Sign In

By signing in or creating an account, you agree with Associated Broadcasting Company's Terms & Conditions and Privacy Policy.

SA20: MI ಕೇಪ್​ಟೌನ್ ಚಾಂಪಿಯನ್ಸ್​

SA20 Final: ಸೌತ್ ಆಫ್ರಿಕಾ ಟಿ20 ಲೀಗ್​ನ ಮೂರನೇ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್ ಮಾಲೀಕತ್ವದ ಎಂಐ ಕೇಪ್​ಟೌನ್ ತಂಡವು ಚಾಂಪಿಯನ್ ಪಟ್ಟಕ್ಕೇರಿದೆ. 2023 ಮತ್ತು 2024 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಸನ್​ರೈಸರ್ಸ್ ಈಸ್ಟರ್ನ್​ ಕೇಪ್​ ತಂಡವನ್ನು ಮಣಿಸಿ ಎಂಐ ಕೇಪ್​ಟೌನ್ ತಂಡ ಇದೇ ಮೊದಲ ಬಾರಿ ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲಿ ಕಿರೀಟ ಮುಡಿಗೇರಿಸಿಕೊಂಡಿದೆ.

SA20: MI ಕೇಪ್​ಟೌನ್ ಚಾಂಪಿಯನ್ಸ್​
Mi Capetwon
Follow us
ಝಾಹಿರ್ ಯೂಸುಫ್
|

Updated on: Feb 09, 2025 | 7:24 AM

ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲಿ MI ಕೇಪ್​ಟೌನ್ ತಂಡವು ಚಾಂಪಿಯನ ಪಟ್ಟ ಅಲಂಕರಿಸಿದೆ. ಜೋಹಾನ್ಸ್​ಬರ್ಗ್​ನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸನ್​ರೈಸರ್ಸ್​ ಈಸ್ಟರ್ನ್ ಕೇಪ್ ತಂಡವನ್ನು 76 ರನ್​ಗಳಿಂದ ಮಣಿಸಿ ಎಂಐ ಕೇಪ್​ಟೌನ್ ಚೊಚ್ಚಲ ಬಾರಿ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ MI ಕೇಪ್​ಟೌನ್ ತಂಡದ ನಾಯಕ ರಶೀದ್ ಖಾನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ MI ಕೇಪ್​ಟೌನ್ ತಂಡಕ್ಕೆ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (23) ಹಾಗೂ ರಿಯಾನ್ ರಿಕೆಲ್ಟನ್ (33) ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 51 ರನ್ ಪೇರಿಸಿದ ಬಳಿಕ ರಿಕೆಲ್ಟನ್ ಔಟಾದರು. ಇದರ ಬೆನ್ನಲ್ಲೇ ವ್ಯಾನ್ ಡೆರ್ ಡಸ್ಸೆನ್ ಕೂಡ ವಿಕೆಟ್ ಒಪ್ಪಿಸಿದರು.

ಆ ಬಳಿಕ ಬಂದ ರೀಝ ಹೆಂಡ್ರಿಕ್ಸ್ (0) ಶೂನ್ಯಕ್ಕೆ ಔಟಾದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಕಾನರ್ ಎಸ್ಟರ್‌ಹುಯಿಜೆನ್ 39 ರನ್ ಬಾರಿಸಿದರೆ, ಜಾರ್ಜ್​ ಲಿಂಡೆ 20 ರನ್​ಗಳಿಸಿದರು. ಇನ್ನು ಅಂತಿಮ ಹಂತದಲ್ಲಿ ಡೆವಾಲ್ಡ್ ಬ್ರೆವಿಸ್ 18 ಎಸೆತಗಳಲ್ಲಿ 4 ಸಿಕ್ಸ್​ಗಳೊಂದಿಗೆ 38 ರನ್​​ ಚಚ್ಚಿದರು. ಈ ಮೂಲಕ ಎಂಐ ಕೇಪ್​ಟೌನ್ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 181 ರನ್​ ಕಲೆಹಾಕಿತು.

182 ರನ್​ಗಳ ಕಠಿಣ ಗುರಿ:

182 ರನ್​ಗಳ ಗುರಿ ಪಡೆದ ಸನ್​ರೈಸರ್ಸ್ ಈಸ್ಟರ್ನ್ ಕೇಪ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಕಗಿಸೊ ರಬಾಡ ಹಾಗೂ ಟ್ರೆಂಟ್ ಬೌಲ್ಟ್ ಯಶಸ್ವಿಯಾದರು. ರಬಾಡ, ಡೇವಿಡ್ ಬೆಡಿಂಗ್ಹ್ಯಾಮ್ (5) ವಿಕೆಟ್ ಪಡೆದರೆ, ಬೌಲ್ಟ್​ ಜೋರ್ಡಾನ್ ಹರ್ಮನ್ (1) ವಿಕೆಟ್ ಕಬಳಿಸಿದರು.

ಇನ್ನು ಟೋನಿ ಡಿ ಝೋರ್ಝಿ (26) ಯನ್ನು ರಶೀದ್ ಖಾನ್ ಔಟ್ ಮಾಡಿದರೆ, ಟಾಮ್ ಅಬೆಲ್ (30) ಜಾರ್ಜ್​ ಲಿಂಡೆಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಐಡೆನ್ ಮಾರ್ಕ್ರಾಮ್ (6) ಲಿಂಡೆ ಎಸೆತದಲ್ಲಿ ಔಟಾದರು. ಇದರ ಬೆನ್ನಲ್ಲೇ ಡೇಂಜರಸ್ ಟ್ರಿಸ್ಟನ್ ಸ್ಟಬ್ಸ್ (15) ವಿಕೆಟ್ ಪಡೆಯುವಲ್ಲಿ ಕಗಿಸೊ ರಬಾಡ ಯಶಸ್ವಿಯಾದರು.

ಅಂತಿಮವಾಗಿ 18.4 ಓವರ್​ಗಳಲ್ಲಿ 105 ರನ್​ಗಳಿಸಿ ಸನ್​ರೈಸರ್ಸ್ ಈಸ್ಟನ್ ಕೇಪ್ ತಂಡವು ಆಲೌಟ್ ಆಯಿತು. ಈ ಮೂಲಕ ಎಂಐ ಕೇಪ್​ಟೌನ್ ತಂಡವು 76 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಎಂಐ ಕೇಪ್​ಟೌನ್ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಟ್ರೆಂಟ್ ಬೌಲ್ಟ್ 4 ಓವರ್​​ಗಳಲ್ಲಿ ಕೇವಲ 9 ರನ್ ನೀಡಿ 2 ವಿಕೆಟ್ ಪಡೆದರೆ, ಕಗಿಸೊ ರಬಾಡ 3.4 ಓವರ್​ಗಳಲ್ಲಿ 25 ರನ್ ನೀಡಿ 4 ವಿಕೆಟ್ ಕಬಳಿಸಿದರು. ಇನ್ನು ಕಾರ್ಬಿನ್ ಬಾಷ್ ಹಾಗೂ ರಶೀದ್ ಖಾನ್ ತಲಾ 1 ವಿಕೆಟ್ ಪಡೆದರು.

ಎಂಐ ಕೇಪ್​ಟೌನ್ ಪ್ಲೇಯಿಂಗ್ 11: ರಿಯಾನ್ ರಿಕೆಲ್ಟನ್ (ವಿಕೆಟ್ ಕೀಪರ್) , ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ , ಡೆವಾಲ್ಡ್ ಬ್ರೆವಿಸ್ , ಕಾನರ್ ಎಸ್ಟರ್‌ಹ್ಯೂಜೆನ್ , ಜಾರ್ಜ್ ಲಿಂಡೆ , ಡೆಲಾನೊ ಪಾಟ್‌ಗೀಟರ್ , ರೀಝ ಹೆಂಡ್ರಿಕ್ಸ್ , ಕಾರ್ಬಿನ್ ಬಾಷ್ , ರಶೀದ್ ಖಾನ್ (ನಾಯಕ) , ಕಗಿಸೊ ರಬಾಡಾ , ಟ್ರೆಂಟ್ ಬೌಲ್ಟ್.

ಇದನ್ನೂ ಓದಿ: ದಿಢೀರ್ ನಿವೃತ್ತಿ ಘೋಷಿಸಿದ ಮಾರ್ಕಸ್ ಸ್ಟೊಯಿನಿಸ್

ಸನ್​ರೈಸರ್ಸ್ ಈಸ್ಟರ್ನ್​ ಕೇಪ್​ ಪ್ಲೇಯಿಂಗ್ 11: ಟೋನಿ ಡಿ ಝೋರ್ಝಿ , ಡೇವಿಡ್ ಬೆಡಿಂಗ್ಹ್ಯಾಮ್ , ಜೋರ್ಡಾನ್ ಹರ್ಮನ್ , ಐಡೆನ್ ಮಾರ್ಕ್ರಾಮ್ (ನಾಯಕ) , ಟಾಮ್ ಅಬೆಲ್ , ಟ್ರಿಸ್ಟಾನ್ ಸ್ಟಬ್ಸ್ (ವಿಕೆಟ್ ಕೀಪರ್) , ಮಾರ್ಕೊ ಯಾನ್ಸೆನ್ , ಕ್ರೇಗ್ ಓವರ್ಟನ್ , ಲಿಯಾಮ್ ಡಾಸನ್ , ರಿಚರ್ಡ್ ಗ್ಲೀಸನ್ , ಆಂಡಿಲ್ ಸಿಮೆಲೇನ್.

‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ