ಭಾರತ-ಶ್ರೀಲಂಕಾ ಪಂದ್ಯ ವೀಕ್ಷಣೆಗೆ ಕ್ರೀಡಾಂಗಣದಲ್ಲಿ ಜನ ಕಡಿಮೆ; ಬಹಿಷ್ಕರಿಸಬೇಕಾಗಿದ್ದು ಕ್ರಿಕೆಟ್ ಪಂದ್ಯವನ್ನಲ್ಲ: ಶಶಿ ತರೂರ್
ವಾಸ್ತವವಾಗಿ ಪ್ರತಿಭಟನಾಕಾರರು ಸಚಿವರಿಗೆ ಬಹಿಷ್ಕಾರ ಹಾಕಬೇಕಿತ್ತು. ಕ್ರಿಕೆಟ್ ಪಂದ್ಯಕ್ಕಲ್ಲ, ನಿನ್ನೆಯ ಬಹಿಷ್ಕಾರವು ತಿರುವನಂತಪುರಂನಲ್ಲಿ ಕ್ರಿಕೆಟ್ ಭವಿಷ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಸಚಿವರ ಅಥವಾ ಅವರ ಸಂವೇದನಾರಹಿತ ಕಾಮೆಂಟ್‌ಗಳಿಗೆ ಯಾವುದೇ ಸಂಬಂಧವಿಲ್ಲದ
ಭಾರತ ಮತ್ತು ಶ್ರೀಲಂಕಾ ನಡುವಿನ ಅಂತಿಮ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ (Cricket) ಪಂದ್ಯಕ್ಕೆ ಕಡಿಮೆ ಜನ ಸೇರಲು ಕಾರಣವಾಯಿತು ಎಂದು ಆರೋಪಿಸಿದ ಬಹಿಷ್ಕಾರ ಅಭಿಯಾನದ ಕುರಿತು ತಮ್ಮ ಹೇಳಿಕೆಯನ್ನು ಕೆಲವರು ತಪ್ಪಾಗಿ ಅರ್ಥೈಸಿದ್ದಾರೆ ಎಂದು ಕೇರಳದ ತಿರುವನಂತಪುರಂನ ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ಹೇಳಿದ್ದಾರೆ. ಈ ಬಗ್ಗೆ ಸ್ಪಷ್ಟವಾಗಿ ವಿವರಿಸದ ತರೂರ್, ಪ್ರತಿಭಟನಾಕಾರರು ಯಾರ ವಿರುದ್ಧ ಪ್ರತಿಭಟಿಸುತ್ತಾರೋ ಅವರನ್ನು ಮಾತ್ರ ಗುರಿಯಾಗಿಸಬೇಕು. ಆಟವನ್ನು ಬಹಿಷ್ಕರಿಸುವುದು ತಿರುವನಂತಪುರಂನಲ್ಲಿ ಕ್ರಿಕೆಟ್ ಭವಿಷ್ಯವನ್ನು ಮಾತ್ರ ಹಾನಿಗೊಳಿಸುತ್ತದೆ. ಕ್ರೀಡಾ ಸಚಿವ ವಿ. ಅಬ್ದುರೆಹ್ಮಾನ್ (V Abdurahiman) ಅವರ ವಿವಾದ ಹೇಳಿಕೆಯ ಹೆಸರಿನಲ್ಲಿ ಅಭಿಮಾನಿಗಳು ಸ್ಟೇಡಿಯಂ ಬಹಿಷ್ಕರಿಸಬಾರದಿತ್ತು ಎಂದಿದ್ದಾರೆ ತರೂರ್. ಟಿಕೆಟ್ ಖರೀದಿಸಲು ಹಣವಿಲ್ಲದವರು ಆಟ ನೋಡಲು ಹೋಗಬಾರದು ಎಂದು ಸಚಿವರ ವ್ಯಂಗ್ಯಕ್ಕೆ ಪ್ರತಿಕ್ರಿಯಿಸಿದವರ ಬಗ್ಗೆ ನನಗೆ ವಿರೋಧವಿಲ್ಲ. ಆದರೆ ಪಂದ್ಯ ವೀಕ್ಷಿಸಲು ತಲೆ ಕೆಡಿಸಿಕೊಳ್ಳದ ಕ್ರೀಡಾ ಸಚಿವರಿಗೆ ಸ್ಟೇಡಿಯಂ ತುಂಬಿದೆಯೋ, ಖಾಲಿ ಇದೆಯೋ ಎಂಬುದು ಲೆಕ್ಕಕ್ಕೆ ಬರುವುದಿಲ್ಲ. ಆದ್ದರಿಂದ, ಈ ಬಹಿಷ್ಕಾರವು ಅವರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಶಶಿ ತರೂರ್ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದಿದ್ದಾರೆ.
1. It appears that my statement yesterday regretting the poor attendance at the third India-SriLanka ODI, as a result of the social media boycott urged by fans enraged by the insensitive remarks of the Kerala Sports Minister, has been misrepresented by some.
— Shashi Tharoor (@ShashiTharoor) January 16, 2023
‘ವಾಸ್ತವವಾಗಿ ಪ್ರತಿಭಟನಾಕಾರರು ಸಚಿವರಿಗೆ ಬಹಿಷ್ಕಾರ ಹಾಕಬೇಕಿತ್ತು. ಕ್ರಿಕೆಟ್ ಪಂದ್ಯಕ್ಕಲ್ಲ, ನಿನ್ನೆಯ ಬಹಿಷ್ಕಾರವು ತಿರುವನಂತಪುರಂನಲ್ಲಿ ಕ್ರಿಕೆಟ್ ಭವಿಷ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಸಚಿವರ ಅಥವಾ ಅವರ ಸಂವೇದನಾರಹಿತ ಕಾಮೆಂಟ್‌ಗಳಿಗೆ ಯಾವುದೇ ಸಂಬಂಧವಿಲ್ಲದ ಕೆಸಿಎ, ಈ ವರ್ಷದ ಕೊನೆಯಲ್ಲಿ ತಿರುವನಂತಪುರಂ ವಿಶ್ವಕಪ್‌ನ ಸ್ಥಳವಾಗಿ ಆಯ್ಕೆಯಾಗಲು ತನ್ನ ವಾದವನ್ನು ಬಲಪಡಿಸಲು ಹೆಚ್ಚಿನ ಅಭಿಮಾನಿಗಳು ಸೇರುವ ಅಗತ್ಯವಿದೆ. ನಿನ್ನೆಯ ಖಾಲಿ ಕ್ರೀಡಾಂಗಣವನ್ನು ಕಾರಣವಾಗಿಟ್ಟುಕೊಂಡು ಬಿಸಿಸಿಐ ನಮ್ಮ ವಿರುದ್ಧ ನಿರ್ಧಾರ ತೆಗೆದುಕೊಂಡರೆ, ಅದು ಕೇರಳದ ಕ್ರೀಡಾಭಿಮಾನಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ ತರೂರ್.
ಕೇರಳದ ಕ್ರೀಡಾ ಸಚಿವರು ಹೇಳಿದ್ದೇನು?
ಜನವರಿ 15ರಂದು ನಡೆದ ಭಾರತ-ಶ್ರೀಲಂಕಾ ಏಕದಿನ ಪಂದ್ಯದ ಟಿಕೆಟ್‌ಗೆ ಮನರಂಜನಾ ತೆರಿಗೆಯನ್ನು ತೀವ್ರವಾಗಿ ಹೆಚ್ಚಿಸಿರುವ ಕುರಿತು ಟೀಕೆಗೆ ಕೇರಳದ ಕ್ರೀಡಾ ಸಚಿವ ವಿ.ಅಬ್ದುರೆಹ್ಮಾನ್ ಪ್ರತಿಕ್ರಿಯೆ ವಿವಾದ ಸೃಷ್ಟಿಸಿತ್ತು. ಹಸಿವಿನಿಂದ ಬಳಲುತ್ತಿರುವವರು ಆಟ ನೋಡಲು ಹೋಗಬಾರದು ಎಂದು ಸಚಿವರು ಹೇಳಿದ್ದರು.
ಕಳೆದ ವರ್ಷದ ಸ್ಪರ್ಧೆಯಲ್ಲಿ ಶೇ.5ರಷ್ಟಿದ್ದ ಮನರಂಜನಾ ತೆರಿಗೆಯನ್ನು ಈ ಬಾರಿ ಶೇ.12ಕ್ಕೆ ಹೆಚ್ಚಿಸಲಾಗಿದೆ. ತೆರಿಗೆ 30% ಮತ್ತು GST 18% ಆಗಿದೆ. ಟಿಕೆಟ್ ಖರೀದಿಸಿ ಆಟ ನೋಡದವರು ಈ ರೀತಿ ಟೀಕೆ ಮಾಡುತ್ತಿದ್ದಾರೆ ಎಂದಿದ್ದರು ಸಚಿವರು.
ಕಳೆದ ಬಾರಿ ತೆರಿಗೆ ಕಡಿತ ಮಾಡಿದ್ದರೂ ಜನರಿಗೆ ಪ್ರಯೋಜನವಾಗಿಲ್ಲ. ಬಿಸಿಸಿಐ ಟಿಕೆಟ್ ದರ ಹೆಚ್ಚಿಸಿ ಎಲ್ಲ ಹಣವನ್ನು ತೆಗೆದುಕೊಂಡಿದೆ. ಸರ್ಕಾರಕ್ಕೆ ಸಿಗಬೇಕಾದ ಹಣ ಸಿಗಬೇಕು. ತೆರಿಗೆ ಹಣ ಕ್ರೀಡಾ ವಲಯದಲ್ಲಿಯೇ ಬಳಕೆಯಾಗಲಿದೆ. ತೆರಿಗೆ ಹಣದಲ್ಲಿ ಮೀನುಗಾರರ ಪುನರ್ವಸತಿಗಾಗಿ ಮುತ್ತತ್ತಿಯಲ್ಲಿ ಫ್ಲ್ಯಾಟ್ ನಿರ್ಮಿಸಬಹುದು ಎಂದು ಸಚಿವರು ಹೇಳಿದ್ದರು.
ಇದನ್ನೂ ಓದಿ:Team India: ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಹೊಸ ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ
ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣದಲ್ಲಿದ್ದ ತರೂರ್, ಕ್ರೀಡಾ ಸಚಿವರ ಹೇಳಿಕೆಯಿಂದಾಗಿ ಹೆಚ್ಚಿನ ಅಭಿಮಾನಿಗಳು ಪಂದ್ಯ ವೀಕ್ಷಣೆಗೆ ಬಂದಿಲ್ಲ ಎಂದು ದೂರಿದ್ದಾರೆ. ಅದೇ ವೇಳೆ ಶಬರಿಮಲೆ ತೀರ್ಥಯಾತ್ರೆ, ಪೊಂಗಲ್ ಹಬ್ಬ ಮತ್ತು ಕೆಲವು ಸಿಬಿಎಸ್‌ಇ ಪರೀಕ್ಷೆಯಿಂದಾಗಿ ಜನರು ಪಂದ್ಯ ನೋಡಲು ಬಂದಿಲ್ಲ ಎಂದು ಎಂದು ಕೇರಳ ಕ್ರಿಕೆಟ್ ಸಂಸ್ಥೆ (ಕೆಸಿಎ) ಹೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:25 pm, Mon, 16 January 23