ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಭಾರತೀಯರಿಗೆ ಇಲ್ಲ ಚಾನ್ಸ್..!
SA20 2026: ಸೌತ್ ಆಫ್ರಿಕಾ ಟಿ20 ಲೀಗ್ನ 4ನೇ ಸೀಸನ್ ಜನವರಿ 1, 2026 ರಿಂದ ಶುರುವಾಗಲಿದೆ. ಜೋಹಾನ್ಸ್ ಬರ್ಗ್ನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಡರ್ಬನ್ ಸೂಪರ್ ಜೈಂಟ್ಸ್ ಹಾಗೂ ಜೋಹಾನ್ಸ್ ಬರ್ಗ್ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಟೂರ್ನಿಗಾಗಿ ಮುಂದಿನ ತಿಂಗಳು ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.

ಸೌತ್ ಆಫ್ರಿಕಾ ಟಿ20 ಲೀಗ್ (SA20) ಆಟಗಾರರ ಹರಾಜಿಗೆ ಡೇಟ್ ಫಿಕ್ಸ್ ಆಗಿದೆ. ಸೆಪ್ಟೆಂಬರ್ 9 ರಂದು ನಡೆಯಲಿರುವ ಹರಾಜಿಗಾಗಿ 800 ಕ್ಕೂ ಅಧಿಕ ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದರು. ಈ ಆಟಗಾರರ ಪಟ್ಟಿಯನ್ನು ಶಾರ್ಟ್ ಲಿಸ್ಟ್ ಮಾಡಲಾಗಿದ್ದು, ಅದರಂತೆ 541 ಆಟಗಾರರ ಹೆಸರುಗಳನ್ನು ಹರಾಜಿಗೆ ಅಂತಿಮಗೊಳಿಸಲಾಗಿದೆ.
ಈ 541 ಆಟಗಾರರಲ್ಲಿ ಭಾರತದ ಯಾವುದೇ ಪ್ಲೇಯರ್ಸ್ ಇಲ್ಲ ಎಂಬುದು ವಿಶೇಷ. ಅಂದರೆ ಇದಕ್ಕೂ ಮುನ್ನ ಹೆಸರು ನೋಂದಾಯಿಸಿಕೊಂಡಿದ್ದ 800 ಆಟಗಾರರಲ್ಲಿ 13 ಭಾರತೀಯರು ಕಾಣಿಸಿಕೊಂಡಿದ್ದರು. ಇವರಲ್ಲಿ ಐಪಿಎಲ್ನಲ್ಲಿ ಮಿಂಚಿದ್ದ ಟೀಮ್ ಇಂಡಿಯಾ ಆಟಗಾರರಾದ ಪಿಯೂಷ್ ಚಾವ್ಲಾ, ಸಿದ್ಧಾರ್ಥ್ ಕೌಲ್ ಮತ್ತು ಅಂಕಿತ್ ರಾಜ್‌ಪೂತ್ ಕೂಡ ಇದ್ದರು ಎಂಬುದು ವಿಶೇಷ.
ಸೌತ್ ಆಫ್ರಿಕಾ ಟಿ20 ಲೀಗ್ಗೆ ಹೆಸರು ನೋಂದಾಯಿಸಿದ್ದ ಭಾರತೀಯರು:
- ಪಿಯೂಷ್ ಚಾವ್ಲಾ (ಉತ್ತರ ಪ್ರದೇಶ್)
- ಸಿದ್ಧಾರ್ಥ್ ಕೌಲ್ (ಪಂಜಾಬ್)
- ಅಂಕಿತ್ ರಜಪೂತ್ (ಉತ್ತರ ಪ್ರದೇಶ್)
- ನಿಖಿಲ್ ಜಗ (ರಾಜಸ್ಥಾನ್)
- ಮೊಹಮ್ಮದ್ ಫೈದ್ (ರಾಜ್ಯವನ್ನು ಉಲ್ಲೇಖಿಸಲಾಗಿಲ್ಲ)
- ಕೆ.ಎಸ್. ನವೀನ್ (ತಮಿಳುನಾಡು)
- ಅನ್ಸಾರಿ ಮರೂಫ್ (ರಾಜ್ಯವನ್ನು ಉಲ್ಲೇಖಿಸಲಾಗಿಲ್ಲ)
- ಮಹೇಶ್ ಅಹಿರ್ (ಗುಜರಾತ್)
- ಸರುಲ್ ಕನ್ವರ್ (ಪಂಜಾಬ್)
- ಅನುರೀತ್ ಸಿಂಗ್ ಕಥುರಿಯಾ (ದೆಹಲಿ)
- ಇಮ್ರಾನ್ ಖಾನ್ (ಉತ್ತರ ಪ್ರದೇಶ್)
- ವೆಂಕಟೇಶ್ ಗಾಳಿಪೆಲ್ಲಿ (ರಾಜ್ಯ ಉಲ್ಲೇಖಿಸಲಾಗಿಲ್ಲ)
- ಅತುಲ್ ಯಾದವ್ (ಉತ್ತರ ಪ್ರದೇಶ್)
ಇದೀಗ ಶಾರ್ಟ್ ಲಿಸ್ಟ್ ಮಾಡಲಾದ ಪಟ್ಟಿಯಲ್ಲಿ ಭಾರತದ ಯಾವುದೇ ಆಟಗಾರ ಇಲ್ಲ ಎಂಬುದು ವಿಶೇಷ. ಹೀಗಾಗಿ ಈ ಬಾರಿಯ ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಯಾವುದೇ ಭಾರತೀಯ ಆಟಗಾರ ಕಾಣಿಸಿಕೊಳ್ಳುವುದಿಲ್ಲ.
