Kieron Pollard: ಟಾಪ್-5 ಟಿ20 ಆಟಗಾರರು: ರೋಹಿತ್ ಶರ್ಮಾರನ್ನೇ ಕೈಬಿಟ್ಟ ಕೀರನ್ ಪೊಲಾರ್ಡ್

| Updated By: ಝಾಹಿರ್ ಯೂಸುಫ್

Updated on: Oct 06, 2021 | 6:07 PM

Kieron Pollard: ಪೊಲಾರ್ಡ್​ ಆಯ್ಕೆ ಮಾಡಿರುವ ಟಾಪ್-5 ಟಿ20 ಪ್ಲೇಯರ್ಸ್​ ಪಟ್ಟಿಯಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸ್ಥಾನ ಪಡೆದಿದ್ದಾರೆ.

Kieron Pollard: ಟಾಪ್-5 ಟಿ20 ಆಟಗಾರರು: ರೋಹಿತ್ ಶರ್ಮಾರನ್ನೇ ಕೈಬಿಟ್ಟ ಕೀರನ್ ಪೊಲಾರ್ಡ್
Kieron Pollard
Follow us on

ಐಸಿಸಿ ಟಿ20 ವಿಶ್ವಕಪ್ (T20 World Cup 2021)​ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಅಕ್ಟೋಬರ್ 17 ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಹಾಗೂ ಒಮಾನ್​ನಲ್ಲಿ ಅರ್ಹತಾ ಪಂದ್ಯಗಳು ನಡೆಯಲಿದೆ. ಇನ್ನು ಅಕ್ಟೋಬರ್ 23 ರಿಂದ ಸೂಪರ್ 12 ಪಂದ್ಯಗಳು ಆರಂಭವಾಗಲಿದ್ದು, ಅದರೊಂದಿಗೆ ಚುಟುಕು ಕದನ ಶುರುವಾಗಲಿದೆ. ಇತ್ತ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ (Mumbai Indians)​ ತಂಡವನ್ನು ಪ್ರತಿನಿಧಿಸುತ್ತಿರುವ ಕೀರನ್ ಪೊಲಾರ್ಡ್ (Kieron Pollard)​ ಮುಂಬರುವ ಟಿ20 ವಿಶ್ವಕಪ್​ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮುನ್ನಡೆಸಲಿದ್ದಾರೆ. ಹೀಗಾಗಿಯೇ ಪೊಲಾರ್ಡ್​ಗೆ ವಿಶ್ವದ ಬೆಸ್ಟ್ ಟಿ20 ಆಟಗಾರರು ಯಾರೆಂಬ ಪ್ರಶ್ನೆ ಮುಂದಿಡಲಾಗಿದೆ. ಅದರಂತೆ ಪೊಲಾರ್ಡ್​ ಐವರು ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದು, ಈ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ (Rohit Sharma) ಇಲ್ಲದಿರುವುದು ವಿಶೇಷ.

ಹಾಗೆಯೇ ಪೊಲಾರ್ಡ್​ ಆಯ್ಕೆ ಮಾಡಿರುವ ಟಾಪ್-5 ಟಿ20 ಪ್ಲೇಯರ್ಸ್​ ಪಟ್ಟಿಯಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸ್ಥಾನ ಪಡೆದಿದ್ದಾರೆ. ಧೋನಿಯನ್ನು ಹೊರತುಪಡಿಸಿ, ಶ್ರೀಲಂಕಾದ ಶ್ರೇಷ್ಠ ವೇಗದ ಬೌಲರ್‌ ಲಸಿತ್ ಮಾಲಿಂಗ, ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಮತ್ತು ಸುನಿಲ್ ನರೈನ್ ಅವರನ್ನು ಆಯ್ಕೆ ಮಾಡಿದ್ದಾರೆ.

ಪೊಲಾರ್ಡ್‌ ಅವರ ಟಾಪ್ -5 ಟಿ 20 ಕ್ರಿಕೆಟಿಗರ ಪಟ್ಟಿಯಲ್ಲಿ ಕ್ರಿಸ್ ಗೇಲ್​ಗೆ ಅಗ್ರಸ್ಥಾನ ನೀಡಿದ್ದಾರೆ. ‘ಯೂನಿವರ್ಸ್ ಬಾಸ್’ ಗೇಲ್ 74 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 1854 ರನ್ ಗಳಿಸಿದ್ದಾರೆ. ಇನ್ನು ಫ್ರ್ಯಾಂಚೈಸ್ ಕ್ರಿಕೆಟ್ ಲೀಗ್​ನ ಟಿ20 ಗಳಲ್ಲಿ 448 ಪಂದ್ಯಗಳಲ್ಲಿ 14,276 ರನ್ ಗಳಿಸಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಶ್ರೀಲಂಕಾದ ದಂತಕಥೆ ಮಾಲಿಂಗನನ್ನು ಎರಡನೇ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಮಾಲಿಂಗ 84 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 107 ವಿಕೆಟ್ ಪಡೆದಿದ್ದಾರೆ.

3ನೇ ಸ್ಥಾನವನ್ನು ವೆಸ್ಟ್ ಇಂಡೀಸ್​ನ ಸ್ಪಿನ್ನರ್ ಸುನಿಲ್ ನರೈನ್ ಅವರಿಗೆ ನೀಡಿದ್ದಾರೆ. ಮಿಸ್ಟರಿ ಸ್ಪಿನ್ನರ್ ನರೈನ್ ಒಟ್ಟು 379 ಟಿ20 ಪಂದ್ಯಗಳಲ್ಲಿ 419 ವಿಕೆಟ್ ಪಡೆದಿದ್ದಾರೆ. ವಿಕೆಟ್ ಕೀಪರ್‌ ಆಗಿ ಎಂಎಸ್ ಧೋನಿ ಅವರನ್ನು ಪೊಲಾರ್ಡ್​ ಆಯ್ಕೆ ಮಾಡಿದ್ದಾರೆ, ವಿಶ್ವದ ಅತ್ಯುತ್ತಮ ಫಿನಿಶರ್‌ಗಳಲ್ಲಿ ಒಬ್ಬರಾಗಿರುವ ಟೀಮ್ ಇಂಡಿಯಾ ಮಾಜಿ ನಾಯಕ ಧೋನಿ 344 ಪಂದ್ಯಗಳಲ್ಲಿ 6905 ರನ್ ಗಳಿಸಿದ್ದಾರೆ. ಇನ್ನು ಐದನೇ ಸ್ಥಾನಕ್ಕೆ ತಮ್ಮನ್ನೇ ಪೊಲಾರ್ಡ್ ಆಯ್ಕೆ ಮಾಡಿಕೊಂಡರು. ಆಲ್​ರೌಂಡರ್ ಆಗಿ ಗುರುತಿಸಿಕೊಂಡಿರುವ ಪೊಲಾರ್ಡ್ ಇದುವರೆಗೆ ಟಿ20 ಯಲ್ಲಿ 11,223 ರನ್ ಗಳಿಸಿದ್ದಾರೆ. ಹಾಗೆಯೇ 300 ವಿಕೆಟ್ ಕಬಳಿಸಿದ್ದಾರೆ.

ಇದನ್ನೂ ಓದಿ:  IPL 2021: ಮುಂದಿನ 2 ಪಂದ್ಯಗಳನ್ನು RCB ಗೆಲ್ಲಲೇಬೇಕು, ಏಕೆಂದರೆ…

ಇದನ್ನೂ ಓದಿ: David Warner: SRH ತಂಡದಲ್ಲಿಲ್ಲ ಸ್ಥಾನ: ಪ್ರೇಕ್ಷಕನಾಗಿ ಕಾಣಿಸಿಕೊಂಡ ಡೇವಿಡ್ ವಾರ್ನರ್

ಇದನ್ನೂ ಓದಿ: IPL 2021: ಐಪಿಎಲ್​ನಲ್ಲಿ ಹೊಸ ಇತಿಹಾಸ ನಿರ್ಮಿಸಲಿದ್ದಾರೆ ಹರ್ಷಲ್ ಪಟೇಲ್

(No place for Rohit Sharma: Kieron Pollard’s list of top 5 T20 players)