AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asif Ali: ಅಫ್ಘಾನ್ ಬೌಲರ್​ಗೆ ಬ್ಯಾಟ್​ನಿಂದ ಹೊಡೆಯಲು ಬಂದ ಅಸೀಫ್ ಅಲಿ: ಬ್ಯಾನ್ ಮಾಡುವಂತೆ ಒತ್ತಾಯ

Pakistan vs Afghanistan, Asia Cup 2022: ಪಾಕಿಸ್ತಾನ ಬ್ಯಾಟರ್ ಹಾಗೂ ಅಫ್ಘಾನಿಸ್ತಾನ ಬೌಲರ್ ನಡುವೆ ಜಗಳ ನಡೆದು ಬ್ಯಾಟರ್ ಅಸೀಫ್ ಅಲಿ (Asif Ali) ಬೌಲರ್ ಫರೀದ್ ಅಹ್ಮದ್ ಮಲಿಕ್ ಅವರಿಗೆ ಬ್ಯಾಟ್​ನಿಂದ ಹೊಡೆಯಲು ಮುಂದಾದ ಸನ್ನಿವೇಶ ಜರುಗಿದೆ.

Asif Ali: ಅಫ್ಘಾನ್ ಬೌಲರ್​ಗೆ ಬ್ಯಾಟ್​ನಿಂದ ಹೊಡೆಯಲು ಬಂದ ಅಸೀಫ್ ಅಲಿ: ಬ್ಯಾನ್ ಮಾಡುವಂತೆ ಒತ್ತಾಯ
Asif Ali vs Fareed Ahmad fight
TV9 Web
| Updated By: Vinay Bhat|

Updated on: Sep 08, 2022 | 10:42 AM

Share

ಏಷ್ಯಾಕಪ್​ನಲ್ಲಿ ಬುಧವಾರ ರಾತ್ರಿ ನಡೆದ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ (Pakistan vs Afghanistan) ನಡುವಣ ಪಂದ್ಯ ರಣರೋಚಕವಾಗಿತ್ತು. ಕೊನೆಯ ಓವರ್ ವರೆಗೂ ತುದಿಗಾಲಿನಲ್ಲಿ ನಿಲ್ಲಿಸಿದ್ದ ಮ್ಯಾಚ್​ನಲ್ಲಿ ಪಾಕ್ 1 ವಿಕೆಟ್​ಗಳ ರೋಚಕ ಗೆಲುವು ಕಂಡು ಏಷ್ಯಾಕಪ್ 2022 ಫೈನಲ್​ಗೆ ಪ್ರವೇಶ ಪಡೆದಿದೆ. ಚೊಚ್ಚಲ ಪ್ರಶಸ್ತಿ ಗೆಲ್ಲುವ ಅಫ್ಘಾನ್ ತಂಡದ ಕನಸು ಭಗ್ನವಾಯಿತು. ಇದರ ನಡುವೆ ಪಂದ್ಯದ ಮಧ್ಯೆ ಕ್ರಿಕೆಟ್ ಲೋಕದಲ್ಲಿ ನಾಚಿಕೆ ಪಡುವಂತಹ ಘಟನೆ ನಡೆಯಿತು. ಪಾಕಿಸ್ತಾನ ಬ್ಯಾಟರ್ ಹಾಗೂ ಅಫ್ಘಾನಿಸ್ತಾನ ಬೌಲರ್ ನಡುವೆ ಜಗಳ ನಡೆದು ಬ್ಯಾಟರ್ ಅಸೀಫ್ ಅಲಿ (Asif Ali) ಬೌಲರ್ ಫರೀದ್ ಅಹ್ಮದ್ ಮಲಿಕ್ (Fareed Ahmad Malik) ಅವರಿಗೆ ಬ್ಯಾಟ್​ನಿಂದ ಹೊಡೆಯಲು ಮುಂದಾದ ಸನ್ನಿವೇಶ ಜರುಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು ಅನೇಕ ಅಭಿಪ್ರಾಯಗಳು ಕೇಳಿಬರುತ್ತಿದೆ.

ಅಫ್ಘಾನಿಸ್ತಾನ ನೀಡಿದ್ದ 129 ರನ್​​​ಗಳ ಸುಲಭ ಗುರಿ ಬೆನ್ನಟ್ಟಿದ ಪಾಕಿಸ್ತಾನ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಕ್ರೀಸ್​ನಲ್ಲಿ ನಿತ್ತು ಆಡುವ ಬ್ಯಾಟರ್ ಇರಲಿಲ್ಲ. ಈ ಸಂದರ್ಭ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಆಸೀಫ್​ ಅಲಿ ಕೇವಲ 7 ಎಸೆತಗಳಲ್ಲಿ 2 ಸಿಕ್ಸರ್ ಸಿಡಿಸಿ 18 ರನ್ ಚಚ್ಚಿ ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ, ಇವರು ವಿನ್ನಿಂಗ್ ಶಾಟ್ ಹೊಡೆಯಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ
Image
IND vs AFG: ಭಾರತ-ಅಫ್ಘಾನ್ ನಡುವೆ ಔಪಚಾರಿಕ ಪಂದ್ಯ: ರೋಹಿತ್ ಪಡೆಯಲ್ಲಿ 3 ಬದಲಾವಣೆ?
Image
Anil Kumble: ‘ವಿಕ್ರಾಂತ್​ ರೋಣ’ ಚಿತ್ರ ವೀಕ್ಷಿಸಿ, ಸುದೀಪ್​ ನಟನೆ ಬಗ್ಗೆ ವಿಮರ್ಶೆ ತಿಳಿಸಿದ ಅನಿಲ್​ ಕುಂಬ್ಳೆ
Image
Asia cup 2022: ಪಾಕ್ ವಿರುದ್ಧ ಅಫ್ಘನ್​ಗೆ ರೋಚಕ ಸೋಲು; ಅಧಿಕೃತವಾಗಿ ಏಷ್ಯಾಕಪ್​ನಿಂದ ಭಾರತ ಔಟ್..!
Image
Duleep Trophy 2022: ಈ 6 ನಾಯಕರ ನಡುವಿನ ಕದನ, ಯಾವ ತಂಡದ ಭವಿಷ್ಯ ಯಾರ ಕೈಯಲ್ಲಿದೆ ಗೊತ್ತಾ?

19ನೇ ಓವರ್​ನ ಫರೀದ್ ಅಹ್ಮದ್ ಬೌಲಿಂಗ್​ನ ಕೊನೆಯ ಎಸೆತದಲ್ಲಿ ಅಸೀಫ್ ಅಲಿ ಔಟಾದರು. ಈ ಸಂದರ್ಭ ಬೌಲರ್ ಸಂಭ್ರಮಿಸುತ್ತಿರುವಾಗ ತಾಳ್ಮೆ ಕಳೆದುಕೊಂಡ ಅಲಿ, ಅಫ್ಘಾನ್​ ಪ್ಲೇಯರ್‌ಗೆ ಬ್ಯಾಟ್​​ನಿಂದ ಹೊಡೆಯಲು ಮುಂದಾಗಿದ್ದಾರೆ. ಆಗ ಮಧ್ಯಪ್ರವೇಶ ಮಾಡಿದ ಅಂಪೈರ್​​ಗಳು ಹಾಗೂ ಸಹ ಆಟಗಾರರು ಸನ್ನಿವೇಶ ತಿಳಿಗೊಳಿಸಿದ ಘಟನೆ ನಡೆಯಿತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಸೀಫ್ ಅಲಿ ನಡವಳಿಕೆಗೆ ಆಕ್ರೋಶ ವ್ಯಕ್ತವಾಗುತ್ತಿದೆ.

ಅಸಿಫ್ ಅಲಿ ಬ್ಯಾಟ್ ಎತ್ತಿ ಬೌಲರ್​ಗೆ ಹೊಡೆಯಲು ಮುಂದಾಗಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆ ಕೂಡ ಕೆಲ ಬಾರಿ ಈ ರೀತಿಯ ಘಟನೆ ನಡೆದಿದ್ದು, ಇತರೆ ಆಟಗಾರರು ಹಾಗೂ ಅಂಪೈರ್ ಮಧ್ಯಪ್ರವೇಶಿಸಿ ವಾತಾವರಣ ತಿಳಿಗೊಳಿಸಿದ್ದರು. ಇದೀಗ ಅಸೀಫ್ ಅಲಿ ಅವರನ್ನು ಐಸಿಸಿ ಕ್ರಿಕೆಟ್​ನಿಂದ ನಿಷೇಧ ಮಾಡಬೇಕು ಎಂದು ಟ್ವಿಟರ್​ನಲ್ಲಿ ಅಭಿಮಾನಿಗಳು ಅಭಿಯಾನ ಶುರು ಮಾಡಿದ್ದಾರೆ.

ಮತ್ತೊಂದೆಡೆ, ಪಂದ್ಯ ವೀಕ್ಷಣೆಗೆ ಆಗಮಿಸಿದ್ದ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ಅಭಿಮಾನಿಗಳ ನಡುವೆ ಗಲಾಟೆ ನಡೆದಿದೆ. ಪಾಕಿಸ್ತಾನ 1 ವಿಕೆಟ್​ಗಳ ರೋಚಕ ಗೆಲುವು ಕಾಣುತ್ತಿದ್ದಂತೆ ಕೆಲವರು ತಾವು ಕುಳಿತುಕೊಂಡಿದ್ದ ಚೇರ್​ ಎತ್ತಿ, ಇತರರ ಮೇಲೆ ಎಸೆದಿದ್ದಾರೆ. ಇದರಿಂದ ಅನೇಕರಿಗೆ ಗಾಯಗಳಾಗಿದ್ದು ಈ ಘಟನೆಯ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಶಾರ್ಜಾ ಕ್ರಿಕೆಟ್​ ಮೈದಾನದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 20 ಓವರ್​ಗಳಲ್ಲಿ ಕೇವಲ 129 ರನ್​​​ಗಳಿಸಿತಷ್ಟೆ. ತಂಡದ ಪರ ಇಬ್ರಾಹಿಂ ಜಾರ್ಡನ್ 35 ರನ್ ಗಳಿಸಿದ್ದು ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿತ್ತು. ಪಾಕ್​ ಪರ ಹ್ಯಾರಿಸ್ ರೌಫ್​ 2 ವಿಕೆಟ್​, ನಸೀಮ್​ ಶಾ, ಮೊಹಮ್ಮದ್​, ನವಾಜ್​ ಹಾಗೂ ಶಹ್ಬಾದ್​ ಖಾನ್ ತಲಾ 1 ವಿಕೆಟ್ ಪಡೆದುಕೊಂಡರು.

ಇತ್ತ 130 ರನ್​ಗಳ ಗುರಿ ಬೆನ್ನಟ್ಟಿದ ಪಾಕ್​ ಕೂಡ ವಿಕೆಟ್ ಕಳೆದುಕೊಂಡೆ ಸಾಗಿತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿದ ಅಹ್ಮದ್(30) ಹಾಗೂ ಶಾಬ್ದಾದ್ ಖಾನ್​(36) ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಮುಖ್ಯ ಪಾತ್ರವಹಿಸಿದರು. ಕೊನೆಯ ಓವರ್​​ನಲ್ಲಿ ಪಾಕ್​ ಗೆಲುವಿಗೆ 11 ರನ್​​ಗಳು ಬೇಕಿತ್ತು. ಅಫ್ಘಾನ್ ಗೆಲುವಿಗೆ ಪಾಕಿಸ್ತಾನದ 1 ವಿಕೆಟ್ ಮಾತ್ರ ಬೇಕಿತ್ತು. ಈ ಸಂದರ್ಭದಲ್ಲಿ ನಸೀಂ ಶಾ ಮೊದಲ ಎರಡು ಎಸೆತಗಳಲ್ಲಿ ಭರ್ಜರಿ ಸಿಕ್ಸ್ ಸಿಡಿಸಿ ಪಾಕ್ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ