Honey Trap: ಹನಿ ಟ್ರ್ಯಾಪ್ ಬಲೆಗೆ ಬಿದ್ದ ಪಾಕ್ ನಾಯಕ ಬಾಬರ್ ಅಜಮ್! ವಿಡಿಯೋ ವೈರಲ್
Babar Azam: ಈ ವಿಡಿಯೋದಲ್ಲಿ ಪಾಕ್ ನಾಯಕನನ್ನೇ ಹೊಲುವ ವ್ಯಕ್ತಿಯೊಬ್ಬ ಹುಡುಗಿಯೊಬ್ಬಳೊಂದಿಗೆ ವಿಡಿಯೋ ಚಾಟ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ.
ಪಾಕಿಸ್ತಾನದ ನಾಯಕ ಬಾಬರ್ ಅಜಮ್ (Babar Azam)ಗೆ ಸಂಕಷ್ಟಗಳ ಸರಮಾಲೆಯೇ ಎದುರಾಗುತ್ತಿವೆ. ತವರಿನಲ್ಲಿ ಏಕದಿನ ಹಾಗೂ ಟೆಸ್ಟ್ ಸರಣಿ ಸೋತ ಬಳಿಕ ಇದೀಗ ಅವರ ನಾಯಕತ್ವದ ಮೇಲೂ ಟೀಕೆ ವ್ಯಕ್ತವಾಗುತ್ತಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಹೊಸ ಅಧ್ಯಕ್ಷ ನಜಮ್ ಸೇಥಿ ಮತ್ತು ಮ್ಯಾನೇಜ್‌ಮೆಂಟ್ ಶೀಘ್ರದಲ್ಲೇ ಬಾಬರ್ ಅವರನ್ನು ಎಲ್ಲಾ ಮೂರು ಸ್ವರೂಪಗಳ ನಾಯಕತ್ವದಿಂದ ತೆಗೆದುಹಾಕಲಿದ್ದಾರೆ ಎಂಬ ವರದಿಗಳು ಕೇಳಿಬರುತ್ತಿವೆ. ಈ ಎಲ್ಲಾ ಊಹಾಪೋಹಗಳ ನಡುವೆ, ಬಾಬರ್ ಆಜಮ್ ಮತ್ತೊಂದು ದೊಡ್ಡ ಸಮಸ್ಯೆಗೆ ಸಿಲುಕಿ ಹಾಕಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪಾಕ್ ನಾಯಕ ಬಾಬರ್ ಅಜಮ್ ಅವರ ಕೆಲವು ಖಾಸಗಿ ವಿಡಿಯೋಗಳು ಮತ್ತು ಫೋಟೋಗಳು ಹರಿದಾಡುತ್ತಿದ್ದು, ಪಾಕ್ ನಾಯಕ ಹನಿ ಟ್ರ್ಯಾಪ್ (Honey Trap) ಬಲೆಗೆ ಬಿದ್ದಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಇದು ಬಾಬರ್ ಅಜಮ್ ಅವರದ್ದೇ ಎನ್ನಲಾದ ಕೆಲವು ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ವಿಡಿಯೋದಲ್ಲಿ ಪಾಕ್ ನಾಯಕನನ್ನೇ ಹೊಲುವ ವ್ಯಕ್ತಿಯೊಬ್ಬ ಹುಡುಗಿಯೊಬ್ಬಳೊಂದಿಗೆ ವಿಡಿಯೋ ಚಾಟ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಹೀಗಾಗಿ ತಂಡದ ನಾಯಕತ್ವದಿಂದ ಕೆಳಗಿಳಿಯಬೇಕಾದ ಭೀತಿಯಲ್ಲಿದ್ದ ಬಾಬರ್ಗೆ ಖಾಸಗಿ ವಿಡಿಯೋ ವೈರಲ್ ಆಗಿರುವುದು ಮತ್ತಷ್ಟು ಸಂಕಷ್ಟ ತಂದ್ದೊಡ್ಡಿದೆ.
Babar Azam sexting with gf of another Pakistan cricketer and promising her that her bf won’t be out of team if she keeps sexting with him is just ??
I hope allah is watching all this .
— Dr Nimo Yadav (@niiravmodi) January 15, 2023
ಈ ಹಿಂದೆಯೂ ಕೇಳಿ ಬಂದಿತ್ತು ಆರೋಪ
ಬಾಬರ್ ಅಜಮ್ ಈ ಹಿಂದೆ ಹಮೀಜಾ ಮುಖ್ತಾರ್ ಎಂಬ ಮಹಿಳೆಗೆ ಕಿರುಕುಳ, ಬೆದರಿಕೆ ಮತ್ತು ಬ್ಲ್ಯಾಕ್‌ಮೇಲ್ ಮಾಡಿದ ಆರೋಪವನ್ನು ಎದುರಿಸಿದ್ದರು. ಬಾಬರ್ ಆಜಮ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ, ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ ಮತ್ತು ಬೋಗಸ್ ಮದುವೆಯ ಭರವಸೆಗಳನ್ನು ನೀಡಿದ್ದಾರೆ ಎಂದು ಮಹಿಳೆ ಆರೋಪ ಹೊರಿಸಿದ್ದರು.
ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನ
ಪ್ರಸ್ತುತ, ಬಾಬರ್ ಅಜಮ್ ಪಾಕಿಸ್ತಾನ ತಂಡದ ಎಲ್ಲಾ ಮೂರು ಸ್ವರೂಪಗಳ (ಟೆಸ್ಟ್, ಏಕದಿನ, ಟಿ20) ನಾಯಕರಾಗಿದ್ದಾರೆ. ಇತ್ತೀಚೆಗೆ, ಅವರ ನಾಯಕತ್ವದಲ್ಲಿ, ಪಾಕಿಸ್ತಾನ ತವರಿನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 0-3 ಅಂತರದಿಂದ ಸೋಲನ್ನು ಅನುಭವಿಸಿತ್ತು. ಈ ಮೂಲಕ ಪಾಕಿಸ್ತಾನ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ತವರಿನಲ್ಲಿ ವೈಟ್‌ವಾಶ್ ಮುಖಭಂಗ ಅನುಭವಿಸಿದ ಮುಜುಗರದ ದಾಖಲೆಗೆ ಬಾಬರ್ ಪಡೆ ಕೊರಳೊಡ್ಡಿತ್ತು.
ಆ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ನ್ಯೂಜಿಲೆಂಡ್ ತಂಡ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಿತ್ತು. ಇದರಲ್ಲಿ ಪಾಕಿಸ್ತಾನ ಎರಡು ಬಾರಿಯೂ ಸೋಲಿನಿಂದ ಸ್ವಲ್ಪದರಲ್ಲೇ ಪಾರಾಯಿತು. ಹೇಗೋ ಪಾಕಿಸ್ತಾನ ತಂಡ ಎರಡು ಟೆಸ್ಟ್ ಪಂದ್ಯಗಳನ್ನು ಡ್ರಾ ಮಾಡಿಕೊಳ್ಳುವುದರೊಂದಿಗೆ ಸರಣಿಯನ್ನು ಅಂತ್ಯಗೊಳಿಸಿತು. ಆದರೆ ಮೂರು ಏಕದಿನ ಸರಣಿಯಲ್ಲಿ ಪಾಕ್ ತಂಡದ ಸೋಲನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಾಗಲಿಲ್ಲ. ತವರಿನಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ ಪಾಕಿಸ್ತಾನವನ್ನು 2-1 ಅಂತರದಿಂದ ಸೋಲಿಸಿ, ಸರಣಿ ಕೈವಶ ಮಾಡಿಕೊಂಡಿತ್ತು. ಈ ಎರಡು ದೇಶಗಳ ಪ್ರವಾಸಕ್ಕೂ ಮುನ್ನ ಆಸ್ಟ್ರೇಲಿಯಾ ವಿರುದ್ಧವೂ ಪಾಕಿಸ್ತಾನ ಕಳಪೆ ಪ್ರದರ್ಶನ ನೀಡಿತ್ತು. ಹೀಗಾಗಿ ತಂಡದ ಕಳಪೆ ಆಟಕ್ಕೆ ನಾಯಕ ಬಾಬರ್ ಅಜಮ್ರನ್ನು ಹೊಣೆ ಮಾಡಿರುವ ಪಾಕ್ ಮಂಡಳಿ ಅವರ ನಾಯಕತ್ವ ಪಟ್ಟವನ್ನು ಕಸಿದುಕೊಳ್ಳಲು ತೀರ್ಮಾನಿಸಿದೆ ಎಂಬ ಮಾತು ಕೇಳಿಬರುತ್ತಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:16 pm, Mon, 16 January 23