ಭಾರತದಲ್ಲಿ ಏಕದಿನ ವಿಶ್ವಕಪ್: ಸಿಎಸ್ಕೆ ಅಕಾಡೆಮಿಯಲ್ಲಿ ನ್ಯೂಜಿಲೆಂಡ್ ತಂಡಕ್ಕೆ ತರಬೇತಿ
Womens ODI World Cup 2025: ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡವು ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಮಹಿಳಾ ಏಕದಿನ ವಿಶ್ವಕಪ್‌ಗಾಗಿ ಚೆನ್ನೈನಲ್ಲಿ ತರಬೇತಿ ಪಡೆಯುತ್ತಿದೆ. ಚಳಿಗಾಲದ ಕಾರಣ ನ್ಯೂಜಿಲೆಂಡ್‌ನಲ್ಲಿ ಅಭ್ಯಾಸ ಸಾಧ್ಯವಿಲ್ಲದಿರುವುದರಿಂದ ಭಾರತವನ್ನು ಆಯ್ಕೆ ಮಾಡಲಾಗಿದೆ. ಹತ್ತು ಆಟಗಾರ್ತಿಯರ ತಂಡವು ಎರಡು ವಾರಗಳ ತರಬೇತಿ ಶಿಬಿರದಲ್ಲಿ ಭಾಗವಹಿಸುತ್ತಿದ್ದು, ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ತಯಾರಿ ನಡೆಸುತ್ತಿದೆ.

ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಮಹಿಳಾ ಏಕದಿನ ವಿಶ್ವಕಪ್‌ಗೆ (Womens ODI World Cup 2025) ಎರಡು ತಿಂಗಳಿಗಿಂತ ಕಡಿಮೆ ಸಮಯವಿದೆ. ಆದಾಗ್ಯೂ ಆತಿಥೇಯ ಟೀಂ ಇಂಡಿಯಾ ಸೇರಿದಂತೆ ಎಲ್ಲಾ ತಂಡಗಳು ಈಗಾಗಲೇ ಅಭ್ಯಾಸದಲ್ಲಿ ನಿರತವಾಗಿವೆ. ಈ ನಡುವೆ ಭಾರತದ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಸಲುವಾಗಿ ನ್ಯೂಜಿಲೆಂಡ್ ತಂಡದ ಆಟಗಾರ್ತಿಯರು (New Zealand women’s cricket team) ಚೆನ್ನೈಗೆ ಆಗಮಿಸಿದ್ದಾರೆ. 10 ಸದಸ್ಯರ ತಂಡದಲ್ಲಿರುವ ಏಳು ಕ್ರಿಕೆಟಿಗರು ಕೇಂದ್ರೀಯ ಒಪ್ಪಂದವನ್ನು ಹೊಂದಿದ್ದು, ಮುಖ್ಯ ಕೋಚ್ ಬೆನ್ ಸಾಯರ್ ಮತ್ತು ಸಹಾಯಕ ಕೋಚ್ ಕ್ರೇಗ್ ಮೆಕ್‌ಮಿಲನ್ ಅವರ ಮಾರ್ಗದರ್ಶನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಕಾಡೆಮಿಯಲ್ಲಿ ಎರಡು ವಾರಗಳ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ.
ನ್ಯೂಜಿಲೆಂಡ್ ತಂಡವು ಮಹಿಳಾ ಟಿ20 ವಿಶ್ವಕಪ್‌ನ ಹಾಲಿ ಚಾಂಪಿಯನ್ ಆಗಿದ್ದು, ಇದೀಗ ಸೆಪ್ಟೆಂಬರ್ 30 ರಿಂದ ಪ್ರಾರಂಭವಾಗುವ ಏಕದಿನ ವಿಶ್ವಕಪ್ ಗೆಲ್ಲುವ ಇರಾದೆಯೊಂದಿಗೆ ಅಖಾಡಕ್ಕಿಳಿಯಲಿದೆ. ಚೆನ್ನೈನಲ್ಲಿ ಅಭ್ಯಾಸ ನಡೆಸುತ್ತಿರುವ ಆಟಗಾರ್ತಿಯರ ಪೈಕಿ, ವೇಗದ ಬೌಲರ್ ಜೆಸ್ ಕೆರ್, ಯುವ ಆರಂಭಿಕ ಆಟಗಾರ್ತಿ ಜಾರ್ಜಿಯಾ ಪ್ಲೈಮರ್ ಮತ್ತು ಆಲ್‌ರೌಂಡರ್ ಬ್ರೂಕ್ ಹಾಲಿಡೇ ಸೇರಿದ್ದಾರೆ. ಇವರಲ್ಲದೆ, ಇಜ್ಜಿ ಶಾರ್ಪ್, ಫ್ಲೋರಾ ಡೆವನ್‌ಶೈರ್ ಮತ್ತು ಎಮ್ಮಾ ಮೆಕ್‌ಲಿಯೋಡ್‌ರಂತಹ ಉದಯೋನ್ಮುಖ ಆಟಗಾರ್ತಿಯರೂ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ.
ಕೋಚ್ ಹೇಳಿದ್ದೇನು?
ನ್ಯೂಜಿಲೆಂಡ್‌ನಲ್ಲಿ ಚಳಿಗಾಲ ಇರುವುದರಿಂದ ಭಾರತದಲ್ಲಿ ತರಬೇತಿ ಶಿಬಿರವನ್ನು ನಡೆಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಾಯರ್ ಹೇಳಿದರು. ‘ನ್ಯೂಜಿಲೆಂಡ್‌ನಲ್ಲಿ ಸದ್ಯಕ್ಕೆ ಚಳಿಗಾಲವಾಗಿದ್ದು, ಅಲ್ಲಿ ಯಾವುದೇ ಕ್ರಿಕೆಟ್ ಆಡುತ್ತಿಲ್ಲ, ಆದರೆ ವಿಶ್ವಕಪ್ ಆರಂಭವಾಗಲು ಎರಡು ತಿಂಗಳಿಗಿಂತ ಕಡಿಮೆ ಸಮಯ ಉಳಿದಿದೆ. ಇಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಂಡ ನಂತರ, ನಮ್ಮ ಆಟಗಾರ್ತಿಯರು ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬ ವಿಶ್ವಾಸ ನನಗಿದೆ’ ಎಂದು ಸಾಯರ್ ಹೇಳಿದ್ದಾರೆ ಎಂದು ಇಎಸ್‌ಪಿಎನ್‌ಕ್ರಿಕ್‌ಇನ್ಫೋ ವರದಿ ಮಾಡಿದೆ.
T20 World Cup 2026: ಭಾರತದಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದ ಕೆನಡಾ
ಮಹಿಳಾ ಏಕದಿನ ವಿಶ್ವಕಪ್ ವೇಳಾಪಟ್ಟಿ ಇಲ್ಲಿದೆ
| ದಿನಾಂಕ | ಮುಖಾಮುಖಿ | ಸ್ಥಳ | ಸಮಯ |
| ಸೆಪ್ಟೆಂಬರ್ 30 | ಭಾರತ vs ಶ್ರೀಲಂಕಾ | ಬೆಂಗಳೂರು | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 1 | ಆಸ್ಟ್ರೇಲಿಯಾ vs ನ್ಯೂಜಿಲೆಂಡ್ | ಇಂದೋರ್ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 2 | ಬಾಂಗ್ಲಾದೇಶ vs ಪಾಕಿಸ್ತಾನ | ಕೊಲಂಬೊ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 3 | ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ | ಬೆಂಗಳೂರು | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 4 | ಆಸ್ಟ್ರೇಲಿಯಾ vs ಶ್ರೀಲಂಕಾ | ಕೊಲಂಬೊ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 5 | ಭಾರತ vs ಪಾಕಿಸ್ತಾನ | ಕೊಲಂಬೊ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 6 | ನ್ಯೂಜಿಲೆಂಡ್ vs ದಕ್ಷಿಣ ಆಫ್ರಿಕಾ | ಇಂದೋರ್ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 7 | ಇಂಗ್ಲೆಂಡ್ vs ಬಾಂಗ್ಲಾದೇಶ | ಗುವಾಹಟಿ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 8 | ಆಸ್ಟ್ರೇಲಿಯಾ vs ಪಾಕಿಸ್ತಾನ | ಕೊಲಂಬೊ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 9 | ಭಾರತ vs ದಕ್ಷಿಣ ಆಫ್ರಿಕಾ | ವಿಶಾಖಪಟ್ಟಣಂ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 10 | ನ್ಯೂಜಿಲೆಂಡ್ vs ಬಾಂಗ್ಲಾದೇಶ | ವಿಶಾಖಪಟ್ಟಣಂ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 11 | ಇಂಗ್ಲೆಂಡ್ vs ಶ್ರೀಲಂಕಾ | ಗುವಾಹಟಿ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 12 | ಭಾರತ vs ಆಸ್ಟ್ರೇಲಿಯಾ | ವಿಶಾಖಪಟ್ಟಣಂ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 13 | ದಕ್ಷಿಣ ಆಫ್ರಿಕಾ vs ಬಾಂಗ್ಲಾದೇಶ | ವಿಶಾಖಪಟ್ಟಣಂ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 14 | ನ್ಯೂಜಿಲೆಂಡ್ vs ಶ್ರೀಲಂಕಾ | ಕೊಲಂಬೊ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 15 | ಇಂಗ್ಲೆಂಡ್ vs ಪಾಕಿಸ್ತಾನ | ಕೊಲಂಬೊ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 16 | ಆಸ್ಟ್ರೇಲಿಯಾ vs ಬಾಂಗ್ಲಾದೇಶ | ವಿಶಾಖಪಟ್ಟಣಂ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 17 | ದಕ್ಷಿಣ ಆಫ್ರಿಕಾ vs ಶ್ರೀಲಂಕಾ | ಕೊಲಂಬೊ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 18 | ನ್ಯೂಜಿಲೆಂಡ್ vs ಪಾಕಿಸ್ತಾನ | ಕೊಲಂಬೊ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 19 | ಭಾರತ vs ಇಂಗ್ಲೆಂಡ್ | ಇಂದೋರ್ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 20 | ಶ್ರೀಲಂಕಾ vs ಬಾಂಗ್ಲಾದೇಶ | ಕೊಲಂಬೊ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 21 | ದಕ್ಷಿಣ ಆಫ್ರಿಕಾ vs ಪಾಕಿಸ್ತಾನ | ಕೊಲಂಬೊ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 22 | ಆಸ್ಟ್ರೇಲಿಯಾ vs ಇಂಗ್ಲೆಂಡ್ | ಇಂದೋರ್ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 23 | ಭಾರತ vs ನ್ಯೂಜಿಲೆಂಡ್ | ಗುವಾಹಟಿ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 24 | ಪಾಕಿಸ್ತಾನ vs ಶ್ರೀಲಂಕಾ | ಕೊಲಂಬೊ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 25 | ಆಸ್ಟ್ರೇಲಿಯಾ vs ಶ್ರೀಲಂಕಾ | ಇಂದೋರ್ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 26 | ಇಂಗ್ಲೆಂಡ್ vs ನ್ಯೂಜಿಲೆಂಡ್ | ಗುವಾಹಟಿ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 27 | ಭಾರತ vs ಬಾಂಗ್ಲಾದೇಶ | ಬೆಂಗಳೂರು | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 29 | ಸೆಮಿಫೈನಲ್ 1 | ಗುವಾಹಟಿ/ಕೊಲಂಬೊ | ಮಧ್ಯಾಹ್ನ 3 ಗಂಟೆ |
| ಅಕ್ಟೋಬರ್ 30 | ಸೆಮಿಫೈನಲ್ 2 | ಬೆಂಗಳೂರು | ಮಧ್ಯಾಹ್ನ 3 ಗಂಟೆ |
| ನವೆಂಬರ್ 02 | ಫೈನಲ್ | ಕೊಲಂಬೊ/ಬೆಂಗಳೂರು | ಮಧ್ಯಾಹ್ನ 3 ಗಂಟೆ |
