Operation Sindoor: ಪಾಕಿಸ್ತಾನದಿಂದ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಬಾಂಬ್ ಹಾಕುವುದಾಗಿ ಬೆದರಿಕೆ

Narendra Modi stadium Bomb threat: ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ (ಜಿಸಿಎ) ಗೆ ಪಾಕಿಸ್ತಾನದವನೆಂದು ಹೇಳಿಕೊಳ್ಳುವ ವ್ಯಕ್ತಿಯಿಂದ ನರೇಂದ್ರ ಮೋದಿ ಕ್ರೀಡಾಂಗಣವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕುವ ಇಮೇಲ್ ಬಂದಿದೆ ಎಂದು ವರದಿಯಾಗಿದೆ. ಈ ಇಮೇಲ್ ಬಂದ ಸ್ವಲ್ಪ ಸಮಯದ ನಂತರ GCA ಅಹಮದಾಬಾದ್ ಪೊಲೀಸರಿಗೆ ಮಾಹಿತಿ ನೀಡಿತು.

Operation Sindoor: ಪಾಕಿಸ್ತಾನದಿಂದ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಬಾಂಬ್ ಹಾಕುವುದಾಗಿ ಬೆದರಿಕೆ
Narendra Modi Stadium

Updated on: May 07, 2025 | 7:48 PM

ಬೆಂಗಳೂರು (ಮೇ. 07): ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಭಾರತವು ಆಪರೇಷನ್ ಸಿಂಧೂರ್ (Operation Sindoor) ಮೂಲಕ ಪ್ರತ್ಯುತ್ತರ ನೀಡಿದೆ. ಆಪರೇಷನ್ ಸಿಂಧೂರ್ ಅಡಿಯಲ್ಲಿ ಪಾಕಿಸ್ತಾನಿ ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಲಾಯಿತು. ಇದಾದ ನಂತರ, ಗುಜರಾತ್ ಕ್ರಿಕೆಟ್ ಅಸೋಸಿಯೇಷನ್‌ಗೆ ‘ಪಾಕಿಸ್ತಾನಿ ಜೆಕೆ’ ಹೆಸರಿನಲ್ಲಿ ಇಮೇಲ್ ಬಂದಿದ್ದು, ಅದರಲ್ಲಿ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದ ಮೇಲೆ ಬಾಂಬ್ ದಾಳಿ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ.

ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ​​(ಜಿಸಿಎ) ಗೆ ಪಾಕಿಸ್ತಾನದವನೆಂದು ಹೇಳಿಕೊಳ್ಳುವ ವ್ಯಕ್ತಿಯಿಂದ ನರೇಂದ್ರ ಮೋದಿ ಕ್ರೀಡಾಂಗಣವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕುವ ಇಮೇಲ್ ಬಂದಿದೆ ಎಂದು ವರದಿಯಾಗಿದೆ. ಈ ಇಮೇಲ್ ಬಂದ ಸ್ವಲ್ಪ ಸಮಯದ ನಂತರ GCA ಅಹಮದಾಬಾದ್ ಪೊಲೀಸರಿಗೆ ಮಾಹಿತಿ ನೀಡಿತು. ಅಹಮದಾಬಾದ್ ಪೊಲೀಸ್ ಅಧಿಕಾರಿಗಳ ಉನ್ನತ ಗುಂಪು ಮತ್ತು ಬಾಂಬ್ ನಿಷ್ಕ್ರಿಯ ದಳವು ಕ್ರೀಡಾಂಗಣವನ್ನು ಪರಿಶೀಲಿಸಿದೆ.

ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ಪಾಕಿಸ್ತಾನಿ ವ್ಯಕ್ತಿಯೊಬ್ಬರು ಈ ಇಮೇಲ್ ಕಳುಹಿಸಿದ್ದು, ಅದರಲ್ಲಿ “ನಿಮ್ಮ ಕ್ರೀಡಾಂಗಣವನ್ನು ನಾವು ಸ್ಫೋಟಿಸುತ್ತೇವೆ” ಎಂಬ ಸಂದೇಶವಿದೆ. ಮುಂಬರುವ ಐಪಿಎಲ್ ಪಂದ್ಯಗಳನ್ನು ಗಮನದಲ್ಲಿಟ್ಟುಕೊಂಡು, ಈ ಸಂದೇಶವನ್ನು ನಿರ್ಲಕ್ಷಿಸುವ ಬದಲು ಎಲ್ಲಾ ಸೂಕ್ತ ಕ್ರಮಗಳನ್ನು ಪೂರ್ಣಗೊಳಿಸಲಾಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ
ಟೆಸ್ಟ್ ನಾಯಕತ್ವದಿಂದ ರೋಹಿತ್​ರನ್ನು ಕೆಳಗಿಳಿಸಲು ನಿರ್ಧರಿಸಿದ ಬಿಸಿಸಿಐ
ಪ್ಲೇಆಫ್‌ ಸಮೀಪಿಸುತ್ತಿರುವಾಗಲೇ ಆರ್​ಸಿಬಿಗೆ ನಾಲ್ಕು ಹೊಡೆತ
ಪಂಜಾಬ್- ಮುಂಬೈ ಪಂದ್ಯ ಸ್ಥಳಾಂತರ; ಡೆಲ್ಲಿ ಪಂದ್ಯ ನಡೆಯುವುದು ಡೌಟ್
ಆಪರೇಷನ್ ಸಿಂಧೂರ್: ವಿಮಾನ ಹಾರಾಟ ನಿಷೇಧ; ಐಪಿಎಲ್ ಪಂದ್ಯಗಳು ಸ್ಥಳಾಂತರ?

IND vs ENG: ಟೆಸ್ಟ್ ನಾಯಕತ್ವದಿಂದ ರೋಹಿತ್​ ಶರ್ಮಾಗೆ ಗೇಟ್​ಪಾಸ್; ಇಂಗ್ಲೆಂಡ್ ಪ್ರವಾಸಕ್ಕೆ ನೂತನ ನಾಯಕ

ಏಪ್ರಿಲ್‌ 22 ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಉಗ್ರರು ಭೀಕರ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಅದೆಷ್ಟೋ ಅಮಾಯಕರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈ ಉಗ್ರರ ದಾಳಿಗೆ ಪ್ರತಿಕಾರ ತೆಗೆದುಕೊಳ್ಳುವುದಾಗಿ ಹೇಳಿತ್ತು. ಹೇಳಿದ ಮಾತಿನಂತೆ, ಭಾರತೀಯ ಸೇನೆ ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆಯ ಮೂಲಕ ಪಾಕಿಸ್ತಾನದ ಉಗ್ರ ಸಂಘಟನೆಗಳ 9 ಶಿಬಿರಗಳ ಮೇಲೆ ರಾತ್ರೋ ರಾತ್ರಿ ಕ್ಷಿಪಣಿ ದಾಳಿ ನಡೆಸಿದೆ.

ಈ ಮೂಲಕ ಪ್ರೀತಿಪಾತ್ರರನ್ನು ಕಳೆದುಕೊಂಡ ಭಾರತೀಯರ ಕಣ್ಣೀರಿಗೆ ನ್ಯಾಯ ಸಿಕ್ಕಿದ್ದು, ಈ ಪ್ರತಿಕಾರಕ್ಕೆ ಇಡೀ ಭಾರತವೇ ಸಂಭ್ರಮಾಚರಣೆ ನಡೆಸಿದೆ. ರಾತ್ರಿ 1 ಗಂಟೆಯ ಬಳಿಕ ಭಾರತದ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆ ಸಂಘಟಿತರಾಗಿ ಆಪರೇಷನ್ ಸಿಂಧೂರ ನಡೆಸಿವೆ. ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಲಷ್ಕರೆ ತೈಯಬಾ, ಹಿಜ್ಬುಲ್ ಮುಜಾಹಿದೀನ್ ಮತ್ತು ಜೈಷೆ ಸಂಘಟನೆಗಳಿಗೆ ಸೇರಿದ 9 ಸ್ಥಳಗಳ ಮೇಲೆ ನಿರ್ದಿಷ್ಟವಾಗಿ ಗುರಿ ಮಾಡಿ ಸ್ಟ್ರೈಕ್ ಮಾಡಲಾಗಿದೆ. ಕೆಲ ವರದಿಗಳ ಪ್ರಕಾರ 70ಕ್ಕೂ ಹೆಚ್ಚು ಉಗ್ರರು ಸತ್ತಿದ್ದಾರೆ. ಲಷ್ಕರೆ ಉಗ್ರರ ಹಫೀಜ್ ಸಯ್ಯದ್ ಅವರ ಕುಟುಂಬದ 10 ಮಂದಿ ಸದಸ್ಯರೂ ಸತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ