AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia Cup 2022: ಊಹೆಗೂ ನಿಲುಕದ ಪ್ರದರ್ಶನ; ವೀರೋಚಿತ ಸೋಲುಂಡು ಮೈದಾನದಲ್ಲೇ ಕಣ್ಣೀರಿಟ್ಟ ಅಫ್ಘಾನ್ ಕ್ರಿಕೆಟಿಗರು

Asia Cup 2022: ನಿನ್ನೆಯ ಪಂದ್ಯದಲ್ಲಿ ಪಾಕಿಸ್ತಾನ ಜಯಗಳಿಸಿದ ಬಳಿಕ ಪಾಕ್ ಆಟಗಾರರ ಸಂಭ್ರಮ ಮಗುಲು ಮುಟ್ಟಿತ್ತು. ಎಲ್ಲರೂ ಮೈದಾನದಲ್ಲಿ ಹುಚ್ಚೆದ್ದು ಕುಣಿದರು. ಅದೇ ವೇಳೆ ಅಫ್ಘಾನಿಸ್ತಾನ ಆಟಗಾರರು ಕೊನೆಯವರೆಗೂ ಹೋರಾಡಿ ಸೋತಿದ್ದಕ್ಕೆ ಮೈದಾನದಲ್ಲೇ ಕಣ್ಣೀರಿಟ್ಟರು.

Asia Cup 2022: ಊಹೆಗೂ ನಿಲುಕದ ಪ್ರದರ್ಶನ; ವೀರೋಚಿತ ಸೋಲುಂಡು ಮೈದಾನದಲ್ಲೇ ಕಣ್ಣೀರಿಟ್ಟ ಅಫ್ಘಾನ್ ಕ್ರಿಕೆಟಿಗರು
ಮೈದಾನದಲ್ಲೇ ಕಣ್ಣೀರಿಟ್ಟ ಅಫ್ಘಾನ್ ತಂಡ
TV9 Web
| Updated By: ಪೃಥ್ವಿಶಂಕರ|

Updated on:Sep 08, 2022 | 2:23 PM

Share

ಬುಧವಾರ ರಾತ್ರಿ ನಡೆದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಈ ರೋಚಕ ಪಂದ್ಯ ಕೊನೆಯ ಓವರ್‌ವರೆಗೂ ಎಲ್ಲರಲ್ಲೂ ಕುತೂಹಲ ಹೆಚ್ಚಿಸಿತ್ತು. ಪಂದ್ಯ ಯಾರ ಪಾಲಾಗುವುದೋ ಎನ್ನುವ ಪರಿಸ್ಥಿತಿ ಇತ್ತು. ಆದರೆ ಪಾಕ್ ಬೌಲರ್ ಅತ್ಯುತ್ತಮ ಪ್ರದರ್ಶನ ನೀಡಿದ ಕಾರಣ ಈ ಪಂದ್ಯವನ್ನು ಪಾಕಿಸ್ತಾನ ಗೆದ್ದುಕೊಂಡಿತು. ಈ ಮೂಲಕ ಏಷ್ಯಾಕಪ್ (Asia Cup 2022) ನ ಫೈನಲ್ ಪಂದ್ಯ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ನಡೆಯಲಿದ್ದು, ಯಾರು ಚಾಂಪಿಯನ್ ಆಗಲಿದ್ದಾರೆ ಎಂಬುದು ಭಾನುವಾರವಷ್ಟೇ ತಿಳಿಯಲಿದೆ. ಈ ರೋಚಕ ಜಯದೊಂದಿಗೆ ಪಾಕ್ ಪ್ರಶಸ್ತಿ ಸುತ್ತಿಗೆ ಕಾಲಿಟ್ಟರೆ, ಟೀಂ ಇಂಡಿಯಾ ಏಷ್ಯಾಕಪ್‌ನಿಂದ ಹೊರನಡೆದಿದೆ. ಹೀಗಾಗಿ ಭಾರತ ತಂಡ ಇಂದು ಅಫ್ಘಾನ್ ಎದುರು ಔಪಚಾರಿಕವಾಗಿ ಪಂದ್ಯ ಆಡಬೇಕಿದೆ.

ನಿನ್ನೆಯ ಪಂದ್ಯದಲ್ಲಿ ಪಾಕಿಸ್ತಾನ ಜಯಗಳಿಸಿದ ಬಳಿಕ ಪಾಕ್ ಆಟಗಾರರ ಸಂಭ್ರಮ ಮಗುಲು ಮುಟ್ಟಿತ್ತು. ಎಲ್ಲರೂ ಮೈದಾನದಲ್ಲಿ ಹುಚ್ಚೆದ್ದು ಕುಣಿದರು. ಅದೇ ವೇಳೆ ಅಫ್ಘಾನಿಸ್ತಾನ ಆಟಗಾರರು ಕೊನೆಯವರೆಗೂ ಹೋರಾಡಿ ಸೋತಿದ್ದಕ್ಕೆ ಮೈದಾನದಲ್ಲೇ ಕಣ್ಣೀರಿಟ್ಟರು. ಹಲವು ಆಟಗಾರರು ಅಳುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದಕ್ಕೆ ಕಾರಣ ಈ ಯುವ ತಂಡ ನೀಡಿದ ಅದ್ಭುತ ಪ್ರದರ್ಶನ. ಪಂದ್ಯ ಆರಂಭಕ್ಕೂ ಮುನ್ನ ಪಾಕಿಸ್ತಾನ ಸುಲಭವಾಗಿ ಗೆಲ್ಲುತ್ತದೆ ಎಂದು ಎಲ್ಲರೂ ಊಹಿಸಿದ್ದರು. ಅದಕ್ಕೆ ತಕ್ಕಂತೆ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನ್ ತಂಡ ಕಡಿಮೆ ಮೊತ್ತ ಗಳಿಸಿದಾಗ ಎಲ್ಲರಿಗೂ ಪಾಕ್ ಗೆಲುವು ಖಚಿತ ಎನಿಸಿತ್ತು. ಆದರೆ ಎಲ್ಲರ ಊಹೆಯನ್ನು ಹುಸಿ ಮಾಡಿದ ಅಫ್ಘಾನ್ ತಂಡ ಕೊನೆಯ ಓವರ್​ವರೆಗೂ ವೀರಾವೇಷದ ಹೋರಾಟ ನೀಡಿತು.

ಇದನ್ನೂ ಓದಿ
Image
Asia cup 2022: ಪಾಕ್ ವಿರುದ್ಧ ಅಫ್ಘನ್​ಗೆ ರೋಚಕ ಸೋಲು; ಅಧಿಕೃತವಾಗಿ ಏಷ್ಯಾಕಪ್​ನಿಂದ ಭಾರತ ಔಟ್..!
Image
Asia cup 2022: ‘ಟೆನ್ಷನ್ ತೆಗೆದುಕೊಳ್ಳಬೇಡಿ, ಭಾರತ- ಪಾಕಿಸ್ತಾನ ಫೈನಲ್ ಆಡಲಿವೆ’; ರೋಹಿತ್ ಶರ್ಮಾ
Image
Asia cup 2022: ಲಂಕಾ ವಿರುದ್ಧ ಸೋತರೂ ಏಷ್ಯಾಕಪ್​ನಲ್ಲಿ ಸಚಿನ್-ಅಫ್ರಿದಿ ದಾಖಲೆ ಮುರಿದ ರೋಹಿತ್ ಶರ್ಮಾ..!

ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ಪಾಕಿಸ್ತಾನದ ವಿರುದ್ಧ ಗೆಲ್ಲಲು 130 ರನ್‌ಗಳ ಗುರಿ ನೀಡಿತು. ಅಫ್ಘಾನಿಸ್ತಾನದ ಸ್ಕೋರ್ ಕಡಿಮೆ ಇದ್ದ ಕಾರಣ, ಅವರು ಹೇಗೆ ಬೌಲಿಂಗ್ ಮಾಡುತ್ತಾರೆ ಎಂಬುದರತ್ತ ಎಲ್ಲರೂ ಗಮನ ಹರಿಸಿದರು. ಕ್ರಿಕೆಟ್ ಪಂಡಿತರ ಯೋಚನೆಯನ್ನೇ ಬುಡಮೇಲು ಮಾಡಿದ್ದ ಅಫ್ಘಾನ್ ಬೌಲರ್‌ಗಳು ಸ್ಥಿರವಾಗಿ ಬೌಲಿಂಗ್ ಮಾಡಿ ಪಂದ್ಯವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದರು. ಆದರೆ ಕೊನೆಯ ಓವರ್​ನಲ್ಲಿ ಅಫ್ಘಾನ್ ಬೌಲರ್ ಮಾಡಿದ ಯಡವಟ್ಟಿನಿಂದ ಅಫ್ಘಾನ್ ತಂಡ ಸೋಲನುಭವಿಸಿ 2022ರ ಏಷ್ಯಾಕಪ್‌ನಿಂದ ಹೊರಬಿತ್ತು.

ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 129 ರನ್ ಗಳಿಸಿತು. ಈ ಗುರಿಯನ್ನು ಪಾಕಿಸ್ತಾನ ಇನ್ನೂ 4 ಎಸೆತಗಳು ಬಾಕಿ ಇರುವಂತೆಯೇ 9 ವಿಕೆಟ್‌ಗಳ ಅಂತರದಲ್ಲಿ ಸಾಧಿಸಿತು. ಪಾಕಿಸ್ತಾನ ಪರ ಇಫ್ತಿಕರ್ ಅಹ್ಮದ್ 30 ರನ್, ಮೊಹಮ್ಮದ್ ರಿಜ್ವಾನ್ 20 ರನ್ ಮತ್ತು ಶಾದಾಬ್ ಖಾನ್ 36 ರನ್ ಗಳಿಸಿದರು. ಅಫ್ಘಾನಿಸ್ತಾನ ತಂಡದ ಪರ ಇಬ್ರಾಹಿಂ ಝದ್ರಾನ್ 37 ಎಸೆತಗಳಲ್ಲಿ 35 ರನ್ ಗಳಿಸಿ ಮಹತ್ವದ ಸಾಧನೆ ಮಾಡಿದರು.

Published On - 2:23 pm, Thu, 8 September 22