ಆಸ್ಟ್ರೇಲಿಯಾ (Australia) ವಿರುದ್ಧ ಪಿಂಕ್ ಟೆಸ್ಟ್ ಪಂದ್ಯಕ್ಕಾಗಿ ಪಾಕಿಸ್ತಾನ್ (Pakistan) ಪ್ಲೇಯಿಂಗ್ ಇಲೆವೆನ್ ಪ್ರಕಟಿಸಿದೆ. ಸಿಡ್ನಿಯಲ್ಲಿ ನಡೆಯಲಿರುವ ಈ ಪಂದ್ಯದಿಂದ ತಂಡದ ಪ್ರಮುಖ ಬೌಲರ್ ಶಾಹೀನ್ ಅಫ್ರಿದಿಯನ್ನು ಕೈ ಬಿಡಲಾಗಿದೆ. ಹಾಗೆಯೇ ಎಡಗೈ ಆರಂಭಿಕ ಆಟಗಾರ ಇಮಾಮ್ ಉಲ್ ಹಕ್ಗೂ ಆಡುವ ಬಳಗದಲ್ಲಿ ಅವಕಾಶ ನೀಡಲಾಗಿಲ್ಲ.
ಇಲ್ಲಿ ಇಮಾಮ್ ಉಲ್ ಹಕ್ ಬದಲಿಗೆ ಯುವ ಬ್ಯಾಟರ್ ಸೈಮ್ ಅಯ್ಯೂಬ್ಗೆ ಅವಕಾಶ ನೀಡಲಾಗಿದೆ. ಹಾಗೆಯೇ ಶಾಹೀನ್ ಅಫ್ರಿದಿ ಸ್ಥಾನದಲ್ಲಿ ಸಾಜಿದ್ ಖಾನ್ ಕಾಣಿಸಿಕೊಂಡಿದ್ದಾರೆ. ಇನ್ನು ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಮೊಹಮ್ಮದ್ ರಿಝ್ವಾನ್ ಅವರನ್ನೇ ಮುಂದುವರೆಸಲಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಪಾಕಿಸ್ತಾನ್ ತಂಡವು ಹೀನಾಯವಾಗಿ ಸೋತಿದೆ. ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ತಂಡ 360 ರನ್ಗಳಿಂದ ಗೆದ್ದುಕೊಂಡಿತ್ತು. ಇನ್ನು 2ನೇ ಪಂದ್ಯದಲ್ಲಿ ಪಾಕ್ ತಂಡವು 79 ರನ್ಗಳಿಂದ ಸೋಲನುಭವಿಸಿತ್ತು.
ಇದೀಗ 2-0 ಅಂತರದಿಂದ ಸರಣಿ ಸೋತಿರುವ ಪಾಕಿಸ್ತಾನ್ ತಂಡವು ಕ್ವೀನ್ ಸ್ವೀಪ್ ತಪ್ಪಿಸಿಕೊಳ್ಳಲು ತಂಡದಲ್ಲಿ ಬದಲಾವಣೆ ಮಾಡಿಕೊಂಡಿದೆ. ಈ ಬದಲಾವಣೆಯಿಂದಾಗಿ ಪಾಕ್ ತಂಡದ ಪ್ರಮುಖ ಬೌಲರ್ ಶಾಹೀನ್ ಶಾ ಅಫ್ರಿದಿ ಹೊರಬಿದ್ದಿರುವುದು ಅಚ್ಚರಿ.
ಇದನ್ನೂ ಓದಿ: Australia vs Pakistan: ಏನಿದು ಪಿಂಕ್ ಟೆಸ್ಟ್?
ಪಾಕಿಸ್ತಾನ್ ತಂಡ: ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಶಾನ್ ಮಸೂದ್ (ನಾಯಕ), ಬಾಬರ್ ಆಝಂ, ಸೌದ್ ಶಕೀಲ್, ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಸಲ್ಮಾನ್ ಅಲಿ ಅಘಾ, ಅಮೀರ್ ಜಮಾಲ್, ಶಾಹೀನ್ ಶಾ ಅಫ್ರಿದಿ, ಹಸನ್ ಅಲಿ, ಮಿರ್ ಹಂಝ, ಸರ್ಫರಾಝ್ ಅಹ್ಮದ್, ಮೊಹಮ್ಮದ್ ನವಾಝ್ , ಫಹೀಮ್ ಅಶ್ರಫ್, ಅಬ್ರಾರ್ ಅಹ್ಮದ್, ಸೈಮ್ ಅಯ್ಯೂಬ್, ಮೊಹಮ್ಮದ್ ವಾಸಿಮ್ ಜೂನಿಯರ್, ಸಾಜಿದ್ ಖಾನ್.