AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SA20 2024 ವೇಳಾಪಟ್ಟಿ ಪ್ರಕಟ; ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್- ಸೂಪರ್ ಕಿಂಗ್ಸ್ ಮುಖಾಮುಖಿ

SA20 2024 schedule announced: SA20 ಲೀಗ್​ನ ಮೊದಲ ಆವೃತ್ತಿಯ ಯಶಸ್ಸಿನ ಬಳಿಕ ಇದೀಗ ಎರಡನೇ ಆವೃತ್ತಿಗೆ ವೇದಿಕೆ ಸಜ್ಜಾಗಿದ್ದು, ಇದೀಗ 2024ರ SA20 ಲೀಗ್​ನ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಜನವರಿ 10 ರಂದು ಗ್ಕೆಬರ್ಹಾದಲ್ಲಿ ನಡೆಯಲ್ಲಿರುವ ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡವು ಜೋಬರ್ಗ್ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಲಿದೆ.

SA20 2024 ವೇಳಾಪಟ್ಟಿ ಪ್ರಕಟ; ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್- ಸೂಪರ್ ಕಿಂಗ್ಸ್ ಮುಖಾಮುಖಿ
ಎಸ್​ಎ20 ಲೀಗ್
ಪೃಥ್ವಿಶಂಕರ
|

Updated on:Aug 16, 2023 | 9:04 AM

Share

SA20 ಲೀಗ್​ನ ಮೊದಲ ಆವೃತ್ತಿಯ ಯಶಸ್ಸಿನ ಬಳಿಕ ಎರಡನೇ ಆವೃತ್ತಿಗೆ ವೇದಿಕೆ ಸಜ್ಜಾಗಿದ್ದು, ಇದೀಗ 2024ರ SA20 ಲೀಗ್​ನ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಜನವರಿ 10 ರಂದು ಗ್ಕೆಬರ್ಹಾದಲ್ಲಿ ನಡೆಯಲ್ಲಿರುವ ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡವು ಜೋಬರ್ಗ್ ಸೂಪರ್ ಕಿಂಗ್ಸ್ (Sunrisers Eastern Cape vs Joburg Super Kings) ವಿರುದ್ಧ ಸೆಣಸಲಿದೆ. ಮೊದಲ ಆವೃತ್ತಿಯಲ್ಲಿದ್ದಂತೆ, ಈ ಆವೃತ್ತಿಯಲ್ಲೂ ಎಲ್ಲಾ ಆರು ತಂಡಗಳು ಪರಸ್ಪರ ಎರಡು ಬಾರಿ ಮುಖಾಮುಖಿಯಾಗಲಿವೆ. ಪಾಯಿಂಟ್ ಪಟ್ಟಿಯಲ್ಲಿ ಅಗ್ರ ನಾಲ್ಕು ಸ್ಥಾನ ಪಡೆಯುವ ತಂಡಗಳು ಪ್ಲೇಆಫ್‌ಗೆ ಅರ್ಹತೆ ಪಡೆಯುತ್ತವೆ. ಅಂತಿಮವಾಗಿ ಫೈನಲ್ ಪಂದ್ಯ ಫೆಬ್ರವರಿ 11, 2024 ರಂದು ನಡೆಯಲಿದೆ.

ಆದರೆ, ಈ ಬಾರಿ ಪ್ಲೇಆಫ್‌ ವಿದಾನದಲ್ಲಿ ಬದಲಾವಣೆ ತರಲಾಗಿದೆ. ಮೇಲೆ ಹೇಳಿದಂತೆ ಅಗ್ರ ನಾಲ್ಕು ತಂಡಗಳು ಪ್ಲೇಆಫ್‌ಗೆ ಅರ್ಹತೆ ಪಡೆಯಲಿದ್ದು, ಪಾಯಿಂಟ್ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಮೊದಲ ಕ್ವಾಲಿಫೈಯರ್ ಪಂದ್ಯವನ್ನು ಆಡಲಿವೆ. ಹಾಗೆಯೇ ಪಾಯಿಂಟ್​ ಪಟ್ಟಿಯಲ್ಲಿ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಪಡೆಯುವ ತಂಡಗಳು ಎಲಿಮಿನೇಟರ್​ನಲ್ಲಿ ಕಣಕ್ಕಿಳಿಯಲ್ಲಿವೆ. ಇಲ್ಲಿ ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡವು ನೇರವಾಗಿ ಫೈನಲ್​ಗೆ ಎಂಟ್ರಿಕೊಡಲಿದೆ.

ಆ ಬಳಿಕ ಮೊದಲ ಕ್ವಾಲಿಫೈಯರ್​ನಲ್ಲಿ ಸೋತ ತಂಡವು ಎಲಿಮಿನೇಟರ್​ ಪಂದ್ಯದಲ್ಲಿ ಗೆದ್ದ ತಂಡವನ್ನು ಎರಡನೇ ಕ್ವಾಲಿಫೈಯರ್​ನಲ್ಲಿ ಎದುರಿಸಲಿದೆ. ಇಲ್ಲಿ ಗೆದ್ದ ತಂಡ ಫೈನಲ್​ಗೆ ಪ್ರವೇಶಿಸಲಿದೆ.

SA20: ಮಾರ್ಕ್ರಾಮ್ ಸಿಡಿಲಬ್ಬರದ ಶತಕ! ಸೋತ ಸೂಪರ್ ಕಿಂಗ್ಸ್; ಫೈನಲ್​ಗೇರಿದ ಸನ್​ರೈಸರ್ಸ್

ವಾರಾಂತ್ಯದಲ್ಲಿ ಎಲ್ಲಾ ಡಬಲ್-ಹೆಡರ್‌

ಇನ್ನು ಕ್ರೀಡಾಂಗಣಕ್ಕೆ ಹೆಚ್ಚಿನ ಪ್ರೇಕ್ಷಕರನ್ನು ಕರೆತರಲು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿರುವ ಮಂಡಳಿಯು ಭಾನುವಾರದಂದು ಸ್ಥಳೀಯ ಸಮಯ ಮಧ್ಯಾಹ್ನ 3 ಗಂಟೆಗೆ ಮುಂಚಿತವಾಗಿ ಪಂದ್ಯವನ್ನು ಆರಂಭಿಸಲು ಮುಂದಾಗಿದೆ. ಹಾಗೆಯೇ ವಾರಾಂತ್ಯದಲ್ಲಿ ಎಲ್ಲಾ ಡಬಲ್-ಹೆಡರ್‌ ಪಂದ್ಯಗಳನ್ನು ಆಡಿಸಲು ತೀರ್ಮಾನಿಸಲಾಗಿದೆ.

ವೇಳಾಪಟ್ಟಿಯನ್ನು ಪ್ರಕಟಿಸಿದ ಬಳಿಕ ಮಾತನಾಡಿದ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಮತ್ತು SA20 ಕಮಿಷನರ್ ಗ್ರೀಮ್ ಸ್ಮಿತ್, ಲೀಗ್​ನ ಎರಡನೇ ಆವೃತ್ತಿಯ ವೇಳಾಪಟ್ಟಿಯನ್ನು ಪ್ರಕಟಿಸಲು ನಾವು ರೋಮಾಂಚನಗೊಂಡಿದ್ದೇವೆ. ಮೊದಲ ಆವೃತ್ತಿಯಲ್ಲಿ ಅಭಿಮಾನಿಗಳಿಂದ ಸಿಕ್ಕ ಬೆಂಬಲ ಅದ್ಭುತವಾಗಿತ್ತು. ಹೀಗಾಗಿ ಎರಡನೇ ಆವೃತ್ತಿಯಲ್ಲೂ ಅಭಿಮಾನಿಗಳಿಗೆ ಬರಪೂರ ಮನರಂಜನೆ ಸಿಗಲಿದೆ ಎಂದಿದ್ದಾರೆ.

ಸೆಪ್ಟೆಂಬರ್ 27 ರಂದು ಮಿನಿ ಹರಾಜು

ಮಿನಿ ಹರಾಜಿಗೂ ಮುನ್ನ ಈಗಾಗಲೇ ಫ್ರಾಂಚೈಸಿಗಳು ತಮ್ಮಲ್ಲಿ ಉಳಿಸಿಕೊಂಡಿರುವ ಹಾಗೂ ಬಿಡುಗಡೆ ಮಾಡಿರುವ ಆಟಗಾರರ ಪಟ್ಟಿಯನ್ನು ಪ್ರಕಟಿಸಿವೆ. ಇದೀಗ ಸೆಪ್ಟೆಂಬರ್ 27 ರಂದು ನಡೆಯಲ್ಲಿರುವ ಕಿರು-ಹರಾಜಿನಲ್ಲಿ ತಂಡಕ್ಕೆ ಬೇಕಾದ ಆಟಗಾರರನ್ನು ಖರೀದಿಸಲು ತಂತ್ರ ರೂಪಿಸಿವೆ. ಇನ್ನು ಮಿನಿ-ಹರಾಜಿನಲ್ಲಿ ಪ್ರತಿ ತಂಡದ ಪರ್ಸ್​ ಗಾತ್ರವನ್ನು ಹೆಚ್ಚಿಸಲಾಗಿದ್ದು, ಪ್ರತಿ ತಂಡವೂ 39.1 ಮಿಲಿಯನ್‌ ಹಣವನ್ನು ಹೆಚ್ಚಾಗಿ ಪಡೆಯಲ್ಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:41 am, Wed, 16 August 23