
ಅಕ್ಟೋಬರ್ 5 ರಿಂದ ಭಾರತದಲ್ಲಿ ಆರಂಭವಾಗಲಿರುವ ಏಕದಿನ ವಿಶ್ವಕಪ್ನ ಟಿಕೆಟ್‌ಗಳ ಮಾರಾಟದ (ODI World Cup 2023 Match Ticket Sales) ವಿವರಗಳನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC)ಪ್ರಕಟಿಸಿದೆ. ವಿಶ್ವಕಪ್ ವೇಳಾಪಟ್ಟಿಯ ಪ್ರಕಾರ ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಆಡಲಿದೆ. ಆ ಬಳಿಕ ಇಡೀ ಕ್ರಿಕೆಟ್ ಲೋಕವೇ ಕಾದು ಕುಳಿತಿರುವ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಿನ ಹೈವೋಲ್ಟೇಜ್ ಕದನ ಅಕ್ಟೋಬರ್ 14 ರಂದು ಅಹಮದಾಬಾದ್‌ನಲ್ಲಿ ನಡೆಯಲ್ಲಿದೆ. ಆದಾಗ್ಯೂ, ಎಲ್ಲಾ ಪಂದ್ಯಗಳ ಟಿಕೆಟ್‌ಗಳು ಒಂದೇ ಬಾರಿಗೆ ಅಭಿಮಾನಿಗಳಿಗೆ ಲಭ್ಯವಿರುವುದಿಲ್ಲ. ಟಿಕೆಟ್‌ಗಳಿಗಾಗಿ ನೋಂದಣಿ ಈಗಾಗಲೇ ಪ್ರಾರಂಭವಾಗಿದ್ದು, ಆಗಸ್ಟ್ 25 ರಿಂದ ಟೀಂ ಇಂಡಿಯಾದ (Team India) ಅಭ್ಯಾಸ ಪಂದ್ಯಗಳನ್ನು ಹೊರತುಪಡಿಸಿ, ಇತರ ತಂಡಗಳ ಅಭ್ಯಾಸ ಪಂದ್ಯಗಳು ಮತ್ತು ಪಂದ್ಯಗಳ ಟಿಕೆಟ್ ಮಾರಾಟ ಆರಂಭವಾಗಲಿದೆ.
ಇನ್ನು ಭಾರತದ ಪಂದ್ಯಗಳಿಗೆ ಸಂಬಂಧಿಸಿದಂತೆ ಗುವಾಹಟಿ ಮತ್ತು ತಿರುವನಂತಪುರದಲ್ಲಿ ನಡೆಯುವ ಪಂದ್ಯಗಳ ಟಿಕೆಟ್ ಮಾರಾಟ ಆಗಸ್ಟ್ 30 ರಿಂದ ಶುರುವಾಗಲಿದೆ. ಹಾಗೆಯೇ ಚೆನ್ನೈ, ದೆಹಲಿ ಮತ್ತು ಪುಣೆಯಲ್ಲಿ ನಡೆಯಲ್ಲಿರುವ ಪಂದ್ಯಗಳ ಟಿಕೆಟ್ ಆಗಸ್ಟ್ 31 ರಿಂದ ಲಭ್ಯವಿರುತ್ತದೆ. ಸೆಪ್ಟೆಂಬರ್ 1 ರಂದು ಧರ್ಮಶಾಲಾ, ಲಕ್ನೋ ಮತ್ತು ಮುಂಬೈನಲ್ಲಿ ನಡೆಯುವ ಟೀಂ ಇಂಡಿಯಾದ ಪಂದ್ಯಗಳ ಟಿಕೆಟ್ ಮಾರಾಟ ಪ್ರಾರಂಭವಾಗಲಿದೆ. ಬೆಂಗಳೂರು ಮತ್ತು ಕೋಲ್ಕತ್ತಾದಲ್ಲಿ ನಡೆಯಲಿರುವ ಟೀಂ ಇಂಡಿಯಾದ ಪಂದ್ಯಗಳ ಟಿಕೆಟ್ ಮಾರಾಟ ಸೆಪ್ಟೆಂಬರ್ 2 ರಿಂದ ಆರಂಭವಾಗಲಿವೆ.
🎟️ #CWC23 Ticket sales
🔹 25 August: Non-India warm-up matches and all non-India event matches
🔹 30 August: India matches at Guwahati and Trivandrum
🔹 31 August: India matches at Chennai, Delhi and Pune
🔹 1 September: India matches at Dharamsala, Lucknow and Mumbai
🔹 2… pic.twitter.com/GgrWMoIFfA— ICC (@ICC) August 15, 2023
ಅಂತಿಮವಾಗಿ, ಅಹಮದಾಬಾದ್‌ನಲ್ಲಿ ನಡೆಯಲ್ಲಿರುವ ಭಾರತದ ಪಂದ್ಯಗಳ ಟಿಕೆಟ್ ಮಾರಾಟವು ಸೆಪ್ಟೆಂಬರ್ 3 ರಿಂದ ಪ್ರಾರಂಭವಾಗಲಿದೆ. ಇನ್ನುಳಿದಂತೆ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳ ಟಿಕೆಟ್ ಮಾರಾಟವು ಸೆಪ್ಟೆಂಬರ್ 15 ರಿಂದ ಪ್ರಾರಂಭವಾಗಲಿದೆ. ಕ್ರಿಕೆಟ್ ಅಭಿಮಾನಿಗಳು https://www.cricketworldcup.com/register ಮೂಲಕ ಆಗಸ್ಟ್ 15 ರಿಂದ ಟಿಕೆಟ್ ನೋಂದಾಯಿಸಲು ಅವಕಾಶ ಮಾಡಿಕೊಡಲಾಗಿದೆ.
R Ashwin: ಟೀಂ ಇಂಡಿಯಾ ಅಲ್ಲ..! ಏಕದಿನ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವನ್ನು ಹೆಸರಿಸಿದ ಅಶ್ವಿನ್
ಈ ಬಗ್ಗೆ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಐಸಿಸಿ, ‘ಏಕದಿನ ವಿಶ್ವಕಪ್ನ ಅಧಿಕೃತ ಟಿಕೆಟ್‌ಗಳ ಮಾಹಿತಿ ಮತ್ತು ಅಪ್ಡೇಟ್ ಬಗ್ಗೆ ಮಾಹಿತಿ ತಿಳಿಯಲು ಅಭಿಮಾನಿಗಳು ಇಂದಿನಿಂದ ಅಂದರೆ ಆಗಸ್ಟ್ 15ರಿಂದ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಕೆಲವು ಬದಲಾವಣೆಗಳ ನಂತರ ವೇಳಾಪಟ್ಟಿಯನ್ನು ಈಗ ಅಂತಿಮಗೊಳಿಸಲಾಗಿದ್ದು, ಅಭಿಮಾನಿಗಳು ಈಗ ಟಿಕೆಟ್‌ಗಳನ್ನು ಖರೀದಿಸಲು ಮತ್ತು ಪಂದ್ಯವನ್ನು ವೀಕ್ಷಿಸಲು ಎದುರು ನೋಡಬಹುದು. ಎಲ್ಲಾ ಮೈದಾನಗಳಲ್ಲಿ ಅಭಿಮಾನಿಗಳು ಉತ್ತಮ ಗುಣಮಟ್ಟದ ಕ್ರಿಕೆಟ್ ಅನ್ನು ಆನಂದಿಸುವಂತೆ ಮಾಡಲು ಬಿಸಿಸಿಐ ಶ್ರಮಿಸಲಿದೆ’ ಎಂದು ಬಿಸಿಸಿಐ ಸಿಇಒ ಹೇಮಂಗ್ ಅಮೀನ್, ಐಸಿಸಿ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:29 am, Wed, 16 August 23