‘ಕಲಾ ಸಾಮ್ರಾಟ್​ ಹೆಸರು ಹಾಳಾಗದಂತೆ ನೋಡಿಕೋ’: ಪುತ್ರ ಪವನ್​ಗೆ ಎಸ್. ನಾರಾಯಣ್​ ​ಕಿವಿಮಾತು

Kala Samrat Film Academy: ಎಸ್​. ನಾರಾಯಣ್​ ಅವರ ಪುತ್ರ ಪವನ್​ ಅವರು ‘ಕಲಾ ಸಾಮ್ರಾಟ್​ ಫಿಲ್ಮ್​ ಅಕಾಡೆಮಿ’ ಆರಂಭಿಸಿದ್ದಾರೆ. ಅವರ ಈ ಹೊಸ ಪ್ರಯತ್ನಕ್ಕೆ ಅನೇಕರು ಶುಭ ಹಾರೈಸಿದ್ದಾರೆ.

‘ಕಲಾ ಸಾಮ್ರಾಟ್​ ಹೆಸರು ಹಾಳಾಗದಂತೆ ನೋಡಿಕೋ’: ಪುತ್ರ ಪವನ್​ಗೆ ಎಸ್. ನಾರಾಯಣ್​ ​ಕಿವಿಮಾತು
‘ಕಲಾ ಸಾಮ್ರಾಟ್ ಫಿಲ್ಮ್ ಅಕಾಡೆಮಿ’ ಉದ್ಘಾಟನೆ
Follow us
TV9 Web
| Updated By: ಮದನ್​ ಕುಮಾರ್​

Updated on:Sep 07, 2022 | 10:44 AM

ಕನ್ನಡ ಚಿತ್ರರಂಗದಲ್ಲಿ ನಟ, ನಿರ್ದೇಶಕ ಎಸ್​. ನಾರಾಯಣ್​ (S Narayan) ಅವರು ಅನೇಕ ವರ್ಷಗಳ ಅನುಭವ ಹೊಂದಿದ್ದಾರೆ. ಅನೇಕ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಅವರನ್ನು ಜನರು ‘ಕಲಾ ಸಾಮ್ರಾಟ್​’ ಎಂದು ಕರೆಯುತ್ತಾರೆ. ಈಗ ಅವರ ಪುತ್ರ ಪವನ್ (Narayan son Pawan)​ ಅವರು ‘ಕಲಾ ಸಾಮ್ರಾಟ್​’ ಹೆಸರನ್ನೇ ಇಟ್ಟುಕೊಂಡು ಫಿಲ್ಮ್​ ಅಕಾಡೆಮಿ ಶುರು ಮಾಡಿದ್ದಾರೆ. ಸಿನಿಮಾದಲ್ಲಿ ಆಸಕ್ತಿ ಇರುವವರಿಗೆ ತರಬೇತಿ ನೀಡುವ ಕೆಲಸವನ್ನು ಈ ಅಕಾಡೆಮಿ ಮಾಡಲಿದೆ. ಗುರು-ಹಿರಿಯರ ಆಶೀರ್ವಾದ ಮತ್ತು ಸ್ನೇಹಿತರ ಹಾರೈಕೆಯೊಂದಿಗೆ ‘ಕಲಾ ಸಾಮ್ರಾಟ್​ ಫಿಲ್ಮ್

​ ಅಕಾಡೆಮಿ’ (Kala Samrat Film Academy) ಉದ್ಘಾಟನೆ ಮಾಡಲಾಗಿದೆ.

ಎಸ್​. ನಾರಾಯಣ್​ ಅವರ ವೃತ್ತಿಜೀವನಲ್ಲಿ ಸುಮಾರು 12 ವರ್ಷಗಳ ಕಾಲ ಜೊತೆಗಿದ್ದು, ಅನೇಕ ವಿಚಾರಗಳನ್ನು ಪವನ್​ ಕಲಿತುಕೊಂಡಿದ್ದಾರೆ. ಅದೇ ಅನುಭವದ ಮೇರೆಗೆ ಅವರು ಈಗ ಫಿಲ್ಮ್​ ಅಕಾಡೆಮಿ ಆರಂಭಿಸಿದ್ದಾರೆ. ‘ನನ್ನ ಮಗ ಸ್ವಂತಿಕೆಯಿಂದ ಇದನ್ನು ಶುರು ಮಾಡಿದ್ದಾನೆ. ಅವನು ಜಾಸ್ತಿ ಮಾತಾಡಲ್ಲ, ಸೈಲೆಂಟ್​ ಆಗಿ ಕೆಲಸ ಮಾಡ್ತಾನೆ. ಜನರು ನನಗೆ ಕೊಟ್ಟ ಕಲಾ ಸಾಮ್ರಾಟ್​ ಎಂಬ ಹೆಸರನ್ನು ಇಟ್ಟಿದ್ದಾನೆ. ಆ ಹೆಸರಿಗೆ ಮಸಿ ಬಳಿಯಬಾರದು. ಹೆಸರು ಹಾಳಾಗದ ರೀತಿಯಲ್ಲಿ ಈ ಸಂಸ್ಥೆ ನಡೆಸು ಅಂತ ಅವನಿಗೆ ಹೇಳಿದ್ದೇನೆ’ ಎಂದಿದ್ದಾರೆ ಎಸ್​. ನಾರಾಯಣ್​.

ಇದನ್ನೂ ಓದಿ
Image
‘ಮೊದಲ ಪ್ಯಾನ್​ ಇಂಡಿಯಾ ಚಿತ್ರ ನಮ್ಮ ಕನ್ನಡದ್ದು’: ದಶಕಗಳ ಹಿಂದಿನ ಮಾಹಿತಿ ತಿಳಿಸಿದ ಎಸ್​. ನಾರಾಯಣ್​
Image
‘ಕ್ರೇನ್​ ಇಲ್ಲದೆ, ಕ್ರೇನ್​ ಶಾಟ್​ ತೆಗೆದಿದ್ದೆ’; ಹಳೆಯ ಘಟನೆ ನೆನಪಿಸಿಕೊಂಡ ಎಸ್​. ನಾರಾಯಣ್​
Image
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎಸ್​. ನಾರಾಯಣ್​ ಪುತ್ರ ಪಂಕಜ್​; ಇಲ್ಲಿವೆ ಕಲರ್​ಫುಲ್​ ಫೋಟೋಗಳು
Image
ನಿರ್ದೇಶಕ ಎಸ್​. ನಾರಾಯಣ್​ ಹೆಸರಲ್ಲಿ ವಂಚನೆಗೆ ಯತ್ನ; ಹಣ ಕಳೆದುಕೊಳ್ಳಬೇಡಿ ಹುಷಾರ್​

ಪವನ್ ಶುರು ಮಾಡಿರುವ ಈ​ ಅಕಾಡೆಮಿಯನ್ನು ಹಿರಿಯ ನಿರ್ದೇಶಕ ಭಾರ್ಗವ ಉದ್ಘಾಟನೆ ಮಾಡಿದ್ದಾರೆ. ಮುಖ್ಯಮಂತ್ರಿ ಚಂದ್ರು, ಸುಂದರ್​ ರಾಜ್, ವಿ. ಮನೋಹರ್, ಎಂ.ಎನ್ ಸುರೇಶ್, ಆದಿತ್ಯ, ಅದಿತಿ ಪ್ರಭುದೇವ ಮುಂತಾದವರು ಬಂದು ಪವನ್​ಗೆ ಶುಭ ಹಾರೈಸಿದ್ದಾರೆ. ‘ನಾರಾಯಣ್ ಅವರು ನನ್ನನ್ನು ಚೆನ್ನೈನಲ್ಲಿ ಭೇಟಿಯಾಗಿ, ಅವರ ವೃತ್ತಿಜೀವನ ಆರಂಭಿಸಿದರು. ಕೆಲಸದ ಮೇಲೆ ಅವರಿಗಿರುವ ಶ್ರದ್ಧೆಯಿಂದ ಬಹಳ ಎತ್ತರಕ್ಕೆ ಬೆಳೆದಿದ್ದಾರೆ. ಅವರ ಮಗ ಈಗ ಫಿಲ್ಮ್ ಅಕಾಡೆಮಿ ಆರಂಭಿಸಿದ್ದಾರೆ. ಪವನ್ ಅವರ ನೂತನ ಪ್ರಯತ್ನಕ್ಕೆ ಒಳ್ಳೆಯದಾಗಲಿ’ ಎಂದಿದ್ದಾರೆ ನಿರ್ದೇಶಕ ಭಾರ್ಗವ.

‘ಶಿಸ್ತಿಗೆ ಹೆಸರಾದ ಮನುಷ್ಯ ಎಸ್​. ನಾರಾಯಣ್​. ಅವರಿಂದ ನಾವು ಸಾಕಷ್ಟು ವಿಷಯ ಕಲಿತಿದ್ದೇವೆ. ಇಂದಿನ ಯುವ ಜನತೆಗೆ ತರಬೇತಿ ಅಗತ್ಯ ಇದೆ. ಅದಕ್ಕೆ ಈ ರೀತಿಯ ಅಕಾಡೆಮಿಗಳು ಬಹಳ ಮುಖ್ಯ. ಕಡಿಮೆ ಅವಧಿಯಲ್ಲಿ ಹೆಚ್ಚಿನ ವಿಷಯಗಳನ್ನು ಕಲಿಸುವ ಉದ್ದೇಶದಿಂದ ಆರಂಭ ಆಗಿರುವ ಕಲಾ ಸಾಮ್ರಾಟ್​ ಅಕಾಡೆಮಿಯಿಂದ ಆಸಕ್ತರಿಗೆ ಸಹಾಯ ಆಗಲಿ’ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:06 am, Wed, 7 September 22

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್