New Zealand vs Pakistan T20I: ಕ್ರಿಸ್ಟ್ಚರ್ಚ್ನಲ್ಲಿ ನಡೆದ ತ್ರಿಕೋನ ಸರಣಿಯ 4ನೇ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ನ್ಯೂಜಿಲೆಂಡ್ 9 ವಿಕೆಟ್ಗಳಿಂದ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ಉತ್ತಮ ಆರಂಭ ಪಡೆದಿರಲಿಲ್ಲ. ಸ್ಟಾರ್ ಆರಂಭಿಕರಂದೇ ಗುರುತಿಸಿಕೊಂಡಿರುವ ಬಾಬರ್ ಆಜಂ (21) ಹಾಗೂ ಮೊಹಮ್ಮದ್ ರಿಜ್ವಾನ್ (16) ಬೇಗನೆ ನಿರ್ಗಮಿಸಿದರು. ಇದಾದ ಬಳಿಕ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ನ್ಯೂಜಿಲೆಂಡ್ ಬೌಲರ್ಗಳು ಪಾಕ್ ತಂಡದ ರನ್ಗತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಪರಿಣಾಮ 10.2 ಓವರ್ಗಳಲ್ಲಿ ಪಾಕಿಸ್ತಾನ್ ತಂಡವು ಕಲೆಹಾಕಿದ್ದು 4 ವಿಕೆಟ್ ನಷ್ಟಕ್ಕೆ ಕೇವಲ 65 ರನ್ಗಳು ಮಾತ್ರ.
ಇತ್ತ ಅತ್ಯುತ್ತಮ ಸ್ಪಿನ್ ಮೋಡಿ ಮಾಡಿದ ಬ್ರೇಸ್ವೆಲ್, ಸ್ಯಾಂಟ್ನರ್ ಹಾಗೂ ಇಶ್ ಸೋಧಿ ಪಾಕಿಸ್ತಾನ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳನ್ನು ಕಾಡಿದರು. ಅಂತಿಮವಾಗಿ ಪಾಕ್ ತಂಡವು ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 130 ರನ್ಗಳಿಸಲಷ್ಟೇ ಶಕ್ತರಾದರು.
ನ್ಯೂಜಿಲೆಂಡ್ ಪರ ಟಿಮ್ ಸೌಥಿ, ಮೈಕೆಲ್ ಬ್ರೇಸ್ವೆಲ್, ಸ್ಯಾಂಟ್ನರ್ ತಲಾ 2 ವಿಕೆಟ್ ಕಬಳಿಸಿದರೆ, ಇಶ್ ಸೋಧಿ ಒಂದು ವಿಕೆಟ್ ಪಡೆದರು. ಅಚ್ಚರಿಯ ಅಂಶವೆಂದರೆ ಪಾಕಿಸ್ತಾನ್ ತಂಡದ ಇನಿಂಗ್ಸ್ನಲ್ಲಿ ನ್ಯೂಜಿಲೆಂಡ್ ಬೌಲರ್ಗಳು ಒಂದೇ ಒಂದು ಸಿಕ್ಸ್ ಹೊಡೆಸಿಕೊಂಡಿರಲಿಲ್ಲ.
ಅದರಂತೆ 131 ರನ್ಗಳ ಸಾಧಾರಣ ಸವಾಲು ಪಡೆದ ನ್ಯೂಜಿಲೆಂಡ್ ಪರ ಆರಂಭಿಕ ಆಟಗಾರ ಫಿನ್ ಅಲೆನ್ ಅಬ್ಬರಿಸಿದರು. ಬೃಹತ್ ಮೊತ್ತದ ಟಾರ್ಗೆಟ್ ಅನ್ನು ಬೆನ್ನತ್ತುವಂತೆ ಬ್ಯಾಟ್ ಬೀಸಿದ ಅಲೆನ್ ಪಾಕ್ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ ಅಲೆನ್ ಬ್ಯಾಟ್ನಿಂದ ಬರೋಬ್ಬರಿ 6 ಸಿಕ್ಸ್ ಹಾಗೂ 1 ಫೋರ್ ಮೂಡಿಬಂತು. ಅಲ್ಲದೆ ಕೇವಲ 42 ಎಸೆತಗಳಲ್ಲಿ 62 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಅಷ್ಟರಲ್ಲಾಗಲೇ ನ್ಯೂಜಿಲೆಂಡ್ ತಂಡವು 13.3 ಓವರ್ಗಳಲ್ಲಿ 117 ರನ್ ಕಲೆಹಾಕಿತ್ತು. ಅಂತಿಮವಾಗಿ ಡೆವೋನ್ ಕಾನ್ವೆ ಅಜೇಯ 49 ಹಾಗೂ ನಾಯಕ ಕೇನ್ ವಿಲಿಯಮ್ಸನ್ ಅಜೇಯ 9 ರನ್ ಬಾರಿಸುವ ಮೂಲಕ 16.1 ಓವರ್ಗಳಲ್ಲಿ ತಂಡವನ್ನು ಗುರಿಮುಟ್ಟಿಸಿದರು.
ನ್ಯೂಜಿಲೆಂಡ್ನಲ್ಲಿ ನಡೆಯುತ್ತಿರುವ ಈ ತ್ರಿಕೋನಾ ಸರಣಿಯಲ್ಲಿ ಬಾಂಗ್ಲಾದೇಶ್, ಪಾಕಿಸ್ತಾನ್ ಹಾಗೂ ನ್ಯೂಜಿಲೆಂಡ್ ತಂಡಗಳು ಸೆಣಸುತ್ತಿದೆ.
ನ್ಯೂಜಿಲೆಂಡ್ ಪ್ಲೇಯಿಂಗ್ 11: ಫಿನ್ ಅಲೆನ್ , ಡೆವೊನ್ ಕಾನ್ವೇ , ಕೇನ್ ವಿಲಿಯಮ್ಸನ್ (ನಾಯಕ) , ಗ್ಲೆನ್ ಫಿಲಿಪ್ಸ್ , ಮಾರ್ಕ್ ಚಾಪ್ಮನ್ , ಜೇಮ್ಸ್ ನೀಶಮ್ , ಮೈಕೆಲ್ ಬ್ರೇಸ್ವೆಲ್ , ಮಿಚೆಲ್ ಸ್ಯಾಂಟ್ನರ್ , ಇಶ್ ಸೋಧಿ , ಟಿಮ್ ಸೌಥಿ , ಬ್ಲೇರ್ ಟಿಕ್ನರ್
ಪಾಕಿಸ್ತಾನ್ ಪ್ಲೇಯಿಂಗ್ 11: ಮೊಹಮ್ಮದ್ ರಿಜ್ವಾನ್ , ಬಾಬರ್ ಅಜಮ್ (ನಾಯಕ) , ಶಾನ್ ಮಸೂದ್ , ಹೈದರ್ ಅಲಿ , ಇಫ್ತಿಕರ್ ಅಹ್ಮದ್ , ಆಸಿಫ್ ಅಲಿ , ಶಾದಾಬ್ ಖಾನ್ , ಮೊಹಮ್ಮದ್ ನವಾಜ್ , ಮೊಹಮ್ಮದ್ ವಾಸಿಮ್ ಜೂನಿಯರ್ , ನಸೀಮ್ ಶಾ , ಶಾನವಾಜ್ ದಹಾನಿ.