SA20 auction: ಅರ್ಜುನ್ ತೆಂಡೂಲ್ಕರ್ ಜೊತೆ ಆಡಿದ ಆಟಗಾರ 4.13 ಕೋಟಿಗೆ ಹರಾಜು..! ಮಿಕ್ಕವರಿಗೆ ಸಿಕ್ಕ ಹಣವೆಷ್ಟು?
SA20 auction: ಟ್ರಿಸ್ಟಾನ್ ಸ್ಟಬ್ಸ್ ಈ ಲೀಗ್‌ನಲ್ಲಿ ಇದುವರೆಗೆ ಹರಾಜದ ಅತ್ಯಂತ ದುಬಾರಿ ಆಟಗಾರರಾಗಿದ್ದಾರೆ. ಅವರನ್ನು ಸನ್ ರೈಸರ್ಸ್ ಈಸ್ಟರ್ನ್ ಕೇಪ್ ತಂಡ 4.13 ಕೋಟಿ ರೂ. ನೀಡಿ ಖರೀದಿಸದೆ.
ಮುಂದಿನ ವರ್ಷ ಆರಂಭವಾಗಲಿರುವ ಕ್ರಿಕೆಟ್ ದಕ್ಷಿಣ ಆಫ್ರಿಕಾದ ಟಿ20 ಲೀಗ್‌ಗೆ ಸಿದ್ಧತೆಗಳು ಭರದಿಂದ ಸಾಗಿವೆ. ಈ ಲೀಗ್‌ನ ಆಟಗಾರರ ಹರಾಜು ಪ್ರಕ್ರಿಯೆ ಸೋಮವಾರದಿಂದ ಆರಂಭವಾಗಿದೆ. ಈ ಲೀಗ್‌ನಲ್ಲಿ ಆರು ಫ್ರಾಂಚೈಸಿಗಳು ಭಾಗವಹಿಸುತ್ತಿದ್ದು, ಇವೆಲ್ಲವೂ ಐಪಿಎಲ್‌ನಲ್ಲಿ ಕಂಡುಬರುವ ಅದೇ ಫ್ರಾಂಚೈಸಿಗಳಾಗಿವೆ. ಐಪಿಎಲ್‌ನಂತೆಯೇ, ಎಸ್‌ಎ20 ಲೀಗ್‌ನ (SA20 league) ಹರಾಜಿನಲ್ಲಿ ಆಟಗಾರರ ಮೇಲೆ ಸಾಕಷ್ಟು ಹಣದ ಮಳೆ ಸುರಿಸಲಾಗುತ್ತಿದೆ. ಐಪಿಎಲ್-2022ರಲ್ಲಿ (IPL-2022) ಸನ್‌ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ಮಾರ್ಕೊ ಯಾನ್ಸನ್ (Marco Yanson), ಎಸ್‌ಎ20 ಲೀಗ್‌ನಲ್ಲೂ ಅದೇ ಫ್ರಾಂಚೈಸಿಯ ಭಾಗವಾಗಿದ್ದಾರೆ.
ಟ್ರಿಸ್ಟಾನ್ ಸ್ಟಬ್ಸ್ ಈ ಲೀಗ್‌ನಲ್ಲಿ ಇದುವರೆಗೆ ಹರಾಜದ ಅತ್ಯಂತ ದುಬಾರಿ ಆಟಗಾರರಾಗಿದ್ದಾರೆ. ಅವರನ್ನು ಸನ್ ರೈಸರ್ಸ್ ಈಸ್ಟರ್ನ್ ಕೇಪ್ ತಂಡ 4.13 ಕೋಟಿ ರೂ. ನೀಡಿ ಖರೀದಿಸದೆ. ದಕ್ಷಿಣ ಆಫ್ರಿಕಾದ ಟಿ20 ವಿಶ್ವಕಪ್ ತಂಡದ ಭಾಗವಾಗಿರುವ ರಿಲೆ ರೂಸೋ ಮೇಲೂ ಭಾರೀ ಹಣ ಸುರಿಯಲಾಗಿದೆ. ಡೆಲ್ಲಿ ಕ್ಯಾಪಿಟಲ್ಸ್‌ನ ಅಸೋಸಿಯೇಟ್ ತಂಡವಾದ ಪ್ರಿಟೋರಿಯಾ ಕ್ಯಾಪಿಟಲ್ಸ್ ಅವರನ್ನು 3.9 ಕೋಟಿ ರೂ.ಗೆ ಖರೀದಿಸಿದೆ. ದಕ್ಷಿಣ ಆಫ್ರಿಕಾದ ಟಿ20 ಲೀಗ್‌ನಲ್ಲಿ ಹೈದರಾಬಾದ್ ಫ್ರಾಂಚೈಸಿ ತನ್ನ ತಂಡವನ್ನು ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ಎಂದು ಹೆಸರಿಸಿದ್ದು, ಈ ತಂಡವು ಯಾನ್ಸನ್ ಅವರನ್ನು 2.73 ಕೋಟಿ ರೂ.ಗೆ ಖರೀದಿಸಿದೆ.
ದುಬಾರಿ ಬೆಲೆ ಪಡೆದ ಆಟಗಾರರು
ಲುಂಗಿ ಎನ್‌ಗಿಡಿ IPL-2022 ರಲ್ಲಿ ದೆಹಲಿ ಕ್ಯಾಪಿಟಲ್ಸ್‌ನ ಭಾಗವಾಗಿದ್ದಾರೆ. ಆದರೆ ಅವರ ದೇಶದ T20 ಲೀಗ್‌ನಲ್ಲಿ ಅವರು ರಾಜಸ್ಥಾನ ಫ್ರಾಂಚೈಸ್ ತಂಡವಾದ ಪಾರ್ಲ್ ರಾಯಲ್ಸ್ ಪರ ಆಡಲಿದ್ದಾರೆ. ಈ ಬಲಗೈ ವೇಗದ ಬೌಲರ್‌ಗೆ ಈ ಫ್ರಾಂಚೈಸ್ 1.52 ಕೋಟಿ ರೂಪಾಯಿಗಳನ್ನು ನೀಡಿದೆ. ಈ ತಂಡಕ್ಕೆ ತಬ್ರೇಜ್ ಶಮ್ಸಿ ಕೂಡ ಸೇರಿಕೊಂಡಿದ್ದು, ಫ್ರಾಂಚೈಸಿ ಅವರಿಗೆ 1.93 ಕೋಟಿ ನೀಡಿದೆ. ಡ್ವೇನ್ ಪ್ರಿಟೋರಿಯಸ್‌ಗೆ ದರ್ವಾನ್ ಸೂಪರ್ ಜೈಂಟ್ಸ್ ತಂಡ 1.83 ಕೋಟಿ ರೂ. ನೀಡಿ ಖರೀದಿಸಿದರೆ, ಮುಂಬೈ ಇಂಡಿಯನ್ಸ್ ಕೇಪ್ ಟೌನ್ ರಾಸಿ ವ್ಯಾನ್ ಡೆರ್ ದುಸಾನ್ ಅವರನ್ನು 1.75 ಕೋಟಿಗೆ ಖರೀದಿಸಿದೆ. ರೀಜಾ ಹೆಂಡ್ರಿಕ್ಸ್ ಅವರನ್ನು ಜೋಬರ್ಗ್ ಸೂಪರ್ ಕಿಂಗ್ಸ್ ತಂಡ 2.02 ಕೋಟಿ ರೂ.ಗೆ ಖರೀದಿಸಿದೆ.