Asia cup 2022: ಪಾಕ್ ವಿರುದ್ಧ ಅಫ್ಘನ್​ಗೆ ರೋಚಕ ಸೋಲು; ಅಧಿಕೃತವಾಗಿ ಏಷ್ಯಾಕಪ್​ನಿಂದ ಭಾರತ ಔಟ್..!

Asia cup 2022: ಟೀಂ ಇಂಡಿಯಾ ಟೂರ್ನಿಯ ಫೈನಲ್ ತಲುಪುವ ಅವಕಾಶ ಕಳೆದುಕೊಂಡು ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಪಂದ್ಯದಲ್ಲಿ ಉಳಿಯಲು ಟೀಮ್ ಇಂಡಿಯಾಗೆ ಅಫ್ಘಾನಿಸ್ತಾನದ ಗೆಲುವು ಅಗತ್ಯವಾಗಿತ್ತು ಆದರೆ ಪಾಕಿಸ್ತಾನ ಇದಕ್ಕೆ ಅವಕಾಶ ನೀಡಲಿಲ್ಲ.

Asia cup 2022: ಪಾಕ್ ವಿರುದ್ಧ ಅಫ್ಘನ್​ಗೆ ರೋಚಕ ಸೋಲು; ಅಧಿಕೃತವಾಗಿ ಏಷ್ಯಾಕಪ್​ನಿಂದ ಭಾರತ ಔಟ್..!
Follow us
| Updated By: ಪೃಥ್ವಿಶಂಕರ

Updated on:Sep 07, 2022 | 11:20 PM

ಏಷ್ಯಾಕಪ್‌ನಲ್ಲಿ (Asia Cup 2022) ಭಾರತ ತಂಡದ ಪ್ರಶಸ್ತಿ ನಿರೀಕ್ಷೆ ಕೊನೆಯ ಪಂದ್ಯಕ್ಕೂ ಮುನ್ನವೇ ಕೊನೆಗೊಂಡಿದೆ. ಅತಿ ಹೆಚ್ಚು 7 ಬಾರಿ ಏಷ್ಯಾಕಪ್ ಪ್ರಶಸ್ತಿ ಗೆದ್ದು ಹಾಲಿ ಚಾಂಪಿಯನ್ ಆಗಿರುವ ಭಾರತ ತಂಡ (Team India) ಸೂಪರ್ ಫೋರ್ ಹಂತದಲ್ಲಿ ಸತತ ಎರಡು ಸೋಲುಗಳ ಭಾರವನ್ನು ಹೊರಬೇಕಾಗಿದೆ. ಟೀಂ ಇಂಡಿಯಾ ಟೂರ್ನಿಯ ಫೈನಲ್ ತಲುಪುವ ಅವಕಾಶ ಕಳೆದುಕೊಂಡು ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಪಂದ್ಯದಲ್ಲಿ ಉಳಿಯಲು ಟೀಮ್ ಇಂಡಿಯಾಗೆ ಅಫ್ಘಾನಿಸ್ತಾನದ ಗೆಲುವು ಅಗತ್ಯವಾಗಿತ್ತು ಆದರೆ ಪಾಕಿಸ್ತಾನ ಇದಕ್ಕೆ ಅವಕಾಶ ನೀಡಲಿಲ್ಲ.

ಅಫ್ಘಾನಿಸ್ತಾನ ಗೆಲ್ಲಲೇ ಬೇಕಿತ್ತು

ದುಬೈನಲ್ಲಿ ಮೊದಲು ಪಾಕಿಸ್ತಾನ ಮತ್ತು ನಂತರ ಶ್ರೀಲಂಕಾದ ಎದುರು ಸೋಲು ಟೀಮ್ ಇಂಡಿಯಾ ಫೈನಲ್ ತಲುಪುವ ನಿರೀಕ್ಷೆಯನ್ನು ಈಗಾಗಲೇ ಮಸುಕಾಗಿಸಿತ್ತು. ಭಾರತದ ಭರವಸೆಯು ಪಾಕಿಸ್ತಾನದ ಸೋಲಿನ ಮೇಲೆ ನಿಂತಿತ್ತು. ಹೀಗಾಗಿ ಅಫ್ಘಾನಿಸ್ತಾನ ಮೊದಲು ಪಾಕ್ ವಿರುದ್ಧ ಗೆಲ್ಲಬೇಕಾಗಿತ್ತು, ನಂತರ ಟೀಮ್ ಇಂಡಿಯಾ ಗುರುವಾರ ಅಫ್ಘಾನಿಸ್ತಾನವನ್ನು ಸೋಲಿಸಬೇಕಿತ್ತು. ಆಗ ಮಾತ್ರ ಟೀಂ ಇಂಡಿಯಾಕ್ಕೆ ಫೈನಲ್​ಗೇರುವ ಅವಕಾಶವಿರುತ್ತಿತ್ತು. ಇಂದು ಅಫ್ಘಾನಿಸ್ತಾನ ಗೆದ್ದಿದ್ದರೆ ಟೀಂ ಇಂಡಿಯಾಗೆ ಇನ್ನೂ ಒಂದು ಅವಕಾಶ ಸಿಗುತ್ತಿತ್ತು ಆದರೆ ಅದು ಸಾಧ್ಯವಾಗಲಿಲ್ಲ.

ಫೈನಲ್‌ನಲ್ಲಿ ಪಾಕಿಸ್ತಾನ-ಶ್ರೀಲಂಕಾ

ಬುಧವಾರ, ಸೆಪ್ಟೆಂಬರ್ 7 ರಂದು ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನವನ್ನು 1 ವಿಕೆಟ್‌ನಿಂದ ಸೋಲಿಸಿ ಪಂದ್ಯಾವಳಿಯ ಫೈನಲ್‌ನಲ್ಲಿ ಶ್ರೀಲಂಕಾದೊಂದಿಗೆ ಸೆಣಸಲು ಅಧಿಕೃತ ಟಿಕೆಟ್ ಕಾಯ್ದಿರಿಸಿತು. ಸೆಪ್ಟೆಂಬರ್ 11 ಭಾನುವಾರದಂದು ಇಬ್ಬರ ನಡುವೆ ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಅಫ್ಘಾನಿಸ್ತಾನದ ಬ್ಯಾಟ್ಸ್‌ಮನ್‌ಗಳು ತೀವ್ರ ನಿರಾಸೆ ಮೂಡಿಸಿದ್ದು, ಮೊದಲು ಬ್ಯಾಟ್ ಮಾಡಿದ ತಂಡ 20 ಓವರ್‌ಗಳಲ್ಲಿ 129 ರನ್ ಗಳಿಸಲಷ್ಟೇ ಶಕ್ತವಾಯಿತು. ಅಫ್ಘಾನಿಸ್ತಾನ ಖಂಡಿತವಾಗಿಯೂ ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಬಲವನ್ನು ಪ್ರದರ್ಶಿಸಿ ಪಾಕಿಸ್ತಾನಕ್ಕೆ ಸೋಲಿನ ಆಘಾತ ನೀಡಲು ಜಿದ್ದಾಜಿದ್ದಿನ ಹೋರಾಟ ನೀಡಿತು. ಆದರೆ ಅಂತಿಮವಾಗಿ ಕಡಿಮೆ ಸ್ಕೋರ್ ಅಫ್ಘಾನ್ ತಂಡಕ್ಕೆ ಗೆಲುವು ನೀಡಲಿಲ್ಲ.

ಭಾರತ-ಅಫ್ಘಾನಿಸ್ತಾನ ಔಟ್

ಈ ಮೂಲಕ 2016 ಮತ್ತು 2018ರಲ್ಲಿ ಸತತ ಎರಡು ಬಾರಿ ಟೂರ್ನಿಯ ಪ್ರಶಸ್ತಿ ಗೆದ್ದಿದ್ದ ಭಾರತ ತಂಡದ ಫೈನಲ್ ತಲುಪುವ ಆಸೆ ಕೊನೆಗೊಂಡಿತು. ಭಾರತ ಮಾತ್ರವಲ್ಲ, ಅಫ್ಘಾನಿಸ್ತಾನದ ಪ್ರಯಾಣವೂ ಇಲ್ಲಿಗೆ ಕೊನೆಗೊಂಡಿತು. ಅಫ್ಘಾನಿಸ್ತಾನವು ಪಂದ್ಯಾವಳಿಯಲ್ಲಿ ಅದ್ಭುತ ಆರಂಭವನ್ನು ಮಾಡಿ, ಶ್ರೀಲಂಕಾ ಮತ್ತು ಬಾಂಗ್ಲಾದೇಶವನ್ನು ಸೋಲಿಸಿ ಸೂಪರ್ ಫೋರ್‌ಗೆ ಪ್ರವೇಶಿಸಿತು. ಆದರೆ ಸೂಪರ್ 4 ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಇದೀಗ ಭಾರತ ಮತ್ತು ಅಫ್ಘಾನಿಸ್ತಾನ ತಮ್ಮ ಕೊನೆಯ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

Published On - 11:03 pm, Wed, 7 September 22

Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು