IPL 2021 Playoffs: ಆರ್​ಸಿಬಿಗೆ ಬಾಕಿ ಇರುವುದು ಕೇವಲ 5 ಪಂದ್ಯ: ಪ್ಲೇ ಆಫ್​ಗೇರಲು ಇನ್ನೆಷ್ಟು ಪಂದ್ಯ ಗೆಲ್ಲಬೇಕು?

| Updated By: Vinay Bhat

Updated on: Sep 25, 2021 | 9:32 AM

Royal Challengers Bangalore: ಭಾರತದಲ್ಲಿ ಐಪಿಎಲ್ 2021 ಅನ್ನು ಬೊಂಬಾಟ್ ಆಗಿ ಪ್ರಾರಂಭಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸತತ ನಾಲ್ಕು ಗೆಲುವು ಸಾಧಿಸಿ ಬಲಿಷ್ಠ ತಂಡವಾಗಿ ಹೊರಹೊಮ್ಮಿತ್ತು. ಆದರೆ, ಯುಎಇಗೆ ಕಾಲಿಟ್ಟ ಬಳಿಕ ಕಳಪೆ ಪ್ರದರ್ಶನ ತೋರಲು ಶುರುಮಾಡಿದೆ.

IPL 2021 Playoffs: ಆರ್​ಸಿಬಿಗೆ ಬಾಕಿ ಇರುವುದು ಕೇವಲ 5 ಪಂದ್ಯ: ಪ್ಲೇ ಆಫ್​ಗೇರಲು ಇನ್ನೆಷ್ಟು ಪಂದ್ಯ ಗೆಲ್ಲಬೇಕು?
RCB Virat Kohli
Follow us on

ಐಪಿಎಲ್ 2021 ಯುಎಇನಲ್ಲಿ (IPL 2021 UAE) ಎರಡನೇ ಚರಣ ಆರಂಭಕ್ಕೂ ಮುನ್ನ ಸುಗಮವಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಪ್ಲೇ ಆಫ್ (PlayOffs) ಹಾದಿ ಈಗ ಕಠಿಣವಾಗುತ್ತಾ ಸಾಗುತ್ತಿದೆ. ಒಂದರ ಹಿಂದೆ ಒಂದರಂತೆ ಸತತ ಎರಡು ಸೋಲುಗಳನ್ನು ಅನುಭವಿಸಿರುವ ಆರ್​ಸಿಬಿ (RCB) ಮತ್ತದೆ ಹಿಂದಿನ ತಪ್ಪುಗಳನ್ನು ಮರುಕಳಿಸುತ್ತಿದೆ. ಸದ್ಯ ವಿರಾಟ್ ಕೊಹ್ಲಿ (Virat Kohli) ಪಡೆ ಒಟ್ಟು ಒಂಬತ್ತು ಪಂದ್ಯಗಳನ್ನು ಆಡಿದ್ದು ಈ ಪೈಕಿ ಐದರಲ್ಲಿ ಗೆಲುವು ಕಂಡರೆ ನಾಲ್ಕು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. 10 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ (IPL Point Table) ಮೂರನೇ ಸ್ಥಾನದಲ್ಲಿದೆ. ಬೆಂಗಳೂರು (Bangluru) ತಂಡಕ್ಕೆ ಬಾಕಿ ಇರುವುದು ಕೇವಲ ಐದು ಪಂದ್ಯಗಳು ಮಾತ್ರ. ಹಾಗಾದ್ರೆ ಪ್ಲೇ ಆಫ್ ಸುತ್ತಿಗೆ ಪ್ರವೇಶ ಪಡೆಯಲು ಇನ್ನೆಷ್ಟು ಪಂದ್ಯಗಳನ್ನು ಗೆಲ್ಲಬೇಕು ಎಂಬ ಲೆಕ್ಕಾಚಾರ ಇಲ್ಲಿದೆ.

ಭಾರತದಲ್ಲಿ ಐಪಿಎಲ್ 2021 ಅನ್ನು ಬೊಂಬಾಟ್ ಆಗಿ ಪ್ರಾರಂಭಿಸಿದ್ದ ಆರ್​ಸಿಬಿ ಸತತ ನಾಲ್ಕು ಗೆಲುವು ಸಾಧಿಸಿ ಬಲಿಷ್ಠ ತಂಡವಾಗಿ ಹೊರಹೊಮ್ಮಿತ್ತು. ಆದರೆ, ಯುಎಇಗೆ ಕಾಲಿಟ್ಟ ಬಳಿಕ ಮತ್ತದೆ ಹಿಂದಿನ ಕಳಪೆ ಪ್ರದರ್ಶನ ತೋರಲು ಶುರುಮಾಡಿದೆ. ಸದ್ಯ ಆಡಿರುವ ಎರಡು ಪಂದ್ಯಗಳಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಹೀನಾಯ ಸೋಲು ಕಂಡರೆ, ಶುಕ್ರವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಬೌಲರ್​ಗಳ ಕಳಪೆ ಆಟದಿಂದ ಗೆಲುವು ಕಾಣಲು ಸಾಧ್ಯವಾಗಲಿಲ್ಲ.

ಆರ್​ಸಿಬಿಗೆ ಇನ್ನು ಕೇವಲ ಐದು ಪಂದ್ಯಗಳಷ್ಟೇ ಬಾಕಿಯಿದೆ. ಇದರಲ್ಲಿ ಪ್ಲೇ ಆಫ್​ಗೇರಲು ಕೊಹ್ಲಿ ಪಡೆ ಕನಿಷ್ಠ ಮೂರು ಪಂದ್ಯಗಳನ್ನಾದರೂ ಗೆಲ್ಲಲೇ ಬೇಕಿದೆ. ಆರ್​ಸಿಬಿ ತನ್ನ ಮುಂದಿನ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ, ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್, ಸನ್​ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಬೇಕಿದೆ.

ಆರ್​ಸಿಬಿಯ ಎದುರಾಳಿ ತಂಡಕ್ಕೂ ಬಾಕಿ ಉಳಿದಿರುವ ಪಂದ್ಯಗಳು ಮಹತ್ವದ್ದಾಗಿವೆ. ಹೀಗಾಗಿ ಕೊಹ್ಲಿ ಪಡೆಯ ಪ್ಲೇ ಆಫ್ ಹಾದಿ ಸುಲಭವಾಗಿಲ್ಲ. ಮುಂದಿನ ಪಂದ್ಯಕ್ಕೆ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಿ ಹೊಸ ರಣತಂತ್ರದೊಂದಿಗೆ ಕಣಕ್ಕಿಳಿಯಬೇಕಿದೆ. ರಾಯಲ್ ಚಾಲೆಂಜರ್ಸ್ ತನ್ನ ಮುಂದಿನ ಪಂದ್ಯವನ್ನು ಸೆಪ್ಟೆಂಬರ್ 26 ಭಾನುವಾರದಂದು ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ.

ನಿನ್ನೆಯ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿ ಮೊದಲ ವಿಕೆಟ್​ಗೆ ಸ್ಫೋಟಕ ಬ್ಯಾಟಿಂಗ್ ನಡೆಸಿತು. ನಾಯಕ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಚೆನ್ನೈ ಬೌಲರ್​ಗಳ ಬೆವರಿಳಿಸಿದರು. ಶತಕದ ಜೊತೆಯಾಟ ಆಡಿದ ಈ ಜೋಡಿ 111 ರನ್ ಗಳಿಸಿತು. ಕೊಹ್ಲಿ 41 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಬಾರಿಸಿ 53 ರನ್​ಗಳಿಸಿದರೆ, ಪಡಿಕ್ಕಲ್ 50 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಸಿಡಿಸಿ 70 ರನ್​ ಬಾರಿಸಿದರು.

ನಂತರ ಆರ್​ಸಿಬಿ ರನ್ ಗಳಿಸಲು ಪರದಾಡಿ 20 ಓವರ್​ನಲ್ಲಿ 6 ವಿಕೆಟ್ ನಷ್ಟಕ್ಕೆ 156 ರನ್ ಕಲೆಹಾಕಿತಷ್ಟೆ. ಚೆನ್ನೈ ಈ ಟಾರ್ಗೆಟ್ ಅನ್ನು ಕೇವಲ 18.1 ಓವರ್​ನಲ್ಲೇ ಬೆನ್ನಟ್ಟಿ ಗೆಲುವು ಕಂಡಿತು. ರುತುರಾಜ್ ಗಾಯಕ್ವಾಡ್ ಅವರ 38, ಫಾಪ್ ಡುಪ್ಲೆಸಿಸ್ ಅವರ 31 ಹಾಗೂ ಅಂಬಟಿ ರಾಯುಡು ಅವರ 32 ರನ್​ಗಳಿಸಿದರು.

Virat Kohli: ತಂಡದ ಸೋಲಿಗೆ ವಿರಾಟ್ ಕೊಹ್ಲಿ ನೇರವಾಗಿ ದೂರಿದ್ದು ಯಾರನ್ನ ಗೊತ್ತಾ?

ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಹೈದರಾಬಾದ್-ಪಂಜಾಬ್: ಸೋತರೆ ಬಹುತೇಕ ಟೂರ್ನಿಯಿಂದ ಔಟ್

(Only 5 match remaining for RCB How many matches to win Royal Challengers Bangalore IPL 2021 playoffs)