Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಿಕೆಟ್‌ಗಾಗಿ ಬೇಡಿಕೆ ಇಡಬೇಡಿ’; ಗೆಳೆಯರ ಬಳಿ ವಿಶೇಷ ಮನವಿ ಮಾಡಿದ ವಿರಾಟ್- ಅನುಷ್ಕಾ..!

ODI World Cup 2023: ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್​ಗಳಿಗೆ ಭಾರಿ ಬೇಡಿಕೆಯುಂಟಾಗಿದೆ. ದುಪ್ಪಟ್ಟು ಬೆಲೆ ನೀಡಿದರೂ ಈ ಪಂದ್ಯದ ಟಿಕೆಟ್​ಗಳು ಸಿಗುತ್ತಿಲ್ಲ. ಇದೆಲ್ಲದರ ನಡುವೆ ಇದೀಗ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿಗಳು ವಿಶ್ವಕಪ್ ಆರಂಭಕ್ಕೂ ಮುನ್ನ ತನ್ನ ಗೆಳೆಯ ಬಳಿ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.

‘ಟಿಕೆಟ್‌ಗಾಗಿ ಬೇಡಿಕೆ ಇಡಬೇಡಿ’; ಗೆಳೆಯರ ಬಳಿ ವಿಶೇಷ ಮನವಿ ಮಾಡಿದ ವಿರಾಟ್- ಅನುಷ್ಕಾ..!
ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ
Follow us
ಪೃಥ್ವಿಶಂಕರ
|

Updated on:Oct 04, 2023 | 2:48 PM

ಅಕ್ಟೋಬರ್ 5 ರಿಂದ ಆರಂಭವಾಗಲಿರುವ ಏಕದಿನ ವಿಶ್ವಕಪ್‌ಗೆ (ICC World Cup 2023) ಈಗಾಗಲೇ ವೇದಿಕೆ ಸಿದ್ದವಾಗಿದೆ. ಲೀಗ್​ನ ಉದ್ಘಾಟನಾ ಪಂದ್ಯದಲ್ಲಿ ಕಳೆದ ಬಾರಿಯ ಫೈನಲಿಸ್ಟ್​ಗಳಾದ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ (England vs New Zealand) ಮುಖಾಮುಖಿಯಾಗುತ್ತಿವೆ. ಈ ಹೈವೋಲ್ಟೇಜ್ ಕದನಕ್ಕಾಗಿ ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನ ಕೂಡ ಸಿದ್ದವಾಗಿದೆ. ಬರೋಬ್ಬರಿ 12ವರ್ಷಗಳ ಬಳಿಕ ಭಾರತದಲ್ಲಿ ವಿಶ್ವಕಪ್ ನಡೆಯುತ್ತಿರುವುದರಿಂದ ಕ್ರೀಡಾಂಗಣಗಳು ಅಭಿಮಾನಿಗಳಿಂದ ತುಂಬಿ ತುಳುಕುವ ನಿರೀಕ್ಷೆ ಇದೆ. ಇದಕ್ಕೆ ತಕ್ಕಂತೆ ಈಗಾಗಲೇ ಲೀಗ್ ಪಂದ್ಯಗಳ ಟಿಕೆಟ್ ಬಹುತೇಕ ಸೋಲ್ಡ್ ಔಟ್ ಆಗಿವೆ. ಈ ಮಹಾ ಈವೆಂಟ್​ನ ನೇರವಾಗಿ ಕಣ್ತುಂಬಿಕೊಳ್ಳುವ ಸಲುವಾಗಿ ಅಭಿಮಾನಿಗಳು ಕಾಳ ಸಂತೆಯಲ್ಲಿ ಭಾರಿ ಮೊತ್ತ ನೀಡಿ ಟಿಕೆಟ್ ಖರೀದಿಸುತ್ತಿದ್ದಾರೆ. ಅದರಲ್ಲೂ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್​ಗಳಿಗೆ ಭಾರಿ ಬೇಡಿಕೆಯುಂಟಾಗಿದೆ. ದುಪ್ಪಟ್ಟು ಬೆಲೆ ನೀಡಿದರೂ ಈ ಪಂದ್ಯದ ಟಿಕೆಟ್​ಗಳು ಸಿಗುತ್ತಿಲ್ಲ. ಇದೆಲ್ಲದರ ನಡುವೆ ಇದೀಗ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿಗಳು ವಿಶ್ವಕಪ್ ಆರಂಭಕ್ಕೂ ಮುನ್ನ ತನ್ನ ಗೆಳೆಯರ ಬಳಿ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.

ಗೆಳೆಯರ ಬಳಿ ಮನವಿಯೊಂದನ್ನು ಇಟ್ಟಿರುವ ಕೊಹ್ಲಿ

ವಾಸ್ತವವಾಗಿ ವಿಶ್ವಕಪ್ ಪಂದ್ಯಗಳ ಟಿಕೆಟ್ ಸಿಗದೆ ಇದ್ದಾಗ ಕ್ರಿಕೆಟಿಗರ ಆಪ್ತ ಗೆಳೆಯರು, ಕ್ರಿಕೆಟಿಗರ ಬಳಿ ಪಂದ್ಯಗಳ ಟಿಕೆಟ್ ಕೊಡಿಸು ಎಂದು ಮನವಿ ಇಡುವುದು ಸರ್ವೆ ಸಾಮಾನ್ಯ. ಇದನ್ನು ನಾವು ಬಹಳ ಹಿಂದಿನಿಂದಲೂ ನೋಡಿದ್ದೇವೆ. ಕೆಲವೊಮ್ಮೆ ಕ್ರಿಕೆಟಿಗರು ತಮ್ಮ ಗೆಳೆಯರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾದರೆ, ಇನ್ನು ಕೆಲವೊಮ್ಮೆ ಟಿಕೆಟ್​ಗಳು ಸಿಗದ ಕಾರಣ ಪೇಚಿಗೆ ಸಿಕ್ಕಿ ಒದ್ದಾಡುತ್ತಾರೆ. ಹೀಗಾಗಿ ಬಹಳ ವರ್ಷಗಳಿಂದಲೂ ಟೀಂ ಇಂಡಿಯಾದಲ್ಲಿ ಆಡುತ್ತಿರುವ ಕೊಹ್ಲಿಗೆ ಇದು ಅಭ್ಯಾಸ ಆಗಿ ಬಿಟ್ಟಿದೆ. ಆದ್ದರಿಂದ ವಿಶ್ವಕಪ್ ಆರಂಭಕ್ಕೂ ಮುನ್ನ ತಮ್ಮ ಗೆಳೆಯರ ಬಳಿ ಮನವಿಯೊಂದನ್ನು ಇಟ್ಟಿರುವ ಕೊಹ್ಲಿ ದಯಮಾಡಿ ನನ್ನ ಬಳಿ ಟಿಕೆಟ್​ಗಳಿಗಾಗಿ ಬೇಡಿಕೆ ಇಡಬೇಡಿ ಎಂದು ಕೇಳಿಕೊಂಡಿದ್ದಾರೆ.

ಕ್ರಿಕೆಟ್ ವಿಶ್ವಕಪ್‌ಗೂ ಮುನ್ನ ಮಾಜಿ ನಾಯಕ ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ

2ನೇ ಮಗುವಿನ ನಿರೀಕ್ಷೆಯಲ್ಲಿ ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ದಂಪತಿಗಳು..!

ಮನೆಯಿಂದ ಪಂದ್ಯಗಳನ್ನು ನೋಡಿ ಆನಂದಿಸಿ

ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಸ್ಟೋರಿಯೊಂದನ್ನು ಹಾಕಿರುವ ಕೊಹ್ಲಿ ಅದರಲ್ಲಿ, ‘ವಿಶ್ವಕಪ್​ ಸಮೀಪಿಸುತ್ತಿದೆ. ಹೀಗಾಗಿ ನನಗೆ ಟಿಕೆಟ್‌ಗಾಗಿ ವಿನಂತಿಸಬೇಡಿ ಎಂದು ನನ್ನ ಎಲ್ಲಾ ಸ್ನೇಹಿತರಿಗೆ ತಿಳಿಸಲು ನಾನು ವಿನಮ್ರವಾಗಿ ಬಯಸುತ್ತೇನೆ. ದಯವಿಟ್ಟು ನೀವು ನಿಮ್ಮ ಮನೆಯಿಂದ ಪಂದ್ಯಗಳನ್ನು ನೋಡಿ ಆನಂದಿಸಿ’ ಎಂದು ಬರೆದುಕೊಂಡಿದ್ದಾರೆ.

virat anushka

ದಯವಿಟ್ಟು ನನ್ನನ್ನು ವಿನಂತಿಸಬೇಡಿ

ಕೊಹ್ಲಿಯಂತೆ ಅವರ ಮಡದಿ ಅನುಷ್ಕಾ ಶರ್ಮಾ ಕೂಡ ಕೊಹ್ಲಿಯವರ ಪೋಸ್ಟ್​ ಅನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ವಿರಾಟ್ ಕೊಹ್ಲಿ ನಿಮ್ಮ ಮೆಸೇಜ್​ಗಳಿಗೆ ಉತ್ತರಿಸದಿದ್ದರೆ ಸಹಾಯ ಮಾಡಿ ಎಂದು ದಯವಿಟ್ಟು ನನ್ನನ್ನು ವಿನಂತಿಸಬೇಡಿ. ನೀವು ಇದನ್ನು ಅರ್ಥಮಾಡಿಕೊಂಡಿದ್ದಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:16 pm, Wed, 4 October 23

ಹುಲಿಗೆಮ್ಮ ದೇವಸ್ಥಾನ ಹುಂಡಿ ಎಣಿಕೆ: 40 ದಿನಗಳಲ್ಲಿ 99 ಲಕ್ಷ ರೂ. ಸಂಗ್ರಹ
ಹುಲಿಗೆಮ್ಮ ದೇವಸ್ಥಾನ ಹುಂಡಿ ಎಣಿಕೆ: 40 ದಿನಗಳಲ್ಲಿ 99 ಲಕ್ಷ ರೂ. ಸಂಗ್ರಹ
ಯಾವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಅಂತ ನಿಮಗೆ ಗೊತ್ತಾ?
ಯಾವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಅಂತ ನಿಮಗೆ ಗೊತ್ತಾ?
ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಕೆಟ್ಟು ಹೋದ ಸಾರಿಗೆ ಬಸ್​ ವೈಪರ್: ಮಳೆಯಲ್ಲಿ ಚಲಾಯಿಸಲು ಪರದಾಡಿದ ಚಾಲಕ
ಕೆಟ್ಟು ಹೋದ ಸಾರಿಗೆ ಬಸ್​ ವೈಪರ್: ಮಳೆಯಲ್ಲಿ ಚಲಾಯಿಸಲು ಪರದಾಡಿದ ಚಾಲಕ
ತುಂಬ ಸಮಯದ ಬಳಿಕ ಎಸಿ ಆನ್ ಮಾಡುತ್ತೀರಾ? ಒಳಗೆ ಹಾವಿರಬಹುದು ಎಚ್ಚರ!
ತುಂಬ ಸಮಯದ ಬಳಿಕ ಎಸಿ ಆನ್ ಮಾಡುತ್ತೀರಾ? ಒಳಗೆ ಹಾವಿರಬಹುದು ಎಚ್ಚರ!
ಮೃಗಾಲಯದ ಪ್ರಾಣಿಗಳಿಗೂ ತಟ್ಟಿದ ಬೇಸಿಗೆ ಬಿಸಿ: ಸ್ಪ್ರಿಂಕ್ಲರ್ ವ್ಯವಸ್ಥೆ
ಮೃಗಾಲಯದ ಪ್ರಾಣಿಗಳಿಗೂ ತಟ್ಟಿದ ಬೇಸಿಗೆ ಬಿಸಿ: ಸ್ಪ್ರಿಂಕ್ಲರ್ ವ್ಯವಸ್ಥೆ
ಕನ್ನಡ ಚಿತ್ರರಂಗದಲ್ಲಿ ಪುನೀತ್ ರೀತಿ ಡ್ಯಾನ್ಸ್ ಮಾಡೋರು ಯಾರೂ ಇಲ್ಲ: ರಕ್ಷಿತ
ಕನ್ನಡ ಚಿತ್ರರಂಗದಲ್ಲಿ ಪುನೀತ್ ರೀತಿ ಡ್ಯಾನ್ಸ್ ಮಾಡೋರು ಯಾರೂ ಇಲ್ಲ: ರಕ್ಷಿತ
ಬಜೆಟ್​ ಅಧಿವೇಶನ ಸಂದರ್ಭದಲ್ಲೇ ವಿಧಾನಸೌಧಕ್ಕೆ ಬಂದ ಬುಸ್​ ಬುಸ್ ನಾಗಪ್ಪ..!
ಬಜೆಟ್​ ಅಧಿವೇಶನ ಸಂದರ್ಭದಲ್ಲೇ ವಿಧಾನಸೌಧಕ್ಕೆ ಬಂದ ಬುಸ್​ ಬುಸ್ ನಾಗಪ್ಪ..!
ಯಾರ ಬಗ್ಗೆಯೂ ಪುನೀತ್ ನೆಗೆಟಿವ್ ಮಾತಾಡಿದ್ದು ನಾನು ಕೇಳಿಲ್ಲ: ಕೆ. ಕಲ್ಯಾಣ್
ಯಾರ ಬಗ್ಗೆಯೂ ಪುನೀತ್ ನೆಗೆಟಿವ್ ಮಾತಾಡಿದ್ದು ನಾನು ಕೇಳಿಲ್ಲ: ಕೆ. ಕಲ್ಯಾಣ್
ಸಿಎಂ ನೀಡಿರುವ ಸ್ಪಷ್ಟನೆ ರಾಜ್ಯದ ಜನತೆಗೆ ನೆಮ್ಮದಿ ನೀಡಿದೆ: ಸ್ಪೀಕರ್
ಸಿಎಂ ನೀಡಿರುವ ಸ್ಪಷ್ಟನೆ ರಾಜ್ಯದ ಜನತೆಗೆ ನೆಮ್ಮದಿ ನೀಡಿದೆ: ಸ್ಪೀಕರ್