ವಿಂಡೀಸ್ ತಂಡದ ಸಪೋರ್ಟ್ ಸ್ಟಾಫ್​ ಸದಸ್ಯನಿಗೆ ಕೊವಿಡ್​-19 ಸೋಂಕು ದೃಢ, ಟಾಸ್ ನಂತರ ಆಸ್ಟ್ರೇಲಿಯ-ವಿಂಡೀಸ್ 2ನೇ ಒಡಿಐ ಪಂದ್ಯ ರದ್ದು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 23, 2021 | 2:00 AM

ಈ ಪಂದ್ಯದಲ್ಲಿ ಆಸ್ಟ್ರೇಲಿಯ ಪರ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಿಗೆ ಪದಾರ್ಪಣೆ ಮಾಡಬೇಕಿದ್ದ ವೇಗದ ಬೌಲರ್ ರೈಲೀ ಮೆರಿಡಿತ್ ತನ್ನ ಅವಕಾಶಕ್ಕಾಗಿ ಕಾಯುವಂಥ ಸ್ಥಿತಿ ನಿರ್ಮಾಣವಾಗಿದೆ. ಮಾಹಿತಿಗಳ ಪ್ರಕಾರ ಎರಡೂ ತಂಡಗಳ ಸದಸ್ಯರನ್ನು ಐಸೋಲೇಷನ್​ನಲ್ಲಿ ಇಡಲಾಗುವುದು.

ವಿಂಡೀಸ್ ತಂಡದ ಸಪೋರ್ಟ್ ಸ್ಟಾಫ್​ ಸದಸ್ಯನಿಗೆ ಕೊವಿಡ್​-19 ಸೋಂಕು ದೃಢ, ಟಾಸ್ ನಂತರ ಆಸ್ಟ್ರೇಲಿಯ-ವಿಂಡೀಸ್ 2ನೇ ಒಡಿಐ ಪಂದ್ಯ ರದ್ದು!
ಟಾಸ್​ಗಾಗಿ ನಾಣ್ಯವನ್ನು ಚಿಮ್ಮುತ್ತಿರುವ ಕೈರನ್ ಪೊಲ್ಲಾರ್ಡ್
Follow us on

ಬಾರ್ಬಡೋಸ್:  ಆಸ್ಟ್ರೇಲಿಯ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ನಡೆಯಬೇಕಿದ್ದ ಎರಡನೇ ಒಂದ ದಿನದ ಅಂತರರಾಷ್ಟ್ರೀಯ ಪಂದ್ಯ ಆಟಗಾರನಲ್ಲದ ಒಬ್ಬ ಸದಸ್ಯನಿಗೆ ಕೋವಿಡ್​ ಸೋಂಕು ದೃಢಪಟ್ಟ ನಂತರ ಒಂದೂ ಎಸೆತ ಕಾಣದೆ ರದ್ದಾಯಿತು. ಗಮನಿಸಬೇಕಿರುವ ಅಂಶವೆಂದರೆ ಪಂದ್ಯವನ್ನು ಟಾಸ್ ಪ್ರಕ್ರಿಯೆ ಮುಗಿದ ನಂತರ ರದ್ದುಗೊಳಿಸಲಾಯಿತು. ಟಾಸ್ ಗೆದ್ದ ಆಸ್ಟ್ರೇಲಿಯ ಮೊದಲುಬ್ಯಾಟ್​ ಮಾಡುವ ನಿರ್ಧಾರ ತೆಗೆದುಕೊಂಡಿತ್ತು. ಟಾಸ್ ಆದ ನಂತರವೇ ವಿಷಯ ಬಯಲಿಗೆ ಬಂದಿದ್ದು ಮತ್ತು ಟೀಮುಗಳಿಗೆ ಮಾಹಿತಿಯನ್ನು ನೀಡಿದ್ದು.

ಈ ಪಂದ್ಯದಲ್ಲಿ ಆಸ್ಟ್ರೇಲಿಯ ಪರ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಿಗೆ ಪದಾರ್ಪಣೆ ಮಾಡಬೇಕಿದ್ದ ವೇಗದ ಬೌಲರ್ ರೈಲೀ ಮೆರಿಡಿತ್ ತನ್ನ ಅವಕಾಶಕ್ಕಾಗಿ ಕಾಯುವಂಥ ಸ್ಥಿತಿ ನಿರ್ಮಾಣವಾಗಿದೆ. ಮಾಹಿತಿಗಳ ಪ್ರಕಾರ ಎರಡೂ ತಂಡಗಳ ಸದಸ್ಯರನ್ನು ಐಸೋಲೇಷನ್​ನಲ್ಲಿ ಇಡಲಾಗುವುದು.

ಪಂದ್ಯ ರದ್ದಾದ ಬಗ್ಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯು ಒಂದು ಹೇಳಿಕೆಯನ್ನು ಬಿಡಿಗಡೆ ಮಾಡಿದೆ.
‘ವೆಸ್ಟ್​ ಇಂಡೀಸ್ ತಂಡದ ಒಬ್ಬ ಆಟಗಾರನಲ್ಲದ ಸದಸ್ಯನಿಗೆ ಕೋವಿಡ್​ ಸೋಂಕು ತಗುಲಿರುವುದು ಖಚಿತವಾಗಿರುವುದರಿಂದ ವೆಸ್ಟ್ ಇಂಡೀಸ್ ಮತ್ತು ಪ್ರವಾಸಿ ಆಸ್ಟ್ರೇಲಿಯ ನಡುವೆ ಇಂದು ನಡೆಯಬೇಕಿದ್ದ ಸರಣಿಯ ಎರಡನೇ ಒಂದು ದಿನದ ಅಂತರರಾಷ್ಟ್ರಿಯ ಪಂದ್ಯವನ್ನು ರದ್ದುಗೊಳಿಸಲಾಗಿದೆ,’ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

‘ಬಾರ್ಬಡೋಸ್ ಬ್ರಿಜ್​ಟೌನ್​ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಇಂದು ಟಾಸ್ ನಡೆದ ನಂತರ ಪಂದ್ಯವನ್ನು ರದ್ದುಗೊಳಿಸುವ ತೀರ್ಮಾನ ತೆಗೆದುಕೊಳ್ಳಲಾಯಿತು. ಕೋವಿಡ್ ಶಿಷ್ಟಾಚಾರದ ಹಿನ್ನೆಲೆಯಲ್ಲಿ ರಿಸಲ್ಟ್​ಗಳು ಗೊತ್ತಾದ ನಂತರ ನಿರ್ಣಯವನ್ನು ತೆಗೆದುಕೊಳ್ಳಬೇಕಾಯಿತು. ಎರಡೂ ತಂಡದ ಎಲ್ಲ ಸದಸ್ಯರನ್ನು ಇಂದು ಮತ್ತೆ ಟೆಸ್ಟ್​ಗೊಳಪಡಿಸಲಾಗುವುದು. ಟೆಸ್ಟ್ ರಿಸಲ್ಟ್​ಗಳು ಸಿಕ್ಕ ನಂತರ ಸದರಿ ಪಂದ್ಯವನ್ನು ಮತ್ತೊಂದು ದಿನ ಆಡಿಸಬೇಕೇ ಇಲ್ಲವೇ ಎನ್ನುವ ನಿರ್ಧಾರ ತೆಗೆದುಕೊಳ್ಳಲಾಗುವುದು. ಆಟಗಾರರ ಪಿಸಿಆರ್-ಟೆಸ್ಟ್​ ರಿಸಲ್ಟ್​ ಬರುವವರಗೆ ಅವರೆಲ್ಲ ತಮ್ಮ ಹೋಟೆಲ್ ರೂಮುಗಳಲ್ಲೇ ತಂಗುವರು,’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಬೆಳವಣಿಗೆಯಿಂದಾಗಿ, ಆಸ್ಟ್ರೇಲಿಯಾದ ಮುಂದಿನ ಸರಣಿಗಳು ಸಹ ಪ್ರಭಾವಕ್ಕೊಳಗಾಗಿವೆ. ವಿಂಡೀಸ್ ವಿರುದ್ಧ ಜುಲೈ 24 ರಂದು ಕೊನೆಯ ಒಡಿಐ ಆಡಿದ ನಂತರ ಆಸ್ಟ್ರೇಲಿಯ ಬಾಂಗ್ಲಾದೇಶಗೆ ಪ್ರಯಾಣ ಬೆಳಸಿ ಆಗಸ್ಟ್​ 3 ರಿಂದ 5-ಪಂದ್ಯಗಳ ಟಿ20 ಐ ಸರಣಿಯನ್ನು ಆಡಬೇಕಿದೆ.

ಇದನ್ನೂ ಓದಿ: Howzzat! ಕ್ರಿಕೆಟ್​ ಕುರಿತಾದ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬೇಕೇ? ಹಾಗಿದ್ರೆ ಟಿವಿ9 ನೀಡುತ್ತಿದೆ ಸುವರ್ಣಾವಕಾಶ