Team India: ಟೀಮ್ ಇಂಡಿಯಾಗೆ ಯಾರ ಅವಶ್ಯಕತೆಯಿದೆ ಎಂದು ತಿಳಿಸಿದ ಇರ್ಫಾನ್ ಪಠಾಣ್

Team India: ಆಯ್ಕೆ ಸಮಿತಿಯ ಮುಂದೆ ಅನೇಕ ಆಯ್ಕೆಗಳಿರಬಹುದು. ಆದರೆ ಅವರಿಗೆ ಅನುಭವದ ಕೊರತೆಯಿದೆ. ದೊಡ್ಡ ಟೂರ್ನಿಗಳಲ್ಲಿ ಅನುಭವಕ್ಕೆ ಮಣೆಹಾಕಬೇಕು.

Team India: ಟೀಮ್ ಇಂಡಿಯಾಗೆ ಯಾರ ಅವಶ್ಯಕತೆಯಿದೆ ಎಂದು ತಿಳಿಸಿದ ಇರ್ಫಾನ್ ಪಠಾಣ್
Irfan Pathan
Updated By: ಝಾಹಿರ್ ಯೂಸುಫ್

Updated on: Sep 08, 2022 | 1:55 PM

ನೀರಸ ಪ್ರದರ್ಶನದೊಂದಿಗೆ ಈ ಬಾರಿಯ ಏಷ್ಯಾಕಪ್ ಗೆಲ್ಲುವ ಟೀಮ್ ಇಂಡಿಯಾದ ಕನಸು ಕಮರಿದೆ. ಇಂತಹದೊಂದು ಹೀನಾಯ ಪ್ರದರ್ಶನಕ್ಕೆ ಟೀಮ್ ಇಂಡಿಯಾದ ಆಯ್ಕೆಯೇ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಅಂದರೆ ಕಳಪೆ ಟೀಮ್ ಅನ್ನು ಆಯ್ಕೆ ಮಾಡಿದ್ದರಿಂದ ಸಮತೋಲನದಿಂದ ಕೂಡಿದ ಪ್ಲೇಯಿಂಗ್ ಇಲೆವೆನ್​ ರೂಪಿಸಲು ಸಾಧ್ಯವಾಗಿಲ್ಲ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಮತ್ತೊಂದೆಡೆ ಟೀಮ್ ಇಂಡಿಯಾದ ಈ ನಿರಾಶದಾಯಕ ಪ್ರದರ್ಶನಕ್ಕೆ ಮುಖ್ಯ ಕಾರಣ ವೇಗದ ಬೌಲರ್​ಗಳ ಕೊರತೆ ಎಂಬ ಅಭಿಪ್ರಾಯವನ್ನು ಭಾರತ ತಂಡದ ಮಾಜಿ ಆಲ್​ರೌಂಡರ್ ಇರ್ಫಾನ್ ಪಠಾಣ್ ಮುಂದಿಟ್ಟಿದ್ದಾರೆ.

ಟೀಮ್ ಇಂಡಿಯಾ ಮೊದಲ ಸುತ್ತಿನಲ್ಲಿ ಮೂವರು ವೇಗದ ಬೌಲರ್‌ಗಳೊಂದಿಗೆ ಕಣಕ್ಕಿಳಿದಿದತ್ತು. ಆದರೆ ಸೂಪರ್-4 ಹಂತದಲ್ಲಿ ರೋಹಿತ್ ಶರ್ಮಾ ಇಬ್ಬರು ಸ್ಪೆಷಲಿಸ್ಟ್ ಬೌಲರ್‌ಗಳು ಮತ್ತು ಆಲ್‌ರೌಂಡರ್‌ಗೆ ಆದ್ಯತೆ ನೀಡಿದ್ದರು. ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ ಮತ್ತು ಅರ್ಷದೀಪ್ ಸಿಂಗ್ ಸೂಪರ್-4 ಹಂತದಲ್ಲಿ ಪರಿಣಾಮಕಾರಿಯಾಗಿರಲಿಲ್ಲ. ಉತ್ತಮವಾಗಿ ಬೌಲಿಂಗ್ ಮಾಡಿದ್ದರೂ ಹೆಚ್ಚಿನ ರನ್​ ಬಿಟ್ಟುಕೊಟ್ಟಿದ್ದರು. ಅದರಲ್ಲೂ ಸೂಪರ್​-4 ಹಂತದ ಎರಡೂ ಪಂದ್ಯಗಳಲ್ಲಿ ಟೀಮ್ ಇಂಡಿಯಾದ ಬೌಲರ್‌ಗಳು ಪವರ್‌ಪ್ಲೇಯ ಮೊದಲ ಆರು ಓವರ್‌ಗಳಲ್ಲಿ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು.

ಇದನ್ನೇ ಪ್ರಸ್ತಾಪಿಸಿರುವ ಇರ್ಫಾನ್ ಪಠಾಣ್, ಟೀಮ್ ಇಂಡಿಯಾದಲ್ಲಿ ಉತ್ತಮ ಗುಣಮಟ್ಟದ ವೇಗದ ಬೌಲರ್​ಗಳ ಕೊರತೆಯಿದೆ. ನನ್ನ ಪ್ರಕಾರ ತಂಡದಲ್ಲಿ ಮೊಹಮ್ಮದ್ ಶಮಿಗೆ ಸ್ಥಾನ ನೀಡಬೇಕಿತ್ತು. ಏಕೆಂದರೆ ಶಮಿ ಹೊಸ ಚೆಂಡಿನಲ್ಲಿ ವಿಕೆಟ್ ಕಬಳಿಸುವುದರಲ್ಲಿ ನಿಪುಣರು. ಅವರನ್ನು ಆಯ್ಕೆ ಮಾಡದೇ ಟೀಮ್ ಇಂಡಿಯಾ ತಪ್ಪು ಮಾಡಿತು ಎಂದು ಪಠಾಣ್ ತಿಳಿಸಿದ್ದಾರೆ.

ಇದನ್ನೂ ಓದಿ
Team India: ಟೀಮ್ ಇಂಡಿಯಾ ಆಟಗಾರರ ಜೊತೆ ಕಾಣಿಸಿಕೊಂಡ ಸ್ಟಾರ್ ಕ್ರಿಕೆಟಿಗನ ಮಗ..!
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಟೀಮ್ ಇಂಡಿಯಾ 6ನೇ ಬೌಲರ್​ನ್ನೇ ಆಯ್ಕೆ ಮಾಡಿರಲಿಲ್ಲ. ಐವರು ಬೌಲರ್‌ಗಳಿಂದ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ. ಇದೀಗ ಶಮಿಯನ್ನು ವಿಶ್ವಕಪ್ ತಂಡಕ್ಕೆ ಸೇರಿಸಿಕೊಳ್ಳುವ ಅವಕಾಶ ಟೀಮ್ ಇಂಡಿಯಾ ಮುಂದಿದೆ. ನೀವು ಹೊಸ ಚೆಂಡನಲ್ಲಿ ಬೌಲ್ ಮಾಡುವ ವೇಗಿಯನ್ನು ಹುಡುಕುತ್ತಿದ್ದ, ಮೊಹಮ್ಮದ್ ಶಮಿಗಿಂತ ಉತ್ತಮ ಆಯ್ಕೆ ಇನ್ನೊಂದಿಲ್ಲ ಎಂದು ಇರ್ಫಾನ್ ಪಠಾಣ್ ತಿಳಿಸಿದ್ದಾರೆ.

ಆಯ್ಕೆ ಸಮಿತಿಯ ಮುಂದೆ ಅನೇಕ ಆಯ್ಕೆಗಳಿರಬಹುದು. ಆದರೆ ಅವರಿಗೆ ಅನುಭವದ ಕೊರತೆಯಿದೆ. ದೊಡ್ಡ ಟೂರ್ನಿಗಳಲ್ಲಿ ಅನುಭವಕ್ಕೆ ಮಣೆಹಾಕಬೇಕು. ಅನುಭವ ಮತ್ತು ಫಾರ್ಮ್‌ನಲ್ಲಿರುವ ಮೊಹಮ್ಮದ್ ಶಮಿ ಟಿ20 ವಿಶ್ವಕಪ್​ಗೆ ನನ್ನ ಪ್ರಕಾರ ಉತ್ತಮ ಆಯ್ಕೆ ಎಂದು ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.