ಆಗಸ್ಟ್ 27 ರಿಂದ ಯುಎಇನಲ್ಲಿ ಶುರುವಾಗಲಿರುವ ಏಷ್ಯಾಕಪ್ (Asia Cup 2022) ಟಿ20 ಟೂರ್ನಿಗಾಗಿ ಪಾಕಿಸ್ತಾನ್ ತಂಡವನ್ನು ಘೋಷಿಸಲಾಗಿದೆ. 15 ಸದಸ್ಯರ ಬಳಗವನ್ನು ಬಾಬರ್ ಆಜಂ ಮುನ್ನಡೆಸಲಿದ್ದಾರೆ. ಇನ್ನು ಕಳೆದ ವರ್ಷ ಟಿ20 ವಿಶ್ವಕಪ್ ಆಡಿದ ಬಹುತೇಕ ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದಾಗ್ಯೂ ಆಸ್ಟ್ರೇಲಿಯಾ ವಿರುದ್ದದ ಸೆಮಿಫೈನಲ್ನಲ್ಲಿ ಮ್ಯಾಥ್ಯೂ ವೇಡ್ ಕ್ಯಾಚ್ ಕೈಚೆಲ್ಲಿದ ವೇಗಿ ಹಸನ್ ಅಲಿಗೆ ಈ ಬಾರಿ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ. ಅವರ ಬದಲಿಗೆ ಯುವ ವೇಗಿ ನಸೀಮ್ ಶಾ ಅವಕಾಶ ಪಡೆದಿದ್ದಾರೆ. ಹಾಗೆಯೇ ಹಿರಿಯ ಆಟಗಾರರಾದ ಮೊಹಮ್ಮದ್ ಹಫೀಜ್ ಹಾಗೂ ಶೊಯೇಬ್ ಮಲಿಕ್ ಕೂಡ ತಂಡದಿಂದ ಹೊರಬಿದ್ದಿದ್ದಾರೆ.
ಇನ್ನು ಏಷ್ಯಾಕಪ್‌ಗೆ ತಂಡವನ್ನು ಆಯ್ಕೆ ಮಾಡುವುದರ ಜೊತೆಗೆ, ನೆದರ್ಲೆಂಡ್ಸ್ ವಿರುದ್ಧದ ಏಕದಿನ ಸರಣಿಗಾಗಿ ಪಾಕಿಸ್ತಾನ 16 ಸದಸ್ಯರ ತಂಡವನ್ನು ಸಹ ಪ್ರಕಟಿಸಿದೆ. ನೆದರ್ಲೆಂಡ್ಸ್ ಮತ್ತು ಪಾಕಿಸ್ತಾನ ನಡುವಿನ ಏಕದಿನ ಸರಣಿಯು ಆಗಸ್ಟ್ 16-21 ರ ನಡುವೆ ನಡೆಯಲಿದೆ. ಏಕದಿನ ತಂಡದಲ್ಲೂ ಯುವ ವೇಗದ ಬೌಲರ್ ನಸೀಮ್ ಶಾಗೆ ಸ್ಥಾನ ನೀಡಲಾಗಿದೆ. ಹಾಗೆಯೇ ಗಾಯದಿಂದ ಚೇತರಿಸಿಕೊಂಡಿರುವ ಶಾಹೀನ್ ಶಾ ಆಫ್ರಿದಿ ಕೂಡ ಉಭಯ ತಂಡಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಏಷ್ಯಾಕಪ್ನಲ್ಲಿ ಪಾಕಿಸ್ತಾನ್ ತಂಡವು ತನ್ನ ಮೊದಲ ಪಂದ್ಯವನ್ನು ಭಾರತದ ವಿರುದ್ದ ಆಡಲಿದ್ದು, ಈ ಪಂದ್ಯವು ಆಗಸ್ಟ್ 28 ರಂದು ನಡೆಯಲಿದೆ. ಇದೀಗ ಬಲಿಷ್ಠ ಪಡೆಯನ್ನೇ ಆಯ್ಕೆ ಮಾಡುವ ಮೂಲಕ ಪಾಕ್ ತಂಡವು ಭರ್ಜರಿ ಸಿದ್ಧತೆಗೆ ಮುಂದಾಗಿದೆ.
ಏಷ್ಯಾಕಪ್‌ಗೆ ಪಾಕಿಸ್ತಾನ್ ತಂಡ ಹೀಗಿದೆ:
ಬಾಬರ್ ಆಜಂ (ನಾಯಕ), ಶಾದಾಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್, ವಾಸಿಮ್ ಜೂನಿಯರ್, ನಸೀಮ್ ಶಾ, ಶಾಹೀನ್ ಶಾ ಆಫ್ರಿದಿ, ಶಾನವಾಜ್ ದಹಾನಿ ಮತ್ತು ಉಸ್ಮಾನ್ ಖಾದಿರ್.
ನೆದರ್ಲೆಂಡ್ಸ್ ವಿರುದ್ದದ ಏಕದಿನ ಸರಣಿಗೆ ಪಾಕ್ ತಂಡ:
ಬಾಬರ್ ಆಜಂ (ನಾಯಕ), ಶಾದಾಬ್ ಖಾನ್ (ಉಪನಾಯಕ), ಅಬ್ದುಲ್ಲಾ ಶಫೀಕ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಇಮಾಮ್-ಉಲ್-ಹಕ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಮ್ ಜೂನಿಯರ್, ನಸೀಮ್ ಶಾ, ಸಲ್ಮಾನ್ ಅಲಿ ಅಘಾ, ಶಾಹೀನ್ ಶಾ ಆಫ್ರಿದಿ, ಶಾನವಾಜ್ ದಹಾನಿ ಮತ್ತು ಝಾಹಿದ್ ಮೆಹಮೂದ್
ಏಷ್ಯಾ ಕಪ್ ತಂಡಗಳ ಗ್ರೂಪ್:
ಸಂಪೂರ್ಣ ವೇಳಾಪಟ್ಟಿ ಹೀಗಿದೆ:
ಸೂಪರ್- 4 ವೇಳಾಪಟ್ಟಿ:
ಮೊದಲ ಸುತ್ತಿನಲ್ಲಿ ಗ್ರೂಪ್ಗಳಲ್ಲಿನ ತಂಡಗಳು ಮುಖಾಮುಖಿಯಾಗಲಿದ್ದು, ಇದರಲ್ಲಿ ಅಗ್ರಸ್ಥಾನ ಪಡೆಯುವ 2 ತಂಡಗಳು ಸೂಪರ್-4 ಹಂತದಲ್ಲಿ ಆಡಲಿದೆ. ಅಂದರೆ ಎ ಗ್ರೂಪ್ನಿಂದ 2 ತಂಡ, ಬಿ ಗ್ರೂಪ್ನಿಂದ 2 ತಂಡಗಳು ಮುಂದಿನ ಹಂತಕ್ಕೇರಲಿದೆ. ಇನ್ನು ಸೆಪ್ಟೆಂಬರ್ 3 ರಿಂದ ಸೂಪರ್- 4 ತಂಡಗಳ ಮುಖಾಮುಖಿ ಶುರುವಾಗಲಿದೆ. ಈ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 7.30 ಕ್ಕೆ ಪ್ರಾರಂಭವಾಗುತ್ತವೆ.