Anil Kumble: ‘ವಿಕ್ರಾಂತ್​ ರೋಣ’ ಚಿತ್ರ ವೀಕ್ಷಿಸಿ, ಸುದೀಪ್​ ನಟನೆ ಬಗ್ಗೆ ವಿಮರ್ಶೆ ತಿಳಿಸಿದ ಅನಿಲ್​ ಕುಂಬ್ಳೆ

Vikrant Rona | Kichcha Sudeep: ಅನಿಲ್​ ಕುಂಬ್ಳೆ ಅವರು ‘ವಿಕ್ರಾಂತ್​ ರೋಣ’ ನೋಡಿ ಅಭಿಪ್ರಾಯ ತಿಳಿಸಿದ್ದಾರೆ. ‘ಸಮಯ ಮಾಡಿಕೊಂಡು ನಮ್ಮ ಸಿನಿಮಾ ನೋಡಿದ್ದಕ್ಕೆ ಧನ್ಯವಾದಗಳು ಸರ್​’ ಎಂದು ಕಿಚ್ಚ ಸುದೀಪ್​ ಪ್ರತಿಕ್ರಿಯಿಸಿದ್ದಾರೆ.

Anil Kumble: ‘ವಿಕ್ರಾಂತ್​ ರೋಣ’ ಚಿತ್ರ ವೀಕ್ಷಿಸಿ, ಸುದೀಪ್​ ನಟನೆ ಬಗ್ಗೆ ವಿಮರ್ಶೆ ತಿಳಿಸಿದ ಅನಿಲ್​ ಕುಂಬ್ಳೆ
ಅನಿಲ್ ಕುಂಬ್ಳೆ, ಕಿಚ್ಚ ಸುದೀಪ್
Follow us
| Updated By: ಮದನ್​ ಕುಮಾರ್​

Updated on:Sep 08, 2022 | 7:28 AM

ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಆಗಿದ್ದ ‘ವಿಕ್ರಾಂತ್​ ರೋಣ’ (Vikrant Rona) ಸಿನಿಮಾವನ್ನು ನೋಡಿ ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಫ್ಯಾನ್ಸ್​ ಮಾತ್ರವಲ್ಲದೇ ಅನೇಕ ಸೆಲೆಬ್ರಿಟಿಗಳು ಕೂಡ ಸಿನಿಮಾ ನೋಡಿ ಎಂಜಾಯ್​ ಮಾಡಿದ್ದಾರೆ. ಭಾರತ ಕ್ರಿಕೆಟ್​ ತಂಡದ ಮಾಜಿ ಸ್ಪಿನ್ನರ್​ ಅನಿಲ್ ಕುಂಬ್ಳೆ (Anil Kumble) ಸಹ ‘ವಿಕ್ರಾಂತ್​ ರೋಣ’ ಚಿತ್ರವನ್ನು ವೀಕ್ಷಿಸಿದ್ದಾರೆ. ಸಿನಿಮಾ ನೋಡಿ ಮೆಚ್ಚಿಕೊಂಡಿರುವ ಅವರು ತಮ್ಮ ವಿಮರ್ಶೆ ತಿಳಿಸಿದ್ದಾರೆ. ಕನ್ನಡ ಚಿತ್ರರಂಗದ ಜೊತೆ ಅನಿಲ್​ ಕುಂಬ್ಳೆ ಅವರು ಮೊದಲಿನಿಂದಲೂ ನಂಟು ಹೊಂದಿದ್ದಾರೆ. ಅವರ ಮತ್ತು ಸುದೀಪ್​ (Kichcha Sudeep) ನಡುವೆ ಉತ್ತಮ ಸ್ನೇಹ ಇದೆ. ಈಗ ಸ್ನೇಹಿತನ ಚಿತ್ರಕ್ಕೆ ಅವರು ಭೇಷ್​ ಎಂದಿದ್ದಾರೆ. ಅನೂಪ್​ ಭಂಡಾರಿ ನಿರ್ದೇಶನದ ಈ ಸಿನಿಮಾಗೆ ಜಾಕ್​ ಮಂಜು ಬಂಡವಾಳ ಹೂಡಿದ್ದಾರೆ. ಒಟಿಟಿಯಲ್ಲೂ ‘ವಿಕ್ರಾಂತ್​ ರೋಣ’ ಚಿತ್ರ ಧೂಳೆಬ್ಬಿಸುತ್ತಿದೆ.

‘ವಿಕ್ರಾಂತ್​ ರೋಣ’ ಸಿನಿಮಾದಲ್ಲಿ ಒಂದು ಸಸ್ಪೆನ್ಸ್​ ಕಥೆ ಇದೆ. ಅದೇ ಈ ಚಿತ್ರದ ಜೀವಾಳ. ಸಿನಿಮಾದ ಆ ಗುಣ ಅನಿಲ್​ ಕುಂಬ್ಳೆ ಅವರಿಗೆ ಇಷ್ಟ ಆಗಿದೆ. ಈ ಬಗ್ಗೆ ಅವರು ಟ್ವೀಟ್​ ಮಾಡಿದ್ದಾರೆ. ‘ವಿಕ್ರಾಂತ್​ ರೋಣ ಸಿನಿಮಾ ನೋಡಿದೆ. ನನ್ನ ಪ್ರೀತಿಯ ಸ್ನೇಹಿತ ಕಿಚ್ಚ ಸುದೀಪ್​ ಅವರ ನಟನೆ ಆಕರ್ಷಕವಾಗಿದೆ. ಕೊನೆವರೆಗೂ ಈ ಸಿನಿಮಾ ಸಸ್ಪೆನ್ಸ್​ ಕಾಯ್ದುಕೊಂಡಿದೆ. ವಿಜಯ್​ ಪ್ರಕಾಶ್​ ಅವರ ಹಾಡು ಅದ್ಭುತವಾಗಿದೆ. ಅನೂಪ್​ ಭಂಡಾರಿ ಮತ್ತು ಅವರ ಇಡೀ ತಂಡಕ್ಕೆ ಅಭಿನಂದನೆಗಳು’ ಎಂದು ಅನಿಲ್​ ಕುಂಬ್ಳೆ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ
Image
Kiccha Sudeep: ಜೋಸ್ ಬಟ್ಲರ್​ನಿಂದ ಸುದೀಪ್​ಗೆ ಬಂತು ಸರ್​​ಪ್ರೈಸ್ ಗಿಫ್ಟ್: ಥ್ರಿಲ್ ಆದ ಕಿಚ್ಚ
Image
‘83’ ಸಿನಿಮಾ ವೇದಿಕೆಯಲ್ಲಿ ರಣವೀರ್​ ಸಿಂಗ್​ಗೆ ಕನ್ನಡ ಡೈಲಾಗ್​ ಹೇಳಿಕೊಟ್ಟ ಕಿಚ್ಚ ಸುದೀಪ್​
Image
ಒಂದೇ ವೇದಿಕೆ ಮೇಲೆ ಸುದೀಪ್​, ರಣವೀರ್​, ಕಪಿಲ್​ ದೇವ್​; ‘83’ ಸುದ್ದಿಗೋಷ್ಠಿ ನೋಡಲು ಇಲ್ಲಿ ಕ್ಲಿಕ್​ ಮಾಡಿ
Image
Kichcha Sudeep: ಕ್ರಿಕೆಟ್​ ಮಾತ್ರವಲ್ಲ, ಚೆಸ್​ನಲ್ಲೂ ಘಟಾನುಘಟಿಗೆ ಪೈಪೋಟಿ ನೀಡಲು ರೆಡಿಯಾದ ಕಿಚ್ಚ ಸುದೀಪ್​

‘ಸಮಯ ಮಾಡಿಕೊಂಡು ನಮ್ಮ ಸಿನಿಮಾ ನೋಡಿದ್ದಕ್ಕೆ ಧನ್ಯವಾದಗಳು ಸರ್​’ ಎಂದು ಕಿಚ್ಚ ಸುದೀಪ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಜೀ 5’ ಒಟಿಟಿ ಮೂಲಕ ‘ವಿಕ್ರಾಂತ್​ ರೋಣ’ ಚಿತ್ರ ವೀಕ್ಷಣೆಗೆ ಲಭ್ಯವಾಗಿದೆ. ದಾಖಲೆ ಪ್ರಮಾಣದಲ್ಲಿ ವೀಕ್ಷಣೆ ಕಂಡಿರುವುದು ಚಿತ್ರತಂಡದ ಖುಷಿಗೆ ಕಾರಣ ಆಗಿದೆ. ಚಿತ್ರಮಂದಿರದಲ್ಲಿ ಅಬ್ಬರಿಸಿದ ಬಳಿಕ ಒಟಿಟಿಯಲ್ಲಿ 500 ಮಿಲಿಯನ್​ ನಿಮಿಷಗಳಷ್ಟು ವೀಕ್ಷಣೆ ಕಂಡಿದ್ದು ಇಡೀ ತಂಡಕ್ಕೆ ಹೆಮ್ಮೆ ತಂದಿದೆ. ‘ಜೀ 5’ನಲ್ಲಿ ಚಿತ್ರದ ನಾಗಾಲೋಟ ಮುಂದುವರಿದಿದೆ.

ಈ ಸಿನಿಮಾದಲ್ಲಿ ಕಿಚ್ಚ ಸುದೀಪ್​ ಜೊತೆಗೆ ನೀತಾ ಅಶೋಕ್​, ಜಾಕ್ವೆಲಿನ್​ ಫರ್ನಾಂಡಿಸ್​, ನಿರೂಪ್​ ಭಂಡಾರಿ, ಮಿಲನಾ ನಾಗರಾಜ್​ ಮುಂತಾದವರು ನಟಿಸಿದ್ದಾರೆ. ಅಜನೀಶ್​ ಬಿ. ಲೋಕನಾಥ್​ ಸಂಗೀತ ನೀಡಿರುವ ಹಾಡುಗಳು ಜನಮನ ಗೆದ್ದಿವೆ. ಅದರಲ್ಲೂ ‘ರಾ ರಾ ರಕ್ಕಮ್ಮ..’ ಹಾಡು ಸೆನ್ಸೇಷನಲ್​ ಹಿಟ್​ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:28 am, Thu, 8 September 22

ತಾಜಾ ಸುದ್ದಿ
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು
ಭಾರತ ಫೈನಲ್​ ಮ್ಯಾಚ್​ ಗೆಲುವಿಗೆ ಈ ಐದು ಕಾರಣಗಳು, ಯಾವುವು ಗೊತ್ತಾ?
ಭಾರತ ಫೈನಲ್​ ಮ್ಯಾಚ್​ ಗೆಲುವಿಗೆ ಈ ಐದು ಕಾರಣಗಳು, ಯಾವುವು ಗೊತ್ತಾ?
T20 World Cup: ದ್ರಾವಿಡ್ ಭಾವನಾತ್ಮಕ ಸಂಭ್ರಮಾಚರಣೆ ಹೇಗಿದೆ ನೋಡಿ
T20 World Cup: ದ್ರಾವಿಡ್ ಭಾವನಾತ್ಮಕ ಸಂಭ್ರಮಾಚರಣೆ ಹೇಗಿದೆ ನೋಡಿ