AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2026: ಭಾರತದಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದ ಕೆನಡಾ

T20 World Cup 2026: ಕೆನಡಾ ತಂಡವು ಅಮೆರಿಕಾಸ್ ಪ್ರಾದೇಶಿಕ ಅರ್ಹತಾ ಫೈನಲ್‌ನಲ್ಲಿ ಬಹಾಮಾಸ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿ 2026ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದಿದೆ. ಬಹಾಮಾಸ್ ಕೇವಲ 57 ರನ್‌ಗಳಿಗೆ ಆಲೌಟ್ ಆಗಿತ್ತು, ಆದರೆ ಕೆನಡಾ ಸುಲಭವಾಗಿ ಗುರಿ ತಲುಪಿತು. ಈ ಜಯದೊಂದಿಗೆ ಕೆನಡಾ 2026ರ ವಿಶ್ವಕಪ್‌ನಲ್ಲಿ ಆಡುವ 13ನೇ ತಂಡವಾಗಿದೆ. ಉಳಿದ ತಂಡಗಳು ಯುರೋಪ್, ಆಫ್ರಿಕಾ ಮತ್ತು ಏಷ್ಯಾದ ಅರ್ಹತಾ ಪಂದ್ಯಗಳ ಮೂಲಕ ಆಯ್ಕೆಯಾಗಲಿವೆ.

T20 World Cup 2026: ಭಾರತದಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದ ಕೆನಡಾ
Canada
ಪೃಥ್ವಿಶಂಕರ
|

Updated on: Jun 22, 2025 | 8:11 PM

Share

ಒಂದೆಡೆ ಭಾರತ ಹಾಗೂ ಇಂಗ್ಲೆಂಡ್‌ (India vs England) ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದ್ದರೆ, ಇನ್ನೊಂದೆಡೆ 2026 ರಲ್ಲಿ ಭಾರತ ಹಾಗೂ ಶ್ರೀಲಂಕಾದ ಆತಿಥ್ಯದಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್‌ಗೆ (T20 World Cup) ಅರ್ಹತಾ ಸುತ್ತಿನ ಪಂದ್ಯಗಳು ನಡೆಯುತ್ತಿವೆ. ಅದರಂತೆ ಶನಿವಾರ ನಡೆದ ಅಮೆರಿಕಾಸ್ ಪ್ರಾದೇಶಿಕ ಅರ್ಹತಾ ಫೈನಲ್‌ನಲ್ಲಿ ಬಹಾಮಾಸ್ ತಂಡವನ್ನು ಮಣಿಸಿದ ಕೆನಡಾ (Canada) ತಂಡ 2026 ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅಮೆರಿಕಾಸ್ ಪ್ರಾದೇಶಿಕ ಅರ್ಹತಾ ಫೈನಲ್‌ನಲ್ಲಿ ಬಹಾಮಾಸ್ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿದ ಕೆನಡಾ, 20 ತಂಡಗಳ ನಡುವೆ ನಡೆಯಲ್ಲಿರುವ 2026 ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದ 13 ನೇ ತಂಡ ಎನಿಸಿಕೊಂಡಿದೆ.

ಈ 13 ತಂಡಗಳು ಅರ್ಹತೆ ಪಡೆದಿವೆ

ಕೆನಡಾವನ್ನು ಹೊರತುಪಡಿಸಿ, ಹಾಲಿ ಚಾಂಪಿಯನ್ ಭಾರತ, ಶ್ರೀಲಂಕಾ, ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಯುಎಸ್ಎ, ವೆಸ್ಟ್ ಇಂಡೀಸ್, ಐರ್ಲೆಂಡ್, ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ಕೂಡ ಈ 20 ತಂಡಗಳ ಟೂರ್ನಮೆಂಟ್‌ನಲ್ಲಿ ಆಡಲಿವೆ. ಇದೀಗ 13 ತಂಡಗಳು ಈ ಟೂರ್ನಿಗೆ ಅರ್ಹತೆ ಪಡೆದುಕೊಂಡಿದ್ದು, ಉಳಿದ ಏಳು ತಂಡಗಳಲ್ಲಿ ಎರಡು ಯುರೋಪಿಯನ್ ಕ್ವಾಲಿಫೈಯರ್‌ನಿಂದ (ಜುಲೈ 5 ರಿಂದ 11 ರವರೆಗೆ), ಎರಡು ಆಫ್ರಿಕನ್ ಕ್ವಾಲಿಫೈಯರ್‌ನಿಂದ (ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 4 ರವರೆಗೆ) ಮತ್ತು ಮೂರು ಏಷ್ಯಾ ಇಎಪಿ ಕ್ವಾಲಿಫೈಯರ್‌ನಿಂದ (ಅಕ್ಟೋಬರ್ 1 ರಿಂದ 17 ರವರೆಗೆ) ಆಯ್ಕೆಯಾಗಲಿವೆ

ಪಂದ್ಯ ಹೀಗಿತ್ತು

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಹಾಮಾಸ್ ತಂಡವು 57 ರನ್‌ಗಳಿಗೆ ಆಲೌಟ್ ಆಯಿತು. ಬಹಾಮಾಸ್‌ ತಂಡದ ಇಬ್ಬರು ಆಟಗಾರರು ಮಾತ್ರ 10 ರನ್‌ಗಳ ಗಡಿ ದಾಟಿದರು. ಜೊನಾಥನ್ ಬೆರ್ರಿ 10 ರನ್ ಗಳಿಸಿದರೆ, ಜ್ಯುವೆಲ್ ಗ್ಯಾಲಿಮೋರ್ 14* ರನ್‌ಗಳ ಕೊಡುಗೆ ನೀಡಿದರು. ಕೆನಡಾ ಪರ, ಅತ್ಯುತ್ತಮ ವೇಗದ ಬೌಲರ್ ಕಲೀಮ್ ಸನಾ ನಾಲ್ಕು ಓವರ್‌ಗಳಲ್ಲಿ ಆರು ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಪಡೆದರೆ 2 ಮೇಡನ್ ಓವರ್‌ಗಳನ್ನು ಸಹ ಎಸೆದರು. ಉಳಿದಂತೆ ಅಂಶ್ ಪಟೇಲ್ ನಾಲ್ಕು ಓವರ್‌ಗಳಲ್ಲಿ ಏಳು ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಪಡೆದರೆ, ಶಿವಂ ಶರ್ಮಾ ಮೂರು ವಿಕೆಟ್‌ಗಳನ್ನು ಪಡೆದರು.

T20 World Cup 2025: ಟಿ20 ವಿಶ್ವಕಪ್‌ ಗೆದ್ದ ಭಾರತಕ್ಕೆ ನಯಾ ಪೈಸಾ ಬಹುಮಾನ ನೀಡದ ಐಸಿಸಿ

ಇದಕ್ಕೆ ಉತ್ತರವಾಗಿ, ಕೆನಡಾ ತಂಡವು 6 ಓವರ್‌ಗಳಲ್ಲಿ 61 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಪಂದ್ಯವನ್ನು ಗೆದ್ದುಕೊಂಡಿತು. ದಿಲ್‌ಪ್ರೀತ್ ಬಾಜ್ವಾ ತಂಡದ ಪರ 36* ರನ್‌ಗಳ ಇನ್ನಿಂಗ್ಸ್ ಆಡಿದರೆ, ಹರ್ಷ್ ಥಾಕರ್ 14 ರನ್ ಗಳಿಸಿದರು. ಓಪನರ್ ಯುವರಾಜ್ ಸಮ್ರಾ 5 ರನ್ ಗಳಿಸಿದರೆ, ನಾಯಕ ನಿಕೋಲಸ್ ಕರ್ಟನ್ ಕೇವಲ ಎರಡು ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಬಹಾಮಾಸ್ ಪರ, ಕೆವೆರಾನ್ ಹಿಂಡ್ಸ್ ಮೂರು ಓವರ್‌ಗಳಲ್ಲಿ 33 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಪಡೆದರು. ಈ ಮೂಲಕ ಕೆನಡಾ ಎರಡನೇ ಬಾರಿಗೆ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದಿದೆ. ಇದಕ್ಕೂ ಮೊದಲು ತಂಡವು 2024 ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿಯೂ ಆಡಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ