾರ?
ಈ ಬಾರಿಯ ವಿಶ್ವಕಪ್ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ನ ಚಾನೆಲ್ಗಳಲ್ಲಿ ನೇರ ಪ್ರಸಾರವಾಗಲಿದೆ. ಹಾಗೆಯೇ ಡಿಸ್ನಿ ಹಾಟ್ ಸ್ಟಾರ್ ಮೊಬೈಲ್ ಆ್ಯಪ್ನಲ್ಲಿ ಉಚಿತವಾಗಿ ಪಂದ್ಯಗಳನ್ನು ವೀಕ್ಷಿಸಬಹುದು.
10 ತಂಡಗಳಲ್ಲಿರುವ ಆಟಗಾರರು ಯಾರೆಲ್ಲಾ?
ಐಸಿಸಿ ನಿಯಮದಂತೆ ಪ್ರತಿ ತಂಡಗಳಲ್ಲೂ ಒಟ್ಟು 15 ಆಟಗಾರರಿದ್ದಾರೆ. ಯಾವ ತಂಡದಲ್ಲಿ ಯಾರೆಲ್ಲಾ ಇದ್ದಾರೆ ಎಂದು ತಿಳಿಯಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ.
ವಿಶ್ವಕಪ್ ವೇಳಾಪಟ್ಟಿ?
ಈ ಬಾರಿಯ ಏಕದಿನ ವಿಶ್ವಕಪ್ನ ಸಂಪೂರ್ಣ ವೇಳಾಪಟ್ಟಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.