ಕ್ರಿಕೆಟ್ ಮೈದಾನದಲ್ಲಿ ಕುಂಬಳಕಾಯಿ ಬೆಳೆಯುತ್ತಿರುವ ಪಾಕಿಸ್ತಾನ

| Updated By: ಝಾಹಿರ್ ಯೂಸುಫ್

Updated on: Aug 18, 2021 | 7:04 PM

Pakistan Cricket Stadium: 2009 ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ ಶ್ರೀಲಂಕಾ ತಂಡದ ಮೇಲೆ ನಡೆದ ಭಯೋತ್ಪಾದಕರು ದಾಳಿ ನಡೆಸಿದ್ದರು.

ಕ್ರಿಕೆಟ್ ಮೈದಾನದಲ್ಲಿ ಕುಂಬಳಕಾಯಿ ಬೆಳೆಯುತ್ತಿರುವ ಪಾಕಿಸ್ತಾನ
ಸಾಂದರ್ಭಿಕ ಚಿತ್ರ
Follow us on

ಒಂದು ಕಾಲದಲ್ಲಿ ಇಮ್ರಾನ್ ಖಾನ್ (Imran Khan), ವಾಸಿಂ ಅಕ್ರಂ, ವಕಾರ್ ಯೂನಿಸ್​ನಂತಹ ಬೌಲರುಗಳ ಮೂಲಕವೇ ಕ್ರಿಕೆಟ್ ಅಂಗಳವನ್ನು ಆಳಿದ್ದ ಪಾಕಿಸ್ತಾನ್ ತಂಡ (Pakistan Cricket team) ಇಂದು ಅಧಃಪತನ ಸಾಗಿರುವುದು ಗೊತ್ತೇ ಇದೆ. ಕಳೆದ ಕೆಲವು ವರ್ಷಗಳಲ್ಲಿ ಪಾಕಿಸ್ತಾನ್ ಆಟಗಾರರ ಪ್ರದರ್ಶನದ ಕೂಡ ಕುಸಿದಿದೆ. ಪ್ರಸ್ತುತ ತಂಡದ ಪ್ರದರ್ಶನದಿಂದಲೂ ಇದು ಸ್ಪಷ್ಟವಾಗಿ ಗೋಚರಿಸುತ್ತದೆ. ಹೀಗೆ ಏಷ್ಯಾದ ಬಲಿಷ್ಠ ತಂಡಗಳಲ್ಲಿ ಒಂದೆನಿಸಿಕೊಂಡಿದ್ದ ಪಾಕಿಸ್ತಾನ ಕ್ರಿಕೆಟ್ ಈ ಮಟ್ಟವನ್ನು ತಲುಪಲು ಬಹುಮುಖ್ಯ ಕಾರಣವೆಂದರೆ ಮೂಲಸೌಕರ್ಯದಲ್ಲಿನ ಅವ್ಯವಸ್ಥೆ. ಅದಕ್ಕೆ ತಾಜಾ ಉದಾಹರಣೆಯೇ ಇದು. ಹೌದು, ಪಾಕಿಸ್ತಾನ್​ದಲ್ಲಿನ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯಗಳ ಬದಲಾಗಿ ಇದೀಗ ಕುಂಬಳಕಾಯಿ ಮತ್ತು ಮೆಣಸಿನಕಾಯಿಗಳನ್ನು ಅಲ್ಲಿ ಬೆಳೆಯಲಾಗುತ್ತಿದೆ ಎಂದರೆ ಅಲ್ಲಿನ ಕ್ರಿಕೆಟ್​ನ ಅವ್ಯವಸ್ಥೆಯನ್ನು ಊಹಿಸಿಕೊಳ್ಳಬಹುದು.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಖಾನೆವಾಲ್ ಕ್ರಿಕೆಟ್ ಮೈದಾನದಲ್ಲಿ ಈಗ ಕೃಷಿ ಮಾಡಲಾಗುತ್ತಿದೆ. ದೇಶೀಯ ಪಂದ್ಯಗಳು ನಡೆಯಬೇಕಿದ್ದ ಮೈದಾನದಲ್ಲಿ ಇಂದು ಕುಂಬಳಕಾಯಿ, ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಹಲವು ಪ್ರತಿಭೆಗಳನ್ನು ರಾಷ್ಟ್ರೀಯ ತಂಡಕ್ಕೆ ಪರಿಚಯಿಸಿದ್ದ ಪಂಜಾಬ್ ಪ್ರಾಂತ್ಯದಲ್ಲಿ ತಳಮಟ್ಟದಲ್ಲಿ ಕ್ರಿಕೆಟ್ ಅನ್ನು ಉತ್ತೇಜಿಸುವ ಚಿಂತನೆಯೊಂದಿಗೆ ಈ ಸ್ಟೇಡಿಯಂ ನಿರ್ಮಿಸಲಾಗಿತ್ತು.

ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿ ನಿರ್ಮಿಸಲಾದ ಈ ಸ್ಟೇಡಿಯಂನಲ್ಲಿ ವಿಶ್ವ ದರ್ಜೆಯ ಸೌಲಭ್ಯಗಳಿದ್ದವು. ಅದಾಗ್ಯೂ ಈ ಕ್ರೀಡಾಂಗಣದಲ್ಲಿ ಪ್ರಮುಖ ಪಂದ್ಯಗಳು ನಡೆದಿರಲಿಲ್ಲ. ಏಕೆಂದರೆ 2009 ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ ಶ್ರೀಲಂಕಾ ತಂಡದ ಮೇಲೆ ನಡೆದ ಭಯೋತ್ಪಾದಕರು ದಾಳಿ ನಡೆಸಿದ್ದರು. ಆ ಬಳಿಕ ಪಾಕ್​ನಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯ ನಡೆದಿರಲಿಲ್ಲ. ಇತ್ತ ಯಾವುದೇ ಪಂದ್ಯ ನಡೆಯದೇ ಮೂಲೆಗುಂಪಾಗಿದ್ದ ಖಾನೆವಾಲ್ ಸ್ಟೇಡಿಯಂ ಅನ್ನು ರೈತರು ಅತಿಕ್ರಮಿಸಿಕೊಂಡಿದ್ದಾರೆ. ಇದರಿಂದ ಕ್ರೀಡಾಂಗಣದಿಂದ ಆಟಗಾರರು ಬರುವ ಬದಲು, ಕುಂಬಳಕಾಯಿ, ಮೆಣಸಿನಕಾಯಿ ಹೊರಬರುತ್ತಿದೆ.

ಖಾನೇವಾಲ್ ಕ್ರೀಡಾಂಗಣವು ಸ್ಥಳೀಯ ಜಿಲ್ಲಾಡಳಿತದ ವ್ಯಾಪ್ತಿಗೆ ಬರುತ್ತದೆ. ಇದನ್ನು ರೂಪಿಸಲು ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಆದರೆ ಇಂದು ಈ ಕ್ರೀಡಾಂಗಣದ ಸ್ಥಿತಿಯ ಕಂಡು ಮಾಜಿ ಕ್ರಿಕೆಟಿಗರು ಸಹ ದುಃಖಿತರಾಗಿದ್ದಾರೆ. ಇದೇ ಪ್ರಾಂತ್ಯದ ಮಾಜಿ ಪಾಕ್ ಆಟಗಾರ ಶೋಯೆಬ್ ಅಖ್ತರ್ ಕೂಡ ಕ್ರೀಡಾಂಗಣದ ದುಸ್ಥಿತಿಯ ಬಗ್ಗೆ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ಕ್ರೀಡಾಂಗಣದ ಇಂತಹ ಸ್ಥಿತಿಯನ್ನು ನೋಡಿ ನನಗೆ ತುಂಬಾ ಬೇಸರವಾಗಿದೆ ಎಂದು ತಿಳಿಸಿದ್ದಾರೆ.

ಸದ್ಯ ಪಾಕಿಸ್ತಾನ ತಂಡ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದು, ಟೆಸ್ಟ್ ಸರಣಿ ಆಡುತ್ತಿದೆ. ಮೊದಲ ಟೆಸ್ಟ್​ನಲ್ಲಿ ವೆಸ್ಟ್ ಇಂಡೀಸ್ ಯುವ ಪಡೆಯ ವಿರುದ್ದ 1 ವಿಕೆಟ್​ಗಳಿಂದ ಸೋಲನುಭವಿಸಿದೆ. ಇದರ ಬೆನ್ನಲ್ಲೇ ಪಾಕಿಸ್ತಾನದ ಸ್ಟೇಡಿಯಂನಲ್ಲಿ ತರಕಾರಿ ಬೆಳೆಯುತ್ತಿರುವ ಸುದ್ದಿಗಳು ಹೊರಬಿದ್ದಿದೆ. ಇತ್ತ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಕ್ರೀಡಾಂಗಣದಿಂದ ಆಟಗಾರರ ಬದಲು ತರಕಾರಿ ಬಂದರೆ ಏನಾಗುತ್ತೆ ಎಂಬುದಕ್ಕೆ ಪ್ರಸ್ತುತ ಪಾಕ್ ತಂಡ ಉತ್ತಮ ಉದಾಹರಣೆ ಎಂದು ಕಿಚಾಯಿಸುತ್ತಿದ್ದಾರೆ.

ಇದನ್ನೂ ಓದಿ: T20 World Cup: ಕೊಹ್ಲಿ ಹುಟ್ಟುಹಬ್ಬದಂದು ಟಿ20 ವಿಶ್ವಕಪ್‌ನಲ್ಲಿ ಭಾರತದ ಎದುರಾಳಿ ಯಾರು?

ಇದನ್ನೂ ಓದಿ: WTC Points Table: 12 ಅಂಕಗಳಿಸಿದ ತಂಡಕ್ಕೆ ಅಗ್ರಸ್ಥಾನ: 14 ಅಂಕ ಪಡೆದರೂ ಟೀಮ್ ಇಂಡಿಯಾಗಿಲ್ಲ ಪ್ರಥಮ ಸ್ಥಾನ

ಇದನ್ನೂ ಓದಿ: T20 World Cup 2021: ಟಿ20 ವಿಶ್ವಕಪ್​ಗೆ ಅಫ್ಘಾನಿಸ್ತಾನ್ ತಂಡ ಅನುಮಾನ

(Pakistan Cricket Stadium Converted Into Vegetable Farm)