2023ರ ಏಷ್ಯಾಕಪ್‌ನಲ್ಲಿ (Asia Cup 2023) ಸೂಪರ್-4 ಹಂತ ಆರಂಭವಾಗಿದೆ. ಸೂಪರ್-4 ರ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನ (Bangladesh vs Pakistan) ತಂಡಗಳು ಲಾಹೋರ್‌ನಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಬಾಂಗ್ಲಾ ತಂಡವನ್ನು ಏಕಪಕ್ಷೀಯವಾಗಿ ಮಣಿಸುವಲ್ಲಿ ಪಾಕಿಸ್ತಾನ ಯಶಸ್ವಿಯಾಗಿದೆ. ಆದರೆ ಇದೇ ವೇಳೆ ತಂಡದ ಸ್ಟಾರ್ ಬೌಲರ್ ಇಂಜುರಿಗೆ ತುತ್ತಾಗಿರುವುದು ಬಾಬರ್ ಪಡೆಯ ನಿದ್ದೆಗೆಡಿಸಿದೆ. ತಂಡದ ಪ್ರಮುಖ ಬೌಲರ್ ನಸೀಮ್ ಶಾ (Naseem Shah) ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಚೆಂಡನ್ನು ತಡೆಯುವ ಯತ್ನದಲ್ಲಿ ಇಂಜುರಿಗೆ ತುತ್ತಾದರು. ಇದರ ಪರಿಣಾಮವಾಗಿ ನಸೀಮ್ ಶಾ ತಕ್ಷಣವೇ ಮೈದಾನದಿಂದ ಹೊರಹೋಗಬೇಕಾಯಿತು.
ಸಹಜವಾಗಿಯೇ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಉತ್ತಮ ಆಟ ಪ್ರದರ್ಶಿಸಿತು. ಹೀಗಾಗಿ ನಸೀಮ್ ಶಾ ಅಲಭ್ಯತೆ ತಂಡವನ್ನು ಹೆಚ್ಚು ಚಿಂತೆಗೀಡು ಮಾಡಲಿಲ್ಲ. ಆದರೆ ಒಂದು ವೇಳೆ ಅವರ ಗಾಯವು ಗಂಭೀರವಾದರೆ ಮಾತ್ರ ಪಾಕ್ ತಂಡಕ್ಕೆ ಸಮಸ್ಯೆ ಹೆಚ್ಚಾಗಲಿದೆ. ಏಕೆಂದರೆ ಏಷ್ಯಾಕಪ್‌ನಲ್ಲಿ ಫೈನಲ್‌ಗೆ ತಲುಪುವ ನಿಜವಾದ ಓಟ ಈಗಷ್ಟೇ ಆರಂಭವಾಗಿದೆ. ಎರಡನೆಯದಾಗಿ, ಪಾಕಿಸ್ತಾನವು ತನ್ನ ಮುಂದಿನ ಪಂದ್ಯವನ್ನು ಭಾರತದೊಂದಿಗೆ ಆಡಬೇಕಾಗಿದೆ. ಈ ಸಂದರ್ಭದಲ್ಲಿ, ನಸೀಮ್ ಇಂಜುರಿಗೆ ತುತ್ತಾಗಿರುವುದು ಮೆನ್ ಇನ್ ಗ್ರೀನ್ ತಂಡವನ್ನು ಸಂಕಷ್ಟಕ್ಕೀಡು ಮಾಡಲಿದೆ.
Virat Kohli: ವಿರಾಟ್ ಕೊಹ್ಲಿಯನ್ನು ಶೂನ್ಯಕ್ಕೆ ಔಟ್ ಮಾಡುವುದೇ ನನ್ನ ಗುರಿ: ನಸೀಮ್ ಶಾ
ಬಾಂಗ್ಲಾದೇಶದ ಇನಿಂಗ್ಸ್‌ನ 7ನೇ ಓವರ್‌ನಲ್ಲಿ ನಸೀಮ್ ಶಾ ಗಾಯಗೊಂಡ ಘಟನೆ ನಡೆಯಿತು. ಈ ಓವರ್‌ನ ಎರಡನೇ ಎಸೆತದಲ್ಲಿ ಚೆಂಡನ್ನು ಬೌಂಡರಿಗೆ ಹೋಗದಂತೆ ತಡೆಯುವ ಯತ್ನದಲ್ಲಿ ನಸೀಮ್ ಇಂಜುರಿಗೊಂಡರು. ಇದರಿಂದ ಅವರ ಹೊಟ್ಟೆ ಹಾಗೂ ಭುಜಕ್ಕೆ ಪೆಟ್ಟು ಬಿದ್ದಿತ್ತು. ಆದರೆ ಅದೃಷ್ಟವಶಾತ್ ಅವರ ಗಾಯ ಅಷ್ಟಾಗಿ ಗಂಭೀರವಾಗಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿತ್ತು.
— rajendra tikyani (@Rspt1503) September 6, 2023
ಚೆಂಡನ್ನು ತಡೆಯುವ ಯತ್ನದಲ್ಲಿ ಇಂಜುರಿಗೊಂಡು ಮೈದಾನದಲ್ಲಿ ನರಳಾಡುತ್ತಿದ್ದ ನಸೀಮ್ರನ್ನು ನೋಡಿದ ಫಿಸಿಯೊ ಕೂಡಲೇ ಮೈದಾನಕ್ಕೆ ಬಂದು ನಸೀಮ್ ಅವರನ್ನು ಮೈದಾನದಿಂದ ಹೊರಗೆ ಕರೆದೊಯ್ದರು. ಇದೇ ವೇಳೆ ಅವರ ಸ್ಥಾನದಲ್ಲಿ ಮೊಹಮ್ಮದ್ ಹ್ಯಾರಿಸ್ ಕಣಕ್ಕಿಳಿದರು. ಆದರೆ, ಸ್ವಲ್ಪ ಸಮಯದ ನಂತರ ನಸೀಮ್ ಶಾ ಮತ್ತೆ ಮೈದಾನಕ್ಕೆ ಮರಳಿದರು.
ಗಾಯಗೊಳ್ಳುವ ಮುನ್ನ ನಸೀಮ್ ಶಾ ಅದ್ಭುತ ಬೌಲಿಂಗ್ ಮಾಡಿದರು. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅವರು ತಮ್ಮ ಮೊದಲ ಎಸೆತದಲ್ಲಿ ವಿಕೆಟ್ ಪಡೆದರು. ಮೆಹದಿ ಹಸನ್ ಅವರನ್ನು ವಜಾಗೊಳಿಸಿದ ನಸೀಮ್ ಶಾ ಗಾಯಕ್ಕೂ ಮುನ್ನ 3 ಓವರ್ ಬೌಲ್ ಮಾಡಿ 22 ರನ್ ನೀಡಿ 1 ವಿಕೆಟ್ ಪಡೆದರು. ಅಂತಿಮವಾಗಿ ತಮ್ಮ ಖೋಟಾದ 6 ಓವರ್ ಬೌಲ್ ಮಾಡಿದ ನಸೀಮ್ ಇದರಲ್ಲಿ 34 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:17 am, Thu, 7 September 23