ಏಕದಿನ ವಿಶ್ವಕಪ್ನ ವೀಕ್ಷಕ ವಿವರಣೆಗಾರರ ಪಟ್ಟಿ ಬಿಡುಗಡೆ ಮಾಡಿದ ಐಸಿಸಿ
ODI World Cup 2023 commentators list: ಅಕ್ಟೋಬರ್ 5 ರಿಂದ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಏಕದಿನ ವಿಶ್ವಕಪ್ ಕಾಮೆಂಟೇಟರ್‌ಗಳ ಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದೆ. ವಿಶ್ವ ಕ್ರಿಕೆಟ್ನ ಹಲವು ದಿಗ್ಗಜರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಅಕ್ಟೋಬರ್ 5 ರಿಂದ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Cricket Stadium) ಆರಂಭವಾಗಲಿರುವ ಏಕದಿನ ವಿಶ್ವಕಪ್ ಕಾಮೆಂಟೇಟರ್‌ಗಳ ಪಟ್ಟಿಯನ್ನು (World Cup 2023 commentators list) ಐಸಿಸಿ ಬಿಡುಗಡೆ ಮಾಡಿದೆ. ವಿಶ್ವ ಕ್ರಿಕೆಟ್ನ ಹಲವು ದಿಗ್ಗಜರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಸುನಿಲ್ ಗವಾಸ್ಕರ್, ರಿಕಿ ಪಾಂಟಿಂಗ್, ಇಯಾನ್ ಬಿಷಪ್ ಅವರಂತಹ ದಿಗ್ಗಜರ ಕಾಮೆಂಟರಿಗಳು ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ವಿಶ್ವಕಪ್‌ನಾದ್ಯಂತ ಕೇಳಿಬರುತ್ತವೆ. ಈ ದಿಗ್ಗಜರ ಪಟ್ಟಿಯನ್ನು ಬಿಡುಗಡೆ ಮಾಡುವುದರೊಂದಿಗೆ ಐಸಿಸಿ (ICC), ಈ ವಿಶ್ವಕಪ್‌ನಲ್ಲಿ ಯಾರು ಯಾವ ವಿಭಾಗದಲ್ಲಿ ಕಾಮೆಂಟ್ ಮಾಡುತ್ತಾರೆ ಎಂಬುದನ್ನು ಸಹ ಸ್ಪಷ್ಟಪಡಿಸಿದೆ.
ದಿಗ್ಗಜರ ಕೂಟವೇ ಸೇರಿದೆ
ಐಸಿಸಿ ನೀಡಿರುವ ಹೇಳಿಕೆಯ ಪ್ರಕಾರ, ಆಸೀಸ್‌ನ ಮಾಜಿ ದಿಗ್ಗಜ ರಿಕಿ ಪಾಂಟಿಂಗ್ ಮತ್ತು ಇಂಗ್ಲೆಂಡ್‌ನ ಮಾಜಿ ನಾಯಕ ಇಯಾನ್ ಮಾರ್ಗನ್ ಐಸಿಸಿ ಟಿವಿಯಲ್ಲಿ ವಿವರಣೆ ನೀಡಲಿದ್ದಾರೆ. ಐಸಿಸಿ ಟಿವಿ ಕಾಮೆಂಟರಿ ಪಂದ್ಯದ ಪೂರ್ವ, ಇನ್ನಿಂಗ್ಸ್ ಬ್ರೇಕ್ ಮತ್ತು ಪಂದ್ಯದ ನಂತರದ ಚರ್ಚೆಗಳನ್ನು ಒಳಗೊಂಡಿರುತ್ತದೆ. ಪಾಂಟಿಂಗ್ ಮತ್ತು ಮೋರ್ಗನ್ ಅವರೊಂದಿಗೆ ಶೇನ್ ವ್ಯಾಟ್ಸನ್, ಲಿಸಾ ಸ್ಥಾಲೇಕರ್, ರಮಿಜ್ ರಾಜಾ, ರವಿಶಾಸ್ತ್ರಿ, ಆರೋನ್ ಫಿಂಚ್, ಸುನಿಲ್ ಗವಾಸ್ಕರ್ ಮತ್ತು ಮ್ಯಾಥ್ಯೂ ಹೇಡನ್ ಕೂಡ ಇರಲಿದ್ದಾರೆ.
ಇಂದು ಭಾರತ- ಇಂಗ್ಲೆಂಡ್ ಮುಖಾಮುಖಿ; ಪಂದ್ಯ ಎಷ್ಟು ಗಂಟೆಗೆ, ಯಾವ ಚಾನೆಲ್ನಲ್ಲಿ ನೇರಪ್ರಸಾರ? ಇಲ್ಲಿದೆ ಮಾಹಿತಿ
6 ಜನ ಭಾರತೀಯರು
ನಾಸರ್ ಹುಸೇನ್, ಇಯಾನ್ ಸ್ಮಿತ್ ಮತ್ತು ಇಯಾನ್ ಬಿಷಪ್ ಕಾಮೆಂಟರಿ ಬಾಕ್ಸ್‌ನಲ್ಲಿರುತ್ತಾರೆ. ಕಳೆದ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಫೈನಲ್‌ನಲ್ಲಿ ಈ ಮೂವರು ದಂತಕಥೆಗಳು ಕಾಮೆಂಟರಿ ರೂಮ್‌ನಲ್ಲಿಯೂ ಇದ್ದರು. ಇವರ ಹೊರತಾಗಿ ವಾಕರ್ ಯೂನಿಸ್, ಶಾನ್ ಪೊಲಾಕ್, ಅಂಜುಮ್ ಚೋಪ್ರಾ, ಮೈಕಲ್ ಆರ್ಥರ್ಟನ್ ಕಾಮೆಂಟರಿ ಬಾಕ್ಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಸೈಮನ್ ಡಲ್, ಎಂಪುಮೆಲೆಲೊ ಬಂಗ್ವಾ, ಸಂಜಯ್ ಮಂಜ್ರೇಕರ್, ಕೇಟಿ ಮಾರ್ಟಿನ್, ದಿನೇಶ್ ಕಾರ್ತಿಕ್, ಡಿರ್ಕ್ ನೆನೆಸ್, ಸ್ಯಾಮ್ಯುಯೆಲ್ ಬದ್ರಿ ಮತ್ತು ರಸೆಲ್ ಅರ್ನಾಲ್ಡ್ ಕೂಡ ಇರುತ್ತಾರೆ.
Some of the most recognisable voices in the game will call the #CWC23 in India 🎙https://t.co/FBuIziElPa
— ICC (@ICC) September 29, 2023
ಇವರಲ್ಲದೆ ಹರ್ಷ್ ಭೋಗ್ಲೆ, ಕ್ಯಾಸ್ ನೈಡೂ, ಮಾರ್ಕ್ ನಿಕೋಲ್ಸ್, ನಟಾಲಿ ಜರ್ಮನೋಸ್, ಮಾರ್ಕ್ ಹೊವಾರ್ಡ್ ಮತ್ತು ಇಯಾನ್ ವಾರ್ಡ್ ಅವರು ಪ್ರಸಾರ ಚಾನೆಲ್‌ಗಳಲ್ಲಿ ಕಾಮೆಂಟರಿ ಮಾಡುವುದನ್ನು ನಾವು ಕಾಣಬಹುದು.
ಯಾವ ದೇಶದಿಂದ ಯಾರ್ಯಾರು?
- ಆಸ್ಟ್ರೇಲಿಯಾ: ರಿಕಿ ಪಾಂಟಿಂಗ್, ಶೇನ್ ವ್ಯಾಟ್ಸನ್, ಲಿಸಾ ಸ್ಥಾಲೇಕರ್, ಆರನ್ ಫಿಂಚ್, ಮ್ಯಾಥ್ಯೂ ಹೇಡನ್, ಮಾರ್ಕ್ ನಿಕೋಲಸ್, ಡಿರ್ಕ್ ನ್ಯಾನೆಸ್, ಮಾರ್ಕ್ ಹೊವಾರ್ಡ್.
- ಇಂಗ್ಲೆಂಡ್: ಇಯಾನ್ ಮಾರ್ಗನ್, ನಾಸರ್ ಹುಸೇನ್, ಮೈಕೆಲ್ ಅಥರ್ಟನ್, ಇಯಾನ್ ವಾರ್ಡ್
- ಭಾರತ: ರವಿಶಾಸ್ತ್ರಿ, ಸುನಿಲ್ ಗವಾಸ್ಕರ್, ಅಂಜುಮ್ ಚೋಪ್ರಾ, ಸಂಜಯ್ ಮಂಜ್ರೇಕರ್, ದಿನೇಶ್ ಕಾರ್ತಿಕ್, ಹರ್ಷ ಭೋಗ್ಲೆ, ಕೆ ಶ್ರೀಕಾಂತ್, ಗೌತಮ್ ಗಂಭೀರ್, ಇರ್ಫಾನ್ ಪಠಾಣ್, ಹರ್ಭಜನ್ ಸಿಂಗ್, ಪಿಯೂಷ್ ಚಾವ್ಲಾ, ಎಸ್ ಶ್ರೀಶಾಂತ್, ಎಂಎಸ್‌ಕೆ ಪ್ರಸಾದ್, ಸಂದೀಪ್ ಪಾಟೀಲ್, ಸುನಿಲ್ ಜೋಶಿ, ಮಿಥಾಲಿ ರಾಜ್
- ಪಾಕಿಸ್ತಾನ: ರಮೀಜ್ ರಾಜಾ, ವಕಾರ್ ಯೂನಿಸ್
- ಬಾಂಗ್ಲಾದೇಶ: ಅಥರ್ ಅಲಿ ಖಾನ್
- ನ್ಯೂಜಿಲೆಂಡ್: ಇಯಾನ್ ಸ್ಮಿತ್, ಸೈಮನ್ ಡೌಲ್, ಕೇಟಿ ಮಾರ್ಟಿನ್
- ವೆಸ್ಟ್ ಇಂಡೀಸ್: ಇಯಾನ್ ಬಿಷಪ್, ಸ್ಯಾಮ್ಯುಯೆಲ್ ಬದ್ರಿ
- ದಕ್ಷಿಣ ಆಫ್ರಿಕಾ: ಶಾನ್ ಪೊಲಾಕ್, ಕಾಸ್ ನೈಡೂ, ನಟಾಲಿ ಜರ್ಮನೋಸ್
- ಜಿಂಬಾಬ್ವೆ: ಎಂಪುಮೆಲೆಲೊ ಎಂಬಂಗ್ವಾ
- ಶ್ರೀಲಂಕಾ: ರಸೆಲ್ ಅರ್ನಾಲ್ಡ್
ಕನ್ನಡದ ಕಾಮೆಂಟೇಟರ್‌ಗಳ ಪಟ್ಟಿ: ವಿನಯ್ ಕುಮಾರ್, ಗುಂಡಪ್ಪ ವಿಶ್ವನಾಥ್, ವಿಜಯ್ ಭಾರದ್ವಾಜ್, ಭರತ್ ಚಿಪ್ಲಿ, ಪವನ್ ದೇಶಪಾಂಡೆ, ಅಖಿಲ್ ಬಾಲಚಂದ್ರ
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:46 am, Sat, 30 September 23