Nicholas Pooran: ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿದ ಪೂರನ್

| Updated By: ಝಾಹಿರ್ ಯೂಸುಫ್

Updated on: Mar 01, 2022 | 5:03 PM

Nicholas Pooran : ಕಳೆದ ಸೀಸನ್​ ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದ ಪೂರನ್​ ಕಳಪೆ ಪ್ರದರ್ಶನ ನೀಡಿದ್ದರು. ಇದಾಗ್ಯೂ ಈ ಬಾರಿಯ ಮೆಗಾ ಹರಾಜಿನಲ್ಲಿ ವೆಸ್ಟ್ ಇಂಡೀಸ್ ಆಟಗಾರನನ್ನು ಸನ್​ರೈಸರ್ಸ್​ ಹೈದರಾಬಾದ್ ತಂಡವು ಬರೋಬ್ಬರಿ 10.75 ಕೋಟಿ ನೀಡಿ ಖರೀದಿಸಿದೆ.

Nicholas Pooran: ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿದ ಪೂರನ್
Nicholas Pooran
Follow us on

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಆರಂಭಕ್ಕೂ ಮುನ್ನ ವೆಸ್ಟ್ ಇಂಡೀಸ್ ದಾಂಡಿಗ ನಿಕೋಲಸ್ ಪೂರನ್ (Nicholas Pooran )ಅಬ್ಬರ ಮುಂದುವರೆದಿದೆ. ಇತ್ತೀಚೆಗಷ್ಟೇ ಟೀಮ್ ಇಂಡಿಯಾ ವಿರುದ್ದದ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಪೂರನ್ ಇದೀಗ ಟಿ10 ಬ್ಲಾಸ್ಟ್​ನಲ್ಲಿ ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ. ವೆಸ್ಟ್​ ಇಂಡೀಸ್​ನಲ್ಲಿ ನಡೆಯುತ್ತಿರುವ ಟ್ರಿನಿಡಾಡ್ T10 ಬ್ಲಾಸ್ಟ್‌ನಲ್ಲಿ ಪೂರನ್ ಲೆದರ್‌ಬ್ಯಾಕ್ ಜೈಂಟ್ಸ್‌ ಪರ ಆಡುತ್ತಿದ್ದಾರೆ. ಸ್ಕಾರ್ಲೆಟ್ ಐಬಿಸ್ ಸ್ಕಾರ್ಚರ್ಸ್ ತಂಡದ ವಿರುದ್ದ ಪಂದ್ಯದಲ್ಲಿ ಪೂರನ್ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿದ್ದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸ್ಕಾರ್ಚರ್ಸ್ ತಂಡವು 10 ಓವರ್‌ಗಳಲ್ಲಿ ಗೆಲ್ಲಲು 129 ರನ್‌ಗಳನ್ನು ಕಲೆಹಾಕಿತು. 60 ಎಸೆತಗಳಲ್ಲಿ 130 ರನ್​ಗಳ ಗುರಿ ಪಡೆದ ಲೆದರ್​ಬ್ಯಾಕ್ ತಂಡದ ಪರ ನಿಕೋಲಸ್ ಪೂರನ್ ಅಬ್ಬರಿಸಿದರು. 6 ಫೋರ್ ಹಾಗೂ 10 ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಪೂರನ್ ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ 8.3 ಓವರ್‌ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದರು. ಈ ಮೂಲಕ ಪೂರನ್ ತಮ್ಮ ಫಾರ್ಮ್​ ಅನ್ನು ಮತ್ತೊಮ್ಮೆ ಸಾಬೀತುಪಡಿಸಿದರು.

ಕಳೆದ ಸೀಸನ್​ ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದ ಪೂರನ್​ ಕಳಪೆ ಪ್ರದರ್ಶನ ನೀಡಿದ್ದರು. ಇದಾಗ್ಯೂ ಈ ಬಾರಿಯ ಮೆಗಾ ಹರಾಜಿನಲ್ಲಿ ವೆಸ್ಟ್ ಇಂಡೀಸ್ ಆಟಗಾರನನ್ನು ಸನ್​ರೈಸರ್ಸ್​ ಹೈದರಾಬಾದ್ ತಂಡವು ಬರೋಬ್ಬರಿ 10.75 ಕೋಟಿ ನೀಡಿ ಖರೀದಿಸಿದೆ. ಇದೀಗ ಬ್ಯಾಕ್ ಟು ಬ್ಯಾಕ್ ಹಾಫ್ ಸೆಂಚುರಿ ಹಾಗೂ ಸೆಂಚುರಿಗಳ ಮೂಲಕ ಗಮನ ಸೆಳೆದಿರುವ ಪೂರನ್ ಈ ಬಾರಿಯ ಐಪಿಎಲ್​ನಲ್ಲಿ ಅಬ್ಬರಿಸುವ ಮುನ್ಸೂಚನೆ ನೀಡಿದ್ದಾರೆ.

ಸಂಕ್ಷಿಪ್ತ ಸ್ಕೋರ್:
ಸ್ಕಾರ್ಲೆಟ್ ಐಬಿಸ್ ಸ್ಕಾರ್ಚರ್ಸ್ 10 ಓವರ್‌ಗಳಲ್ಲಿ 128/3 (ಟಿಯಾನ್ ವೆಬ್‌ಸ್ಟರ್ 54, ಎವಾರ್ಟ್ ನಿಕೋಲ್ಸನ್ 42, ಟೆರೆನ್ಸ್ ಹಿಂಡ್ಸ್ 1/26) ಲೆದರ್‌ಬ್ಯಾಕ್ ಜೈಂಟ್ಸ್ 8.3 ಓವರ್‌ಗಳಲ್ಲಿ 131/1 (ನಿಕೋಲಸ್ ಪೂರನ್ ಅಜೇಯ 101)

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?

(Nicholas Pooran scored a 37-ball century in a Trinidad T10 Blast game)