ನ್ಯೂಝಿಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಮೂರು ಪಂದ್ಯಗಳನ್ನು ಸೋತಿರುವ ಪಾಕಿಸ್ತಾನ್ ತಂಡವು ಇದೀಗ 5ನೇ ಪಂದ್ಯದಲ್ಲಿ ಕಣಕ್ಕಿಳಿದಿದೆ. ವೆಲ್ಲಿಂಗ್ಟನ್ನ ಸ್ಕೈ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯಕ್ಕಾಗಿ ಪಾಕಿಸ್ತಾನ್ ತನ್ನ ಪ್ಲೇಯಿಂಗ್ ಇಲೆವೆನ್ನಲ್ಲಿ 5 ಬದಲಾವಣೆ ಮಾಡಿಕೊಂಡಿರುವುದು ವಿಶೇಷ.
ಅದರಲ್ಲೂ ತಂಡದ ಪ್ರಮುಖ ವೇಗಿ ಶಾಹೀನ್ ಶಾ ಅಫ್ರಿದಿಯನ್ನು ಆಡುವ ಬಳಗದಿಂದ ಕೈ ಬಿಡಲಾಗಿದೆ. ಮೊದಲ 4 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಶಾಹೀನ್ ಅಫ್ರಿದಿ 10.23 ರ ಎಕಾನಮಿಯಲ್ಲಿ ರನ್ ನೀಡಿದ್ದರು. ಅಲ್ಲದೆ ಕೇವಲ 1 ವಿಕೆಟ್ ಮಾತ್ರ ಪಡೆದಿದ್ದರು. ಈ ಕಳಪೆ ಪ್ರದರ್ಶನದ ಕಾರಣ ಇದೀಗ ಶಾಹೀನ್ ಅಫ್ರಿದಿಯನ್ನು ಪ್ಲೇಯಿಂಗ್ ಇಲೆವೆನ್ನಿಂದ ಹೊರಗಿಡಲಾಗಿದೆ.
ಹಾಗೆಯೇ ಅಬ್ರಾರ್ ಅಹ್ಮದ್, ಖುಶ್ದಿಲ್ ಶಾ, ಇರ್ಫಾನ್ ಖಾನ್ ಮತ್ತು ಅಬ್ಬಾಸ್ ಅಫ್ರಿದಿ ಅವರನ್ನು ಸಹ ಆಡುವ ಬಳಗದಿಂದ ಕೈ ಬಿಡಲಾಗಿದೆ.
ಖುಶ್ದಿಲ್ ಷಾ ಕಳೆದ 4 ಪಂದ್ಯಗಳಿಂದ ಕಲೆಹಾಕಿದ್ದು ಕೇವಲ 46 ರನ್ ಮಾತ್ರ. ಇನ್ನು ಅಬ್ಬಾಸ್ ಅಫ್ರಿದಿ ಎರಡು ಪಂದ್ಯಗಳಲ್ಲಿ 3 ವಿಕೆಟ್ ಪಡೆದಿದ್ದರು.
ಹಾಗೆಯೇ ಹೊಸ ಆಟಗಾರರಿಗೆ ಅವಕಾಶ ನೀಡಲು ಅಬ್ರಾರ್ ಅಹ್ಮದ್ ಹಾಗೂ ಇರ್ಫಾನ್ ಖಾನ್ ಅವರನ್ನು ಸಹ ಪ್ಲೇಯಿಂಗ್ ಇಲೆವೆನ್ನಿಂದ ಹೊರಗಿಡಲಾಗಿದೆ.
ಅದರಂತೆ ನ್ಯೂಝಿಲೆಂಡ್ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಒಮರ್ ಬಿನ್ ಯೂಸುಫ್, ಉಸ್ಮಾನ್ ಖಾನ್, ಸುಫಿಯಾನ್ ಮೋಕಿಮ್ ಮತ್ತು ಜಹಾನದಾದ್ ಖಾನ್ ಕಣಕ್ಕಿಳಿದಿದ್ದಾರೆ.
ಪಾಕಿಸ್ತಾನ್ ಪ್ಲೇಯಿಂಗ್ 11: ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್) , ಹಸನ್ ನವಾಝ್ , ಸಲ್ಮಾನ್ ಅಘಾ (ನಾಯಕ) , ಒಮೈರ್ ಯೂಸುಫ್ , ಉಸ್ಮಾನ್ ಖಾನ್ , ಶಾದಾಬ್ ಖಾನ್ , ಅಬ್ದುಲ್ ಸಮದ್ , ಜಹಂದಾದ್ ಖಾನ್ , ಹಾರಿಸ್ ರೌಫ್ , ಸುಫಿಯಾನ್ ಮುಖೀಮ್ , ಮೊಹಮ್ಮದ್ ಅಲಿ.
ಇದನ್ನೂ ಓದಿ: David Warner: ಡೇವಿಡ್ ವಾರ್ನರ್ಗೆ ಒಲಿದ ನಾಯಕತ್ವ..!
ನ್ಯೂಝಿಲೆಂಡ್ ಪ್ಲೇಯಿಂಗ್ 11: ಟಿಮ್ ಸೀಫರ್ಟ್ , ಫಿನ್ ಅಲೆನ್ , ಮಾರ್ಕ್ ಚಾಪ್ಮನ್ , ಡೇರಿಲ್ ಮಿಚೆಲ್ , ಜೇಮ್ಸ್ ನೀಶಮ್ , ಮಿಚೆಲ್ ಹೇ (ವಿಕೆಟ್ ಕೀಪರ್) , ಮೈಕೆಲ್ ಬ್ರೇಸ್‌ವೆಲ್ (ನಾಯಕ) , ಇಶ್ ಸೋಧಿ , ಜಾಕೋಬ್ ಡಫಿ , ಬೆನ್ ಸಿಯರ್ಸ್ , ವಿಲಿಯಂ ಒರೋಕ್.
Published On - 12:24 pm, Wed, 26 March 25